Wednesday, July 13, 2022

08 ಸಾಯಿ ಸಮರ್ಥರ ಅವತಾರ / Sri Sai Baba's incarnation

 ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

"ಸಾಯಿ ಸಮರ್ಥರ ಅವತಾರ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.


ಹಿಂದಿನ ಅಧ್ಯಾಯದಲ್ಲಿ ಬಾಬಾರವರು ಹಿ೦ದುವೂ ಅಲ್ಲ ಮುಸ್ಲಿಮರೂ ಅಲ್ಲ ಎಂಬುದನ್ನು ನಿರೂಪಿಸಲಾಗಿದೆ. ಬಾಬಾರವರ ವಾಸಸ್ಥಾನವಾದ ಶಿರಡಿಯು ಅದೆಷ್ಟು ಪುಣ್ಯ ಮಾಡಿದೆ? ॥1॥ ಪ್ರಾರಂಭದಲ್ಲಿ ಬಾಬಾರವರು ಒಬ್ಬ ಸಾಧಾರಣ ಬಾಲಕ. ಅನಂತರ ಅವರು ವಿಲಕ್ಷಣ ಫಕೀರರಾಗಿ ಬದಲಾದರು. ಮೊದಲು ಬಂಜರಾಗಿದ್ದ ಸ್ಥಳದಲ್ಲಿ ಹೇಗೆ ಒಂದು ಸುಂದರ ತೋಟವನ್ನು ಮಾಡಿದರು. ॥2॥ ಕಾಲಾಂತರದಲ್ಲಿ ಅದೇ ಜಾಗದಲ್ಲಿ ವಾಡಾ ಹೇಗೆ ಕಟ್ಟಲ್ಪಟ್ಟಿತು ಮತ್ತು ಬಾಬಾರವರ ಸಾಹಸಮಯ ಕ್ರಿಯೆಗಳಾದ ಖಂಡಯೋಗ, ಧೋತಿ-ಪೋತಿ ಇವುಗಳನ್ನು ನಿಮಗೆ ವಿವರಿಸಲಾಗಿದೆ. ॥3॥ ಇತರರ ಸೇವೆ ಮಾಡುತ್ತ ತಮ್ಮನ್ನೇ ಸವೆಸಿಕೊಳ್ಳುವಾಗ ಬಾಬಾರವರು ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದರು. ಸಾಯಿಯವರು ಎಲ್ಲ ಭಕ್ತರಿಗೂ ರಕ್ಷಕರಾಗಿದ್ದರು. ಅವುಗಳನ್ನು ಹೇಗೆ ವಿವರಿಸಲಿ? ॥4॥ ಈಗ ಮಾನವ ಜನ್ಮದ ಮಹತ್ವವನ್ನು ಕೇಳಿರಿ. ಸಾಯಿಯ ಭಿಕ್ಷುಕತನ, ಬಾಯಜಾ ಬಾಯಿಯ ಸಂತ ಸೇವೆ, ಸಾಯಿಗೆ ಊಟಮಾಡಿಸುವ ಅದ್ಭುತ ಇವುಗಳನ್ನು ಕೇಳಿರಿ. ॥5॥ ತಾತ್ಯಾ, ಬಾಬಾ ಮತ್ತು ಮ್ಹಾಳಸಾಪತಿಯವರು ಮೂವರೂ ಒಟ್ಟಿಗೆ ಮಸೀದಿಯಲ್ಲಿ ಹೇಗೆ ಮಲಗುತ್ತಿದ್ದರು, ಈ ಮಹಾತ್ಮರು ರಾಹತಾದಲ್ಲಿನ ಕುತಾಲಚಂದರ ಮನೆಗೆ ಹೇಗೆ ಹೋಗಿ ಬರುತ್ತಿದ್ದರು? ॥6॥


ಪ್ರತಿ ದಿನ ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಈ ರೀತಿ ವರ್ಷಗಳು ಉರುಳಿದವು. ಜೀವನದ ಅರ್ಧ ಸಮಯ ನಿದ್ದೆಯಲ್ಲಿ ಕಳೆಯುತ್ತದೆ. ಉಳಿದ ಕಾಲದಲ್ಲಿ ಶಾಂತವಾಗಿ ಸುಖ ಪಡೆಯುವುದಿಲ್ಲ. 7 ಮಗುವಾಗಿದ್ದಾಗ ಮಾನವನು ಆಟ ಪಾಠದಲ್ಲಿ ಕಳೆಯುತ್ತಾನೆ. ಯೌವನದಲ್ಲಿ ಹೆಣ್ಣಿನ ಮಾಯೆಯಲ್ಲಿ, ಅನಂತರ ವೃದ್ಧಾಪ್ಯದಲ್ಲಿ ದೇಹವು ಬಲಹೀನವಾಗುತ್ತದೆ. ಈ ರೀತಿ ಪ್ರತಿಯೊಬ್ಬನೂ ದುರ್ಬಲವಾಗಿಯೇ ಕಳೆಯುತ್ತಾನೆ. 8 ಹುಟ್ಟುವುದು, ದೇಹವನ್ನು ಬಲವಾಗಿಸುವುದು, ಉಸಿರಾಡುವುದು ಮತ್ತು ಜೀವಿತ ಕಾಲವನ್ನು ಹೆಚ್ಚುಮಾಡುವುದು ಇವುಗಳೇ ಜೀವನದ ಉದ್ದೇಶವೇನು? ॥9॥ ಪರಮಾತ್ಮನನ್ನು ತಲಪುವುದೇ ಮಾನವ ಜನ್ಮದ ಗುರಿ. ಇಲ್ಲದಿದ್ದಲ್ಲಿ ಮಾನವನಿಗೂ, ನಾಯಿ-ಹಂದಿ ಮುಂತಾದ ಪ್ರಾಣಿಗಳಿಗೂ ಇರುವ ವ್ಯತ್ಯಾಸವೇನು? ॥10॥ ನಾಯಿ, ಹಂದಿಗಳೂ ತಿನ್ನುತ್ತವೆ ಮತ್ತು ಯಥೇಚ್ಛವಾಗಿ ಸಂತಾನೊತ್ಪತ್ತಿ ಮಾಡುತ್ತವೆ. ಹಾಗಿರುವಾಗ ಇಬ್ಬರ ಜೀವನವೂ ಒಂದೇ ಇದ್ದಲ್ಲಿ ಮಾನವ ಜೀವನದ ಉತ್ಕೃಷ್ಟತೆಯೆಲ್ಲಿ? 11 ತಿನ್ನುವುದು, ಸಂತೋಷವಾಗಿರವುದು, ಸಂತತಿಹೊಂದುವುದು - ಈ ಮೂರಕ್ಕೆ ಮಾತ್ರ ಈ ಮಾನವ ಶರೀರವನ್ನು ಉಪಯೋಗಿಸುವುದಾದರೆ ಇದೇ ಜೀವನದ ಗುರಿಯಾದರೆ ಈ ಮಾನವ ಜನ್ಮವು ಅರ್ಥಹೀನ. ॥12॥ ಇಡೀ ಜೀವನವನ್ನೇ ಹಸಿವು, ನಿದ್ರೆ, ಭಯ, ಮೈಥುನ ಈ ನಾಲ್ಕು ಕಾರ್ಯಗಳಿಗೆ ಮಾತ್ರ ಮೀಸಲಿಟ್ಟಲ್ಲಿ ಮಾನವ ಜನ್ಮಕ್ಕೂ ಪ್ರಾಣಿಗಳಿಗೂ ವ್ಯತ್ಯಾಸವೇನು? ನಿನ್ನ ವಿವೇಚನೆಯನ್ನು ಉಪಯೋಗಿಸಿ ನೀನೇ ನಿರ್ಧರಿಸು. 13 ಮಾನವ ದೇಹದ ಸಾರ್ಥಕತೆಯು ಇದೊಂದೇ ಆದರೆ ಒಂದು ಮರದ ಜೀವನವೂ ಇದಕ್ಕಿಂತ ಕಡಿಮೆ ಬೆಲೆಯದಲ್ಲ. ತಿದಿ ಕೂಡಾ ಗಾಳಿಯನ್ನು ಹೊರಹಾಕುತ್ತದೆ. ನಾಯಿಗಳೂ ದೇಹವನ್ನು ಪೋಷಿಸುತ್ತವೆ. 14


ಮಾನವನು ಸ್ವತಂತ್ರ ಜೀವಿ. ಅವನು ನಿರ್ಭಯನು, ಸ್ವತಂತ್ರ ಮತ್ತು ಶಾಶ್ಚತ - ಈ ಜ್ಞಾನವನ್ನು ಪಡೆದಲ್ಲಿ ಅವನ ಜೀವನ ಸಾರ್ಥಕ ಎಂದು ಹೇಳಬಹುದು. ॥15 ಯಾವ ವ್ಯಕ್ತಿಯು ತಾನು ಎಲ್ಲಿಂದ ಬಂದಿದ್ದೇನೆ, ತಾನು ಯಾರು ಮತ್ತು ತನ್ನ ಜನ್ಮದ ಗುರಿಯೇನು, ಜೀವಿತದ ಉದ್ದೇಶವೇನು ಅವುಗಳನ್ನು ಅರಿತಾಗ ಜ್ಞಾನಿಯೆಂದು ಕರೆಯಬಹುದು. ಈ ಅರಿವು ಇಲ್ಲದಿದ್ದಲ್ಲಿ ಬೇರೆ ಎಲ್ಲವೂ ವ್ಯರ್ಥ. ॥16॥ ಎಣ್ಣೆ ದೀಪದಲ್ಲಿರುವ ಬತ್ತಿಯಂತೆ ಮೊದಲು ಮತ್ತು ಕೊನೆಯಲ್ಲಿ ಒಂದೇ ಸಮನೆ ಇರುತ್ತದೆ. ಆದರೆ ಆಗಾಗ ಮಿಣುಕು ಎನ್ನುತ್ತದೆ ಮತ್ತು ಪ್ರತಿಕ್ಷಣವೂ ಬದಲಾಗುತ್ತ ಇರುತ್ತದೆ. ಮಾನವ ದೇಹದಸ್ಥಿತಿಯೂ ಅದೇ ಆಗಿದೆ. ॥17॥ ಬಾಲ್ಯ, ಯೌವನ ಮತ್ತು ವೃದ್ಧಾಪ್ಯ ಇವುಗಳ ಮೂಲಕ ಪ್ರತಿಯೊಬ್ಬರೂ ಹಾದುಹೋಗುತ್ತಾರೆ. ಆದರೆ ಎಷ್ಟು ಸ್ವಾಭಾವಿಕವಾಗಿ ಅವು ಬಂದು ಹೋಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ॥18॥ ಈಗ ನೋಡಿದ್ದು ಅದೇ ಕ್ಷಣ ನಾಶವಾಗುತ್ತದೆ. ಆ ರೀತಿ ಅಸಂಖ್ಯಾತ ಹಂತಗಳು ಒಂದೇ ರೀತಿಯದ್ದಾಗಿ ಕಾಣುತ್ತವೆ. ಅದೇ ರೀತಿ ಒಂದು ಕ್ಷಣ ಅನುಭವಿಸಲು ಸಾಧ್ಯವಾದ ಈ ದೇಹ ಮತ್ತೊಂದು ಕ್ಷಣ ಅದೇ ರೀತಿಯಾಗಿ ಇರಲಾರದು. ॥19॥ ಈ ದೇಹವು ಅತಿ ಕ್ಷುಲ್ಲಕವಾದದ್ದು ಅದು ಕೊಳೆ, ಮಲ, ಅನಿಲಗಳು, ಕೀವು, ಎಂಜಲು ಇತ್ಯಾದಿಗಳನ್ನು ಹೊಂದಿರುತ್ತದೆ. ಮತ್ತು ಮೃತ್ಯು ಪ್ರತಿಕ್ಷಣ ಸುಳಿದಾಡುತ್ತಿರುತ್ತದೆ. ॥20॥ ಈ ಮಾನವ ಶರೀರ ಕ್ರಿಮಿಕೀಟಗಳ ತವರೂರು. ಅನೇಕ ರೋಗಗಳ ನೆಲೆವೀಡು. ಕ್ಷಣಿಕ ಮತ್ತು ಅಲ್ಪಸವಯದಲ್ಲೇ ನಾಶವಾಗುವಂತಹದು. ॥21 ಇದು ಒಂದು ಮಾಂಸ ಮಜ್ಜೆಗಳ ಶೇಖರಣೆ. ಮೂಳೆ ಮತ್ತು ಚರ್ಮದ ಪ೦ಜರ, ದುರ್ನಾತಹೊಡೆಯುವಮೂತ್ರದ ಗೊಬ್ಬರದ ಸಾಗಾಣಿಕೆ ಬಂಡಿ, ವಾಂತಿ ಮಾಡಲ್ಪಡುವ (ಕಫ ಮತ್ತು ಆಮದ) ಚೀಲ - ನಿಜವಾಗಿಯೂ ಇದು ಆತ್ಮೋನ್ನತಿಗೆ ಒಂದು ತಡೆಗೋಡೆ. ॥22॥ ಚರ್ಮ, ರಕ್ತ ಮತ್ತು ಮಾಂಸ, ಮಜ್ಜೆ, ಕೊಬ್ಬು, ರಕ್ತನಾಳಗಳು, ಮೂಳೆಗಳು, ವಾಯುಗಳು - ಇವೆಲ್ಲವೂ ದೇಹವನ್ನು ಅಶುದ್ಧಿಮಾಡಿ ಕೇವಲ ಅಲ್ಪಕಾಲದವರೆಗೆ

ಮಾತ್ರ ಇರಲು ಅನುವು ಮಾಡುತ್ತವೆ. ॥23॥ ಈ ಮಾನವ ಶರೀರವು ಪಾಪಭರಿತವಾಗಿ, ಅಶಾಶ್ವತವಾಗಿ ಮತ್ತು ಅಲ್ಪ ಕಾಲದವರೆಗೆ ಇರುವಂತಹುದಾಗಿದ್ದರೂ, ಈ ದೇಹಮಾತ್ರದಿಂದಲೇ ಪರಿಶುದ್ಧವಾದ ಪರಮಾತ್ಮನನ್ನು ತಲುಪಬಹುದು. ॥24 ಜನನ ಮರಣಗಳೆಂಬ ಚಕ್ರವು ಅವಿರತವಾಗಿರುತ್ತದೆ. ಮೃತ್ಯುವಿನ ಯೋಚನೆಯೂ ಸಹ ಭಯಂಕರವಾದುದು. ಈ ಜೀವನವು ಯಾವುದೇ ಸುಳಿವನ್ನೂ ಕೊಡದೇ ಅಂತ್ಯವಾಗುತ್ತದೆ. ॥25॥ ಯಾರು ಹುಟ್ಟುವರು, ಯಾರು ಸಾಯುವರು, ಹಗಲುಗಳೆಷ್ಟು. ರಾತ್ರಿಗಳೆಷ್ಟು ಇವುಗಳ ಲೆಕ್ಕವನ್ನು ಯಾರು ಇಟ್ಟಿರುತ್ತಾರೆ? ಮಾರ್ಕಂಡೇಯನಂತೆ ವರದಿಂದ ಜನಿಸಿದವರೂ ಮೃತ್ಯುದವಡೆಯಿಂದ ತಪ್ಪಿಸಿಕೊಳ್ಳಲಾರರು. ॥26॥ ಈ ರೀತಿ ಅಲ್ಬಾಯುವಾದ ಮಾನವ ಜೀವದಲ್ಲಿ ಧರ್ಮಗ್ರಂಥಗಳನ್ನು ಓದುವುದರಲ್ಲಿ ಮತ್ತು ಭಗವ೦ತನ ಚರಿತ್ರೆಗಳನ್ನು ಆಲಿಸುವುದರಲ್ಲಿ ಕಳೆದ ಸಮಯ ಮಾತ್ರ ಫಲಕಾರಿ ವತ್ತು ಇನ್ನಿತರೆ ರೀತಿಯಲ್ಲಿ ಕಳೆದ ಸಮಯ ವ್ಯರ್ಥ. ॥27॥ ಕೇವಲ ಇದು ಮಾತ್ರ ಜೀವನದಲ್ಲಿ ಅತ್ಯುತ್ತಮ ಮಾರ್ಗವೆಂದು ಅಚಲವಾದ ದೃಢನಿಶ್ಚಯ ಇರಬೇಕು. ಆದರೆ ಯಾರೂ ಸ್ವತಃ ತಾವೇ ಅನುಭವಿಸುವವರೆಗೆ ಇದನ್ನು ನಂಬುವುದಿಲ್ಲ. 28 ಆದರೆ ಅದರ ಅನುಭವಪಡೆಯಲು ಆಳವಾದ ಅಧ್ಯಯನ ಮಾಡಬೇಕು - ನಂತರವೇ ಆತ್ಮವು ಶಾಶ್ವತವಾದ ಆನಂದವನ್ನು ಪಡೆದು ಆ ಸಂಪತ್ತನ್ನು ಅನುಭವಿಸುತ್ತದೆ. ॥29॥


ಭಗವಂತನ ಕೃಪೆಯಿಂದ ಒಬ್ಬ ವ್ಯಕ್ತಿಯು ಸಪ್ತಸಾಗರ ಪರ್ಯ೦ತ ಜಾಗದ ಒಡೆಯನಾಗಿದ್ದರೂ, ಒಳ್ಳೆಯ ಪತ್ನಿ, ಮಗ, ಶ್ರೀಮಂತಿಕೆ, ಆಸ್ತಿ ಎಲ್ಲವೂ ಇದ್ದರೂ ಸಹ ಮನಸ್ಸಿನಲ್ಲೇ ಅತೃಪ್ತನಾಗಿರುತ್ತಾನೆ. 30 ಪ್ರತಿಯೊಬ್ಬನೂ ಶಾಶ್ವತ ಸುಖ, ಶಾಂತಿಗಳನ್ನು ತಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಅದರ ಬಗ್ಗೆ ಯೋಚಿಸುತ್ತಿರಬೇಕು. ಎಲ್ಲರಲ್ಲೂ ಇರುವ ಪರಮಾತ್ಮನ ಸೇವೆಮಾಡಬೇಕು. ಇದು ಜೀವನದಲ್ಲಿ ಅತ್ಯಂತ ಉಪಯುಕ್ತವಾದ ಶ್ರದ್ಧೆ. ॥31॥ ಈ ಮಾನವ ದೇಹವು ಚರ್ಮ, ಮಾಂಸ, ರಕ್ತ ಮತ್ತು ಮೂಳೆಗಳಿಂದ ಮಾಡಲ್ಪಟ್ಟಿದೆ. ಇದು ಪರಮಾರ್ಥದ ಮಾರ್ಗದಲ್ಲಿ ಅಡಚಣೆ. ಆದ್ದರಿಂದ ಅದಕ್ಕೆ ಅಂಟಿದ ಮೋಹವನ್ನು ಬಿಡು. 32 ಅದನ್ನು ಯಾವಾಗಲೂ ನಿನ್ನ ಸೇವಕನೆಂದು ಪರಿಗಣಿಸು. ಅದನ್ನು ಮುದ್ದಿಸಬೇಡ. ಎಂದಿಗೂ ಅದರ ಆಸೆಗಳಿಗೆ ಬಲಿಯಾಗಬೇಡ. ಅವುಗಳಿಂದ ನರಕಕ್ಕೆ ನೀನೇ ಮೆಟ್ಟಿಲು ತೋಡಿದಂತಾಗುತ್ತದೆ. 33॥ ಆಹಾರ ಮತ್ತು ವಸ್ತ್ರಗಳು ಕೇವಲ ಅದನ್ನ ಸ೦ರಕ್ಷಿಸಲು ಮಾತ್ರ ಬೇಕು. ಅದು ಅಶಾಶ್ಚತವೆಂಬುದನ್ನು ಅರಿತು ಕೇವಲ ಆತ್ಮೋದ್ಧಾರಕ್ಕಾಗಿ ಮತ್ತು ಜನನ ಮರಣಗಳೆಂಬ ಚಕ್ರದಿಂದ ಹೊರಬರಲು ಮಾತ್ರ ಉಪಯೋಗಿಸಲು ಜೋಪಾನಮಾಡಬೇಕು. ॥34॥ ಜನನ ಮತ್ತು ಮರಣಗಳೆರಡೂ ಅನರ್ಥಗಳೇ. ಪ್ರತಿಕ್ಷಣವೂ ನಾಶಕ್ಕೆ ದಾರಿ ಮಾಡಿಕೊಡುತ್ತವೆ. ಇದು ಒಂದು ಕ್ಷಣಿಕ ಸುಖವಾಗಿ ಆಜೀವಪರ್ಯಂತ ದು:ಖವನ್ನು ತರುವಂತಹುದು. ॥35 ಯಾವ ರೀತಿ ಬಳಕುವ ವಿದ್ಯುಲ್ಲತೆಯು ಕೇವಲ ಕ್ಷಣಿಕವಾಗಿ ಬಂದು ಮಾಯವಾಗುತ್ತದೆಯೋ, ಸಾಗರದ ಅಲೆಗಳು ಯಾವ ರೀತಿ ಕ್ಷಣಿಕವೋ, ಈ ದೇಹವೂ ಅದೇ ರೀತಿ ಕ್ಷಣಿಕವಾದುದು. ಆದುದರಿಂದ ಯೋಚಿಸಿರಿ. 36॥ ಈ ದೇಹ, ಮನೆ, ಮಕ್ಕಳು ಮತ್ತು ಪತ್ನಿ - ಇವೆಲ್ಲವೂ ನಾಶವಾಗುತ್ತವೆ. ಆದರೆ ತಮ್ಮ ತಂದೆ, ತಾಯಿಗಳ ದೇಹವನ್ನು ಹೆಗಲ ಮೇಲೆ ಹೊತ್ತುಕೊ೦ಡು ಹೋಗಿ ಬೀಳ್ಕೊಡುವಾಗಲೂ ಯಾರೂ ಇದನ್ನು ಆಲೋಚಿಸುವುದಿಲ್ಲ. 37॥ ಅವರು ಮೃತಹೊಂದಿದ್ದಾರೆ. ಈ ದಿನ ಆರೋಗ್ಯದಿಂದಿರುವವನೂ ಸಹ ಅವರ ನಂತರ ಸಾಯುತ್ತಾನೆ. ಪ್ರತಿಯೊಬ್ಬರೂ ಜನನ ಮರಣದ ಚಕ್ರದಲ್ಲಿ ಸಿಲುಕಿರುತ್ತಾರೆ. ಆದರೆ ಒಂದು ಕ್ಷಣವೂ ಇದನ್ನು ಹೇಗೆ ನಿಗ್ರಹಿಸಬಹುದೆಂದು ಯೋಚಿಸುವುದಿಲ್ಲ. 38 ಕುಟುಂಬದ ಉನ್ನತಿಯನ್ನು ನೋಡುತ್ತಲೇ ಬೇಗನೆ ಜೀವನವು ಕಳೆದು ಹೋಗುತ್ತದೆ. ಆದರೆ ತನ್ನ ಕರ್ತವ್ಯವನ್ನು ಎಂದಿಗೂ ಮರೆಯುವುದಿಲ್ಲ ಮತ್ತು ಜೀವನದ ಪರಿಮಿತಿಯನ್ನು ಲೆಕ್ಕಮಾಡಿರುತ್ತದೆ. 39॥ ಅಂತಿಮ ಕ್ಷಣ ಬಂದಾಗ ಅದು ಒಂದು ಅರೆಕ್ಷಣವೂ ಕಾಯುವುದಿಲ್ಲ. ಮೀನುಗಾರನು ಬಲೆಬೀಸಿದಾಗ ಮೀನುಗಳು ಸಿಕ್ಕಿಹಾಕಿಕೊಳ್ಳುವ ಹಾಗೆ ಜೀವನವು ಮೃತ್ಯುವಿನ ಸ್ಪರ್ಶದಲ್ಲಿ ವಿಲವಿಲ ಒದ್ದಾಡಿ ಜೀವನವು ಅಂತ್ಯವಾಗುತ್ತದೆ. 40 ಪೂರ್ವಜನ್ಮದ ಪುಣ್ಯಕಾರ್ಯಗಳ ಶೇಖರಣೆಯಿಂದಾಗಿ ಮತ್ತು ಪುಣ್ಯವನ್ನು ಒಟ್ಟುಮಾಡಿರುವುದರ ಫಲದಿಂದಾಗಿ ಮಾನವ ಜನ್ಮ ಪಡೆಯುತ್ತಾನೆ. ಆದ್ದರಿಂದ ಪ್ರತಿಯೊಂದು ಕ್ಷಣವನ್ನೂ ಒಳ್ಳೆಯ ರೀತಿ ಉಪಯೋಗಿಸಬೇಕು. 41 ಗಂಗೆಯನ್ನು ಶಿವನ ತಲೆಯಲ್ಲಿ ನಿಲ್ಲಿಸಲು ಮಾಡಿದಂತಹ ಭಗೀರಥ ಪ್ರಯತ್ನ ಮಾಡಿದರೂ ಮಾನವ ಜನ್ಮ ಪಡೆಯಲು ಸಾಧ್ಯವಿಲ್ಲ. ವಿಧಿವಶಾತ್‌ ಅನಿರೀಕ್ಷಿತವಾಗಿ ನಮಗೆ ಪಡೆಯಲು ಸಾಧ್ಯವಾಗಿದೆ. ಅದನ್ನು ನಿರ್ಲಕ್ಷ್ಯದಿಂದ ವ್ಯ್ಯರ್ಥಮಾಡಬಾರದು. 42 ಮುಂದಿನ ಜನ್ಮದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವೆನೆಂದು ಯೋಚಿಸುವವನು ಮೂರ್ಖನು. ಈ ಜೀವನ ತಪ್ಪಿ ಹೋದಮೇಲೆ ಅದೇ ರೀತಿ ನಡೆಯುವುದೆಂಬುದು ನಿಶ್ಚಿತವಿಲ್ಲ. ॥43॥


ಅನೇಕ ಪಾಪಿಗಳು ದೇಹಧಾರಿಗಳಾಗಿದ್ದಾರೆ. ಅವರ ಅನುವಂಶಿಕ ಉತ್ಪತ್ತಿ ಇಗಳು ಸೃಷ್ಟಿಯ ಅಂಗಗಳನ್ನು ತಲುಪಿ, ಆಗಿನ ಕರ್ಮಾನುಸಾರ ಒಂದು ಹೊಸ ಆಕಾರವನ್ನು ಪಡೆಯುತ್ತದೆ. ॥44॥ ಇನ್ನೂ ಅನೇಕ ಅಧಮಾಧಮರೂ, ನೀಚರೂ ಇದ್ದಾರೆ. ಅವರು ಮೊದಲು ಚಲಿಸುವಂತವರಾಗಿ ಅನಂತರ ಅಚಲ(ಜಡ)ರಾಗಿ ತಮ್ಮ ಕರ್ಮಗಳು ಹಾಗೂ ಯೋಚನೆಗಳಿಗನುಸಾರವಾಗಿ ಹುಟ್ಟುತ್ತಾರೆ. ॥45 ಯಾವ ರೀತಿ ಒಬ್ಬನು ಜ್ಞಾನವನ್ನು ಸಂಪಾದನೆ ಮಾಡುತ್ತಾನೋ ಅಥವಾ ಕರ್ಮಗಳನ್ನು ಆಚರಿಸುತ್ತಾನೋ ಅವುಗಳಿಗನುಗುಣವಾಗಿ ದೇಹವನ್ನು ಪಡೆಯುತ್ತಾನೆ. ಇದು.ಶೃತಿಗಳಲ್ಲಿ ನಮೂದಿಸಿರುವ ವಿಷಯ. 46॥ "ಪ್ರತಿಯೊಬ್ಬನೂ. ತನ್ನ ಪ್ರಜ್ಞೆಗನುಸಾರವಾಗಿ ಜನ್ಮ ತಾಳುತ್ತಾನೆ" ಎಂದು ಕರುಣಾಮಯಿ ಶೃತಿಮಾತೆ ಹೇಳುತ್ತಾಳೆ. ಆದುದರಿಂದ ಅವನ ಪ್ರಜ್ಞೆಯ ಭಂಡಾರಕ್ಕೆ ಅನುಗುಣವಾಗಿ ಆತ್ಮವು ಜನ್ಮತಾಳುತ್ತದೆ. ॥47॥ ಪರಮಾತ್ಮನ ಲೀಲೆಗಳು ಬುದ್ಧಿಗೆ ಮೀರಿದವು. ಅವುಗಳನ್ನು ಸಂಪೂರ್ಣವಾಗಿ ಅರಿಯುವುದು ಅಶಕ್ಯ. ಆದರೆ ಮಾನವನು ಪುಣ್ಯವಂತನೆಂದು ಪರಿಗಣಿಸಬೇಕು. ಅವನು ಪರಮಾತ್ಮನ ಅಂಶವನ್ನೂ ಅರಿಯಬಲ್ಲನು. ॥48॥ ನರದೇಹವು ದೊರಕುವುದು ಪರಮ ಭಾಗ್ಯ. ಅದರಲ್ಲಿ ಬ್ರಾಹ್ಮಣನಾಗಿ ಹುಟ್ಟುವುದು ಮಹತ್ಪುಣ್ಯವು. ಪರಮಾತ್ಮನ ಕೃಪೆಯಿಂದ ಸಾಯಿ ಚರಣಗಳನ್ನು ಪಡೆಯುವುದು ಇನ್ನೂ ಅಲಭ್ಯ ಇವೆಲ್ಲವೂ ಅತ್ಯಂತ ವಿರಳ. ॥49॥ ಬೇರೆಬೇರೆ ರೀತಿಯ ಜೀವಿಗಳಿದ್ದಾಗ್ಯೂ ಮಾನವ ಜನ್ಮವು ಎಲ್ಲಕ್ಕಿಂತಲೂ ಪರಮೋತ್ತಮ. ನಾವು ಎಲ್ಲಿಂದ ಬಂದಿರುವೆವು? ನಮ್ಮ ಸೃಷ್ಟಿಕರ್ತ ಯಾರು? ಇಂತಹ ಪ್ರಶ್ನೆಗಳಿಗೆ ವಿವೇಕಿಯಾದ ಮಾನವನ ಮನಸ್ಸು ಮಾತ್ರ ಉತ್ತರಿಸಲು ಸಾಧ್ಯ. ॥50॥ ಇನ್ನಿತರ ಯೋನಿಜರಿಗೆ ಈ ಜ್ಞಾನವಿರುವುದಿಲ್ಲ. ಅವು ಹುಟ್ಟುತ್ತವೆ, ಸಾಯುತ್ತವೆ. ಅವು ಭೂತ, ವರ್ತಮಾನ ಮತ್ತು ಭವಿಷ್ಯತ್ತನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಹಾಗೂ ಭಗವ೦ತನ ಅಸ್ತಿತ್ವವನ್ನೂ ಅರಿಯಲಾರವು. 51 ಆದುದರಿಂದಲೇ ಪರಮಾತ್ಮನು, ಮಾನವನ ಸೃಷ್ಟಿಯಾದ ನಂತರ ಮಾನವನು ಇಂದ್ರಿಯನಿಗ್ರಹ ಮತ್ತು ವೈರಾಗ್ಯದಿಂದ ಅವನನ್ನು ಪೂಜಿಸಬಲ್ಲನೆಂದು ಯೋಚಿಸಿ ಆನಂದಸಂಪನ್ನ ನಾದನು. ॥52॥ ವಿನಾಶಿಯಾದ ಮಾನವನು ಸಾಧನೆಯನ್ನು ಮಾಡಿದರೆ ಶಾಶ್ವತವಾದ ಪರಮಾತ್ಮನನ್ನು ಪಡೆಯುತ್ತಾನೆ. ಸಾಧನೆಯಿಂದ ಪರಮಾತ್ಮನನ್ನು ಪಡೆಯಲು ನರದೇಹಕ್ಕಿಂತ ಬೇರೆ ಉಪಕರಣ ಇನ್ನೊಂದಿಲ್ಲ. 53


ಒಬ್ಬ ಹಾವಾಡಿಗನು ಬಹಳ ಚತುರನಾಗಿರುತ್ತಾನೆ. ಅವನು ಅಜ್ಞಾನಿಗಳ ಮುಂದೆ ಆಟ ತೋರಿಸುವುದಿಲ್ಲ. ಅದಕ್ಕಾಗಿ ಕುಶಲ ಪ್ರೇಕ್ಷಕರು ಅವನನ್ನು ಹೊಗಳಬಲ್ಲಂತಹವರಿಗಾಗಿ ಕಾಯುತ್ತಾನೆ. ॥54 ಅದೇ ರೀತಿ ಅಸಂಖ್ಯಾತ ಕ್ರಿಮಿ, ಕೀಟಗಳು, ಪ್ರಾಣಿಗಳು, ಪಕ್ಷಿಗಳು, ಗಿಡಗಳು, ಇವುಗಳನ್ನು ಸೃಷ್ಟಿಸಿದ ಮೇಲೆ ಪರಮಾತ್ಮನಿಗೆ ಆಶ್ಚರ್ಯವಾಯಿತು ಮತ್ತು ನಿರಾಶೆಯೂ ಆಯಿತು. ಅವನಿಗೆ ತನ್ನಸೃಷ್ಠಿ ಪ್ವಿಕಾರ್ಯವು ಅರ್ಥಹೀನವಾಗಿ ಕಂಡಿತು. ॥55 ಈ ಅನಂತ, ವಿಶಾಲ ವಿಶ್ವದಲ್ಲಿ ಸೂರ್ಯ, ಚಂದ್ರ ಮತ್ತು ಅಸಂಖ್ಯಾತ ತಾರೆಗಳಿದ್ದವು. ಆದರೆ ಸೃಷ್ಟಿಕರ್ತನ ಸೃಷ್ಟಿಯ ಬಗ್ಗೆ ಒಂದು ಕ್ಷಣವಾದರೂ ಅಚ್ಚರಿಯನ್ನು ವ್ಯಕ್ತಪಡಿಸುವವರು ಯಾರೂ ಇರಲಿಲ್ಲ. ॥56॥ ಒಂದೇ ಒಂದು ಜೀವಿಯೂ ಭಗವಂತನ ಇಡೀ ಸೃಷ್ಟಿಯ ಹಿಂದಿನ ಉದ್ದೇಶದ ಬಗ್ಗೆ ಯೋಚಿಸ ಹೋಗಲಿಲ್ಲ. ॥57॥ "ನನ್ನ ಇಡೀ ಸೃಷ್ಟಿಯೇ ನಿರರ್ಥಕ. ಹರಿತ ಬುದ್ಧಿಶಕ್ತಿಯಿಂದ ನನ್ನ ಸೃಷ್ಟಿಯ ಅಗಾಧತೆ ಮತ್ತು ವಿಶಾಲತೆಯನ್ನು ಪ್ರಶಂಸೆ ಮಾಡುವಂತಹ ಜೀವಿಯನ್ನು ಸೃಷ್ಟಿಸುವವರೆಗೆ ಇದು ನಿಷ್ಟಯೋಜಕ". ॥58 ಈ ರೀತಿ ಸ್ವತಃ ತಾನೇ ಯೋಚಿಸಿ ಪರಮಾತ್ಮನು ಮಾನವನನ್ನು ಸೃಷ್ಟಿಸಿದನು. ಅವನಿಗೆ ತನ್ನ ವಿವೇಚನಾಶಕ್ತಿಯಿಂದ ತನ್ನ ಶಕ್ತಿಯನ್ನು ಅರಿಯಬಹುದಾಯಿತು. ॥59॥ ನನ್ನ ವೈಭವವು ಅಗಾಧ, ನನ್ನ ಶಕ್ತಿಯು ಅಪೂರ್ವ, ಈ ಸೃಷ್ಟಿಯು ನನ್ನ ಮಾಯೆಯ ಫಲ. ಆಶ್ಚರ್ಯಚಕಿತನಾಗಿ ಅವನು 'ಇದೆಲ್ಲವೂ ನನ್ನ ಮಾಯೆಯ ಆಟ' ಎಂದು ತಿಳಿದುಕೊಳ್ಳುತ್ತಾನೆ. ॥60॥ ಅವನು ಮಾತ್ರ ಜ್ಞಾನ ಸಂಪಾದನೆ ಮಾಡಬಲ್ಲನು. ಅವನೊಬ್ಬನು ಮಾತ್ರ ನನ್ನಲ್ಲಿ ಏಕಾಗ್ರಚಿತ್ತನಾಗಬಹುದು ಮತ್ತು ಅರಿಯಬಲ್ಲನು. ಅವನು ಮಾತ್ರ ಅದರಿಂದ ಲಾಭಪಡೆಯಬಲ್ಲನು - ಆಗ ಮಾತ್ರ ಸೃಷ್ಟಿಕಾರ್ಯದ ನಾಟಕ ಸಂಪೂರ್ಣವಾಗುತ್ತದೆ. ॥61॥ ನನ್ನ ಸೃಷ್ಟಿಯ ನಾಟಕದ ಸಾರ್ಥಕತೆಯು ಪ್ರೇಕ್ಷಕರ ಆನಂದ ಸಂಪನ್ನತೆಯಲ್ಲಿದೆ. ಮಾನವನು ನನ್ನ ರಾಜ್ಯವನ್ನೂ ಮತ್ತು ನಾನೊಬ್ಬನೇ ಜಗನ್ನಿಯಾಮಕ ಮತ್ತು ಜಗನ್ನಿಯಂತ್ರಕ ಎಂಬುದನ್ನು ಅರಿತಾಗ ಅತ್ಯಂತ ಕೃತಾರ್ಥನಾಗುತ್ತಾನೆ. 62॥


ಜೀವನದಲ್ಲಿ ಕೇವಲ ಕಾಮ್ಯಕ ಕರ್ಮಗಳನ್ನು ಮಾಡಿ ಅದರಿಂದ ದ್ರವ್ಯಾರ್ಜನೆ ಮತ್ತು ಶರೀರ ಪೋಷಣೆಯು ಅಲ್ಲ. ಜೀವವು ಬದುಕಿರುವವರೆಗೆ ತತ್ವಜ್ಞಾನ ಸಂಪಾದನೆ ಮಾಡಬೇಕು. ಅದರಿಂದಲೇ ಜೀವನದ ಸಫಲತೆ. ॥63॥ ತತ್ವಚ್ಞಾನವೇ ಅದ್ವೈತದ ಭಾವ. ಅದೇ ಉಪನಿಷತ್‌ಗಳಲ್ಲಿ ವಿವರಿಸಿರುವ ಬ್ರಹ್ಮಜ್ಞಾನ. ಅದೇ ಪರಮಾತ್ಮನ ಉಪಾಸನೆ. ಅದೇ ಭಕ್ತರಿಗೆ ನಿಜವಾದ ಪರಬ್ರಹ್ಮ ॥64॥ ಗುರು ಮತ್ತು ಬ್ರಹ್ಮ ಎರಡೂ ಬೇರೆ ಬೇರೆ ಅಲ್ಲ. ಅದ್ವೈತ ಜ್ಞಾನವನ್ನು ಅರಿತವನು ಭಕ್ತಿಯನ್ನು ಸಾಧನೆಮಾಡಿದಂತೆ. ಈ ಅರಿವು ಮಾಯೆಯನ್ನು ಜಯಿಸಲು ಸುಲಭೋಪಾಯ. ॥65 ಯಾರು ಶ್ರದ್ಧಾವಂತರೊ, ಜ್ಞಾನ ಸಂಪಾದನೆ ಮಾಡಿದ್ದಾರೋ, ವೈರಾಗ್ಯಭಾವವನ್ನು ಹೊಂದಿದ್ದಾರೋ, ಆತ್ಮತತ್ತ್ವವನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೋ, ಅವರು ನಿಜವಾಗಿಯೂ ಅದೃಷ್ಟವಂತ ಭಕ್ತರು. ॥66॥ ತಮ್ಮ ಸ್ವಸ್ವರೂಪವನ್ನು ಅರಿಯದೆ ಇರುವವರು ತಮ್ಮ ಅಜ್ಞಾನವನ್ನು ದೂರಮಾಡದೆ, ತಾವೇ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದಾರೆಂದು ನಂಬಿದ್ದಾರೋ, ಅವರಿಗೆ ಇದು ಒಂದು ವಿಲಕ್ಷಣವಾದ ಪ್ರತಿಬಂಧವಾಗಿ ಸಾಧನೆಯಲ್ಲಿ ಅಡ್ಡಿಪಡಿಸುತ್ತದೆ. ॥67॥ ಜ್ಞಾನ ಮತ್ತು ಅಜ್ಞಾನ ಇವೆರಡೂ ಅವಿದ್ಯೆ ಎಂಬ ವಿಕಾರದಿ೦ದ ಜನಿಸಿದವು. ಒಂದು ಮುಳ್ಳಿನಿಂದ ಇನ್ನೊಂದು ಮುಳ್ಳನ್ನು ತೆಗೆಯುವ ರೀತಿಯಲ್ಲಿ ನೀವು ಅವೆರಡನ್ನೂ ತ್ಯಜಿಸಬೇಕು. ॥68॥ ಜ್ಞಾನದಿಂದ ಅಜ್ಞಾನವನ್ನು ದೂರಮಾಡಿ. ಜ್ಞಾನ-ಅಜ್ಞಾನ ಇವೆರಡಕ್ಕೂ ಅತೀತರಾಗಿ ಹೋಗಿ, ನಿರ್ಮಲ ಸ್ವಸ್ಟರೂಪಾವಸ್ಥೆಯನ್ನು ತಲುಪಿರಿ. ಇದೊಂದೇ ಮಾನವಜನ್ಮದ ಗುರಿ. 69॥ ಪರಿಶುದ್ಧವಾದ ಜ್ಞಾನವು ವಿಷಯವಾಸನಾ ರೂಪಿ ಅಶುದ್ಧವಾದ ಎಣ್ಣೆಯು ಮುಗಿಯುವವರೆಗೆ ಅಜ್ಞಾನದ ಕರಿಕಿಟ್ಟವನ್ನು ತೆಗೆದು ಅಹಂಕಾರವೆಂಬ ದಪ್ಪನಾದ ಬತ್ತಿಯು ನಾಶವಾಗುವವರೆಗೆ ಪ್ರಕಾಶಮಾನವಾಗಿ ಪ್ರಜ್ಞಲಿಸುವುದಿಲ್ಲ. 70॥ ಈ ನರದೇಹದಿಂದ ಮಾಡುವ ಕರ್ಮಗಳು ನಿವಾರ್ಯ ಅಥವಾ ಅನಿವಾರ್ಯವಾಗಲಿ. ಬುದ್ಧಿ, ಕರ್ತವ್ಯದ ಪರಿಮಿತಿಯೊಳಪಟ್ಟು ನಿಶ್ಚಯವಾದ ಕರ್ತವ್ಯವೆಂದು ತಿಳಿದು ನಿರ್ವಹಿಸಬೇಕು. 71 ಯಾರಿಗಾದರೂ ಯಾವುದೇ ಕೆಲಸವಿಲ್ಲದಿದ್ದಲ್ಲಿ, ಸಂಪತ್ತು ಮತ್ತ ಶಾಂತಿಗಳನ್ನು ಅನುಭವಿಸಬೇಕು. ಇಲ್ಲದಿದ್ದರೆ ರಾಮನಾಮವನ್ನು ಭಜಿಸುತ್ತ ಆಶಾರಹಿತನಾಗಿ ನಿಶ್ಚಿಂತೆಯಿಂದ ಇರಬೇಕು. ॥72॥


ಶರೀರ, ಇಂದ್ರಿಯ, ಮನಸ್ಸು ಮತ್ತು ಬುದ್ಧಿ ಆತ್ಮಬೋದೆಗೆ ಅಡಚಣೆಗಳು. ಆದರೆ ಈ ಉಪಾಧಿಗಳಿಂದಲೇ ಆತ್ಮವು ಈ ಸಂಸಾರವನ್ನು ಅಥವಾ ಅಸ್ತಿತ್ವವನ್ನು ಅನುಭವಿಸಬಹುದು. ಆತ್ಮವು ತಾನೇ ಅನಾದಿ ಮತ್ತು ನಿರ್ಮೋಹವಾದದ್ದು 73 ಹೊರನೋಟಕ್ಕೆ ಮಾತ್ರ ಆತ್ಮವು ಸುಖಪಡುವಂತೆ ತೋರುತ್ತದೆ. ಏಕೆಂದರೆ ಸ್ವಭಾವತಃ ಅದು ಸುಖಿಸುವುದೂ ಇಲ್ಲ. ಇದನ್ನು ತರ್ಕ ವಿಜ್ಞಾನದಿಂದ ಮತ್ತು ಊಹೆಗಳಿಂದ ಪ್ರಮಾಣೀಕರಿಸಲಾಗಿದೆ. 74 ಜೀವನದ ನಿಜಧರ್ಮವನ್ನು ಅರ್ಥಮಾಡಿಕೊಂಡು, ಮಾಡಬೇಕಾದ ಕರ್ತವ್ಯ ಕರ್ಮಗಳನ್ನು ಬುದ್ಧಿಗೆ ವಹಿಸಿ ಬುದ್ಧಿಯ ಧರ್ಮವನ್ನು ಅದಕ್ಕೇ ಬಿಡಿ. ನಿಷ್ಕಾಮವಾಗಿ ಕರ್ಮಗಳನ್ನು ಮಾಡಬೇಕು. ॥75॥ ಪ್ರತಿಯೊಬ್ಬರ ಧಾರ್ಮಿಕ ಕರ್ತವ್ಯಗಳನ್ನು ಯಾವಾಗಲೂ ಅಂತರಾತ್ಮದ ಧ್ಯಾನದಲ್ಲಿ ಲೀನಮಾಡಬೇಕು. ಇದೇ ನಮ್ಮ ಜನ್ಮದ ಗುರಿ. ಅದರಿಂದಲೇ ಅಂತರಂಗದ ಸಮಾಧಾನ ಪಡೆಯಬಹುದು. 76 ಜೀವನದ ನಾಲ್ಕು ಪುರುಷಾರ್ಥಗಳನ್ನು ಸಾಧಿಸಲು ಮಾನವ ಜನ್ಮವನ್ನು ಬಿಟ್ಟು ಬೇರೆ ಜನ್ಮದಲ್ಲಿ ಯಾವುದೇ ರೀತಿಯಿಂದ ಸಾಧ್ಯವಿಲ್ಲ. ಯಾವ ಪುರುಷನು ಅವುಗಳನ್ನು ಅಭ್ಯಸಿಸಿ ಪರಿಣತನಾಗುವನೋ ಅವನು ಪರಮಾತ್ಮನನ್ನು ಪಡೆಯುತ್ತಾನೆ. 77 ಆದುದರಿಂದ, ದೇಹವು ನಾಶವಾಗುವವರೆಗೆ ಆತ್ಮಜ್ಞಾನವನ್ನು ಪಡೆಯಲು ಪ್ರಯತ್ನಿಸು. ಮಾನವ ಜನ್ಮದ ಒಂದು ಕ್ಷಣವನ್ನೂ ವ್ಯರ್ಥಗೊಳಿಸಬೇಡ. 78॥ ಸಮುದ್ರದಲ್ಲಿರುವ ಉಪ್ಪುನೀರು ಮೋಡವಾಗಿ ಆಕಾಶದಿಂದ ಕೆಳಗೆ ಬೀಳುವಾಗ ಅಮೃತದಂತೆ ಹೇಗೆ ಮಧುರವಾಗಿರುತ್ತದೆಯೋ ಹಾಗೆಯೇ ಗುರುವಿನ ಪದತಲದಲ್ಲಿ ಆನಂದವನ್ನು ಅನುಭವಿಸಬಹುದು. ॥79 ಅದೇ ರೀತಿ ಮನುಷ್ಯ ಜನ್ಮದಲ್ಲಿ ಗುರುವಿಲ್ಲದೆ ಆನಂದಸ್ಥಿತಿಯನ್ನು ಪಡೆಯಲು ಆಗುವುದಿಲ್ಲ. ಗುರುವು ಅವಶ್ಯವಾದ ಸಹಾಯಹಸ್ತ ನೀಡಿದಾಗ ಮಾತ್ರವೇ ಜೀವಿಗಳು

ಉದ್ಧಾರವಾಗುವುವು. 80॥


ಪವಿತ್ರವಾದ ಮಂತ್ರಗಳು, ತೀರ್ಥಗಳು, ದೇವತೆಗಳು, ಬ್ರಾಹ್ಮಣರು, ಜ್ಯೋತಿಷಿಗಳು ಮತ್ತು ಔಷಧಿಕಾರರು- ಈ ಸಾಲಿನಲ್ಲಿ ಏಳನೆಯವರಾಗಿರುವರು - ಇವರೆಲ್ಲರಲ್ಲೂ ಶ್ರದ್ಧೆ ಇರಲೇ ಬೇಕು. ॥81 ಇವುಗಳಲ್ಲೆಲ್ಲ ಎಷ್ಟರಮಟ್ಟಿಗೆ ಶ್ರದ್ಧೆ ಇದೆಯೋ ಅಷ್ಟರಮಟ್ಟಿಗೆ ಮಾತ್ರ ಸಫಲತೆ ಸಿಗುತ್ತದೆ. ಮನಸ್ಸಿನ ತೀವ್ರತೆಯ ಆಧಾರದ ಮೇಲೆ ಸಫಲತೆಯೂ ಬದಲಾಗುತ್ತದೆ. ॥82॥ ಈ ಸಂಸಾರಕ್ಕೆ ಬಂಧಿಸಲ್ಪಟ್ಟವರಾಗಿ ಸಂತರು ಅವರ ಹೃದಯದಲ್ಲಿ ಮೋಕ್ಷದ ಬಗ್ಗೆ ಆಸೆ ಹುಟ್ಟಿಸುತ್ತಾರೆ. ಮೋಕ್ಷ ಪಡೆಯುವ ಸಾಧಕರಿಗೆ ಮೋಕ್ಷವನ್ನು ದಯಪಾಲಿಸುತ್ತಾರೆ. ಸಂತರು ಪರರಿಗೆ ಉಪಕಾರಮಾಡುವುದಕ್ಕೋಸ್ಕರವಾಗಿಯೇ ಅಗ್ರಾಹ್ಯ ಸ್ಥಿತಿಯಿಂದ ಅಸ್ತಿತ್ವ ಪಡೆಯುತ್ತಾರೆ. 83॥ ಪ್ರವಚನಗಳಿಂದ, ಪುರಾಣಗಳನ್ನು ಓದುವುದರಿಂದ ಯಾವುದನ್ನು ಸಾಧಿಸಲು ಅಸಾಧ್ಯವೋ ಅದನ್ನು ಒಬ್ಬ ಸದ್ಗುರುವಿನ ನಡವಳಿಕೆಯಿ೦ದ ಅರ್ಥಮಾಡಿಕೊಳ್ಳಬಹುದು. ಗುರುವಿನ ಮನೋವೃತ್ತಿ ಮತ್ತು ಉದಾಹರಣೆಗಳೇ ಅವರ ಮೌನವಾದ ಉಪದೇಶಗಳು. ॥84


ಕ್ಷಮೆ, ಶಾಂತಿ, ನಿರ್ಮೋಹತ್ವ, ದಯೆ ಅವುಗಳನ್ನು ಅಭ್ಯಸಿಸುವವರು ಮತ್ತು ಪರೋಪಕಾರ ಮಾಡುವವರು, ಅಹಂಭಾವವನ್ನು ತೊರೆದವರು ಮತ್ತು ಇಂದ್ರಿಯನಿಗ್ರಹ ಶಕ್ತಿಯುಳ್ಳ ವ್ಯಕ್ತಿಗಳನ್ನು ಕಾಣುವುದು ಬಹು ಅಪರೂಪ. 85 ಪುಸ್ತಕಗಳನ್ನು ಓದಿ ಸಾಧಿಸದೆ ಇರುವುದನ್ನು ಶಾಸ್ತ್ರಗಳಲ್ಲಿ ತಿಳಿಸಿರುವ ಮೇಲೆ ಹೇಳಿದ ಸದ್ಗುಣಗಳನ್ನು

ಅಭ್ಯಾಸಮಾಡುವ ವ್ಯಕ್ತಿಯನ್ನು ಅವಲೋಕಿಸುವುದರಿಂದಲೇ ಪಡೆಯಬಹುದು. ಅಸಂಖ್ಯಾತ ನಕ್ಷತ್ರಗಳು ಮಾಡಲಾರದೆ ಇರುವುದನ್ನು ಕೇವಲ ಸೂರ್ಯನೊಬ್ಬನೇ ಮಾಡಬಲ್ಲನು. 86 ಇದೇ ರೀತಿ, ಆದರ್ಶ ಸಂತರು ತಮ್ಮ ಅನೇಕಾನೇಕ ಅಸಾಧಾರಣ ಕ್ರಿಯೆಗಳಿಂದ ಭವಸಾಗರಕ್ಕೆ ಕಟ್ಟುಬಿದ್ದವರನ್ನು ಬಿಡಿಸುತ್ತಾರೆ ಮತ್ತು ಪರಮಾನಂದದ ಸ್ಥಿತಿಗೆ ಉತ್ಪತ್ತಿಸ್ಥಾನವಾಗಿರುತ್ತಾರೆ. ॥87॥ ಅಂತಹ ಮಹಾನ್‌ ಸಂತರಲ್ಲಿ ಸಾಯಿಯು ಒಬ್ಬರು. ದೈವೀಗುಣಗಳಿಂದ ಮತ್ತು ಪರಿಪೂರ್ಣತೆಯಿಂದ ಕೂಡಿದವರು. ಆದರೆ ಅವರು ಫಕೀರರ ರೀತಿಯಲ್ಲಿ ಜೀವಿಸುತ್ತಿದ್ದರು. ಸದಾ ಸ್ವಸ್ವರೂಪದಲ್ಲಿ ನೆಲೆಸಿದ್ದವರು. ॥88॥ ಸಮತ್ವದಲ್ಲಿ ಅವಿಚ್ಛಿನ್ನ ಶ್ರದ್ಧೆಯುಳ್ಳವರು. ನಾನು ಮತ್ತು ನನ್ನದು ಎಂಬ ಷದಗಳನ್ನು ಎಂದಿಗೂ ಉಚ್ಚರಿಸದವರು. ಎಲ್ಲಾ ಜೀವಿಗಳಲ್ಲೂ ಕರುಣೆ ತೋರಿದವರು. ಅವರು ಈ ಭೂಮಿಯಮೇಲಿನ ಭಗವಂತನ ಅವತಾರ. 89 ಅವರು ಸುಖದಿಂದ ಸಂತೋಷಪಡುವುದಾಗಲೀ, ಕಷ್ಟ ಬಂದಾಗ ದುಃಖಿಸುವುದಾಗಲೀ ಇರಲಿಲ್ಲ. ಅವರಿಗೆ ಬಡವ ಶ್ರೀಮ೦ತರಿಬ್ಬರೂ ಒಂದೇ. ಇದು ಬಹಳ ಅಸ್ಪಾಭಾವಿಕವಲ್ಲವೇ? ॥90॥ ಯಾರ ಹುಬ್ಬಿನ ಚಲನೆಯೇ ದರಿದ್ರರನ್ನು ಕ್ಷಣಾರ್ಧದಲ್ಲಿ ಶ್ರೀಮಂತನನ್ನಾಗಿ ಮಾಡುವುದೋ ಅವರು ಮನೆಯಿಂದ ಮನೆಗೆ ಜೋಳಿಗೆ ಹಿಡಿದು ಭಿಕ್ಷಕ್ಕೆ ಹೋಗುತ್ತಿದ್ದರು. ॥91 ಯಾರ ಮನೆಗಳ ಬಾಗಿಲಿಗೆ ಬಾಬಾರವರು ಭಿಕ್ಷೆಗೆ ಹೋಗಿ ಕೈ ಚಾಚಿ, 'ಓ ಮಹಿಳೆಯರೇ! ಒಂದು ಕಾಲು ಭಾಗ ಭಾಕರಿ(ರೊಟ್ಟಿ)ಯನ್ನು ನೀಡಿ' ಎಂದು ಬೇಡುತ್ತಿದ್ದರೋ ಅಂತವರೇ ಧನ್ಯರು. ॥92॥ ಲೋಟವನ್ನು ಒಂದು ಕೈಯಲ್ಲಿ ಹಿಡಿದು ಜೋಳಿಗೆಯನ್ನು ಮತ್ತೊಂದರಲ್ಲಿ ಹಿಡಿದು ಅವರೇ ಬಾಗಿಲಿನಿಂದ ಬಾಗಿಲಿಗೆ ಕೆಲವು ಮನೆಗಳಿಗೆ ನಿತ್ಯವೂ ಹೋಗುತ್ತಿದ್ದರು. 93॥ ತರಕಾರಿ, ಸಾ೦ಬಾರು, ಹಾಲು

ಮತ್ತು ಮಜ್ಜಿಗೆ ಎಲ್ಲವನ್ನೂ ಜನರಿಂದ ಲೋಟಕ್ಕೆ ಹಾಕಿಸಿಕೊಳ್ಳುತ್ತಿದ್ದರು. ನೋಡಿ, ಅವರು ತಿನ್ನುವ ವೈಖರಿಯಿಂದ ಅಚ್ಚರಿಗೊಳ್ಳುವಿರಿ. 94 ಬೇಯಿಸಿದ ಅನ್ನ ಅಥವಾ ರೊಟ್ಟಗಾಗಿ ಜೋಳಿಗೆಯನ್ನು ಹಿಡಿಯುವರು. ನೀರಾಗಿರುವ ಖಾದ್ಯವಸ್ತುಗಳನ್ನು ಲೋಟದಲ್ಲಿ ಸಂಗ್ರಹಿಸುತ್ತಿದ್ದರು. ॥95 ಅವರಿಗೆ ವಿವಿಧ ರೀತಿಯ ಆಹಾರ ಪದಾರ್ಥಗಳ ಬಗ್ಗೆ ಬೇರೆ ಬೇರೆಯಾಗಿ ರುಚಿ ನೋಡಲು ಆಸೆ ಹುಟ್ಟಲು ಹೇಗೆ ಸಾಧ್ಯ? ಅವರ ನಾಲಿಗೆಗೆ ರುಚಿಯ ವಾಸನೆ ಎಂದೂ ತಿಳಿಯದೆ ಇರುವಾಗ ಅವರಿಗೆ ಆಸೆ ಹುಟ್ಟಲು ಹೇಗೆ ಸಾಧ್ಯ? ॥96॥ ಅವರು ಜೋಳಿಗೆಯಲ್ಲಿ ಬೀಳುವ ಆಹಾರದಿಂದ

ತೃಪ್ತರಾಗುತ್ತಿದ್ದರು. ಅದು ರುಚಿಯಾಗಿದೆಯೋ ಇಲ್ಲವೋ ಎಂಬುದನ್ನು ಅರಿಯರು. ಏಕೆಂದರೆ ಅವರ ನಾಲಿಗೆ ಎಂದಿಗೂ ಭೇದಭಾವ ಮಾಡಲಿಲ್ಲ. 97 ಬೆಳಗಿನ ಸಮಯ ಅವರು ನೆರೆಹೊರೆಯವರಿಂದ ಭಿಕ್ಷೆ ಬೇಡುತ್ತಿದ್ದರು. ಅದನ್ನು ತಮ್ಮ ಜೋಳಿಗೆಯಲ್ಲಿ ತುಂಬಿಸಿಕೊಳ್ಳುತ್ತಿದ್ದರು ಮತ್ತು ಅದರಿಂದ ತೃಪ್ತರಾಗುತ್ತಿದ್ದರು. ॥98॥ ಅದನ್ನೂ ಪ್ರತಿನಿತ್ಯವೂ ಮಾಡುತ್ತಿರಲಿಲ್ಲ. ಅವರಿಗೆ ಹೋಗಬೇಕೆನಿಸಿದಾಗ ಹೋಗುತ್ತಿದ್ದರು. ಕೆಲವು ವೇಳೆ ಅವರು ಹಳ್ಳಿಯ ಒಳಗೆ ಹೋಗುತ್ತಿದ್ದರು. ಒಂದು ದಿನದಲ್ಲಿ ಹನ್ನೆರಡು ಬಾರಿಯೂ ಬೇಡಿದ್ದಾರೆ. ॥99॥ ಈ ರೀತಿ ಭಿಕ್ಷಿಬೇಡಿ ತಂದ ಆಹಾರವನ್ನು

ಒಂದು ಮಡಕೆಯಲ್ಲಿ ಹಾಕಿ ಮಸೀದಿಯಲ್ಲಿಡುತ್ತಿದ್ದರು. ಕಾಗೆ ನಾಯಿಗಳೂ ಅದರಿಂದ ತಿನ್ನುತ್ತಿದ್ದವು. ಅವರು ಎಂದಿಗೂವುಗಳನ್ನು ಓಡಿಸುತ್ತಿರಲಿಲ್ಲ. ॥100॥ ಮಸೀದಿಯನ್ನು ಮತ್ತು ಮುಂದಿನ ಬಯಲನ್ನು ಗುಡಿಸುತ್ತಿದ್ದ ಹೆಂಗಸರು 10-12 ರೊಟ್ಟಿಗಳನ್ನು ಮಡಕೆಯಿಂದ ಮನೆಗೆ ತೆಗೆದು ಕೊಂಡುಹೋಗುತ್ತಿದ್ದರು. ಆದರೆ ಯಾರೂ ತಡೆಯುತ್ತಿರಲಿಲ್ಲ. 101 ಯಾರು ನಾಯಿ ಮತ್ತು ಬೆಕ್ಕುಗಳನ್ನು ಕನಸಿನಲ್ಲಿಯೂ ತಿರಸ್ಕರಿಸಿ ಓಡಿಸುತ್ತಿರಲಿಲ್ಲವೋ ಅವರು ಬಡವರನ್ನು ದೀನರನ್ನು ಹೇಗೆ ತಿರಸ್ಕರಿಸುವರು? ಅವರ ಜೀವನವೇ ಧನ್ಯ! 102





ಪ್ರಾರಂಭದಲ್ಲಿ ಅವರನ್ನು ಜನರು ಒಬ್ಬ ಹುಚ್ಚು ಫಕೀರನೆಂದು ತಿಳಿದಿದ್ದರು. ಭಿಕ್ಷೆ ಬೇಡಿ ಹೊಟ್ಟೆತು೦ಬಿಸುವವನು ಯಾವ ವೈಭವವನ್ನು ಹೊಂದಲು ಸಾಧ್ಯ? 103 ಆದರೆ ಫಕೀರನು ಸ್ವಭಾವತಃ ದಯಾಳುವಾಗಿದ್ದನು. ಯಾರಿಂದಲೂ ಏನನ್ನೂ ಪ್ರತಿಯಾಗಿ ಪಡೆಯುವ ಅಪೇಕ್ದೆಯಿರಲಿಲ್ಲ ಪ್ರೇಮಸ್ಪರೂಪನು, ಬಾಹ್ಯದಲ್ಲಿ ಚಂಚಲನಂತೆ ಕಂಡರೂ ಅ೦ತರಂಗದಲ್ಲಿ ಸ್ಥಿತಪ್ರಜ್ಞನಾಗಿದ್ದನು. ಅವನ ವರ್ತನೆ ವರ್ಣನಾತೀತ. 104 ಅ೦ತಹ ಸಾಮಾನ್ಯವಾದ ಹಳ್ಳಿಯಲ್ಲಿ

ಕೆಲವು ಭಾಗ್ಯವಂತರಿದ್ದರು. ಅವರೂ ದಯಾಳುವಾಗಿದ್ದರು. ಅವರು ಅವನನ್ನು ಸಂತರೆಂದು ಗೌರವಿಸಿದರು. ॥105ತಾತ್ಯಾ ಕೋತೆಯ ತಾಯಿ, ಬಾಯಜಾ ಬಾಯಿ, ಕೆಲವು ರೊಟ್ಟಿಗಳನ್ನು ಒಂದು ಬುಟ್ಟಿಯಲ್ಲಿಟ್ಟುಕೊಂಡು ತಲೆಯಮೇಲೆ ಹೊತ್ತುಕೊಂಡು ಮಧ್ಯಾಹ್ನದ ವೇಳೆ ಕಾಡಿನೊಳಗೆ ಹೋಗುತ್ತಿದ್ದಳು. 106॥ ಅವಳು ಮೈಲಿಗಟ್ಟಲೆ ನಡೆಯುತ್ತ, ಹುಚ್ಚು ಫಕೀರನನ್ನು ಹುಡುಕುತ್ತ, ದಟ್ಟವಾದ ಹೊದೆಗಳ ನಡುವೆ ಪಾದಚಾರಿಯಾಗಿ ನಡೆಯುತ್ತ ಬಾಬಾರವರನ್ನು ಕಂಡೊಡನೆ ಕಾಲಿಗೆ ನಮಸ್ಕರಿಸುತ್ತಿದ್ದಳು. 107॥ ಅವಳ ಭಕ್ತಿಯನ್ನು ವಿವರಿಸಲು ಯಾರಿಗೆ ಸಾಧ್ಯ? ರಸವಿಲ್ಲದ ಅಥವಾ ರಸಸಹಿತವಾದ ತರಕಾರಿ ಪಲ್ಯವನ್ನು, ರೊಟ್ಟಿಯನ್ನೂ ಬಾಬಾರವರಿಗೆ ಕೈಯಾರೆ ತಿನ್ನಿಸುತ್ತಿದ್ದಳು. ಕಾಡಿನಲ್ಲಿ ಮಧ್ಯಾಹ್ನ ಅಥವಾ ಅಪರಾಹ್ನದ ನಂತರ ತಿನ್ನಿಸುವಳು. ॥108 ಬಾಬಾರವರೂ ಸಹ ಅವಳ ಈ ಭಕ್ತಿಯನ್ನು ತಮ್ಮ ಜೀವಿತಕಾಲದಲ್ಲಿ ಮರೆಯಲಿಲ್ಲ. ಭೂತಕಾಲವನ್ನೂ ನೆನಪಿನಲ್ಲಿಟ್ಟುಕೊಂಡು ಅವರು ಅವಳಿಗೆ ಒಬ್ಬ ಭಾಗ್ಯವಂತನಾದ ಪುತ್ರನನ್ನು ಕರುಣಿಸಿದರು. ॥109॥ ಪತಿ, ಪತ್ನಿಯರಿಬ್ಬರಿಗೂ ಫಕೀರನಲ್ಲಿ ಅಪಾರ ಶ್ರದ್ಧೆ ಇತ್ತು. ಆ ಫಕೀರನೇ ಅವರಿಗೆ ದೇವರು. ಭಗವ೦ತನು ಭಕ್ತನ ಶ್ರದ್ಧೆಯಲ್ಲಿ ಅರುತ್ತಾನೆ ಅಲ್ಲವೇ? ॥110॥ ಫಕೀರನು ಧ್ಯಾನಸ್ಥನಾಗಿರುತ್ತಿದ್ದನು.

ಆಗ ಬಾಯಜಾ ಬಾಯಿ ಎಲೆಯನ್ನು ಹರಡಿ ಬುಟ್ಟಿಯಿ೦ದ ಆಹಾರವನ್ನು ತೆಗೆದು ಬಡಿಸುತ್ತಿದ್ದಳು. ಮತ್ತು ತಿನ್ನಿಸಲು ಪ್ರಯತ್ನಿಸುತ್ತಿದ್ದಳು. 111॥ “ಫಕೀರತನ ನಿಜವಾದ ರಾಜತ್ವ, ಫಕೀರತನ ಮಾತ್ರ ಎಂದೆಂದೂ ಇರುವುದು. ಐಶ್ವರ್ಯವು ಹೇಗೆ ಬೇಗ ಅದೃಶ್ಯವಾಗುತ್ತದೆ ನೋಡು!” ಬಾಬಾ ಇದನ್ನು ಸದಾ ಹೇಳುತ್ತಿದ್ದರು. 112 ಅನ೦ತರ ಬಾಬಾರವರು ಕಾಡನ್ನು ದೂರ ಮಾಡಿದರು. ಅವರು ಹಳ್ಳಿಯಲ್ಲೇ ವಾಸಮಾಡಲು ಪ್ರಾರಂಭಿಸಿದರು. ಮಸೀದಿಯಲ್ಲಿ ಆಹಾರ ಸ್ವೀಕರಿಸುತ್ತಿದ್ದರು. ಹೀಗೆ ತಾಯಿಯ ತೊಂದರೆಗಳಿಗೆ ಅಂತ್ಯ ಹಾಡಿದರು. ॥113॥ ಅಲ್ಲಿಂದೀಚೆಗೆ ಇಬ್ಬರಿಂದಲೂ

ಪ್ರಾರಂಭವಾದ ಈ ಅಭ್ಯಾಸ ಮುಂದುವರೆಯಿತು. ಅನಂತರ ತಾತ್ಯಾ ಅದನ್ನು ಮುಂದುವರೆಸಿದನು. ॥114





ಯಾರಹೃದಯದಲ್ಲಿ ವಾಸುದೇವನು ಶಾಶ್ಚತವಾಗಿ ನೆಲೆಸುತ್ತಾನೋ ಅಂತಹವರು ಭಾಗ್ಯವಂತರು. ಅಂತಹವರ ಸಹವಾಸದಲ್ಲಿ ಪರಮಾನಂದವನ್ನು ಅನುಭವಿಸಿದಂತಹ ಭಕ್ತರೇ ಧನ್ಯರು. 115 ತಾತ್ಯಾ ನಿಜವಾಗಿಯೂ ಭಾಗ್ಯಶಾಲಿ ಮತ್ತು ಮ್ಹಾಳಸಾಪತಿಯು ಮಹಾಧರ್ಮಿಷ್ಟನು. ಅವರಿಬ್ಬರೂ ಸಮನಾಗಿ ಜಬಾರವರ ಸಹವಾಸವನ್ನು ಅನುಭವಿಸಿದರು. ॥116॥ ತಾತ್ಯಾ ಮತ್ತು ಮ್ಹಾಳಸಾಪತಿಯು ಸಹ ಮಸೀದಿಯಲ್ಲಿ ಮಲಗುತ್ತಿದ್ದರು. ಬಾಬಾರವರಿಗೆ ಅವರಿಬ್ಬರ ಮೇಲೆ ಸಮನಾದ ಅನುಪಮ ಪ್ರೀತಿ. 117॥ ಪೂರ್ವ, ಪಶ್ಚಿಮ ಮತ್ತು ಉತ್ತರ - ಈ ರೀತಿ ಮೂವರ ತಲೆಗಳು ಮೂರುದಿಕ್ಕಿನಲ್ಲಿ - ಪಾದಗಳು ಮಾತ್ರ ಒಬ್ಬರದೊಬ್ಬರಿಗೆ ತಗಲುತ್ತ ಮಧ್ಯದಲ್ಲಿ ಇರುತ್ತಿದ್ದವು. ॥118॥ ತಮ್ಮ ಹಾಸಿಗೆಗಳನ್ನು ಈ ರೀತಿ ಹಾಸಿಕೊ೦ಡು ಅವರು ಎಲ್ಲಾ ವಿಷಯಗಳ ಬಗ್ಗೆಯೂ ಮಾತಾಡುತ್ತಿದ್ದರು. ಒಬ್ಬರು ತೂಕಡಿಸಿದರೂ ಮತ್ತೊಬ್ಬರು ಅವರನ್ನು ಎಚ್ಚರಿಸುತ್ತಿದ್ದರು. ॥119॥ ತಾತ್ಯಾ ಗೊರಕೆ ಹೊಡೆಯಲು ಪ್ರಾರಂಭಿಸಿದರೆ ಬಾಬಾರವರು ತಕ್ಷಣವೇ ಎದ್ದು ಅವನನ್ನು ತಿರುಗಿಸಿ ತಲೆ ಒತ್ತುವರು. ॥120॥ ಮ್ಹಾಳಸಾಪತಿಯ ಸಹಾಯದೊಂದಿಗೆ ತಾತ್ಯಾನನ್ನು ತಬ್ಬಿ ಹಿಡಿದು ಅವನ ಚರಣಗಳನ್ನು ಒತ್ತುತ್ತಿದ್ದರು ಮತ್ತು ಬೆನ್ನಿಗೆ ಮಾಲೀಶು ಮಾಡುತ್ತಿದ್ದರು. ॥121 ಈ ರೀತಿ, 14 ವರ್ಷಗಳ ಕಾಲ, ತಾತ್ಯಾ ಮಸೀದಿಯಲ್ಲಿ ಬಾಬಾರವರ ಹತ್ತಿರ ಮಲಗುತ್ತಿದ್ದನು. ಅವರು ಅಲ್ಲಿ ಕಳೆದಂತಹ ಆ ದಿನಗಳು ಅದೆಷ್ಟು ಪುಣ್ಯಪ್ರದವಾಗಿದ್ದವು. ಅವುಗಳ ನೆನಪೇ ಇಂದಿಗೂ ಮಾಸದಾಗಿದೆ. ॥122॥ ತಂದೆ ತಾಯಿಗಳನ್ನು ಮನೆಯಲ್ಲಿಯೇ ಬಿಟ್ಟು ತಾತ್ಯಾ ಮಸೀದಿಯಲ್ಲಿ ಬಾಬಾರವರ ಜತೆ ಮಲಗುತ್ತಿದ್ದರೂ ಅದು ಅವನಿಗೆ ಅತಿ ಪ್ರಿಯವಾಗಿತ್ತು. ಆ ಪ್ರೀತಿಯನ್ನು ಹೇಗೆ ಅಳೆಯಲು ಸಾಧ್ಯ? ಆ ಅನುಗ್ರಹವನ್ನು ಬೆಲೆಕಟ್ಟಲು ಯಾರಿಗೆ ಸಾಧ್ಯ? 123॥ ಅನಂತರ ತಂದೆಯವರು ಕಾಲವಾದರು. ತಾತ್ಯಾ ಮನೆಗೆಲಸಗಳಲ್ಲಿ ಮಗ್ನನಾದನು. ಮದುವೆಯಾಗಿ ಗೃಹಸ್ಥನಾದನು. ಆಗ ತನ್ನ ಮನೆಯಲ್ಲಿಯೇ ಮಲಗಲು ಪ್ರಾರಂಭಿಸಿದನು. ॥124


ಅದು ಏನೇ ಇರಲಿ. ಶ್ರದ್ಧೆಯು ಪರಿಷೂರ್ಣವಾಗಿರಬೇಕು. ಹೃದಯ ಮತ್ತು ಮನಸ್ಸು ಒಂದಾದರೆ ಮಾತ್ರ ಸಾಯಿಯು ಅನುಭವವನ್ನು ಕೊಡಬಹುದು. ಕರೆಯದೆಯೇ ಭಕ್ತರ ಬಳಿ ನಿಲ್ಲುತ್ತಾರೆ. ಇದರಿಂದ ಭಕ್ತರಿಗೆ ಅಚ್ಚರಿಯುಂಟಾಗುತ್ತದೆ. ॥125 ಇದೇ ರೀತಿ, ರಾಹತಾದಲ್ಲಿ ಕುಶಾಲ ಚಂದ್‌ ಎನ್ನುವ ಒಬ್ಬ ಪ್ರಖ್ಯಾತ ವ್ಯಕ್ತಿ ಇದ್ದನು. ಅವನು ಬಾಬಾರವರ ಶ್ರೀಮಂತ ಭಕ್ತನಾಗಿದ್ದ ಮತ್ತು ಪಟ್ಟಣದಲ್ಲಿ ವರ್ತಕನಾಗಿದ್ದನು. ॥126॥ ಪ್ರಸಿದ್ಧನಾದ ಗಣಪತ್‌ ಕೋತೆ ಪಾಟೀಲ ಬಾಬಾರವರ ಅತ್ಯಂತ ಪ್ರೀತಿಯ ಭಕ್ತ. ಅದೇ ರೀತಿ ಕುಶಾಲ ಚಂದನೂ ಬಾಬಾರವರ ಪ್ರಿಯ ಭಕ್ತನು. ॥127॥ ಜಾತಿಯಲ್ಲಿ ಮಾರವಾಡಿಯಾಗಿದ್ದರೂ ಅವನಿಗೆ ಬಾಬಾರವರನ್ನು ಕಂಡರೆ ಬಹಳ ಇಷ್ಟ ಆಗಾಗ್ಗೆ ಇಬ್ಬರೂ

ಪರಸ್ಪರ ಭೇಟಿಯಾಗುತ್ತಿದ್ದರು. ಈ ಭೇಟಿಗಳಿಂದ ಸಂತೋಷಷಡುತ್ತಿದ್ದರು. 128 ದೈವೇಚ್ಛೆಯಂತೆ ಕಾಲಾನಂತರ ಹಿರಿಯನಾದ ಸೇಠ್‌ಜೀಯು ಮರಣಹೊಂದಿದನು. ಹಾಗಿದ್ದೂ ಬಾಬಾರವರು ಬಂಧನಗಳನ್ನು ಮುರಿಯಲಿಲ್ಲ. ಬದಲಾಗಿ ಅವರ ಪ್ರೀತಿ ಇಮ್ಮಡಿಯಾಯಿತು. 129॥ ಆನಂತರ ಕುಶಾಲಚಂದನ ಮೇಲಿನ ಬಾಬಾರವರ ಪ್ರೀತಿ ಹೆಚ್ಚಿತು. ಮರಣ ಸಮಯದವರೆಗೆ ದಿನಂಪ್ರತಿ ಅವರು ಅವನ ಒಳ್ಳೆಯದನ್ನೇ ಬಯಸುತ್ತಿದ್ದರು. ॥130॥ ಕೆಲವು ವೇಳೆ ಎತ್ತಿನ ಗಾಡಿ ಮತ್ತು ಕೆಲವು ಸಲ ಟಾಂಗಾದಲ್ಲಿ ಬಾಬಾರವರು ತಮ್ಮ ಸ್ನೇಹಿತನ ಸಂಗಡ 1 ವರೆ ಮೈಲಿ ದೂರದಲ್ಲಿರುವ

ರಾಹತಾಗೆ ಹೋಗುತ್ತಿದ್ದರು. ॥131 ಹಳ್ಳಿಯ ಜನರು ತಾಳ ಮದ್ದಳೆಗಳ ಜೊತೆಯಲ್ಲಿ ಸ್ವಾಗತಿಸಲು ಮುಂದೆ ಬರುತ್ತಿದ್ದರು. ಬಾಬಾ ಅವರನ್ನು ಸರಹದ್ದಿನಲ್ಲಿ ಭೇಟಿಯಾಗುತ್ತಿದ್ದರು. ಪ್ರೀತಿಯಿ೦ದ ಬಾಬಾರವರಿಗೆ ಪ್ರಣಾಮಗಳನ್ನು ಸಲ್ಲಿಸುತ್ತಿದ್ದರು. ॥132॥ ಅಲ್ಲಿಂದ ಅವರು ಬಾಬಾರವರನ್ನು ವಿಧಿವತ್ತಾಗಿ ಬಹಳ ಪ್ರೀತಿಯಿಂದ ಆನಂದೋತ್ಸಾಹದಿಂದ ಸಂಗೀತದ ಸಹಿತ ಕರೆದೊಯ್ಯುತ್ತಿದ್ದರು. ॥133॥ ಕುಶಾಲ ಚಂದನು ಅನ೦ತರ ಬಾಬಾರವರನ್ನು ತಮ್ಮ ಮನೆಗೆ ಕರೆದೊಯ್ಯುತ್ತಿದ್ದನು. ಸ್ವಲ್ಪ ಉಪಾಹಾರವನ್ನು ಬಡಿಸಿ ಸ್ಪಲ್ಪ ಕಾಲ ಆರಾಮವಾಗಿ ಕುಳಿತುಕೊಳ್ಳುತ್ತಿದ್ದರು. 134

ಅನಂತರ ಅವರು ತಮ್ಮ ಗತಕಾಲದ ನೆನಪುಗಳನ್ನು ಮಾಡಿಕೊಂಡು ವಾರ್ತಾಲಾಪ ನಡೆಸುತ್ತಿದ್ದರು. ಅವರು ಪರಸ್ಪರ  ಅನುಭವಿಸುವ ಸಂತೋಷವನ್ನು ವಿವರಿಸಲು ಸಾಧ್ಯವಿಲ್ಲ. ॥135॥ ಈ ರೀತಿಯಾಗಿ ವಿಶ್ರಮಿಸಿದ ನಂತರ ಫಲಾಹಾರ ಮತ್ತು ಅಲ್ಟಾಹಾರಗಳನ್ನು ಸೇವಿಸಿ ಬಾಬಾರವರು ಸಂತೃಪ್ತಿಯಿಂದ ತಾವು ಬಂದ ಮಾರ್ಗದಲ್ಲೇ ಹಿಂತಿರುಗುತ್ತಿದ್ದರು. ॥136॥


ಒಂದು ಕಡೆ ರಾಹತಾ, ಮತ್ತೊಂದು ಕಡೆ ನೀಮಗಾಂವ ಇತ್ತು. ಇವೆರಡರ ಮಧ್ಯೆ ಶಿರಡಿಯು ಸಣ್ಣ ಜನಸಾ೦ದ್ರತೆಯುಳ್ಳ ಒಂದು ಸಣ್ಣ ಗ್ರಾಮ. ॥137॥ ಆದರೆ ಕೇಂದ್ರಸ್ಥಾನದಿಂದ ಅವರು ಭೌತಿಕವಾಗಿ ಈ ಎರಡು ಹಳ್ಳಿಗಳನ್ನು ಬಿಟ್ಟರೆ ಮತ್ತೆಲ್ಲಿಗೂ ಹೋಗಲಿಲ್ಲ. ಆದರೂ ಅವರಿಗೆ ಎಲ್ಲ ಮೂಲೆಗಳ ಅರಿವಿತ್ತು. 138 ಅವರು ಎಲ್ಲಿಗೂ ಪ್ರಯಾಣ ಮಾಡುತ್ತಿರಲಿಲ್ಲ. ರೈಲು ನಿಲ್ದಾಣವನ್ನೆಂದಿಗೂ ನೋಡಿರಲಿಲ್ಲ. ಆದರೆ ಅವರಿಗೆ ರೈಲುಗಾಡಿಯ ವೇಳೆ, ಅವುಗಳ ಆಗಮನ, ನಿರ್ಗಮನಗಳ ವೇಳಾಪಟ್ಟಯ ಅರಿವಿತ್ತು. 139 ರೈಲುಗಾಡಿಯನ್ನು ಹಿಡಿಯಬೇಕಾದಾಗ ಭಕ್ತರು ಎಲ್ಲಾ ತಯಾರಿಮಾಡಿಕೊಂಡು ಬಾಬಾರವರಲ್ಲಿಗೆ ಅನುಮತಿಗಾಗಿ ಹೋಗುತ್ತಿದ್ದರು. ಆಗ ಅವರು ಹೇಳುತ್ತಿದ್ದರು - “ಈಗ ಏನು ಅವಸರ?” ಎಂದು. 140 “ಬಾಬಾ, ಈಗ ನಾನು ಅವಸರ ಮಾಡದಿದ್ದಲ್ಲಿ ಬೊಂಬಾಯಿಗೆ ರೈಲು

ತಪ್ಪುತ್ತದೆ. ನನ್ನ ನೌಕರಿ ಹೋಗುತ್ತದೆ. ಮಾಲಿಕ ನನ್ನನ್ನು ಹೊರಗೆ ಕಳಿಸುತ್ತಾನೆ.” ॥141 “ಇಲ್ಲಿ ಮತ್ತೇನೂ ವಿಷಯವಿಲ್ಲ. ನೀನೇಕೆ ಇಷ್ಟು ಅವಸರದಲ್ಲಿರುವೆ? ಹೋಗು ಸ್ವಲ್ಪ ತಿನ್ನು. ಮಧ್ಯಾಹ್ನದ ಊಟದ ನಂತರ ಹೊರಡು.” ॥142॥ ಆ ಮಾತುಗಳನ್ನು ಧಿಕ್ಕರಿಸುವ ಧೈರ್ಯ ಯಾರಿಗಿದೆ? ಕಿರಿಯರು, ಹಿರಿಯರು ಮತ್ತು ಬುದ್ಧಿವಂತರು, ವಿದ್ಯಾವಂತರು ಎಲ್ಲರೂ ಸ್ವತಃ ಅನುಭವದಿಂದಲೇ ಎಲ್ಲವನ್ನೂ ತಿಳಿದುಕೊಂಡಿದ್ದರು. ॥143॥ ಅವರ ಆದೇಶಗಳನ್ನು ಪಾಲಿಸಿದವರು ಎಂದಿಗೂ ರೈಲುಗಾಡಿಯನ್ನು ತಪ್ಪಿಸಲಿಲ್ಲ. ಆದರೆ ಅವುಗಳನ್ನು ಪಾಲಿಸದವರು ಅದರ ಪ್ರತ್ಯಕ್ಷ

ಪರಿಣಾಮವನ್ನು ಅನುಭವಿಸುತ್ತಿದ್ದರು. 144 ಒ೦ದರ ನಂತರ ಮತ್ತೊಂದು ವಿಶಿಷ್ಟವಾದ ಅಸಂಖ್ಯಾತ ಅನುಭವಗಳು, ವಿವಿಧ ಬಗೆಯದ್ದು. ಇವುಗಳನ್ನು ಅನಂತರ ಸಂಕ್ಷಿಪ್ತವಾಗಿ ತಿಳಿಸುತ್ತೇನೆ. 145


ಹೇಮಾದ ಪ೦ತನು ಸಾಯಿಚರಣಗಳಲ್ಲಿ ಶರಣಾಗುತ್ತಾನೆ. ಮುಂದಿನ ಅಧ್ಯಾಯದಲ್ಲಿ ಇದೇ ವಿಷಯವನ್ನು ಮುಂದುವರೆಸುತ್ತಾನೆ. ಭಕ್ತರು ಶಿರಡಿಯಿ೦ದ ತಮ್ಮ ಹಳ್ಳಿಗೆ ಹೇಗೆ ಹಿಂತಿರುಗುತ್ತಿದ್ದರು. ಬಾಬಾರವರು ಆದೇಶಗಳನ್ನು ಹೇಗೆ ನೀಡುತ್ತಿದ್ದರು? 146 ಅನುಮತಿ ಪಡೆದವರು ಹಿಂತಿರುಗಬಹುದಿತ್ತು. ಮತ್ತು ದೊರೆಯದವರು ಅಲ್ಲಿಯೇ ಉಳಿಯಬೇಕಾಗುತ್ತಿತ್ತು. ಅಪ್ಪಣೆ ಮೀರಿದವರು ಕಷ್ಟ ಅನುಭವಿಸುತ್ತಿದ್ದರು. ಇವುಗಳನ್ನು ಮು೦ದಿನ ಅಧ್ಯಾಯದಲ್ಲಿ ವಿವರಿಸಲಾಗುತ್ತದೆ. ॥147॥ ಬಾಬಾರವರು ಭಿಕ್ಷುಕರ ರೀತಿ ನೀತಿಗಳನ್ನು ಏಕೆ ಅಳವಡಿಸಿಕೊಂಡರು? ಭಕ್ತರು ಪ್ರತಿನಿತ್ಯ ಆಚರಿಸುವ ಪಾಪಗಳನ್ನು ತೊಳೆಯಲು ಭಿಕ್ಷೆಯಿಂದ ತಂದ ಅನ್ನವನ್ನು ಏಕೆ ತಿನ್ನುತ್ತಿದ್ದರು? ಯಾವಾಗ ಪ್ರಾಣಿಯ ಜನ್ಮ ಆಕಸ್ಮಾತ್ತಾಗಿ ನಾಶವಾಯಿತು - ಇವೆಲ್ಲವನ್ನೂ ನಂತರ ಹೇಳುತ್ತೇನೆ. 148 ಆದುದರಿಂದ ನಾನು ಶ್ರೋತೃಗಳ

ಚರಣಗಳಲ್ಲಿ ಪ್ರಾರ್ಥಿಸುತ್ತೇನೆ ಮತ್ತು ಅವರನ್ನು ಪ್ರತಿಕ್ಷಣವೂ ತಮ್ಮದೇ ಒಳಿತಿಗಾಗಿ ಸಾಯಿಸಚ್ಚರಿತ್ರೆಯನ್ನು ಆಲಿಸಲು ಪ್ರೇರೇಷಿಸುತ್ತೇನೆ. 149॥


ಎಲ್ಲರಿಗೂ ಶುಭವಾಗಲಿ.


ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂ೦ತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ “ಸಾಯಿ ಸಮರ್ಥರ ಅವತಾರ” ಎಂಬ ಎಂಟನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.


ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.


।ಸನ್ಮಂಗಳವಾಗಲಿ।


Sunday, November 28, 2021

07 ವಿವಿಧ ಕಥೆಗಳ ನಿರೂಪಣೆ / Various stories

॥ ಅಥಃ ಶ್ರಿ ಸಾಯಿ ಸಚ್ಚರಿತೆ ॥

"ವಿವಿಧ ಕಥೆಗಳ ನಿರೂಪಣೆ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.



ಹಿಂದಿನ ಅಧ್ಯಾಯದ ಎಳೆಗಳನ್ನು ತೆಗೆಯೋಣ. ಬಾಬಾರವರು ದೇವಸ್ಥಾನಗಳ ಜೀರ್ಣೋದ್ಧಾರವನ್ನು ಎಷ್ಟು ಇಷ್ಟಪಡುತ್ತಿದ್ದರೆಂಬುದನ್ನು ನೆನೆಯೋಣ. ॥1॥ ಅವರು ಇತರರಿಗೆ ಎಷ್ಟು ಕರುಣೆ ತೋರುತ್ತಿದ್ದರು, ತಮ್ಮ ಭಕ್ತರನ್ನು ಹೇಗೆ ರಕ್ಷಣೆ ಮಾಡುತ್ತಿದ್ದರು ಮತ್ತು ಅವರನ್ನೆಲ್ಲ ಎಷ್ಟರ ಮಟ್ಟಿಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು! ಅದರಲ್ಲೇ ಅವರು ತಮ್ಮನ್ನು ತಾವು ಸವೆಸಿಕೊಳ್ಳುತ್ತಿದ್ದರು. ಭಕ್ತರಿಗಾಗಿ ಎಷ್ಟು ಕಷ್ಟ ಅನುಭವಿಸುತ್ತಿದ್ದರು! ॥2॥ ಅವರು ಖಂಡಯೋಗ ಅಭ್ಯಾಸ ಮಾಡುವಾಗ ಸಮಾಧಿಯಲ್ಲಿರುತ್ತಿದ್ದರು. ಅವರು ಧೋತಿ-ಪೋತಿ ಮತ್ತಿತರ ಯೋಗಾಭ್ಯಾಸಗಳನ್ನೂ ಮಾಡುತ್ತಿದ್ದರು. ಕೆಲವು ವೇಳೆ ಅವರು ತಮ್ಮ ತಲೆ, ಕಾಲುಗಳು ಮತ್ತು ತೋಳುಗಳನ್ನು ದೇಹದಿಂದ ಬೇರ್ಪಡಿಸಿ ಮತ್ತೆ ಹಿಂದಿನ ಹಾಗೆ ಒಟ್ಟಿಗೆ ಜೋಡಿಸುತ್ತಿದ್ದರು. 3॥ ಅವರನ್ನು ಹಿಂದುವೆಂದು ಕರೆಯೋಣವೆಂದರೆ ಮುಸ್ಲಿಮರ ತರಹ ಕಾಣುತ್ತಿದ್ದರು. ಮುಸ್ಲಿಂ ಎಂದಾದರೆ ಅವರಿಗೆ ಹಿಂದುವಿನ ಎಲ್ಲಾ ಮಂಗಳಕರ ಲಕ್ಷಣಗಳೂ ಇದ್ದವು. ಈ ರೀತಿ ಅವರದು ವಿಶಿಷ್ಟವಾದ ಅವತಾರವಾಗಿತ್ತು. ಯಾವ ಪಂಡಿತನು ಅವರನ್ನು

ವರ್ಣಿಸಬಲ್ಲನು? 4 ಅವರು ಹಿ೦ದೂವೋ, ಮುಸ್ಲಿಮರೋ ಸ್ವಲ್ಪ ಮಾತ್ರವಾದರೂ ಸಹ ಯಾರೂ ಊಹೆಮಾಡಲು ಆಗುತ್ತಿರಲಿಲ್ಲ. ಎರಡೂ ಪಂಗಡದವರಿಗೆ ಅವರ ವರ್ತನೆ ಒಂದೇ ರೀತಿಯದಾಗಿತ್ತು. 5


ರಾಮನವಮಿಯು ಒಂದು ಹಿಂದೂ ಹಬ್ಬವಾಗಿತ್ತು. ಅದನ್ನು ಅವರು ಸ್ವಂತ ಹಬ್ಬದಂತೆಯೇ ತೊಟ್ಟಿಲನ್ನು ಸಭಾಮಂಟಪದಲ್ಲಿ ಕಟ್ಟಿ ಕಥೆ ಮತ್ತು ಕೀರ್ತನೆಗಳನ್ನು ನಡೆಸುತ್ತಿದ್ದರು. 6॥ ರಸ್ತೆಯ ಚೌಕದಲ್ಲಿ ಅವರ ಎದುರಿನಲ್ಲೇ ತೊಟ್ಟಿಲನ್ನು ಕಟ್ಟಿ ಕೀರ್ತನೆಗಳನ್ನು ಮಾಡಲಾಗುತ್ತಿತ್ತು. ಅದೇ ರಾತ್ರಿಯಂದು ಅವರು ಮುಸ್ಲಿಮರ ಚಂದನದ ಮೆರವಣಿಗೆಗೂ ಅನುಮತಿ ಇತ್ತಿದ್ದರು. 7 ಬಹಳ ಜನ ಮುಸ್ಲಿಮರು ಬರಲು ಇಚ್ಚಿಸಿ ಚಂದನದ ಮೆರವಣಿಗೆಯಲ್ಲಿ ಅತ್ಯಂತ ಅಬ್ಬರ ವೈಭವಗಳಿಂದ ಭಾಗವಹಿಸುತ್ತಿದ್ದರು. ಅವರು ಈ ಎರಡೂ ಸಮಾರಂಭಗಳನ್ನು ಸಮನಾದ ಸಂತೋಷದಿಂದ ಆಚರಿಸುತ್ತಿದ್ದರು. ॥8 ರಾಮನವಮಿಯ ದಿನವು ಮುಗಿಯುತ್ತಿದ್ದಂತೆಯೇ ಕುಸ್ತಿಯ ಪಂದ್ಯವನ್ನು ಆಡಿಸಿ ಬಹಳ ಉತ್ಸಾಹದಿಂದ ಕುದುರೆ, ಕಡಗ ಮತ್ತು ರುಮಾಲು ಇವುಗಳನ್ನು ಬಹುಮಾನವಾಗಿ ಕೊಡುತ್ತಿದ್ದರು. 9॥ ಗೋಕುಲಾಷ್ಟಮಿ ಹಬ್ಬ ಬಂದಾಗ ಅವರು ಗೋಪಾಲಕಾಲ ನಡೆಸುತ್ತಿದ್ದರು. ಈದ್‌ ದಿನದಲ್ಲಿ ಮುಸ್ಲಿಮರಿಗೆ ನಮಾಜ್‌ನಿಂದ ವಿನಾಯಿತಿ ಇರಲಿಲ್ಲ. ॥10॥ ಒಮ್ಮೆ ಮೊಹರಮ್‌ ಹಬ್ಬ ಬಂದಿತು. ಕೆಲವು ಮುಸ್ಲಿಮರು ಒಂದು ಹಳ್ಳಿಯಲ್ಲಿ ತಾಜಿಯಾ ಮೆರವಣಿಗೆಯನ್ನು ನಡೆಸಲು ಅಪ್ಪಣೆ ಬೇಡಿದರು. ॥11 ಅವರ ಅಪ್ಪಣೆ ಮೇರೆಗೆ ತಾಜಿಯಾವನ್ನು ಕಟ್ಟಲಾಯಿತು. ಅದನ್ನು ಕೆಲವು ದಿನಗಳು ಅಲ್ಲಿಟ್ಟು 5ನೆಯ ದಿನ ತೆಗೆಯಲು ಹೇಳಲಾಯಿತು. ಇಂತಹ ಸಂತೋಷ ಅಥವಾ ಅಗಲಿಕೆಯ ನೋವು - ಬಾಬಾರವರಿಗೆ ಅಂತಹ ಯಾವ ಭಾವನೆಯೂ ಇರಲಿಲ್ಲ. ॥12॥


ಅವರನ್ನು ಮುಸ್ಲಿಮರೆಂದು ತಿಳಿಯೋಣವೆಂದರೆ ಕಿವಿಗಳನ್ನು ಚುಚ್ಚಿಸಿಕೊಂಡಿದ್ದರು. ಹಿಂದುವೆಂದರೆ ಅವರಿಗೆ ಸುನ್ನತಿಯಲ್ಲಿ ನಂಬಿಕೆಯಿತ್ತು. ಈ ರೀತಿ ಹಿಂದೂವೂ ಅಲ್ಲ ಮುಸ್ಲಿಮರೂ ಅಲ್ಲ. ಈ ರೀತಿ ಸಾಯಿಯ ಅವತಾರ ಪವಿತ್ರವಾಗಿತ್ತು. 13 ಅವರು ಹಿಂದೂವಾದರೆ ಸದಾ ಮಸೀದಿಯಲ್ಲಿ ವಾಸಮಾಡುತ್ತಿದ್ದರು. ಮುಸ್ಲಿಮರೆಂದಾದರೆ ಮಸೀದಿಯಲ್ಲಿ ಹಗಲು ರಾತ್ರಿ ಸದಾ ಅಗ್ನಿಯನ್ನು ಉರಿಸುತ್ತಿದ್ದರು. ॥14। ಮಸೀದಿಯಲ್ಲಿಯೇ ಒಂದು ಬೀಸುವ ಕಲ್ಲು ಇದ್ದು ಅಲ್ಲಿ ಬೀಸುವಿಕೆ ನಡೆಯುತ್ತಿತ್ತು. ಮಸೀದಿಯಲ್ಲಿ ಘಂಟಾನಾದ ಮೊಳಗುತ್ತಿತ್ತು ಮತ್ತು ಶಂಖವನ್ನೂ ಊದಲಾಗುತ್ತಿತ್ತು. ಮಸೀದಿಯಲ್ಲಿ ಪವಿತ್ರ ಅಗ್ನಿಗೆ ಆಹುತಿಕೊಡಲಾಗುತ್ತಿತ್ತು. ಅವರು ಇದೆಂತಹ ಮುಸ್ಲಿಮರಾಗಿದ್ದರು? ॥15॥ ಮಸೀದಿಯಲ್ಲಿ ಸದಾ ಭಜನೆ ನಹಿಯುತ್ತಿತ್ತು. ಉಚಿತ ಅನ್ನದಾನ, ಭಗವಂತನಿಗೆ ನೈವೇದ್ಯ, ಪಾದಪೂಜೆ ಇವುಗಳು ನಡೆಯುತ್ತಿದ್ದವು. ಅವರು ಅದೆಂತಹ ಮುಸ್ಲಿಮರಾಗಿದ್ದರು? ॥16॥ ಇವರನ್ನು ಮುಸ್ಲಿಮರೆಂದರೆ

ಬ್ರಾಹ್ಮಣರ ಉತ್ತಮ ಕರ್ತವ್ಯವಾದ ಪೂಜೆ, ಅಗ್ನಿಹೋತ್ರಗಳನ್ನುಆಚರಿಸಿ ತಮ್ಮ ಅಹಂಭಾವವನ್ನು ಅದರಲ್ಲಿ ಒಪ್ಪಿಸಿ ಪರಿಶುದ್ಧರಾಗಿ ಶರಣಾಗತರಾಗಿ ವಂದಿಸುತ್ತಿದ್ದರು. ॥17॥ ಈ ರೀತಿ ಜನರು ಮನಸ್ಸಿನಲ್ಲಿಯೇ ಅಚ್ಚರಿಪಟ್ಟರು. ಏನೇ ಅನುಭವವಾಗಲಿ ಅದೇ ರೀತಿ ವರ್ತಿಸುತ್ತ ದರ್ಶನ ಸಮಯದಲ್ಲಿ ಮೌನವಾಗಿರುತ್ತಿದ್ದರು. ॥18॥ ಪರಮಾತ್ಮನಲ್ಲಿ ಪೂರ್ಣ ಶರಣಾದ ವ್ಯಕ್ತಿಯನ್ನು ಹಿಂದೂ ಅಥವಾ ಮುಸ್ಲಿಂ ಎಂದು ಕರೆಯಲಾಗುವುದೇ? ಅವನು ನೀಚ ಜಾತಿಯಲ್ಲಿ ಹುಟ್ಟಿರಲಿ ಅಥವಾ ಜಾತಿಯಿಲ್ಲದೆ ಹುಟ್ಟಿರಲಿ (ಸಮಾಜದ ಹೊರಗಡೆ), ಜಾತಿಯು ಅವರಿಗೆ ಪ್ರಾಮುಖ್ಯತೆಯ ಒರೆಗಲ್ಲಾಗಿರಲಿಲ್ಲ.॥19॥ ದೇಹಭಾವವನ್ನು ತ್ಯಜಿಸಿರುವವನು, ಹಿಂದೂವೋ ಮುಸ್ಲಿಮನೋ ಅವರಿಗೆ ಎಲ್ಲಾ ಜಾತಿಪಂಥಗಳೂ ಸಮನಾಗಿದ್ದವು. ಜಾತಿ ಆಧಾರಿತ ಪಕ್ಷಪಾತ ಅವರಿಗೆ ಅನ್ವಯಿಸುತ್ತಿರಲಿಲ್ಲ. ॥20॥ ಅವರು ಫಕೀರರಿಂದ ಮಾಂಸವನ್ನು ಸ್ವೀಕರಿಸುತ್ತಿದ್ದರು. ತಾವಾಗಿಯೇ ಮೀನು ಸೇವಿಸುತ್ತಿದ್ದರು. ಅವರು ಊಟಮಾಡುವಾಗ ಒಂದು ನಾಯಿಯು ಬಾಯಿ ಹಾಕಿದರೂ ಅಸಹ್ಯಪಟ್ಟುಕೊಳ್ಳುತ್ತಿರಲಿಲ್ಲ. ॥21। ಒಬ್ಬ ರೈತನು ಆ ವರ್ಷದಲ್ಲಿ ಬೆಳೆದ ಧಾನ್ಯವನ್ನು ಉಗ್ರಾಣದಲ್ಲಿ ಸಂಗ್ರಹಿಸಿಡುತ್ತಾನೆ. ಮರು ವರ್ಷ ಎಲ್ಲಾದರೂ ಕೊರತೆ ಉಂಟಾದರೆ ಅದು ಉಪಯೋಗಕ್ಕೆ ಬರುತ್ತದೆ. ॥22॥ ಗೋಧಿ ಸಂಗ್ರಹಿಸಲು ಚೀಲ ಸಂಗ್ರಹಿಸಲಾಗಿತ್ತು. ಗೋಧಿ ಬೀಸಲು ಬೀಸುವ ಕಲ್ಲು ಮಸೀದಿಯಲ್ಲಿತ್ತು. ಅಲ್ಲಿ ಧಾನ್ಯವನ್ನು ಕೇರಲು ಬೇಕಾದ ಮೊರಗಳೂ ಇದ್ದುವು. ಒಬ್ಬ ಗೃಹಸ್ಥನ ಜೀವನಕ್ಕೆ ಯಾವುದೂ ಕೊರತೆ ಇರಲಿಲ್ಲ. ॥23॥ ಪೆಂಡಾಲಿನಲ್ಲಿ ಒಂದು ಅಲಂಕೃತವಾದ ಸುಂದರ ಮತ್ತು ವಿಶೇಷವಾದ ತುಳಸಿ ಬೃಂದಾವನ ಇತ್ತು. ಹತ್ತಿರವೇ ಸು೦ದರ ಕೆತ್ತನೆ ಉಳ್ಳ ಮರದ ತೇರು ಇತ್ತು. ॥24


ನನ್ನ ಪೂರ್ವಜನ್ಮದ ಷುಣ್ಯಕಾರ್ಯಗಳಿಂದಲೇ ನಾನು ಈ ಒಳ್ಳೆಯದೆಲ್ಲದರ ಸಂಗಕ್ಕೆ ಬಂದೆನು. ಅವುಗಳನ್ನು ನನ್ನ ಮನಸ್ಸಿನಲ್ಲಿ ಬಂಧಿಸಿಟ್ಟುಕೊ೦ಡು ಕೊನೆಯವರೆಗೆ ಯಾವ ಕೊರತೆಯನ್ನೂ ಅನುಭವಿಸುವುದಿಲ್ಲ. ॥25॥ ನನ್ನ ಹಿಂದಿನ ಜನ್ಮಗಳ ಷುಣ್ಯಗಳಿಗೆ ಧನ್ಯವಾದಗಳು. ಅವರ ಚರಣಗಳಲ್ಲಿ ಮನಃಶಾಂತಿಯನ್ನೂ ಪ್ರಾಪಂಚಿಕ ಧನ್ಯತೆಯನ್ನೂ ಅನುಭವಿಸಲು ಸಾಧ್ಯವಾಯಿತು. ॥26॥ ಆನ೦ತರ ನಾನು ಎಷ್ಟೇ ಅಭಿವೃದ್ಧಿಹೊ೦ದಲಿ, ಆ ಸಂತೋಷವನ್ನು ಶ್ರೀ ಸಾಯಿ ಸಮರ್ಥರ ಸತ್ಸಂಗದಲ್ಲಿ ಪಡೆದ ಅನುಗ್ರಹವನ್ನು ಅನುಭವಿಸಿದಷ್ಟು ಆನಂದವನ್ನು ಮತ್ತೆಲ್ಲೂ ಅನುಭವಿಸಲಿಲ್ಲ. 27 ಸಾಯಿಯು ಪರಮಾನಂದದ ಭಂಡಾರ. ಅವರ ವೈಶಿಷ್ಟ್ಯವನ್ನು ಹೇಗೆ ವರ್ಣಿಸಲಿ? ಅವರಲ್ಲಿ ಪೂರ್ಣ ಶರಣಾದವರು ಮಾತ್ರ ತಮ್ಮ ಒಳಿತಿಗಾಗಿ ಅಲ್ಲಿಯೇ ಶಾಶ್ವತವಾಗಿ ನೆಲೆಸಿದರು. 28 ತಪಸ್ಸು ಮಾಡಿದ ಸಂನ್ಯಾಸಿಗಳು, ದಂಡವನ್ನು ಹಿಡಿದವರು, ಕಾವಿಯನ್ನು ವಸ್ತ್ರವಾಗಿ ಧರಿಸಿದ್ದವರು ಮತ್ತು ಜಿಂಕೆಯ ಚರ್ಮವನ್ನು ಆಸನ ಮಾಡಿಕೊಂಡವರು, ಹರಿದ್ವಾರರ ಮುಂತಾದ ತೀರ್ಥಯಾತ್ರೆ ಮಾಡಿದವರು, ಕಠಿಣ ತಪಸ್ಸು ಮಾಡಿದವರು, ಲೌಕಿಕವನ್ನು ತ್ಯಾಗಮಾಡಿದವರು ಮತ್ತು ನಿರ್ಮೋಹರಾಗಿರುವವರು ಎಲ್ಲರೂ ಅಲ್ಲಿಗೆ ಬಂದರು. ॥29 ಅವರು ತುಂಬ ಓಡಾಡುತ್ತ, ಮಾತನಾಡುತ್ತ, ನಗುತ್ತ ಇರುತ್ತಿದ್ದರು. ಬಾಬಾರವರು ಸದಾ "ಅಲ್ಲಾ ಮಾಲಿಕ್‌" ಎನ್ನುತ್ತಿದ್ದರು. ವಾದ ವಿವಾದಗಳನ್ನು, ಚರ್ಚೆಗಳನ್ನೂ ಇಷ್ಟಪಡುತ್ತಿರಲಿಲ್ಲ. ಕೈಯಲ್ಲಿ ಯಾವಾಗಲೂ ಒಂದು ಸಟಕ ಇರುತ್ತಿತ್ತು. 30॥ ಒಬ್ಬ ತಪಸ್ವಿಯಾಗಿ, ಸ್ವಭಾವತಃ ನಿರ್ಮೋಹಿಯಾಗಿ, ಅಲ್ಪ ವಾಸನಾಯುಕ್ತರಾಗಿ, ಯಾರನ್ನೂ ದ್ವೇಷಿಸದೆ, ಅವರ ಉಪನ್ಯಾಸವು ವೇದಾಂತದ ತತ್ವವನ್ನು ಹರಿಸುತ್ತಿರಲು ಕೊನೆಯವರೆಗೆ ಬಾಬಾರವರು ಯಾರೆಂದು ಊಹಿಸಲೂ ಸಾಧ್ಯವಾಗಲಿಲ್ಲ. 31 ಶ್ರೀಮ೦ತರಾಗಲಿ, ಬಡವರಾಗಲಿ ಇಬ್ಬರನ್ನೂ ಸಮಭಾವದಿಂದ ಅವರು ನೋಡುತ್ತಿದ್ದರು. ಶ್ರೀಮಂತ ಪುತ್ರನೇ ಆಗಲಿ ನಿರ್ಗತಿಕ ಭಿಕ್ಷುಕನೇ ಆಗಲಿ ಇಬ್ಬರನ್ನೂ ಒಂದೇ ಮಾಪನದಿಂದ ಅಳೆಯುತ್ತಿದ್ದರು. 32॥ ಯಾರದ್ದಾದರೂ ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನೂ ಅಂತರಂಗದ ಆಸೆಗಳನ್ನೂ ಅರಿಯಬಲ್ಲವರಾಗಿದ್ದರು. ಅವರ ವೈಯುಕ್ತಿಕ ರಹಸ್ಯಗಳನ್ನು ಸಾಂಕೇತಿಕವಾಗಿ ಅವರಿಗೆ ತಿಳಿಸುತ್ತಿದ್ದರು. ಅದರಿಂದಾಗಿ ಭಕ್ತರು ನಿಬ್ಬೆರಗಾಗುತ್ತಿದ್ದರು. 33॥ ಅವರು ಜ್ಞಾನ ಮತ್ತು ಬುದ್ಧಿಯ ಸಾರವಾಗಿದ್ದು ಅದನ್ನು ಮರೆಮಾಡಿ ಅಡಗಿಸಿಟ್ಟಿದ್ದರು. ಗೌರವ-ಸನ್ಮಾನ ಅವರಿಗೆ ಒಂದು ಹೂಮಾಲೆಯಾಗಿತ್ತು. ಇವು ಶ್ರೀ ಸಾಯಿಯವರ ಲಕ್ಷಣಗಳು. ॥34


ಅವರಿಗೆ ಭೌತಿಕ ದೇಹವಿದ್ದರೂ ಅವರ ಕಾರ್ಯಗಳು ಪ್ರತಿಯೊಂದೂ ಪರಮಾತ್ಮನ ಕಾರ್ಯಗಳ ರೀತಿ ಅಸ್ವಾಭಾವಿಕವಾಗಿದ್ದವು. ಅವರು ಶಿರಡಿಯ ಪ್ರತ್ಯಕ್ಷ ದೈವವಾಗಿದ್ದರು. ಜನರೆಲ್ಲರೂ ಅತಿ ಶ್ರದ್ಧೆಯಿಂದ ನಂಬಿದ್ದರು. 35 ಬಾಬಾರವರ ಪವಾಡಗಳು ಅದೆಷ್ಟು? ಅವುಗಳಲ್ಲಿ ಕ್ಷುಲ್ಲಕ ವ್ಯಕ್ತಿಯಾದವನು ಎಷ್ಟನ್ನು ಹೇಗೆ ವಿವರಿಸಬಹುದು? ಬಾಬಾರವರು ಅನೇಕಾನೇಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿಸಿದರು. ॥36॥ ಶಿರಡಿಯಲ್ಲಿಯೇ ತಾತ್ಯಾ ಪಾಟೀಲನ ಕೈಯಲ್ಲಿ ಶನಿ, ಗಣಪತಿ, ಶ೦ಕರ, ಪಾರ್ವತಿ, ಗ್ರಾಮ ದೇವತೆ ಮತ್ತು ಮಾರುತಿಯ ದೇವಾಲಯಗಳನ್ನು ಅಭಿವೃದ್ಧಿಪಡಿಸಿದರು. 37॥ ಜನರಿಂದ ದಕ್ಷಿಣೆಯಾಗಿ ಪಡೆದ ಹಣವನ್ನು ಭಾಗಶಃ ಈ ಧರ್ಮಕಾರ್ಯಗಳಿಗಾಗಿ ಮತ್ತು ಉಳಿದ ಸ್ವಲ್ಪ ಭಾಗವನ್ನು ಸಾಧಾರಣವಾಗಿ ಹಾಗೆಯೇ ದಾನಮಾಡಿಬಿಡುತ್ತಿದ್ದರು. 38 ಕೆಲವರಿಗೆ ನಿತ್ಯವೂ 30 ರೂಪಾಯಿಗಳನ್ನು, ಕೆಲವರಿಗೆ 10, 15 ಅಥವಾ 50 ರೂಪಾಯಿಗಳನ್ನು ಕೊಡುತ್ತಿದ್ದರು. ಅವರ ಮನಸೋ ಇಚ್ಛೆ ಸಂತೋಷವಾಗಿ ಹಂಚುತ್ತಿದ್ದರು. 39 ಈ ಹಣವು ಎಲ್ಲಾ ಜಾತಿ ಧರ್ಮಗಳ ಜನರದು. ಅದನ್ನು ಸ್ವೀಕರಿಸಿದವರಿಗೆ ಇದು ತಿಳಿದಿತ್ತು. ಬಾಬಾರವರಿಗೆ ಅದು ಸದ್ವಿನಿನಿಯೋಗವಾಗಬೇಕೆಂಬ ಇಚ್ಛೆಮಾತ್ರ ಇತ್ತು. 40॥ ಅದುಹಾಗಿರಲಿ, ಅನೇಕರು ಅವರ ದರ್ಶನದಿ೦ದಲೇ ಉದ್ಧಾರವಾದರು. ಅನೇಕ ದುಷ್ಟರು ಒಳ್ಳೆಯವರಾದರು. ಅನೇಕ ಜನರ ಕಾಯಿಲೆಗಳು (ಕುಷ್ಠ ಸಹ) ವಾಸಿಯಾದವು. ಬಹಳ ಜನರು ತಮ್ಮ ಕ್ಷೇಮವನ್ನು ಪಡೆದರು. ॥40॥ ಯಾವುದೇ ಕಾಡಿಗೆ ಇಲ್ಲದೆ, ಮುಲಾಮೂ ಹಾಕದೇ ಅಥವಾ ಗಿಡಮೂಲಿಕೆಗಳ ರಸವಿಲ್ಲದೆ ಅನೇಕ ಕುರುಡರು ದೃಷ್ಟಿ ಪಡೆದರು. ಕುಂಟರು ನಡೆಯಲಾರಂಭಿಸಿದರು. ಅವರೆಲ್ಲ ಶ್ರೀ ಸಾಯಿ ಚರಣಗಳಲ್ಲಿ ಶರಣಾಗಿದ್ದರು. 42॥ ಅವರ ಮಹತ್ತು ಈ ರೀತಿ ಅನ೦ತವಾಗಿತ್ತು. ಯಾರೂ ಅದರ ಆಳವನ್ನು ಅಳೆಯಲು ಸಾಧ್ಯವಿರಲಿಲ್ಲ. ನಾಲ್ಕೂ ನಿಟ್ಟಿನಿಂದ ಅಸಂಖ್ಯಾತ ಜನರು ಪ್ರವಹಿಸಲು ಪ್ರಾರಂಭಿಸಿದರು. 43 ಅವರು ಧುನಿಯ ಹತ್ತಿರ ಅದೇ ಜಾಗದಲ್ಲಿ ಕುಳಿತಿರುತ್ತಿದ್ದರು. ಅಲ್ಲಿಯೇ ದೇಹಭಾದೆ ತೀರಿಸಿಕೊಳ್ಳುತ್ತಿದ್ದರು. ಅವರು ಅದೇ ಜಾಗದಲ್ಲಿ ಸ್ನಾನಮಾಡಿ ಕೆಲವೊಮ್ಮೆ ಸ್ನಾನವಿಲ್ಲದೆ ಇರುತ್ತಿದ್ದರು. ಸದಾ ಧ್ಯಾನಸ್ಥಿತಿಯಲ್ಲಿರುತ್ತಿದ್ದರು. 44 ಅವರು ತಲೆಯ ಮೇಲೆ ಒಂದು ಬಿಳಿಯ ಶಿರವಸ್ತ್ರ ಮತ್ತು ಸೊಂಟಕ್ಕೆ ಕಟ್ಟಿದ ಶುಚಿಯಾದ ಧೋತಿ, ಒಂದು ಶರಟು ಅಥವಾ ಪೆಹರಾನ್‌ ಧರಿಸುತ್ತಿದ್ದರು. ಅವರ ವೇಷಭೂಷಣ ಮೊದಲು ಈ ರೀತಿ ಇತ್ತು. ॥45


ಪ್ರಾರಂಭದಲ್ಲಿ ಹಳ್ಳಿಯಲ್ಲಿ ಆಯುರ್ವೇದವನ್ನು ಅಭ್ಯಸಿಸುತ್ತಿದ್ದರು. ರೋಗಿಗಳನ್ನು ಪರೀಕ್ಷಿಸಿ ಔಷಧ ಕೊಡುತ್ತಿದ್ದರು. ಅವರ ಹಸ್ತಸ್ಪರ್ಶಕ್ಕೇ ಗುಣಪಡಿಸುವ ಶಕ್ತಿಯಿತ್ತು. ಹೆಸರಾಂತ ಹಕೀಮರಾದರು. 46 ಒಮ್ಮೆ ಒಬ್ಬ ಭಕ್ತನ ಕಣ್ಣುಗಳು ಬೆಂಕಿಯ ಚೆಂಡಿನಂತೆ ಕೆಂಪಗಾಗಿದ್ದವು. ಶಿರಡಿಯಲ್ಲಿ ಯಾವ ವೈದ್ಯರೂ ಇರಲಿಲ್ಲ. 47 ಸರಳ ಹಾಗೂ ಧರ್ಮಶ್ರದ್ಧೆಯುಳ್ಳ ಭಕ್ತನು ಅವನ ಕಣ್ಣುಗಳನ್ನು ಬಾಬಾರವರಿಗೆ ತೋರಿಸಿದನು. ಕೂಡಲೇ ಬಾಬಾರವರು ಬೀಬಾ ಬೀಜವನ್ನು ಪುಡಿಮಾಡಿ ಉಂಡೆಗಳಾಗಿ ಮಾಡಿದರು. 48 ಈ ಸನ್ನಿವೇಶದಲ್ಲಿ ಸುರಮಾ(ಮುತ್ತಿನ ಪುಡಿ)ಯಿಂದಾಗಲಿ, ಕೆಲವರು ಬಟ್ಟೆಯನ್ನು ಹಸುವಿನ ಹಾಲಿನಲ್ಲಿ ಒದ್ದೆಮಾಡಿ, ಕೆಲವರು ಕರ್ಪೂರದ ಗಟ್ಟಿಯನ್ನಿಟ್ಟು ತಣ್ಣಗಾಗಿಸಿ ಅಥವಾ ಕೆಲವರು ಕಾಡಿಗೆಯನ್ನು ಉಪಯೋಗಿಸಿ ಚಿಕಿತ್ಸೆ ನೀಡಬಹುದು. ॥49॥ ಆದರೆ ಬಾಬಾರವರ ಚಿಕಿತ್ಸೆ ಪೂರ್ಣವಾಗಿ ವಿಶಿಷ್ಟವಾಗಿತ್ತು. ಅವರು ಬೀಬಾದ ಉಂಡೆಯನ್ನು ತಮ್ಮ ಕೈಯಲ್ಲೇ ಹಿಡಿದು ಎರಡೂ ಕಣ್ಣುಗಳ ಮೇಲೆ ಆದಷ್ಟು ಜೋರಾಗಿ ಒತ್ತಿ ಹಿಡಿದು ಒಂದು ಬಟ್ಟೆಯನ್ನು ಅವುಗಳ ಮೇಲೆ ಕಟ್ಟಿದರು. ॥50॥ ಮಾರನೆಯ ದಿನ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತೆಗೆದು ಕಣ್ಣುಗಳಿಗೆ ತಣ್ಣೀರನ್ನು ಒಂದು ಸ್ಥಿರವಾದ ಪಿಚಕಾರಿಯಂತೆ ಬಿಡುತ್ತಾ ತೊಳೆದರು. ಎಲ್ಲ ಊತವೂ ಮಾಯವಾಗಿತ್ತು. ಕಣ್ಣಾಲಿಗಳು ತಿಳಿಯಾಗಿದ್ದವು. 51 ಅತಿಸೂಕ್ಷ್ಮವಾದ ಅಂಗಗಳಾದ ಕಣ್ಣುಗಳನ್ನು ಬೀಬಾನಿಂದ ಚಿಕಿತ್ಸೆಮಾಡಿದರೂ ಉರಿಯಲಿಲ್ಲ. ರೋಗವು ಗುಣವಾಗಿತ್ತು. ಇಂತಹ ಅನುಭವಗಳು ಎಣಿಸಲಾರದಷ್ಟು. ॥52॥



ಅವರಿಗೆ ಧೋತಿ-ಪೋತಿಯೆ೦ಬ ಯೋಗ ಕ್ರಿಯೆಯು ತಿಳಿದಿತ್ತು. ಯಾರಿಗೂ ತಿಳಿಯದ ಹಾಗೆ ಅವರು ಏಕಾಂತವಾದ ಜಾಗಕ್ಕೆ ಹೋಗಿ ಸ್ನಾನಮಾಡುವಾಗ ತಮ್ಮ ಕರುಳನ್ನು ವಾಂತಿಮಾಡಿ, ತೊಳೆದು ಒಣಗಲು ಹಾಕುತ್ತಿದ್ದರು. ॥53॥ ಮಸೀದಿಯಿಂದ ಬಾವಿಗಿದ್ದಷ್ಟು ದೂರದಲ್ಲಿಯೇ ಮುಂದೆ ಒಂದು ಆಲದ ಮರವಿತ್ತು. ಅದರಿಂದ ಮುಂದೆ ಮತ್ತೊಂದು ಬಾವಿ ಇತ್ತು. ಅಲ್ಲಿಗೆ ಪ್ರತಿ ಮೂರನೆಯ ದಿನ ಹೋಗುತ್ತಿದ್ದರು. ॥54 ಸರಿಯಾಗಿ ಮಧ್ಯಾಹ್ನದ ಸಮಯದಲ್ಲಿ ಉರಿಯುತ್ತಿರುವ ಸೂರ್ಯನ ಕೆಳಗೆ ಅಲ್ಲಿ ಸುತ್ತಲೂ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡು ಕೈಯಾರೆ ಬಾವಿಯಿಂದ ನೀರನ್ನು ತೆಗೆದುಕೊಂಡು ತಮ್ಮ ಮುಖ ತೊಳೆದುಕೊಂಡು ಶೌಚಕರ್ಮಗಳನ್ನು ನೆರವೇರಿಸುತ್ತಿದ್ದರು. 55 ಅ೦ತಹ ಒಂದು ಸಂದರ್ಭದಲ್ಲಿ ಅವರು ಸ್ನಾನಮಾಡುತ್ತಿರುವಾಗ ತಮ್ಮ ಕರುಳನ್ನು ಬೇಗನೇ ತೆಗೆದು ಅಲ್ಲಿಯೇ ತೊಳೆಯಲು ಪ್ರಾರಂಭಿಸಿದರು. ॥56॥ ಒಂದು ಮೇಕೆಯನ್ನು ಬಲಿಕೊಟ್ಟಾಗ ಅದರ ಕರುಳನ್ನು ಹೊರತೆಗೆದು ಚೆನ್ನಾಗಿ ತೊಳೆದು ಶುಚಿಮಾಡಿ ಸುತ್ತಿಡುತ್ತಾರೆ. 57 ಅದೇ ರೀತಿ, ಅವರು ತಮ್ಮ ಕರುಳುಗಳನ್ನು ಹೊರತೆಗೆದು ತೊಳೆದು, ಮರದ ಮೇಲೆ ಹರಡಿದರು. ಜನರಿಗೆ ಬಹಳ ಅಚ್ಚರಿಯಾಯಿತು. ॥58॥ ಅದನ್ನು ಕಣ್ಣಾರೆ ನೋಡಿದವರಲ್ಲಿ ಕೆಲವರು ಈಗಲೂ ಶಿರಡಿಯಲ್ಲಿ ಇದ್ದಾರೆ. ಬಾಬಾ ಒಬ್ಬ ಅಸಾಧಾರಣ ಸಂತನೆಂದು ಅವರು ಹೇಳುತ್ತಾರೆ. ॥59॥ ಕೆಲವೊಮ್ಮೆ ಅವರು ಖಂಡಯೋಗವನ್ನು ಅಭ್ಯಸಿಸುತ್ತಿದ್ದರು. ತಮ್ಮ ಕೈಗಳು ಮತ್ತು ಕಾಲುಗಳನ್ನು ಬೇರ್ಪಡಿಸುತ್ತಿದ್ದರು. ಈ ರೀತಿ ಅವುಗಳನ್ನು ಮಸೀದಿಯಲ್ಲಿ ಅಲ್ಲಿ ಇಲ್ಲಿ ಹರಡುತ್ತಿದ್ದರು. 60॥ ಈ ರೀತಿ ದೇಹವನ್ನು ಭಾಗಭಾಗವಾಗಿ ಬೇರ್ಪಡಿಸುತ್ತಿದ್ದರು. ಈ ದೃಶ್ಯವು ಅತಿ ಭಯಂಕರವಾಗಿತ್ತು. ಇದನ್ನು ನೋಡಲು ಅನೇಕರು ಓಡಿ ಬಂದಾಗ ಅಲ್ಲಿ ಬಾಬಾರವರು ಎಂದಿನಂತೆ ಸಹಜವಾಗಿ ಕುಳಿತಿರುವುದು ಕಾಣುತ್ತಿತ್ತು. 61 ಒಮ್ಮೆ ಇಂತಹ ಘಟನೆಯನ್ನು ನೋಡಿದವನೊಬ್ಬನು ಬಹಳ ಹೆದರಿ, ಯಾರೋ ದುಷ್ಪರು ಬಾಬಾರವರನ್ನು ಕೊಲೆಮಾಡಿ ಈ ರೀತಿ ಅತ್ಯಾಚಾರವೆಸಗಿದ್ದಾರೆಂದುಕೊಂಡನು. ॥62॥ ಮಸೀದಿಯಲ್ಲಿ ನಾಲ್ಕೂ ದಿಕ್ಕಿನ ಮೂಲೆಗಳಲ್ಲಿ ಅಲ್ಲಲ್ಲಿ ಕೈಕಾಲುಗಳು ಕಂಡು ಬಂದವು. ಅದು ಅರ್ಧ ರಾತ್ರಿಯಾಗಿದ್ದು ಮತ್ತೆ ಯಾರೂ ಸುತ್ತ ಇರಲಿಲ್ಲ. ಅವನು ಚಿಂತಿತನಾದನು. ॥63॥ ಈ ಘಟನೆಯನ್ನು ಯಾರಿಗೆ ತಿಳಿಸಬೇಕು? ಅದಕ್ಕೆ ಬದಲಾಗಿ ತನ್ನನ್ನೇ ಗಲ್ಲಿಗೇಗೇರಿಸಬಹುದು. ಈ ರೀತಿ ಆಲೋಚಿಸಿ ಅವನು ಹೊರಗೆ ಹೋಗಿ ಕುಳಿತುಕೊ೦ಡನು. 64 ಅದು ಸಾಯಿಯ ಯೋಗಕ್ರಿಯೆಯೆಂದು ಅವನಿಗೆ ಕನಸು ಮನಸಿನಲ್ಲಿಯೂ ತೋಚಲಿಲ್ಲ. ದೇಹದ ಭಾಗಗಳನ್ನು ನೋಡಿ ಅವನ ಹೃದಯ ಹೆದರಿಕೆಯಿಂದ ಬಡಿಯಲಾರಂಭಿಸಿತು. ॥65॥ ಈ ಘಟನೆಯನ್ನು ಯಾರಿಗಾದರೂ ತಿಳಿಸಬೇಕು. ಈ ಯೋಚನೆ ಅವನಿಗೆ ಮತ್ತೆ ಮತ್ತೆ ಬರಲಾರಂಭಿಸಿತು. ಆದರೆ ಮೊದಲು ವರದಿ ಮಾಡುವುದರಿಂದ ತನ್ನನ್ನೇ ಅಪರಾಧಿಯನ್ನಾಗಿ ಭಾವಿಸಬಹುದು. 66 ಆದ್ದರಿ೦ದ ಅವನು ಯಾರಿಗೂ ತಿಳಿಸಲಿಲ್ಲ. ಅನೇಕ ಬಗೆಯ ಊಹೆಗಳು ಅವನಿಗೆ ಬಂದವು. ಆದ್ದರಿಂದ ಬೆಳಗ್ಗೆ ಅವನು ಮತ್ತೆ ನೋಡಲು ಅಲ್ಲಿಗೆ ಹೋದನು. ಆಗ ಕಂಡುದು ಆಶ್ಚರ್ಯವನ್ನುಂಟುಮಾಡಿತು. ॥67॥ ಅಲ್ಲಿ ಮೊದಲು ನಡೆದುದರ ಸುಳಿವೂ ಇರಲಿಲ್ಲ. ಬಾಬಾರವರು ಆರೋಗ್ಯವಂತರಾಗಿ ತಮ್ಮ ದಿನನಿತ್ಯದ ಜಾಗದಲ್ಲಿ ಕುಳಿತುಕೊಂಡಿದ್ದರು. ಆ ಪ್ರೇಕ್ಷಕನು ದಿಗ್ಭ್ರಮೆಹೊ೦ದಿ ತಾನೇನಾದರೂ ಕನಸು ಕಂಡೆನೊ ಎಂದುಕೊಂಡು ಅಚ್ಚರಿಗೊ೦ಡನು. ॥68॥ ಈ ಯೋಗಕ್ರಿಯೆಗಳಾದ ಧೋತಿ-ಪೋತಿ ಅವುಗಳನ್ನು ಬಾಬಾರವರು ಬಾಲ್ಯದಿಂದಲೇ ಮಾಡುತ್ತಿದ್ದರು. ಅದರ ಆಳವನ್ನಾಗಲೀ, ಯೋಗಸ್ಥಿತಿಯ ಮಟ್ಟವನ್ನಾಗಲೀ ಯಾರೂ ಅರಿಯಲಾರರು. ॥69॥


ಅವರು ಯಾರಿಂದಲೂ ಒಂದು ನಾಣ್ಯವನ್ನೂ ಸ್ವೀಕರಿಸಲಿಲ್ಲ. ತಮ್ಮದೇ ಆದ ಗುಣಗಳಿಂದ ಅವರಿ ಹೆಸರುವಾಸಿಯಾದರು. ದೀನರು ಮತ್ತು ಬಡವರಿಗೆ ಒಳ್ಳೆಯ ಆರೋಗ್ಯ ನೀಡಿದರು. ಆ ಪ್ರಾಂತದಲ್ಲೇ ಹೆಸರಾಂತ ಹಕೀಮರಾದರು. ॥70॥ ಅವರು ಬೇರೆಯವರಿಗೆ ಮಾತ್ರವೇ ಹಕೀಮರಾಗಿದ್ದರು. ಅವರು ತಮ್ಮ ವೈಯಕ್ತಿಕ ಲಾಭದಿಂದ ವಿಮುಖರಾಗಿದ್ದರು. ಅತರರಿಗೆ ಒಳ್ಳೆಯದನ್ನು ಸಾಧಿಸಬೇಕಾದರೆ ಅವರು ಅತಿ ಕಷ್ಟ ನೋವುಗಳನ್ನು ಅನುಭವಿಸಬೇಕಾಯಿತು. ॥71 ಇದನ್ನು ವಿವರಿಸುವಂತಹ ಒಂದು ವಿಶೇಷವಾದ ಕತೆಯನ್ನು ಶ್ರೋತೃಗಳಿಗಾಗಿ ಹೇಳುವೆನು. ಅದು ಬಾಬಾರವರ ಕರುಣೆ ಹಾಗೂ ವಿಶ್ವಾತ್ಮಕವಾದ ಸರ್ವವ್ಯಾಪಕತ್ವವನ್ನು ತೋರಿಸುತ್ತದೆ. ॥72॥ ಕ್ರಿ.ಶ. 1910ರಲ್ಲಿ ದತ್ತಾತ್ರೇಯ ಜಯಂತಿಯ ದಿನ ಬಾಬಾರವರು ಸ್ವಾಭಾವಿಕವಾಗಿ ಧುನಿಯ ಬಳಿ ಕಟ್ಟಿಗೆ ಉರಿಸುತ್ತ ಕುಳಿತಿದ್ದರು. ॥73॥ ಧುನಿಯು ಬಹಳ ಬಿಸಿಯಾಗಿ ಜೋರಾಗಿ ಉರಿಯಲು ಪ್ರಾರಂಭಿಸಿತು. ಅವರು ತಮ್ಮ ಕೈಯನ್ನೇ ಬೆಂಕಿಯ ಒಳಗೆ ಹಾಕಿ ಶಾಂತವಾಗಿ ಕುಳಿತರು. ಕೈ ಪೂರ್ತಿ ಸುಟ್ಟಿತು. 74॥ ಅವರ ಸೇವೆ ಮಾಡುತ್ತಿದ್ದ ಮಾಧವನು ಅದನ್ನು ಆಕಸ್ಮಾತ್ತಾಗಿ ನೋಡಿದನು. ಮಾಧವ ರಾವ್‌ ದೇಶಪಾಂಡೆ ಸಹ ಹತ್ತಿರ ಇದ್ದನು. ಅವನೂ ಕೂಡಲೇ ಹತ್ತಿರ ಓಡಿದನು. 75 ಅವರು ಹೋಗಿ ಬಾಬಾರವರ ಹಿಂದೆ ಕಾಲುಗಳನ್ನು ಅಡ್ಡಮಾಡಿ ಕುಳಿತು ತಮ್ಮ ಕೈಗಳನ್ನು ಬಿಗಿಯಾಗಿ ಅವರ ಸೊಂಟದ ಮೇಲಿಟ್ಟು ಹಿಂದಕ್ಕೆ ಎಳೆದರು. ಅವರು ಹೇಳಿದರು, "ನೋಡಿ ಏನಾಯಿತು?" 76 "ಓ ದೇವಾ! ಇದೇನು ಮಾಡಿದಿರಿ?" ಈ ಮಾತುಗಳನ್ನು ಕೇಳುತ್ತಲೇ ಬಾಬಾರವರಿಗೆ ಪರಿಸ್ಥಿತಿಯ ಅರಿವಾಯಿತು. ಆಗ "ತಾಯಿಯ ಕಂಕುಳಲ್ಲಿದ್ದ ಮಗು ಜಾರಿ ಬೆಂಕಿಕುಂಡದೊಳಗೆ ಬಿತ್ತು" ॥77॥ ಗಂಡನ ಕರೆಗಳನ್ನು ಕೇಳುತ್ತ ಕೇಳುತ್ತ ಗಾಬರಿಯಿಂದ ಅಕ್ಕಸಾಲಿಗನ ಪತ್ನಿಯು ತನ್ನ ಮಗುವನ್ನು ಕಂಕುಳಲ್ಲಿ ಎತ್ತಿಕೊ೦ಡೇ ಕುಲುಮೆಯ ತಿದಿಯನ್ನು ಒತ್ತುತ್ತಿದ್ದಳು. ॥78॥ ತಿದಿಯೊತ್ತುತ್ತಾ ಕಂಕುಳಲ್ಲಿದ್ದ ಮಗುವಿನ ಕಡೆಗೆ ಲಕ್ಷ್ಯತಪ್ಪಿತು. ಮಗು ಸಹ ತು೦ಬಾ ಚಡಪಡಿಸುತ್ತಿತ್ತು. ಕ್ಷಣದಲ್ಲಿ ಕೈಜಾರಿತು. "ಶಾಮಾ, ಅವಳ ಕೈಯಿಂದ ಮಗು ಬೀಳುತ್ತಿದ್ದಂತೆ ನಾನು ಎತ್ತಿಕೊಂಡೆ. 79॥ ನಾನು ಆ ಎಳೆ ಹುಡುಗಿಯನ್ನು ಹೊರತೆಗೆಯುವಾಗ ಹೀಗಾಯಿತು. ನನ್ನ ಈ ಹಾಳು ಕೈ ಸುಟ್ಟರೂ ಪರವಾಗಿಲ್ಲ, ಸಧ್ಯ ಮಗುವಿನ ಜೀವ ಉಳಿಯಿತಲ್ಲ!" ॥80॥



ಆ ಕೈನಿಂದಾದಕಷ್ಟ ಮತ್ತು ನೋವುಗಳಿಗೆ ಪರಿಹಾರ ಏನು? ಯಾರಿಂದ ಪಡೆಯಬಹುದು? ಮಾಧವರಾವ್‌ ಚಂದೋರಕರ್‌ಗೆ ಪತ್ರ ಬರೆಯಲು ನಿಶ್ಚಯಿಸಿದನು.81 ಅವರು ವಿವರವಾಗಿ ಪತ್ರ ಬರೆದನು. ಕೂಡಲೇ ಚಂದೋರಕರ್‌ನು ಶಿರಡಿಗೆ ಬಂದನು. ಜೊತೆಯಲ್ಲಿ ಖ್ಯಾತ ವೈದ್ಯ ಡಾ| ಪರಮಾನಂದನನ್ನೂ ಕರೆತಂದನು. ॥82॥ ಉರಿಯನ್ನು ಉಪಶಮನಮಾಡಲು ಡಾ। ಪರಮಾನಂದನು ತನ್ನ ಜೊತೆಯಲ್ಲಿ ಆನೇಕ ಔಷಧಿಗಳನ್ನು ತಂದನು. ಅವೆಲ್ಲವೂ ಉಪಯೋಗವಾಗಲೆಂದು ತಂದು ಸಾಯಿ ಸೇವೆ ಮಾಡಲು ನಾನಾನ ಜೊತೆ ಬಂದನು. 83॥ ಬಾಬಾರವರಿಗೆ ನಮಸ್ಕರಿಸಿದನು. ಅವರ ಯೋಗಕ್ಷೇಮವನ್ನು  ವಿಚಾರಿಸಿದನು. ತಾನು ಬಂದ ಕಾರಣವನ್ನು ಅರಿಕೆಮಾಡಿಕೊಂಡು ತಮ್ಮ ಕೈಯನ್ನು ತೋರಿಸುವಂತೆ ಪ್ರಾರ್ಥಿಸಿದನು. ॥84 ಆದರೆ, ಕೈ ಸುಟ್ಟಾಗಿನಿಂದ ಭಾಗೋಜಿ ಶಿಂಧೆಯು ತುಪ್ಪ ಹಚ್ಚುತ್ತಿದ್ದನು. ಅದರ ಮೇಲೆ ಒಂದು ಎಲೆಯನ್ನು ಇಟ್ಟು ಗಟ್ಟಿಯಾಗಿ ಪಟ್ಟಿಯನ್ನು ದಿನವೂ ಕಟ್ಟುತ್ತಿದ್ದನು. 85॥ ಪಟ್ಟಿಗಳನ್ನು ತೆಗೆದುಹಾಕಿ, ಕೈಯನ್ನು ಡಾ| ಪರಮಾನಂದನಿಗೆ ತೋರಿಸಿ ಚಿಕಿತ್ಸೆ ಪಡೆದು ಬಾಬಾರವರ ಸುಟ್ಟಗಾಯ ವಾಸಿಯಾಗಲೆಂಬುದು ಉದ್ದೇಶ. 86॥ ಈ ಒಂದು ಒಳ್ಳೆಯ ಉದ್ದೇಶದಿಂದ ನಾನಾನು ಬಹಳವಾಗಿ ಕಾಲಿಗೆ ಬಿದ್ದು ಬೇಡಿಕೊಂಡನು. ಪರಮಾನಂದನೂ ಸಹ ಪಟ್ಟಿಗಳನ್ನು ಬಿಚ್ಚಿ ಕೈಯನ್ನು ನೋಡಲು ಪ್ರಯತ್ನಿಸಿದನು. ॥87॥ ಆ ದಿನವಲ್ಲ, ಮರುದಿನವೂ ಅದೇ ರೀತಿ ಕೇಳಿಕೊಂಡನು. ಬಾಬಾ ತಮ್ಮ ಕೈಯನ್ನು ನೋಡಲು ಬಿಡಲೇ ಇಲ್ಲ. ಅಲ್ಲಾನೇ ತಮ್ಮ ವೈದ್ಯರು ಎನ್ನುತ್ತಿದ್ದರು. ಅವರಿಗೆ ಕಿಂಚಿತ್ತಾದರೂ ಕ್ಲೋಭೆಯುಂಟಾಗಲಿಲ್ಲ. ॥88॥ ಪರಮಾನಂದನು ತಂದಿದ್ದ ಔಷಧಿಗಳಲ್ಲೊಂದನ್ನೂ ಶಿರಡಿಯಲ್ಲಿ ಬಿಚ್ಚಲೇ ಇಲ್ಲ. ಆದರೆ ಸಾಯಿ ದರ್ಶನವಾದದ್ದು ವೈದ್ಯನ ಪುಣ್ಯ. ಅದಕ್ಕಾಗಿಯೇ ಬಹುಶಃ ಈ ಘಟನೆ ಸಂಭವಿಸಿರಬಹುದು. 89


ಭಾಗೋಜಿಯೇ ಸದಾ ಸೇವೆಮಾಡುತ್ತಿದ್ದನು. ಭಾಗೋಜಿಯೇ ಕೈಯನ್ನು ಸಹ ನೋಡಿಕೊಂಡನು. ಕೆಲವು ದಿನಗಳಲ್ಲೆ ಪೂರ್ತಿ ಗುಣವಾಯಿತು. ಎಲ್ಲರಿಗೂ ಸಂತೋಷವಾಯಿತು. 90॥ ಈ ರೀತಿ ಕೈಯು ಪೂರ್ಣವಾಗಿ ಗುಣವಾಗಿದ್ದರೂ ಭಾಗೋಜಿ ನಿತ್ಯವೂ ಬೆಳಿಗ್ಗೆ ಪಟ್ಟಿ ಕಟ್ಟುವುದಕ್ಕೆ ಅವಕಾಶ ಕೊಡಲು ಬಾಬಾರವರ ಮನಸ್ಸಿನಲ್ಲಿ ಏನಿತ್ತು ಎಂಬುದು ಯಾರಿಗೂ ತಿಳಿಯದು. 91॥ ನೋವಿಲ್ಲದಿದ್ದರೂ ಪ್ರತಿನಿತ್ಯವೂ ತುಪ್ಪದಿಂದ ಮಾಲೀಶು ಮಾಡುತ್ತ ಕೈಯನ್ನು ಎಚ್ಚರಿಕೆಯಿಂದ ಧ್ಯಾನ ಸಮಾಧಿಯ ಹೊತ್ತಿನವರೆಗೂ ನೋಡಿಕೊಳ್ಳಲಾಗುತ್ತಿತ್ತು. ॥92॥ ಈ ಸೇವೆಗಳು ಭಾಗೋಜಿಗಾಗಿಯೇ ಇರುತ್ತಿತ್ತು. ಸಿದ್ಧರಾದ ಸಾಯಿಗೆ ಯಾವುದೂ ಬೇಕಿರಲಿಲ್ಲ. ಭಾಗೋಜಿಗೆ ನಿತ್ಯ ಸೇವೆಯನ್ನು ಭಕ್ತಿಯಿಂದ ಮಾಡುವಂತೆ ಅನುವುಮಾಡಿಕೊಟ್ಟರು. 93 ಪೂರ್ವಜನ್ಮಗಳ ಪಾಪ ಕಾರ್ಯಗಳಿಂದಾಗಿ ಭಾಗೋಜಿಯು ಕುಷ್ಠರೋಗದಿಂದ ನರಳುತ್ತಿದ್ದನು. ಆದರೆ ಅವನು ಪುಣ್ಯವಶಾತ್‌ ಸಾಯಿಯ ಸಂಪರ್ಕದಲ್ಲಿ ಬಂದನು. 94 ಬಾಬಾರವರು ಲೇಂಡಿಗೆ ಸುತ್ತು ಹೊರಟಾಗಲೆಲ್ಲ ಭಾಗೋಜಿಯು ಬಾಬಾರವರ ತಲೆಯಮೇಲೆ ಛತ್ರಿಯನ್ನು ಹಿಡಿಯುವನು. ಅವನ ದೇಹವೆಲ್ಲ ಕುಷ್ಠದ ಕಪ್ಪುಕಲೆಗಳಿಂದ ತುಂಬಿದ್ದರೂ ಅವನು ಬಾಬಾರವರ ಸೇವೆಯಲ್ಲಿ ಅಗ್ರಗಣ್ಯನಾಗಿದ್ದನು. 95 ಬಾಬಾರವರು ಬೆಳಗಿನ ಜಾವ ಧುನಿಯ ಹತ್ತಿರ ಕಂಭಕ್ಕೆ ಒರಗಿ ಕುಳಿತುಕೊಂಡಾಗಲೆಲ್ಲ, ಅವರ ಸೇವೆಮಾಡುತ್ತಿದ್ದುದು ಅವನ ಷುಣ್ಯವೇ ಸರಿ. 96 ಅವನು ಪಟ್ಟಿಗಳನ್ನು ತೆಗೆದು ಆ ಮಾಂಸಖಂಡಗಳನ್ನೆಲ್ಲ ಮಾಲೀಶು ಮಾಡಿ, ಆ ಜಾಗಕ್ಕೆ ತುಪ್ಪ ಸವರುತ್ತಿದ್ದನು. 97॥ ಭಾಗೋಜಿ ಶಿಂಧೆಯು ತನ್ನ ಹಿಂದಿನ ಜನ್ಮಗಳಲ್ಲಿ ಮಹಾ ಪಾಪಿಯಾಗಿದ್ದನು. ಅವನ ದೇಹವಿಡೀ ಹುಣ್ಣುಗಳಾಗಿ ಕೀವು ವಸರುತ್ತಿತ್ತು. ಅವನು ಅಂತಹ ಮಾರಣಾಂತಿಕ ರೋಗಕ್ಕೆ ಬಲಿಯಾಗಿದ್ದನು. ಆದರೆ ಅವನು ಬಾಬಾರವರ ಅಸಾಮಾನ್ಯ ಭಕ್ತನಾಗಿದ್ದನು. 98 ಅವನ ಬೆರಳುಗಳು ಕುಷ್ಠರೋಗದಿಂದಾಗಿ ಮೊಂಡಾಗಿದ್ದವು. ಅವನ ದೇಹವಿಡೀ ಅಸಹ್ಯಕರವಾದ ವಾಸನೆ ಬರುತ್ತಿತ್ತು. ಈ ರೀತಿ ದುರದೃಷ್ಟವಂತನೊಬ್ಬ ಸಾಯಿ ಸೇವೆಯಿಂದ ನಾಲ್ಮಡಿ ಲಾಭ ಹೊಂದಿದನು. ॥99 ಈ ರೀತಿ ಬಾಬಾರವರ ಮಹಾನ್‌ ಪವಾಡಗಳನ್ನು ಶ್ರೋತೃಗಳಿಗೆ ಹೇಗೆ ನಿರೂಪಿಸಲಿ? ಒಮ್ಮೆ ಹಳ್ಳಿಯಲ್ಲಿ ಫ್ಲೇಗ್‌ ಬಂದಾಗ ಎಂತಹ ಪವಾಡ ನಡೆಯಿತು ಎಂಬುದನ್ನು ಕೇಳಿರಿ. 100


ದಾದಾ ಸಾಹೇಬ್‌ ಖಪರ್ಡೆಯವರ ಚಿಕ್ಕ ಮಗ ತನ್ನ ತಾಯಿಯ ಜೊತೆಯಲ್ಲಿ ವಾಸಿಸುತ್ತಿದ್ದ ಮತ್ತು ಬಾಬಾರವರ ಸಂಗದಲ್ಲಿ ಬಹಳ ಸಂತೋಷವಾಗಿದ್ದನು. ॥101 ಆ ಹುಡುಗ ಬಹಳ ಚಿಕ್ಕ ಬಾಲಕ. ಹೀಗಿರುವಾಗ ಅವನಿಗೆ ವಿಪರೀತ ಜ್ವರ ಬಂದಿತು. ತಾಯಿಯ ಹೃದಯ ಕಾತರಗೊಂಡಿತು ಮತ್ತು ಪ್ರಕ್ಷುಬ್ಧವಾಯಿತು. ॥102॥ ಆಕೆಯ ಮನೆ ಅಮರಾವತಿಯಲ್ಲಿತ್ತು. ಆದ್ದರಿಂದ ಅವಳು ಅಲ್ಲಿಗೆ ಹೋಗಲು ಯೋಚಿಸಿದಳು. ಸಂಜೆ ವೇಳೆ ಸರಿಯಾದ ಹೊತ್ತಿನಲ್ಲಿ ಜಬಾರವರಿಂದ ಅನುಮತಿ ಬೇಡಲು ಬಂದಳು. ॥103॥ ಸಂಜೆಯ ತಿರುಗಾಟ ಮುಗಿಸಿ ಬಾಬಾರವರು ವಾಡಾ ಹತ್ತಿರ ಬಂದರು. ಅಲ್ಲಿ ಆ ಹೆ೦ಗಸು ಅವರ ಚರಣಗಳಿಗೆ ಬಾಗಿ ನಮಸ್ಕರಿಸಿ, ತನ್ನ ಮಗನ ಜ್ವರದ ಬಗ್ಗೆ ತಿಳಿಸಿದಳು. ॥104 ಹೆ೦ಗಸರು ಸ್ವಭಾವತಃ ಅಂಜಿಕೆಯುಳ್ಳವರಾಗಿರುವರು, ಮಗನ ಜ್ವರ ಹಾಗೂ ನಡುಕವೂ ನಿಲ್ಲಲಿಲ್ಲ. ಅಲ್ಲಿ ಫ್ಲೇಗಿನ ಹೆದರಿಕೆಯೂ ಇತ್ತು. ಆದ್ದರಿಂದ ಅವಳು ಏನಾಯಿತೆಂದು ಭಿನ್ನವಿಸಿದಳು. ॥105॥ ಬಾಬಾರವರು ಪ್ರೀತಿಯಿಂದ ಆಶ್ವಾಸನೆ ನೀಡುವ ಈ ಮಾತುಗಳನ್ನು ಹೇಳಿದರು - "ಇದನ್ನು ತಿಳಿ. ಆಕಾಶದಲ್ಲಿ ಮೋಡಗಳು ಕವಿಯುತ್ತವೆ. ಮಳೆ ಬರುತ್ತದೆ ಮತ್ತು ಮೋಡಗಳು ಚದುರಿ ಹೋಗುತ್ತವೆ. ಋತುಮಾನ ಮುಗಿಯುತ್ತದೆ. ॥106॥ "ನೀನೇಕೆ ಭಯಪಡುವೆ?" ಈ ರೀತಿ ಹೇಳುತ್ತ ಅವರು ಕಫನಿಯನ್ನು ಸೊಂಟದವರೆಗೆ ಎತ್ತಿ ಅಲ್ಲಿದ್ದ ಗ೦ಟುಗಳನ್ನು ಎಲ್ಲರಿಗೂ ತೋರಿಸಿದರು. ॥107॥ ನಾಲ್ಕು ಜಾಗದಲ್ಲಿ ಕೋಳಿಮೊಟ್ಟೆ ಅಳತೆಯ ನಾಲ್ಕು ಗಂಟುಗಳು ಇದ್ದುವು. ಅವರು ಹೇಳಿದರು, "ನೋಡು, ನಿಮ್ಮ ಕಷ್ಟಗಳಿಂದಾಗಿ ನಾನು ಅನುಭವಿಸಬೇಕಾಗುತ್ತದೆ." 1108 ಜನರು ಈ ದಿವ್ಯ ಹಾಗೂ ವಿಶಿಷ್ಟವಾದ ಸಂಕಷ್ಟವನ್ನು ನೋಡಿ ಆಶ್ಚರ್ಯ ಚಕಿತರಾದರು. ತಮ್ಮ ಭಕ್ತರಿಗಾಗಿ ಸಂತರು ಎಷ್ಟು ಕಷ್ಟಪಡುತ್ತಾರೆ೦ಬುದು ತಿಳಿಯಿತು. ॥109॥ ಅವರ ಹೃದಯ ಮೇಣಕ್ಕಿಂತಲೂ ಮೃದು. ಬೆಣ್ಣೆ ಹೊರನೋಟಕ್ಕೆ ಕಾಣುವ ರೀತಿ ಇರುತ್ತದೆ. ಅವರಿಗೆ ತಮ್ಮ ಸ್ವಂತ ಭಕ್ತರಮೇಲೆ ಬಂಧು ಬಳಗವೋ ಎಂಬಷ್ಟು ನಿಸ್ದಾರ್ಥವಾದ ಪ್ರೇಮವಿರುತ್ತದೆ. ॥110॥


ಒಮ್ಮೆ ಈ ರೀತಿ ನಡೆಯಿತು. ನಾನಾ ಸಾಹೇಬ್‌ ಚ೦ದೊಲಕರನು ನಂದೂರ್‌ಬಾರ್‌ನಿಂದ ಪಂಡರಾಪುರಕ್ಕೆಂದು ಹೊರಟನು. ॥111 ನಾನಾ ಅದೃಷ್ಟವಂತನು. ಅವನಿಗೆ ಸಾಯಿ ಬಗೆಗಿನ ಅಂತರಾಳದ ಭಕ್ತಿ ಫಲ ನೀಡಿತ್ತು. ಅವನಿಗೆ ಭೂಲೋಕದ ಸ್ವರ್ಗ ಕೈಗೆಟುಕಿತ್ತು. ಆ ಊರಿನ ಮಾಮಲೇದಾರರ ಹುದ್ದೆ ದೊರಕಿತ್ತು. ॥112॥ ಅವನು ನ೦ದೂರ್‌ ಬಾರ್‌ನಲ್ಲಿ ಆದೇಶ ಪಡೆದಾಗ ಕೂಡಲೇ ಅಲ್ಲಿಂದ ಬಿಡಬೇಕಾಯಿತು. ಅವಸರದಲ್ಲಿ ಎಲ್ಲ ತಯಾರಿಯೂ ಮಾಡಿಕೊಂಡು ಮನದಲ್ಲಿ ಬಾಬಾರವರ ದರ್ಶನ ಮಾಡಲು ಇಚ್ಚಿಸಿದನು. ॥113॥ ಪತ್ನಿ ಮತ್ತು ಕುಟುಂಬದವರ ಜೊತೆಯಲ್ಲಿ ಶಿರಡಿಗೆ ಹೋಗುವ ಯೋಚನೆಮಾಡಿದನು. ಶಿರಡಿಯೇ ಅವನಿಗೆ ಪಂಡರಾಪುರವಾಗಿತ್ತು. ಬಾಬಾರವರಿಗೆ ತನ್ನ ಗೌರವ ಅರ್ಪಿಸಲು ಇಚ್ಚಿಸಿದನು. 141 ಅವನು ಯಾರಿಗೂ ಪತ್ರವನ್ನಾಗಲೀ ಸಂದೇಶವನ್ನಾಗಲೀ ಕಳಿಸಲಿಲ್ಲ. ತನ್ನ ಸಾಮಾನುಗಳನ್ನೆಲ್ಲ ಒಟ್ಟಾಗಿ ಅವಸರದಿಂದ ಗಾಡಿಯಲ್ಲಿ ತುಂಬಿದನು. 115 ಈ ರೀತಿ ನಾನಾ ಹೊರಟನು. ಶಿರಡಿಯಲ್ಲಿ ಯಾರಿಗೂ ಇದರ ಅರಿವು ಇರಲಿಲ್ಲ. ಆದರೆ ಸರ್ವಜ್ಞರಾದ ಸಾಯಿಗೆ ಎಲ್ಲವೂ ತಿಳಿದಿತ್ತು. ॥116॥ ನಾನಾ ಹೊರಟು ನೀವುಗಾ೦ವನ ಹೊರವಲಯ ತಲಪಿರಬಹುದು. ಅದೇ ಸಮಯದಲ್ಲಿ ಶಿರಡಿಯಲ್ಲಿ ಎಂತಹ ಪವಾಡ ನಡೆಯಿತೆಂಬುದನ್ನು ಎಚ್ಚರಿಕೆಯಿಂದ ಆಲಿಸಿರಿ. ॥117॥ ಬಾಬಾರವರು ಮಸೀದಿಯಲ್ಲಿದ್ದರು. ಮ್ಹಾಳಸಾಪತಿಯು ಜೊತೆಯಲ್ಲಿದ್ದನು. ಭಕ್ತರಾದ ಅಪ್ಪಾ ಸಿಂಧೆ ಮತ್ತು ಕಾಶೀನಾಥನು ಮಾತುಕತೆಯಾಡುತ್ತ ಕುಳಿತಿದ್ದರು. ॥118 ಆ ಸಮಯದಲ್ಲಿ 

ಬಾಬಾರವರು ಆಕಸ್ಮಿಕವಾಗಿ ಹೇಳಿದರು - "ನಾವು ನಾಲ್ಕು ಜನರೂ ಭಜನೆ ಮಾಡೋಣ. ಪಂಡರಾಪುರದ ಬಾಗಿಲುಗಳು ತೆಗೆದಿವೆ. ನಾವು ಸಂತೋಷವಾಗಿ ಹಾಡಬಹುದು." ॥119 ಸಾಯಿಗೆ ಭೂತ, ವರ್ತಮಾನ ಮತ್ತು ಭವಿಷ್ಯತ್ತಿನ ಅರಿವು ಇತ್ತು. ಅವರು ಈಗಾಗಲೇ ಸುದ್ದಿಯನ್ನು ತಿಳಿದಿದ್ದರು. ನಾನಾ ಊರ ಹೊರವಲಯದ ಕಾಲುವೆ ಹತ್ತಿರ ಇರುವಾಗಲೇ ಬಾಬಾರವರು ಉತ್ಸಾಹದಿಂದ ಭಜನೆ ಹಾಡುತ್ತಿದ್ದರು. "ನಾನು ಪಂಡರಾಪುರಕ್ಕೆ ಹೋಗುತ್ತಿರುವೆ. ಹೋಗುತ್ತಿರುವೆ, ಅಲ್ಲಿ ನಾನು ನೆಲೆಸುವೆ, ನೆಲೆಸುವೆ ... ಅದು ನನ್ನ ಗುರುವಿನ ನಿವಾಸ." ॥120॥ ಬಾಬಾ ಖುದ್ದಾಗಿ ಭಜನೆ ಹಾಡುತ್ತಿದ್ದರು. ಸುತ್ತಲೂ ಕುಳಿತಿದ್ದ ಭಕ್ತರು ಅದಕ್ಕೆ ದನಿಗೂಡಿಸುತ್ತಿದ್ದರು. ಅವರೆಲ್ಲರೂ ಪಂಡರಾಪುರದ ಬಗ್ಗೆ ಇದ್ದ ಪ್ರೀತಿಯಲ್ಲಿ ಮುಳುಗಿಹೋಗಿದ್ದರು. ಆಗಲೇ ನಾನಾ ಆಗಮಿಸಿದನು. ॥121 ಅವನು ಸಾಯಿ ಚರಣಗಳಿಗೆ ಪತ್ನೀ ಸಮೇತನಾಗಿ ನಮಿಸಿದನು. ಮಹಾರಾಜರು ಅವನೊಡನೆ ಪಂಡರಾಪುರಕ್ಕೆ ಹೋಗಿ ಅಲ್ಲಿ ನಿರಾತಂಕವಾಗಿ ನಿಶ್ಚಿಂತೆಯಿಂದ ನೆಲೆಸಬೇಕೆಂದು ಪ್ರಾರ್ಥಿಸಿದನು. 1122॥ ಈ ಆಹ್ವಾನದ ಅವಶ್ಯಕತೆಯೇ ಆರಲಿಲ್ಲ. ಈಗಾಗಲೇ ಬಾಬಾರವರು ಉತ್ಪಾಹ ಭಾವದಲ್ಲಿದ್ದರು. ಅಲ್ಲಿದ್ದ ಜನರು ಹೇಳಿದರು? - ಭಜನೆಯ ವಾಕ್ಯಗಳು ತಿಳಿಸುವಂತೆ ಈಗಾಗಲೇ ಬಾಬಾ ಪಂಡರಾಪುರಕ್ಕೆ ಹೋಗಲು ತಯಾರಾಗಿದ್ದಾರೆ. ॥123॥ ನಾನಾ ಅತ್ಯಂತ ಅಚ್ಚರಿಗೊ೦ಡನು. ಈ ಲೀಲೆಯನ್ನು ನೀಡಿ ದಿಗ್ಭಮೆಗೊ೦ಡನು. ಅವರ ಪಾದಗಳಲ್ಲಿ ತಲೆಯಿಟ್ಟು ಭಾವೋನ್ಮತ್ತನಾದನು. 124 ಅವರ ಆಶೀರ್ವಾದ, ಉದಿ ಮತ್ತು ಪ್ರಸಾದಗಳನ್ನು ತೆಗೆದುಕೊಂಡು ಮತ್ತೆ ನಮಸ್ಕರಿಸಿ ಚಂದೋರಕರ್‌ನು ಪಂಡರಾಷುರಕ್ಕೆ ಹೊರಟನು. ಅವರ ಅನುಮತಿಯನ್ನು ಪಡೆದಿದ್ದನು. ॥125॥


ಈ ರೀತಿಯ ಕತೆಗಳನ್ನು ಹೇಳುತ್ತಿದ್ದರೆ ಈ ಪುಸ್ತಕವು ಅಳತೆ ಮೀರಿಹೋಗುತ್ತದೆ. ಆದ್ದರಿ೦ದ ಇಲ್ಲಿಗೆ ಇತರರ ದುಃಖ ಉಪಶಮನದ ವಿಷಯವನ್ನು ನಿಲ್ಲಿಸೋಣ. ॥126॥ ಬಾಬಾರವರ ಸತ್ಕರ್ಮಗಳಿಗೆ ಕೊನೆಯೇ ಇಲ್ಲದಿರುವುದರಿಂದ ಇಲ್ಲಿಗೆ ಈ ಅಧ್ಯಾಯವನ್ನು ಮುಗಿಸೋಣ. ಮುಂದಿನ ಅಧ್ಯಾಯದಲ್ಲಿ, ನನ್ನದೇ ಕ್ಷೇಮಕ್ಕಾಗಿ ಇನ್ನು ಬೇರೆ ಚರಿತ್ರೆಗಳನ್ನು ವಿವರಿಸುತ್ತೇನೆ. ॥127॥ ನಾನು ಎಷ್ಟೇ ಪ್ರಯತ್ನಪಟ್ಟರೂ 'ನನ್ನದು' ಎಂಬ ಅಹಂಭಾವವನ್ನು ನಾಶಮಾಡಲು ಸಾಧ್ಯವಾಗುತ್ತಿಲ್ಲ. 'ನಾನು ಯಾರು?' ಎಂಬುದನ್ನು ನಾನು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಸಾಯಿಯೇ ತಮ್ಮ ಕತೆಗಳನ್ನು ಹೇಳಲಿ. 128 ಅವರೇ ಮಾನವ ಜನ್ಮದ ಮಹತ್ವವನ್ನು ಹೇಳುತ್ತಾರೆ. ಅವರು ಏಕೆ ಭಿಕ್ಷೆ ಬೇಡುತ್ತಿದ್ದರು, ಬಾಯಜಾ ಬಾಯಿಯ ಭಕ್ತಿ ಮತ್ತು ಊಟಮಾಡುವಾಗ ಅವರ ಮನಃಸ್ಥಿತಿ ಯಾವರೀತಿ ಇತ್ತು ಎಂಬುದನ್ನು ಅವರೇ ತಿಳಿಸುವರು. ॥129॥ ಮತ್ತೆ ಸಹ ಬಾಬಾರವರು ಮಸೀದಿಯಲ್ಲಿ ಮ್ಹಾಳಸಾಪತಿ ಮತ್ತು ತಾತ್ಯಾ ಗಣಪತಿ ಕೋತೆಯವರೊಡನೆ ಹೇಗೆ ಮಲಗುತ್ತಿದ್ದರು - ಅದನ್ನು ಕೇಳಿರಿ. 130 ಹೇಮಾದಪಂತನು ಸಾಯಿಗೆ ಶರಣಾಗಿದ್ದಾನೆ. ತಾನೊಬ್ಬ ಕ್ಚುಲ್ಲಕ ಭಕ್ತ, ಅವರ ಚರಣ ಪಾದುಕೆಗಳಂತೆ ವಿನೀತ. ಅವನು ಸಾಯಿಯ ಆದೇಶಗಳನ್ನು ವಿಧೇಯಪೂರ್ವಕವಾಗಿ ಪಾಲಿಸುವವನು ಮತ್ತು ಇಲ್ಲಿಯವರೆಗಿನ ಕಥಾನಕವನ್ನು ಪೂರ್ಣಗೊಳಿಸಿರುತ್ತಾನೆ. ॥131


ಎಲ್ಲರಿಗೂ ಶುಭವಾಗಲಿ.


ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ಎವಿದ ಕಥೆಗಳ ನಿರೂಪಣೆ" ಎಂಬ ಏಳನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.


ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.


।ಸನ್ಮಂಗಳವಾಗಲಿ।


Friday, March 19, 2021

06 ರಾಮಜನ್ಮ ದಿನಾಚರಣೆಯ ನಿರೂಪಣೆ / Ram Navami Festival & Repairs to the Masjid

   ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

"ರಾಮಜನ್ಮ ದಿನಾಚರಣೆಯ ನಿರೂಪಣೆ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.



ಲೌಕಿಕ ಜೀವನವಾಗಲಿ, ಅಧ್ಯಾತ್ಮ ಜೀವನವಾಗಲಿ ಸದ್ಗುರುವೇ ನಾವೆಯ ನಾವಿಕನಾಗಿರುವಾಗ ಅವನು ಪ್ರಯಾಣಿಕರನ್ನು ನಾವೆಯಲ್ಲಿ ಇನ್ನೊಂದು ತೀರದವರೆಗೆ ದಾಟಿಸುವನು. ॥1॥

ಸದ್ಗುರುವೆಂಬ ಹೆಸರೇ ಸಾಯಿಯು ನನ್ನ ಮುಂದೆ ನಿಂತು ತನ್ನ ಹಸ್ತವನ್ನು ನನ್ನ ತಲೆಯ ಮೇಲಿಟ್ಟು ಆಶೀರ್ವದಿಸುವುದನ್ನು ಕಣ್ಣಮುಂದೆ ತರುತ್ತದೆ. ॥2॥

ಅವರ ವರದ ಹಸ್ತದಿಂದ ಧುನಿಯಿಂದ ತಂದ ಉದೀ(ವಿಭೂತಿ)ಯು ನನ್ನ ಶಿರವನ್ನು ತಾಗುತ್ತಲೇ ನನ್ನ ಹೃದಯ, ಅಂತರಂಗದ ಸಂತಸದಿಂದ ಉಕ್ಕುತ್ತದೆ ಹಾಗೂ ನನ್ನ ಕಣ್ಣುಗಳು ಪ್ರೀತಿಯಿಂದ ಅರಳುತ್ತವೆ. ॥3॥

ಗುರುವಿನ ಹಸ್ತದ ಸ್ಪರ್ಶವು ದಿವ್ಯಾನುಭವ. ನನ್ನ ಸೂಕ್ಷ್ಮಶರೀರವನ್ನು ಅಳಿಸುವ ಶಕ್ತಿ ಆ ಕೈಗಳಿಗಿದೆ. ಇಲ್ಲದಿದ್ದಲ್ಲಿ ಇಡೀ ಪ್ರಪಂಚವೇ ಕರಗಿಹೋದರೂ ಈ ಸೂಕ್ಷ್ಮ ಶರೀರವನ್ನು ಅಳಿಸಲಾಗದು. ॥4॥

ಭಗವಂತನ ನಾಮ ಅಥವಾ ಚರಿತ್ರೆಗಳನ್ನು ಅಕಸ್ಮಾತ್ತಾಗಿ ಶ್ರವಣ ಮಾಡಿದಾಗ ಉಂಟಾಗುವ ಮನಸ್ಸಿನ ಉದ್ವೇಗವು ಅಶಾಂತಿಗೊಂಡ ಮನಸ್ಸುಗಳನ್ನೂ ಸಾಂತ್ವನಗೊಳಿಸುತ್ತದೆ. ॥5॥

ಅವನ ಹಸ್ತ ಕಮಲಗಳನ್ನು ತುಲೆಯ ಮೇಲಿಟ್ಟ ಕೂಡಲೇ, ಪೂರ್ವಜನ್ಮಗಳ ಅನೇಕ ಸಂಚಿತಕರ್ಮಗಳು ತೊಳೆದುಹೋಗುತ್ತವೆ. ಸಾಯಿಯ ಪ್ರೀತಿಯ ಭಕ್ತರು ಪರಿಶುದ್ಧರಾಗುತ್ತಾರೆ. ॥6॥

ಈ ದೃಶ್ಯಾವಳಿಗಳನ್ನು ನೋಡಿದ ಕೂಡಲೇ ನಿಮಲಿ ಬಹಾನಂದ ಉಕ್ಕುತ್ತದೆ. ಆನಂದ ಭಾಷ್ಪಗಳು ಉದುರುತ್ತವೆ ಮತ್ತು ಹೃದಯವು ಶ್ರದ್ಧಾಯುಕ್ತ ಸಾತ್ವಿಕ ಭಾವದಿಂದ ವಿಕಸಿಸುತ್ತದೆ. ॥7॥

ಅವನು ಸಮತ್ವ ಭಾವವನ್ನು ಎಚ್ಚರಿಸುತ್ತಾನೆ. ಆಗ ಆತ್ಮಾನಂದವು ತಾನೇ ಪ್ರಕಟವಾಗುತ್ತದೆ ಮತ್ತು ದ್ವೈತ ಭಾವವನ್ನು ಅಳಿಸಿಹಾಕುತ್ತದೆ. ಏಕೆಂದರೆ ಪರಮಾತ್ಮನೊಡನೆ ಐಕ್ಯಹೊಂದಿದ ಭಾವ ಸಮತ್ವಭಾವವನ್ನು ಸಮನಾಗಿ ಹರಡುತ್ತದೆ. ॥8॥

ಪವ್ರಿತ್ರಂಥಗಳನ್ನು ಮತ್ತು ಪುರಾಣಗಳನ್ನು ಓದಲು ಪ್ರಾರಂಭಿಸಿದಾಗ ಸದ್ಗುರುವು ಅವನ ಮನಸ್ಸಿನಲ್ಲಿ ಹೆಜ್ಜೆ ಹೆಜ್ಜೆಗೂ ಬರುತ್ತಾನೆ. ಸಾಯಿಯೇ ರಾಮ ಮತ್ತು ಕೃಷ್ಣ ಮತ್ತು ತನ್ನ ಆತ್ಮಚರಿತ್ರೆಯನ್ನು ನಾವು ಕೇಳುವಂತೆ ಮಾಡುತ್ತಾನೆ. ॥9॥

ಭಾಗವತ ಪುರಾಣವನ್ನು ಆಲಿಸುವಾಗ ಶ್ರೀಕೃಷ್ಣನು ತಾನೇ ಸಾಯಿಸ್ವರೂಪನಾಗಿ ಉದ್ಧವನ ಗೀತೆಗಳನ್ನು ಹಾಡುತ್ತಾ ಭಕ್ತರಿಗೆ ಮಂಗಳವನ್ನುಂಟುಮಾಡುತ್ತಾನೆ. ॥10॥

ಸಾಮಾನ್ಯ ಸಂಭಾಷಣೆಯಲ್ಲಿಯೂ ಅನಿರೀಕ್ಷಿತವಾಗಿ ಸಾಯಿಯ ಜೀವನದ ಘಟನೆಗಳನ್ನೂ, ಕಥೆಗಳನ್ನೂ ಒಂದು ವಿಷಯವನ್ನು ದೃಢೀಕರಿಸಲು ನೆನಪಿಸಿಕೊಳ್ಳಲಾಗುತ್ತದೆ. ॥11॥

ಬರೆಯುವ ಉದ್ದೇಶದಿಂದ ಕೈಯಲ್ಲಿ ಕಾಗದ ಮತ್ತು ಲೇಖನಿ ಹಿಡಿದಲ್ಲಿ ಪದಗಳು ತೊದಲುತ್ತವೆ. ಆದರೆ ಅವನೇ ಬರೆಯಲು ಆಜ್ಞಾಪಿಸಿದಾಗ ಪದಗಳ ಜೋಡಣೆಯ ಜೊತೆಗೆ ಪೂರೈಸಲು ಸುಲಭವಾಗುತ್ತದೆ. ॥12॥

ಅಹಂಭಾವವು ತಲೆ ಎತ್ತಿದ ಕೂಡಲೇ ಅವನು ಅದನ್ನು ತಗ್ಗಿಸುತ್ತಾನೆ ಮತ್ತು ಉತ್ತಮ ಚೇತನದ ಅರಿವನ್ನು ಸೃಷ್ಟಿಸಿ ಶಿಷ್ಯನಲ್ಲಿ ಒಂದು ತೃಪ್ತಿಭಾವವನ್ನು ಉಂಟುಮಾಡುತ್ತಾನೆ. ॥13॥

ಅತಿತಕ್ತಿವಂತ ಸಾಯಿಗೆ ತರಣಾಗುವಾಗ ದೇಹ, ಆತ್ಮ ಸದ್ಗುಣ, ಆಸ್ತಿ ಪ್ರೀತಿ ಮತ್ತು ಅನುಗ್ರಹಗಳನ್ನು ಶ್ರಮ ಪಡದೆಯೇ, ಕೇಳದೆಯೇ ಅನುಭವಿಸಬಹುದು. ॥14॥

ನಾಲ್ಕು ವಿವಿಧ ಮಾರ್ಗಗಳಾದ ಕರ್ಮ, ಜ್ಞಾನ, ಯೋಗ ಮತ್ತು ಭಕ್ತಿ ಇವುಗಳು ಪ್ರತ್ಯೇಕವೆಂದು ಕಂಡರೂ ಎಲ್ಲದರ ಗುರಿಯೂ ಒಂದೇ ಆಗಿರುತ್ತದೆ. ॥15॥

ಭಕ್ತಿಮಾರ್ಗವು ಮುಳ್ಳಿನ ಬಾಬುಲ್‌, ಕಾಡಿನಲ್ಲಿನ ರಸ್ತೆಯ ತರಹ. ಅದರ ತುಂಬ ಹಳ್ಳ ಕೊಳ್ಳಗಳು ಇವೆ. ಒಂದೆರಡು ಹೆಜ್ಜೆಗಳನ್ನು ಸರಿಯಾದ ದಿಕ್ಕಿನಲ್ಲಿಟ್ಟರೆ ನಿಜವಾಗಿಯೂ ಪರಮಾತ್ಮನೆಡೆಗೆ ಕರೆದೊಯ್ಯುತ್ತದೆ. ॥16॥

ಮುಳ್ಳುಗಳನ್ನು ದಾಟಿ ಮುಂದಕ್ಕೆ ಹೆಜ್ಜೆ ಇಡಬೇಕು. ಆಗ ನಿರ್ಭಯವಾಗಿ ಗುರಿ ತಲಪಬಹುದು ಎಂದು ಗುರುಮಾಯಿಯವರು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ॥17॥

ಮನೋ ಉದ್ಯಾನವನ್ನು ಭಕ್ತಿಯಿಂದ ನೀರೆರೆದಾಗ ವೈರಾಗ್ಯ ವೃದ್ಧಿಯಾಗುತ್ತದೆ. ಜ್ಞಾನವು ಅರಳುತ್ತದೆ. ಪರಮಾತ್ಮನೊಡನೆ ಐಕ್ಯ ಫಲಿತವಾಗುತ್ತದೆ ಮತ್ತು ಪರಮಾನಂದ ಉಕ್ಕಿ ಬರುತ್ತದೆ. ಖಂಡಿತವಾಗಿ ಜನನ ಮರಣಗಳೆಂಬ ಚಕ್ರದಿಂದ ತಪ್ಪಿಸಿಕೊಳ್ಳಬಹುದು. ॥18॥

ಸನಾತನ ಪರಮಾತ್ಮನು ಸತ್‌ಸ್ವರೂಪನು. ಅದೇ ಮೂರು ವಿಧದ ಅನುಭವವಾದ ಸತ್‌, ಚಿತ್‌ ಮತ್ತು ಆನಂದ. ಅದು ದೃಷ್ಟಿ ಚಿತ್ರಣಕ್ಕೆ ಪರಿಪೂರ್ಣ ತ್ಯಾಗದಂತೆ ಕಂಡರೂ ನಿಜವಾಗಿಯೂ ಭಕ್ತರಿಗಾಗಿ ಪ್ರಕಟಗೊಳ್ಳುತ್ತದೆ. ॥19॥

ಬ್ರಹ್ಮನು ಮೂರು ಗುಣಗಳ ಮೂಲಕ ಪ್ರಕಟವಾದಾಗ ಮಾಯೆಯು ಚಲನಶೀಲಳಾಗಿ ಆಡುತ್ತಾಳೆ. ಸತ್ವ, ರಜಸ್‌, ತಮಸ್ಸು ಇವುಗಳು ಅವಳ ಗುಣಗಳು. ॥20॥

ಜೇಡಿ ಮಣ್ಣಿಗೆ ಒಂದು ರೂಪವನ್ನು ಕೊಟ್ಟಾಗ ಮಡಕೆ ಎಂದು ಸರಿಯಾಗಿ ನಾಮಕರಣ ಮಾಡಲಾಗುತ್ತದೆ. ಆದರೆ ಮಡಕೆ ಒಡೆದಾಗ ಅದರ ಸ್ವಭಾವ, ರೂಪ ಮತ್ತು ಗುರುತನ್ನು ಕಳೆದುಕೊಳ್ಳುತ್ತದೆ. ॥21॥

ಇಡೀ ಜಗತ್ತೇ ಮಾಯೆಯಿಂದ ಜನಿಸುತ್ತದೆ ಮತ್ತು ಅವೆರಡೂ ಕಾರಣ ಮತ್ತು ಪರಿಣಾಮ ಪರಸ್ಪರವಾಗಿವೆ. ಈ ರೀತಿ ಮಾಯೆಯು ವಿಶ್ವದ ವಿವಿಧ ಅಂಗಾಂಗಗಳಂತೆ ರೂಪುಗೊಳ್ಳುತ್ತಾಳೆ. ॥22॥

ಮಾಯೆಯ ಸ್ಚಭಾವವನ್ನು ನೋಡಿದಲ್ಲಿ, ಈ ಜಗತ್ತಿನ ಅಸ್ತಿತ್ವಕ್ಕೆಮೊದಲು ಯಾವುದೂ ಸಹಜವಾಗಿ ಕಾಣುವುದಿಲ್ಲ. ಅವಳು ಪರಮಾತ್ಮನಲ್ಲಿ ಲೀನವಾಗಿದ್ದು ಅವಳು ಅವ್ಯಕ್ತವಾಗಿಯೇ ಇದ್ದಾಳೆ. ॥23॥

ಅವಳು ವ್ಯಕ್ತವಾದರೂ ಪರಮಾತ್ಮ ಸ್ವರೂಪವೇ. ಅವಳು ಅವ್ಯಕ್ತವಾದರೂ ಪರಮಾತ್ಮ ಸ್ಪರೂಪವೇ. ಈ ರೀತಿ ಮಾಯೆಯು ಪರಮಾತ್ಮ ಸ್ವರೂಪಳೇ ಆಗಿರುವಾಗ ಪರಮಾತ್ಮನಿಂದ ಬೇರ್ಪಡಿಸಲು

ಸಾಧ್ಯವಿಲ್ಲ. ॥24॥

ಪ್ರಾರಂಭದಲ್ಲಿ ಮಾಯೆಯು ತಮೋಗುಣದಿಂದ ಜಡ ಪದಾರ್ಥಗಳನ್ನು ನಿರ್ಜೀವವಾದ ಚಲನವಲನವಿಲ್ಲದ ವಸ್ತುಗಳನ್ನು ಸೃಷ್ಟಿಸಿ ಪ್ರಥಮ ಭಾಗವನ್ನು ಪೂರ್ಣಗೊಳಿಸಿದಳು. ॥25॥

ಅನಂತರ ಪರಮಾತ್ಮನು ಮಾಯೆಯ ರಜೋಗುಣ ಸ್ವರೂಪನಾಗಿ ಅವಶ್ಯವಾದ ಕ್ರಿಯೆಗಳನ್ನು ಗ್ರಹಿಸಿ ಎರಡೂ ಗುಣಗಳಿಂದ ರೂಪುಗೊಂಡನು. ॥26॥

ಅನ೦ತರ ಮಾಯೆಯ ಸತ್ವಗುಣದಿಂದ ಬುದ್ಧಿಯು ಜನಿಸಿತು. ಅದು ಪರಮಾತ್ಮನ ದಿವ್ಯಾನಂದ ಗುಣದೊಡನೆ ಮಿಲಿತವಾಗಿ ಸೃಷ್ಟಿಯ ಸಂಪೂರ್ಣ ಕ್ರಿಯೆಯನ್ನು ಪೂರ್ಣಗೊಳಿಸಿತು. ॥27॥

ಈ ರೀತಿ ಮಾಯೆಯು ಮಹಾಪರಿವರ್ತನೆಗೊಳಗಾಗಿ ಮೇಲೆ ಹೇಳಿದ ವಸ್ತುಗಳನ್ನು ಕ್ರಿಯಾತ್ಮಕ ಶಕ್ತಿ ಪ್ರೇರೇಪಿಸುವವರೆಗೆ ಸೃಷ್ಟಿಸುವುದಿಲ್ಲ. ಅಲ್ಲಿಯವರೆಗೆ ಮೂರು ಗುಣಗಳೂ ಅವ್ಯಕ್ತವಾಗಿಯೇ ಉಳಿಯುತ್ತವೆ. ॥28॥

ಈ ಮೂರು ಗುಣಗಳು ಕ್ರಿಯಾತ್ಮಕವಾಗುವವರೆಗೆ ಮಾಯೆಯು ವ್ಯಕ್ತವಾಗುವುದಿಲ್ಲ. ಅವಳು ಅವ್ಯಕ್ತಳಾಗಿಯೇ ಅಸ್ತಿತ್ವದಲ್ಲಿರಬಲ್ಲಳು ಮತ್ತು ನಿಷ್ಕ್ರಿಯತೆಯನ್ನು ಅಭ್ಯಸಿಸಬಲ್ಲಳು. ॥29॥

ಮಾಯೆಯು ಪರಮಾತ್ಮನ ಸೃಷ್ಟಿ. ಜಗತ್ತು ಮಾಯೆಯ ಸೃಷ್ಟಿ. ಸರ್ವಂ ಬ್ರಹ್ಮಮಯಂ ಅಂದರೆ ಈ ಜಗತ್ತು, ಮಾಯೆ ಮತ್ತು ಪರಬ್ರಹ್ಮ ಎಲ್ಲವೂ ಒಂದೇ. ॥30॥

ಈ ಅದ್ವೈತಭಾವವನ್ನು ಅರಿಯುವ ತೀವ್ರ ಇಚ್ಛೆಯುಳ್ಳವರು ವೇದಗಳನ್ನು ಮತ್ತು ಶಾಸ್ತ್ರಗಳನ್ನು ಪರಿಶೀಲಿಸಬಹುದು. ॥31॥

ವೇದಗಳು, ಶಾಸ್ತ್ರಗಳು, ಶ್ರುತಿಗಳು, ಸ್ಮೃತಿಗಳು, ಗುರುಗಳು ಮತ್ತು ಗ್ರಂಥಗಳು ಜ್ಞಾನವನ್ನು ನೀಡಿ ವೇದಾಂತ ತತ್ವವನ್ನೂ ಪರಮಾನ೦ದವನ್ನೂ ಕೊಡುತ್ತವೆ. ॥32॥

"ನನ್ನ ಭಕ್ತರ ಮನೆಗಳಲ್ಲಿ ಆಹಾರಕ್ಕೆ ಮತ್ತು ವಸ್ತ್ರಕ್ಕೆ ಯಾವ ಕೊರತೆಯೂ ಉಂಟಾಗುವುದಿಲ್ಲ". ಇದು ಶ್ರೀ ಸಾಯಿಯವರು ನೀಡಿರುವ ಅಭಯ ವಚನ ಮತ್ತು ಭಕ್ತರೆಲ್ಲರಿಗೂ ತಿಳಿದ ವಿಷಯ. ॥33॥

"ಯಾರು ನನ್ನನ್ನು ಮನಃಪೂರ್ವಕವಾಗಿ ಆರಾಧಿಸುತ್ತಾರೋ ಮತ್ತು ಸದಾ ಪ್ರೀತಿಯಿಂದ ಸೇವೆ ಸಲ್ಲಿಸುತ್ತಾರೋ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ. ಆದೇ ನನ್ನ ಧ್ಯೇಯವಾಕ್ಯ". ॥34॥

ಇದು ಭಗವದ್ಗೀತೆಯ ಪ್ರಮಾಣ ವಚನವು ಹೌದು. ಸಾಯಿ ಇದನ್ನು ಸರ್ವಮಾನ್ಯ ಸತ್ಯವೆಂದು ಸ್ವೀಕರಿಸಲು ತಿಳಿಸಿದ್ದಾರೆ. "ಆಹಾರ ಮತ್ತು ವಸ್ತ್ರದ ಕೊರತೆ ಎಂದಿಗೂ ಇರುವುದಿಲ್ಲ. ಆದ್ದರಿಂದ ಎಂದಿಗೂ ಅವುಗಳ ಮೇಲೆ ತೀವ್ರವಾದ ಆಸೆಬೇಡ. ॥35॥

"ಪ್ರತಿಯೊಬ್ಬರೂ ಪರಮಾತ್ಮನ ಬಾಗಿಲಿಗೆ ಮಾತ್ರ ಹೋಗಬೇಕು ಮತ್ತು ಕೇವಲ ದೇವರನ್ನು ಬೇಡಬೇಕು. ಅವನ ಪ್ರಸಾದ(ಆಶೀರ್ವಾದ)ವನ್ನು ಮಾತ್ರ ಬೇಡಬೇಕು. ಲೌಕಿಕ ಭಾವವನ್ನು ಪಕ್ಕಕ್ಕಿರಿಸಬೇಕು. ॥36॥

"ಸಮಾಜವು ಕೊಡುವ ಗೌರವದಿಂದ ಏಕೆ ತೃಪ್ತನಾಗುವೆ? ಮತ್ತು ಅದಕ್ಕಾಗಿ ಏಕೆ ಮೋಹಪರವತಶನಾಗಿರುವೆ? ಅದರ ಬದಲು ತೀವ್ರವಾದ ಭಕ್ತಿಯಿಂದ ನಿನ್ನ ಇಷ್ಟದೈವದ ಕರುಣೆಯನ್ನೂ, ಸಾತ್ವಿಕಭಾವದಿಂದ ಉಕ್ಕುವ ಆನಂದವನ್ನೂ ಪ್ರಕಟಿಸುವಂತೆ ಬೇಡು. ॥37॥

"ಅ೦ತಹ ತೀವ್ರ ಬಯಕೆಯಲ್ಲಿ ನಿನಗೆ ಸಂತಸವಾಗಲಿ, ನಿನ್ನ ಎಲ್ಲಾ ಇಂದ್ರಿಯಗಳೂ ಅಂತಹ ಭಕ್ತಿಯ ಉನ್ಮತ್ತತೆಯಿಂದ ಸ್ತಬ್ಧಗೊಳ್ಳಲಿ. ವಿಷಯವಾಸನೆಗಳು ಷೂರ್ಣವಾಗಿ ಪರಿವರ್ತಿತವಾಗಿ ಭಕ್ತಿಯ ಆರಾಧನೆ ಮೊಳಗಲಿ, ಮತ್ತೆ ಯಾವ ಅಸೆ ನಿನ್ನಲ್ಲಿ ಉಳಿಯುತ್ತದೆ? ॥38॥

"ಅ೦ತಹ ಭಕ್ತಿ ನಿನ್ನಲ್ಲಿ ಸದಾ ಆವರಿಸಿ ಬೇರೆ ಯಾವುದರಿಂದಲೂ ಸುಖ ಪಡೆಯದಂತೆ ಆಗಲಿ. ನಿನ್ನ ಮನಸ್ಸು ಸದಾ ನನ್ನ ನಾಮಸ್ಮರಣೆ ಮಾಡುತ್ತಿರಲಿ ಮತ್ತು ಬೇರೆ ಎಲ್ಲವನ್ನೂ ಮರೆಯುವಂತಾಗಲಿ. ॥39॥

"ಆಗ ನಿನ್ನ ದೇಹ, ಮನೆ, ಆಸ್ತಿ ಇವುಗಳ ಯೋಚನೆ ಇರುವುದಿಲ್ಲ. ನಿನ್ನ ಚಿತ್ತವು ಪರಮಾನಂದದಲ್ಲಿಯೇ ನೆಲೆಯಾಗುತ್ತದೆ. ಮನಸ್ಸು ಸಮದರ್ಶಿಯಾಗಿಯೂ ಪ್ರಶಾಂತವಾಗಿಯೂ ಇರುತ್ತದೆ. ಆಗ ನಿಶ್ಚಯವಾಗಿಯೂ ಪರಿಷೂರ್ಣವಾಗುತ್ತದೆ". ॥40॥

ಪ್ರಶಾಂತವಾದ ಮನಸ್ಸು ಸತ್ಸಂಗದ ಕುರುಹು. ಅಲೆದಾಡುವ ಮನಸ್ಸನ್ನು ಪರಮಾತ್ಮನಲ್ಲಿ ಶರಣಾಗಿಸುವುದು ಹೇಗೆ? ॥41॥

ಆದುದರಿಂದ ಶ್ರೋತೃಗಳೇ, ಪೂರ್ಣ ಸಾವಧಾನ ಚಿತ್ತರಾಗಿ ಶ್ರದ್ಧೆಯಿಂದ ಈ ವಿವರಣೆಯನ್ನು ಕೇಳಿರಿ. ಸಾಯಿ ಸಚ್ಚರಿತೆಯನ್ನು ಕೇಳುವುದರಿಂದ ನಿಮ್ಮ ಮನಸ್ಸು ಭಕ್ತಿಭಾವದಿಂದ ತು೦ಬಲಿ॥42॥

ಕಥಾಸಂಗತಿಯ ಜೊತೆಯಲ್ಲಿ ನೀವು ಪ್ರಶಾಂತತೆಯನ್ನು ಅನುಭವಿಸುವಿರಿ. ನಿಮ್ಮ ಚಂಚಲ ಮನಸ್ಸು ಶಾಂತವಾಗುತ್ತದೆ. ಮನದ ಆಂದೋಲನ ಮಾಯವಾಗಿ ನೀವು ಸುಖಶಾಂತಿಯನ್ನು ಪಡೆಯುವಿರಿ. ॥43॥

ಈಗ, ನಾವು ಹಿಂದಿನ ಕತೆಯ ಅನುಸಂಧಾನ ಮಾಡೋಣ. ಮಸೀದಿಯನ್ನು ಪುನರ್ನಿರ್ಮಾಣವಾಡಿ ರಾಮನ ಜನ್ಮದಿನದ ಅಂಗವಾಗಿ ಸಂಕೀರ್ತನ ಮಾಡಿದ ಬಗ್ಗೆ ನಿರೂಪಣೆಯನ್ನು ಮುಂದುವರೆಸೋಣ. ॥44॥

ಗೋಪಾಲಗುಂಡ ಎಂಬ ಭಕ್ತನೊಬ್ಬನಿದ್ದನು. ಅವನಿಗೆ ಬಾಬಾರವರ ಮೇಲೆ ಅತ್ಯಂತ ಭಕ್ತಿ. ಅವನು ತನ್ನ ಸಮಯವನ್ನೆಲ್ಲ ನಿರಂತರವಾಗಿ ಬಾಬಾರವರ ನಾಮಸ್ಕರಣೆಯಲ್ಲೇ ಕಳೆಯುತ್ತಿದ್ದನು. ॥45॥

ಅವನಿಗೆ ಸಂತಾನವಿರಲಿಲ್ಲ. ಅನಂತರ ಸಾಯಿಯ ಆಶೀರ್ವಾದದಿಂದ ಒಬ್ಬ ಪುತ್ರನನ್ನು ಪಡೆದನು. ಅವನ ಮನಸ್ಸು ಅತ್ಯಂತ ಪ್ರಸನ್ನವಾಗಿತ್ತು. ॥46॥

ಅದರಿಂದಾಗಿ ಗೋಪಾಲಗುಂಡ ಒಂದು ಯಾತ್ರೆ (ಮೆರವಣಿಗೆ) ಮಾಡಲು ಯೋಚಿಸಿದನು. ವರ್ಷಕ್ಕೊಮ್ಮೆ ಶಿರಡಿ ಗ್ರಾಮದಲ್ಲಿ ಉರುಸ್‌ ನಡೆಸಲು ನಿಶ್ಚಯಿಸಿದನು. ಪ್ರತಿಯೊಬ್ಬರೂ ಆನಂದಪಟ್ಟರು. ॥47॥

ತಾತ್ಕಾಕೋತೆ, ದಾದಾಕೋತೆ, ಮಾಧವರಾವ್‌ ಮತ್ತು ಇತರ ಪ್ರಮುಖ ಭಕ್ತರು ಈ ಸಲಹೆಯನ್ನು ಒಪ್ಪಿದರು ಮತ್ತು ಅದಕ್ಕಾಗಿ ಎಲ್ಲಾ ತಯಾರಿ ನಡೆಸಲು ಆರಂಭಿಸಿದರು. ॥48॥

ಆದರೆ ಅಂತಹ ವಾರ್ಷಿಕ ಸಮಾರಂಭಗಳಿಗೆ ಕೆಲವು ನಿಯಮಾವಳಿಗಳಿದ್ದವು. ಜಿಲ್ಲಾಧಿಕಾರಿಯವರಿಂದ ಅನುಮೋದನೆ ಅತ್ಯವಶ್ಯಕವಾಗಿತ್ತು. ॥49॥

ಅಂತಹ ಒಪ್ಪಿಗೆಪತ್ರ ಪಡೆಯಲು ಪ್ರಯತ್ನಿಸಿದಾಗ ಅಲ್ಲೊಬ್ಬ ಹಳ್ಳಿಯವ, ಕುಲಕರ್ಣಿ ಎಂಬ ವಕ್ರಬುದ್ಧಿಯವ ಇದಕ್ಕೆ ವಿರುದ್ಧವಾಗಿ ಅನೇಕ ಅಡಚಣೆಗಳನ್ನು ಉ೦ಟುಮಾಡಿನನು. ॥50॥

ಕುಲಕರ್ಣಿಯು ಅಡ್ಡಿಪಡಿಸಿದಾಗ ಅದರ ಪರಿಣಾಮ ಏನಾಯಿತೆಂದು ನೋಡಿ. ಜಿಲಾಧಿಕಾರಿಯು ಶಿರಡಿಯಲ್ಲಿ ಯಾತ್ರೆಯು (ಮೆರವಣಿಗೆಯು) ನಡೆಯಬಾರದೆಂದು ಆದೇಶ ನೀಡಿದನು. ॥51॥ ಆದರೆ ಶಿರಡಿಯಲ್ಲಿ ಈ ಯಾತ್ರೆ ನಡೆಸುವುದು ಬಾಬಾರವರ ಇಚ್ಛೆಯೂ ಆಗಿತ್ತು. ಅವರು ತಮ್ಮ ಅನುಗ್ರಹದೊಂದಿಗೆ ಅದನ್ನು ನೆರವೇರಿಸಲು ಆದೇಶ ನೀಡಿದರು. ॥52॥

ಹಳ್ಳಿಯವರು ಪಟ್ಟು ಹಿಡಿದು ತಮ್ಮ ಅವಿರತ ಪ್ರಯತ್ನ ಮಾಡಿದರು. ಆಗ ಅಧಿಕಾರಿಗಳು ಹಿಂದಿನ ಆದೇಶವನ್ನು ಮಾರ್ಪಡಿಸಿ ಜನರ ಅಭೀಷ್ಟವನ್ನು ನೆರವೇರಿಸಿದರು. ॥53॥

ಅಲ್ಲಿಂದೀಚೆಗೆ ಬಾಬಾರವರ ಇಚ್ಛಾನುಸಾರ ಮೆರವಣಿಗೆಯು ರಾಮನವಮಿಯಂದು ನಡೆಸಲ್ಪಡುತ್ತದೆ. ತಾತ್ಕಾಕೋತೆ ಅದರ ತಯಾರಿಯನ್ನು ನೋಡಿಕೊಳ್ಳುತ್ತಿದ್ದನು. ಜನಸಮುದಾಯ ಅಲ್ಲಿ ಸೇರುತ್ತಿತ್ತು. ॥54॥

ರಾಮನವಮಿಯ ದಿನದಂದು ಭಕ್ತಿಗೀತೆಗಳ ಭಜನೆ ಮತ್ತು ಪೂಜೆ ತಾಳವಾದ್ಯಗಳ ಸಮೇತ ನಡೆಯುತ್ತಿತ್ತು. ಜನರು ನಾಲ್ಕೂ ದಿಕ್ಕುಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ॥55॥ ಪ್ರತಿವರ್ಷ ಎರಡು ಹೊಸ ಬಾವುಟಗಳನ್ನು ವಿಧಿವತ್ತಾಗಿ ಮೆರವಣಿಗೆಯಲ್ಲಿ ತೆಗೆದುಕೊಂಡುಹೋಗಿ ಮಸೀದಿಯ ಗೋಪುರಕ್ಕೆ ಕಟ್ಟಿ ಅಲ್ಲಿಯೇ ಶಾಶ್ವತವಾಗಿ ನಿಲ್ಲಿಸುತ್ತಿದ್ದರು. ॥56॥

ಎರಡರಲ್ಲಿ ಒಂದು ನಿಮೋಣಕರ್‌ನದ್ದು ಮತ್ತು ಇನ್ನೊಂದು ದಾಮು ಅಣ್ಣನದ್ದು ಅವುಗಳನ್ನು ಅದ್ಧೂರಿಯಿಂದ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಗೋಪುರದ ತುದಿಯಲ್ಲಿ ಅತಿ ಎತ್ತರಕ್ಕೆ ಹಾರಿಸುತ್ತಿದ್ದರು. ॥57॥

ಈಗ ಅತಿ ವಿಶೇಷವಾಗಿ ಉರುಸ್‌ನಿಂದ ರಾಮನವಮಿಯ ಆಚರಣೆಯು ಹೇಗೆ ಪ್ರಾರಂಭವಾಯಿತು ಎ೦ಬ ಗಮನ ಸೆಳೆಯುವ ವಿಷಯವನ್ನು ಕೇಳಿರಿ. ಶಿರಡಿಗೆ ಜಯವಾಗಲಿ, ಆನಂದವಾಗಲಿ. ॥58॥

ಉರುಸ್‌ನಿಂದ ಪ್ರಾರಂಭವಾದ ರಾಮನವಮಿಯನ್ನು ಪ್ರಥಮವಾಗಿ ಶಕೆ 1833ರಲ್ಲಿ ಆಚರಿಸಲಾಯಿತು. ತದನ೦ತರ ನಿರಂತರವಾಗಿ ಈಗಲೂ ಆಚರಿಸಲಾಗುತ್ತಿದೆ. ॥59॥

ಪ್ರಖ್ಯಾತರಾದ ಕೃಷ್ಣ ಜೋಗೇಶ್ಚರ ಭೀಷ್ಮನು ರಾಮನ ಜನ್ಮದಿನವನ್ನು ಆಚರಿಸಬೇಕೆನ್ನುವ ಸೂಚನೆಯನ್ನು ಪ್ರಪ್ರಥಮವಾಗಿ ಕಲ್ಪಿಸಿದನು. ಅದರಿಂದ ಜನರಿಗೆಲ್ಲ ಪರಮಕಲ್ಯಾಣವಾಗುತ್ತದೆಂಬುದು ಅವನ ಯೋಚನೆಯಾಗಿತ್ತು. ॥60॥

ಅಲ್ಲಿಯವರೆಗೆ ಕೇವಲ ಉರುಸ್‌ನಲ್ಲಿ ಮಾತ್ರ ಜನರು ಭಾಗವಹಿಸುತ್ತಿದ್ದರು. ಆ ಸಂವತ್ಸರದಿಂದ ರಾಮನು ಜನ್ಮ ತಾಳಿದ ದಿನದ ಸುಂದರವಾದ ಹಬ್ಬವು ಪ್ರಾರಂಭವಾಯಿತು. ॥61॥

ಒಮ್ಮೆ, ಭೀಷ್ಮನು ವಾಡೆಯಲ್ಲಿ ಶಾಂತನಾಗಿ ಕುಳಿತಿದ್ದಾಗ, ಕಾಕಾನು ಪೂಜಾ ಸಾಮಾಗ್ರಿಗಳೊಡನೆ ಮಸೀದಿಗೆ ಹೊರಡಲು ಸಿದ್ಧನಾಗುತ್ತಿದ್ದನು. ॥62॥

ಅವನು (ಕಾಕಾ) ಅಂತರಂಗದಲ್ಲಿ ಸಾಯಿದರ್ಶನದ ಬಗ್ಗೆ ಯೋಚಿಸುತ್ತಿದ್ದು ಹೊರ ನೋಟಕ್ಕೆ ಉರುಸ್‌ ಬಗ್ಗೆ ಉತ್ಸಾಹಿತನಾಗಿದ್ದನು. ಕಾಕಾನು ಶಿರಡಿಗೆ ಈ ಸಮಾರಂಭಕ್ಕೆ ಒಂದು ದಿನ ಮೊದಲೇ ಬಂದಿದ್ದನು. ॥63॥

ಈ ಸದವಕಾಶವನ್ನು ಪರಿಗಣಿಸಿ ಭೀಷ್ಮನು ಕಾಕಾನನ್ನು ಕೇಳಿದನು - "ನನ್ನಲ್ಲಿ ಉದಿಸಿರುವ ಒಂದು ಒಳ್ಳೆಯ ಕಾರಣಕ್ಕಾಗಿ ಸಹಾಯ ನೀಡುವಿಯಾ? ॥64॥

"ಇಲ್ಲಿ ಪ್ರತಿ ವರುಷ ಉರುಸ್‌ನ್ನು ರಾಮ ಹುಟ್ಟಿದ ದಿನವೆಂದು ಆಚರಿಸಲಸುತ್ತದೆ. ಆದ್ದರಿಂದ ಇದು ರಾಮನ ಜನ್ಮ ದಿನವನ್ನು ಆಚರಿಸಲು ಒಂದು ಸಹಜವಾದ ಅವಕಾಶ". ॥65॥

ಕಾಕಾನಿಗೆ ಈ ಸಲಹೆ ಇಷ್ಟವಾಯಿತು. ಭೀಷ್ಮನಿಗೆ ಬಾಬಾರವರ ಒಪ್ಪಿಗೆ ಪಡೆಯಲು ಸೂಚಿಸಿದನು. ಸಾಯಿಯ ಇಚ್ಛೆಯನ್ನು ಅದು ಅವಲಂಬಿಸುತ್ತದೆ. ಆಗ ಆ ಕೆಲಸಕ್ಕೆ ಯಾವುದೇ ಅಡೆತಡೆಗಳಿರುವುದಿಲ್ಲ. ॥66॥

ಆದರೆ ಈ ಸಮಾರಂಭಕ್ಕೆ ಸಂಕೀರ್ತನೆ ಇರಬೇಕು. ಅದು ಒಂದು ಸಮಸ್ಯೆಯಾಯಿತು. ಏಕೆಂದರೆ, ಈ ಸಣ್ಣ ಹಳ್ಳಿಯಲ್ಲಿ ಒಬ್ಬ ಹರಿದಾಸನನ್ನು ಹುಡುಕುವುದು ಹೇಗೆ? ಇದೇ ಒಂದು ಪ್ರಶ್ನೆಯಾಯಿತು. ॥67॥

ಭೀಷ್ಮನು ಹೇಳಿದನು, "ನಾನೇ ಕೀರ್ತನಕಾರನಾಗುತ್ತೇನೆ. ನೀವು ಹಾರ್ಮೋನಿಯಂ ಬಾರಿಸಿರಿ ಮತ್ತು ರಾಧಾಕೃಷ್ಣಮಾಯಿಯು ಸಮಯಕ್ಕೆ ಸರಿಯಾಗಿ ಶುಂಠಿವಾಡಾವನ್ನು ತಯಾರಿಸಿಕೊಡುತ್ತಾಳೆ. ॥68॥

"ಬನ್ನಿ; ಬಾಬಾರವರಲ್ಲಿಗೆ ಹೋಗೋಣ. ಶುಭ ಕೆಲಸಕ್ಕೆ ವಿಳಂಬಮಾಡಿದಲ್ಲಿ ಅಡಚಣೆಗಳು ಉಂಟಾಗುತ್ತವೆ. ನಿಸ್ಪೃಹತೆಯಿಂದ ಕೂಡಿದ ಒಂದು ಸದುದ್ದೇಶವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ॥69॥

"ನನ್ನೊಡನೆ ಬನ್ನಿ. ಸಂಕೀರ್ತನೆ ಮಾಡಲು ಅಪ್ಪಣೆಯನ್ನು ಪಡೆಯೋಣ" ಈ ರೀತಿ ಹೇಳುತ್ತ ಇಬ್ಬರೂ ಆ ಸಮಯದಲ್ಲಿ ಮಸೀದಿಗೆ ಬಂದರು. ॥70॥

ಕಾಕಾನು ಪೂಜೆ ಮಾಡಲು ಪ್ರಾರಂಭಿಸಿದ ಕೂಡಲೇ, ಬಾಬಾರವರು ತಾವೇ ವಾಡಾದಲ್ಲಿ ಯಾವುದರ ಬಗ್ಗೆ ಚರ್ಚೆಯಾಯಿತೆಂದು ಕೇಳಿದರು. ಕಾಕಾನಿಗೆ ಏನೂ ಉತ್ತರಿಸಲಾಗಲಿಲ್ಲ. ॥71॥

ಕೂಡಲೇ ಬಾಬಾರವರು ಭೀಷ್ಮನನ್ನು ಅದೇ ಪ್ರಶ್ನೆಯನ್ನು ಮತ್ತೊಂದು ರೀತಿಯಲ್ಲಿ ಕೇಳಿದರು. "ಬುವಾ ಏನು ಹೇಳುತ್ತಾನೆ?" ॥72॥

ಆಗ ಕಾಕಾನು ನೆನಪಿಸಿಕೊಂಡು ತನ್ನ ಉದ್ದೇಶವನ್ನು ಪ್ರಕಟಿಸಿದನು. ಬಾಬಾರವರಿಗೆ ಈ ವಿಚಾರ ಇಷ್ಟವಾಯಿತು. ಈ ಸಮಾರಂಭವನ್ನು ಆಚರಿಸಲು ಉದ್ದೇಶಿಸಲಾಯಿತು. ॥73॥

ಮಾರನೆಯ ದಿನ, ಬೆಳಗಿನ ಜಾವದಲ್ಲಿ ಬಾಬಾರವರು ಲೇಂಡಿಗೆ ಹೋಗಿರಲು, ಒಂದು ತೊಟ್ಟಿಲನ್ನು ಬಯಲಿನಲ್ಲಿ ಕಟ್ಟಿ ಕೀರ್ತನೆಗೆ ಸಿದ್ಧಪಡಿಸಲಾಯಿತು. ॥74॥

ಪ್ರೇಕ್ಷಕರು ಅಲ್ಲಿ ಸೇರಿದರು. ಅನಂತರ ಬಾಬಾರವರು ಸಮಯಕ್ಕೆ ಸರಿಯಾಗಿ ಹಿಂತಿರುಗಿದರು. ಭೀಷ್ಮನು ಎದ್ದು ನಿಂತನು. ಕಾಕಾನು ಹಾರ್ಮೋನಿಯಂ ಹಿಡಿದು ಕುಳಿತನು. ಆಗ ಬಾಬಾರವರು ಕಾಕಾನನ್ನು ಬರ ಹೇಳಿದರು. ॥75॥

"ಬಾಬಾರವರು ನಿನ್ನನ್ನು ಕರೆಯುತ್ತಿದ್ದಾರೆ". ಅದನ್ನು ಕೇಳಿ ಕಾಕಾನು ಬೆಚ್ಚಿಬಿದ್ದನು. ಏನಾಯಿತೆಂದು ಅರ್ಥಮಾಡಿಕೊಳ್ಳಲಾರದೇ ಹೋದನು. ಯಾವುದೇ ಅಪಜಯವಾಗದಂತಾಗಲಿ. ॥76॥

ಬಾಬಾರವರ ಕರೆಯನ್ನು ಕೇಳುತ್ತಲೇ ಕಾಕಾನು ಭಯಭೀತನಾದನು. "ಬಾಬಾ ಏಕಿಷ್ಣು ಕೋಪಗೊಂಡಿದ್ದಾರೆ? ಕೀರ್ತನೆಯು ಯಾವ ತೊಂಡೆಯೂ ಇಲ್ಲದೆ ನಡೆಯುವುದೋ ಇಲ್ಲವೋ"? ॥77॥

ಅವನು ತಿರುಗಿ ತಿರುಗಿ ನೋಡುತ್ತಲೇ ಮುಂದೆ ನಡೆದನು. ಅವನು ಮೆಟ್ಟಲುಗಳನ್ನು ಭಯದಿಂದ ಹತ್ತಿಹೋದನು. ಅವನ ಹೆಜ್ಜೆಗಳು ಬಹಳ ಮೆದುವಾಗಿದ್ದುವು. ಕಾಕಾನು ಬಹಳ ಚಿಂತಿತನಾಗಿದ್ದನು. ॥78॥

ಬಾಬಾ ಅವನನ್ನು ಪ್ರಶ್ನಿಸಿದರು - "ಈ ತೊಟ್ಟಿಲನ್ನು ಇಲ್ಲಿ ಏಕೆ ಕಟ್ಟಿದೆ?" ಸಂಕ್ಷಿಪ್ತವಾದ ಕತೆಯನ್ನು ಅದರ ಹಿಂದಿರುವ ಕಾರಣವನ್ನೂ ಮತ್ತು ಕಾರ್ಯಕ್ರಮವನ್ನೆಲ್ಲ ಕೇಳಿದ ನಂತರ ಸಂತಸಗೊಂಡರು. ॥79॥

ನಂತರ ಗೂಡಿನಿಂದ ಒಂದು ಸುಂದರವಾದ ಹಾರವನ್ನು ತೆಗೆದು ಕಾಕಾನ ಕೊರಳಿಗೆ ಹಾಕಿದರು. ಮತ್ತೊಂದನ್ನು ಭೀಷ್ಮನಿಗೆ ಕೊಟ್ಟರು. ॥80॥



ತೊಟ್ಟಲಿನ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ಅಲ್ಲೆಲ್ಲ ಕಾತರತೆ ಉಂಟಾಯಿತು. ಆದರೆ ಕೊರಳಿಗೆ ಹಾರಗಳನ್ನು ಹಾಕಿದಾಗ ಎಲ್ಲರಿಗೂ ಆರಾಮವಾಯಿತು. ॥81॥

ಭೀಷ್ಮನು ಒಬ್ಬ ಅಸಾಧಾರಣ ವ್ಯಕ್ತಿ. ಕತೆಗಳನ್ನು ವಿವರಿಸುವಲ್ಲಿ ಅಗಾಧವಾದ ಪಾಂಡಿತ್ಯವಿತ್ತು. ಕೀರ್ತನೆಯು ಅತಿ ಮಧುರವಾಗಿದ್ದು ಶ್ರೋತೃಗಳೆಲ್ಲರೂ ಬಹಳ ಸಂತಸಗೊಂಡರು. 82॥

ಬಾಬಾರವರೂ ಸಹ ಅತ್ಯಂತ ಪ್ರಸನ್ನರಾದರು. ಅವರ ಒಪ್ಪಿಗೆಯಮೇರೆಗೆ ಹಬ್ಬವನ್ನು ಆಚರಿಸಲಾಯಿತು. ಭಜನೆ, ಕೀರ್ತನೆ ಇತ್ಯಾದಿಗಳಿದ್ದವು. ॥83॥

ರಾಮನು ಜನ್ಮತಾಳಿದ ಸಮಯದಲ್ಲಿ ಕೆಂಪು ಗುಲಾಲು ಪುಡಿಯನ್ನು ಎರಚಾಡಿದಾಗ ಬಾಬಾರವರ ಕಣ್ಣಿನಲ್ಲಿ ಬಿದ್ದು ಬಾಬಾರವರು ಅತ್ಯಂತ ಕ್ರೋಧಿತರಾದರು. ಅವರು ನರಹರಿಯ ಹಾಗೆ ಭಯಂಕರವಾಗಿ ಕಂಡರು. ಆ ಸಮಯ ಕೌಸಲ್ಯೇಯ ಅರಮನೆಯಲ್ಲಿ ರಾಮನ ಜನನವಾಗಿತ್ತು. ॥84॥

ಗುಲಾಲು ಕೇವಲ ಒಂದು ನೆಪಮಾತ್ರ ಈ ಘಟನೆಯು ರಾವಣನೋಪಾದಿಯಲ್ಲಿರುವ ಅಹಂಕಾರವನ್ನು ರಾಕ್ಷಸರೂಪೀ ಕ್ರೌರ್ಯವನ್ನು ನಾಶಮಾಡಲು ಅವತರಿಸಿ ಬಂದ ರಾಮನ ಉದ್ದೇಶವನ್ನು ಪ್ರಕಟಿಸಿತು. ॥85॥

ತತ್‌ಕ್ಷಣವೇ ಅವರು ಅಸಮಾಧಾನಗೊಂಡರು. ನರಸಿಂಹನ ಹಾಗೆ ಆದರು. ಅನೇಕ ವಿಧದ ಶಾಪಗಳನ್ನು ಎಲ್ಲರ ಮೇಲೂ ಸುರಿಸಿದರು. ॥86॥

ರಾಧಾಕೃಷ್ಣಬಾಯಿಯು ವಿಶೇಷವಾಗಿ ತೊಟ್ಟಿಲನ್ನು ಪುಡಿಮಾಡುವರೆಂಬ ಚಿಂತೆಗೆ ಒಳಗಾದಳು. ಅದನ್ನು ಸರಿಮಾಡುವುದು ಹೇಗೆ? ಅದು ಅವಳ ಚಿಂತೆಗೆ ಕಾರಣವಾಗಿತ್ತು. ॥87॥

"ದಯಮಾಡಿ ತೆಗೆದುಬಿಡಿ. ಬೇಗ ತೆಗೆದುಬಿಡಿ" ಅವಳು ಒಂದೇ ಸಮನೆ ಒತ್ತಾಯಿಸುತ್ತಿದ್ದಳು. ಕಾಕಾನು ತೊಟ್ಟಿಲನ್ನು ತೆಗೆಯಲು ಮುಂದೆ ಹೋದನು. ॥88॥

ಆಗ ಬಾಬಾರವರು ಅತ್ಯಂತ ಕ್ರೋಧಿತರಾಗಿ, ಕಾಕಾನ ಕಡೆಗೆ ಮುನ್ನುಗ್ಗಿದರು. ತೊಟ್ಟಿಲನ್ನು ತೆಗೆಯುವುದು ಮರೆತುಹೋಯಿತು. ಬಾಬಾರವರು ಮತ್ತೆ ಶಾಂತರಾದರು. ॥89॥

ಮಧ್ಯಾಹ್ನದ ವೇಳೆಯಲ್ಲಿ ಬಾಬಾರವರ ಅಪ್ಪಣೆ ಬೇಡಿದಾಗ ಅವರ ಉತ್ತರ ಎಲ್ಲರನ್ನೂ ಬೆರಗುಗೊಳಿಸಿತು. - “ತೊಟ್ಟಿಲನ್ನು ಇಷ್ಟು ಅವಸರವಾಗಿ ಏಕೆ ಬಿಚ್ಚುವಿರಿ? ಅದರ ಅವಶ್ಯಕತೆ ಇನ್ನೂ ಇದೆ.” ॥90॥

ಇದರ ಆವಶ್ಯಕತೆಯಾದರೂ ಏನಿತ್ತು? ಸಾಯಿಯ ಮಾತುಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ಸ್ವಲ್ಪ ಯೋಚಿಸಿದಲ್ಲಿ, ಹಬ್ಬ ಇನ್ನೂ ಪೂರ್ಣವಾಗದಿರುವ ಬಗ್ಗೆ ಅರಿವುಂಟಾಗುತ್ತದೆ. ॥91॥

ಹಬ್ಬವು ಒಂದು ಮಟ್ಟದವರೆಗೆ ಮಾತ್ರ ಸಾಗಿತ್ತು. ಆದರೆ ಮಾರನೆಯ ದಿನದ ಸಂಜೆಯವರೆಗೆ ಮತ್ತು ಗೋಪಾಲಕಾಲದ ಸಮಯದವರೆಗೆ ಉತ್ಸವ ಷೂರ್ಣವಾಯಿತೆಂದು ತಿಳಿಸಲು ಆಗುವುದಿಲ್ಲ. ॥92॥

ಈ ರೀತಿಯಲ್ಲಿ, ಎರಡನೆಯ ದಿನ ಗೋಪಾಲಕಾಲ ಮತ್ತು ಸಂಕೀರ್ತನೆಯ ನಂತರ ಬಾಬಾರವರು ತೊಟ್ಟಿಲನ್ನು ತೆಗೆಯಲು ಒಪ್ಪಿಗೆ ನೀಡಿದರು. ॥93॥

ಮಾರನೆಯ ವರ್ಷದಲ್ಲಿ ಭೀಷ್ಮನು ಇರಲಿಲ್ಲ. ಬಾಳಾ ಬುವಾ ಸತಾರ್ಕರ್‌ನನ್ನು ಕೀರ್ತನೆಗಾಗಿ ಕರೆಸಬೇಕಾಗಿತ್ತು. ಆದರೆ ಅವನು ಕವಟೆಗೆ ಹೋಗಬೇಕಾಯಿತು. ॥94॥

ಆದ್ದರಿಂದ, 'ಆಧುನಿಕ ತುಕಾರಾಂ' ಎಂದು ಕರೆಯಲ್ಪಡುತ್ತಿದ್ದ ಬಾಳಾ ಬುವಾ ಭಜನಿಯನ್ನು ಕಾಕಾ ಮಹಾಜನಿಯು ಕರೆತಂದನು. ಅವನ ಕೈಗಳಿಂದ ಉತ್ಸವ ಆಚರಿಸಲಾಯಿತು. ॥95॥

ಭಜನಿಯೂ ದೊರಕದಿದ್ದಲ್ಲಿ ಕಾಕಾನೇ ಕೀರ್ತನೆ ಮಾಡುತ್ತಿದ್ದನು. ಏಕೆಂದರೆ ಅವನಿಗೆ ದಾಸಗಣು ರಚಿಸಿದ್ದ ರಾಮನವಮಿಯ ರಚನೆ ಬಾಯಿಪಾಠವಾಗಿತ್ತು. ॥96॥

ಮೂರನೆಯ ವರ್ಷ, ಬಾಳಾ ಬುವಾ ಸತಾರಕರ್‌ನೇ ಶಿರಡಿಗೆ ಆ ಸಮಾರಂಭದ ಸಮಯಕ್ಕೆ ಸರಿಯಾಗಿ ಆಗಮಿಸಿದನು. ಈ ಘಟನೆಯ ಬಗ್ಗೆ ಆದರಪೂರ್ವಕವಾಗಿ ಆಲಿಸಿರಿ. ॥97॥

ಸಾಯಿಬಾಬಾರವರ ಕೀರ್ತಿನೆಯನ್ನು ಕೇಳಿದ್ದ ಅವನಿಗೆ ದರುಶನದ ಆಕಾಂಕ್ಷೆ ಉದಯಿಸಿತು. ಆದರೆ ಮಾರ್ಗದಲ್ಲಿ ಅವನಿಗೆ ಜೊತೆಗಾರರು ಬೇಕಾಗಿತ್ತು. ಯಾರಾದರೂ ಸಿಗುವರೇ ಎಂದು ಕಾತರದಿಂದ ಕಾಯುತ್ತ ಇದ್ದನು. ॥98॥

ಬಾಳಾ ಬುವಾನು ತಾನೇ ಒಬ್ಬ ಹರಿದಾಸ (ಕೀರ್ತನಕಾರ)ನಾಗಿದ್ದನು. 'ಸತಾರಾ'ದವನಾಗಿದ್ದ ಅವನು ಆ ಸಮಯದಲ್ಲಿ ಬೊಂಬಾಯಿಯ ಪರೇಲ್‌ನಲ್ಲಿ ವಾಸವಾಗಿದ್ದನು. ॥99॥ 

ತಾರಾ ಜಿಲ್ಲೆಯ ಬೃಹತ್‌ ಸಿದ್ಧಕವಾಟೆ ಎಂಬಲ್ಲಿ ಒ೦ದು ದೇವಸ್ಥಾನವಿದ್ದು ಅಲ್ಲಿ ಬುವಾನು ಪ್ರತಿವರ್ಷ ರಾಮನವಮಿಯ ದಿನ ಕೀರ್ತನೆ ನಡೆಸುತ್ತಿದ್ದನು. ಅದಕ್ಕಾಗಿ ಪ್ರತಿವರ್ಷ ಸಂಭಾವನೆ ಪಡೆಯುತ್ತಿದ್ದನು. ॥100॥

ಬಾಳಾ ಬುವಾನು ಎರಡು ವಾರ್ಷಿಕ ಉತ್ಸವಗಳಲ್ಲಿ ಸಂಬಂಧಿಸಿದ್ದನು. ಒಂದು ಆಷಾಡ ಏಕಾದಶಿ, ಮತ್ತೊಂದು ರಾಮನವಮಿ. ಇವೆರಡು ಚೈತ್ರ ಮಾಸದಲ್ಲಿಯೇ ಬರುತ್ತಿದ್ದವು. ॥101॥

ಮೊಘಲ್‌ ಚಕ್ರವರ್ತಿಯಶಾಸನಾಧಿಕಾರದ ಅನುಸಾರ ರೂ. 2400/-ಗಳನ್ನು ಮೂರ್ತಿಯ (ಬಡೇಬಾಬಾ)ರ ಖರ್ಚಿಗಾಗಿ ನಿಗದಿಪಡಿಸಲಾಗಿತ್ತು. ಮತ್ತು ಸಂಸ್ಥೆಯಿಂದಲೇ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ॥102॥

ಈ ಎರಡು ಉತ್ಸವಗಳಿಗೆ ಬುವಾನಿಗೆ ರೂ. 30/ಎಗಳನ್ನು ಕೊಡುತ್ತಿದ್ದರು. ಆದರೆ ಆ ವರ್ಷ ಕವಾಟೆ ಹಳ್ಳಿಯಲ್ಲಿ ಕಾಲರಾ ಸಾಂಕ್ರಾಮಿಕ ರೋಗ ಹರಡಿತ್ತು. ಹಳ್ಳಿಯವರು ಕಷ್ಟ ಕಾರ್ಪಣ್ಯದಲ್ಲಿದ್ದರು. ॥103॥

ಆದುದರಿಂದ ಅಲ್ಲಿ ರಾಮನವಮಿಯ ಹಬ್ಬವನ್ನು ರದ್ದುಗೊಳಿಸಲಾಗಿತ್ತು. ಬುವಾನು ಹಳ್ಳಿಯನ್ನು ತೆರವು ಗೊಳಿಸಿದ್ದರಿಂದ

ಮುಂದಿನ ವರ್ಷ ಬರುವಂತೆ ಆಹ್ವಾನಪತ್ರಗಳನ್ನು ಸ್ಟೀಕರಿಸಿದನು. ॥104॥

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅವನಿಗೆ ರಾಮನ ಸೇವೆ ಮಾಡುವ ಅವಕಾಶ ತಪ್ಪಿತು ಮತ್ತು ಸಂಭಾವನೆಯನ್ನೂ ಸ್ಟೀಕರಿಸಲಾಗಲಿಲ್ಲ. ಆದರೆ, ಅದು ಅವನಿಗೆ ಶಿರಡಿಗೆ ಹೋಗುವ ಅವಕಾಶಮಾಡಿಕೊಟ್ಟಿತು. ಅದರಿಂದಾಗಿ ಅವನು ದೀಕ್ಷಿತನನ್ನು ಭೇಟಿಯಾದನು. ॥105॥

ದೀಕ್ಬಿತನು ಬಾಬಾರವರ ಪರಮ ಭಕ್ತ. ಶಿರಡಿಗೆ ಹೋಗುವ ಬಯಕೆಯೂ ನೆರವೇರುವಂತಾಗಿ ಅದು ತನ್ನ ಮೇಲೆ ಆಧರಿಸಿದ್ದರಿಂದ ಅವನಿಗೆ ಲೌಕಿಕ ಲಾಭದ ಜೊತೆಯಲ್ಲಿ ಆಧ್ಯಾತ್ಮಿಕ ಲಾಭವೂ ದೊರಕುವಂತಾಯಿತು. ॥106॥

ಆದ್ದರಿಂದ ಅವನು ದೀಕ್ಷಿತನಿಗೆ ಈ ರೀತಿ ತಿಳಿಸಿದನು. ವಾರ್ಷಿಕ ಆದಾಯವೂ ತಾತ್ಕಾಲಿಕವಾಗಿ ತಡೆಹಿಡಿಯಲ್ಪಟ್ಟಿದ್ದರಿಂದ ಬಾಬಾರವರ ದರ್ಶನ ಮಾಡಿ ಅಲ್ಲಿ ಕೀರ್ತನೆ ನಡೆಸುವೆನೆಂದು ತಿಳಿಸಿದನು. ॥107॥

ಭಾವು ಸಾಹೇಬನು ಅದಕ್ಕೆ ಹಣ ಪಾವತಿಯಬಗ್ಗೆ ನಿಶ್ಚಿತವಿಲ್ಲವೆಂದು ಉತ್ತರಿಸಿದನು. ಕೊಡಬೇಕಾ ಬೇಡವಾ ಎನ್ನುವುದು ಬಾಬಾರವರ ಕೈಯಲ್ಲಿದೆ ಮತ್ತು ಕೀರ್ತನೆ ಮಾಡಲೂ ಸಹ ಬಾಬಾರವರ ಅನುಮತಿ ಪಡೆಯಬೇಕಾಗುತ್ತದೆಂದನು. ॥108॥

ಈ ಮಾತುಕತೆ ನಡೆಯುತ್ತಿರುವಾಗಲೇ ಕಾಕಾ ಮಹಾಜನಿಯು ಅನಿರೀಕ್ಷಿತವಾಗಿ ಅಲ್ಲಿಗೆ ಬಂದು ಶಿರಡಿಯ ಪ್ರಸಾದವೆಂದು ಉದಿಯನ್ನು ಹಂಚಿದನು. ಇದನ್ನು ತುಭಶಕುನವೆಂದು ಪರಿಗಣಿಸಲಾಯಿತು. ॥109॥

ಮಹಾಜನಿಯು ಆಗ ತಾನೇ ಶಿರಡಿಯಿಂದ ಹಿಂತಿರುಗಿದ್ದನು. ಅಲ್ಲೆಲ್ಲವೂ ಚೆನ್ನಾಗಿಯೇ ಇದೆಯೆಂದು ತಿಳಿಸಿ ಅನ೦ತರ ತನ್ನ ಮನೆಗೆ ಮರಳಿದನು. ॥110॥

ಅನಂತರ ದೀಕ್ಷಿತನು ಬಹಳ ಪ್ರೀತಿಯಿಂದ ಬುವಾನಿಗೆ ತಾನು ಬಾಬಾರವರ ಅನುಮತಿ ಕೇಳುವುದಾಗಿ ತಿಳಿಸಿದನು. ಅದು ದೊರಕಿದಲ್ಲಿ ಕೂಡಲೇ ನಿಶ್ಚಯವಾಗಿ ತಿಳಿಸುವುದಾಗಿ ಹೇಳಿದನು. ॥111॥

"ಪತ್ರ ಕೈಸೇರಿದ ಕೂಡಲೇ ಶಿರಡಿಗೆ ಹೊರಟು ಬಾ, ಪ್ರಯಾಣದ ವೆಚ್ಚದ ಬಗ್ಗೆ ಚಿಂತಿಸಬೇಡ. ನೀನು ಅದನ್ನು ಭರಿಸಬೇಕಾಗಿ ಬರುವುದಿಲ್ಲ. ಅದರ ಬಗ್ಗೆ ಸಂಶಯಬೇಡ". ॥112॥

ಅನ೦ತರ ದೀಕ್ಷಿತನು (ಬಾಳಾ ಬುವಾನಿಗಿ೦ತ) ಮುಂಚಿತವಾಗಿ ಹೋದನು. ಬಾಬಾರವರು ಅನುಮತಿ ನೀಡಿದರು. ಬಾಳಾ ಬುವಾನು ಶಿರಡಿಗೆ ಬಂದನು. ಮನಃಪೂರ್ತಿಯಾಗಿ ಸಾಯಿಯ ದರ್ಶನ ಪಡೆದನು. ॥113॥

ಸಾಯಿಬಾಬಾರವರು ರಾಮನವಮಿ ಉತ್ಸವವನ್ನು ತಮ್ಮ ಸಮಕ್ಷಮದಲ್ಲಿ ಅತಿ ಪ್ರೀತಿಯಿಂದ ಬಾಳಾ ಬುವಾನ ಕೈಯಿಂದ ಬಹು ವಿಜೃಂಭಣೆಯಿಂದ ನಡೆಸಿದರು. ॥114॥

ಬಾಳಾ ಬುವಾನು ಮನಸ್ಸಿನಲ್ಲೇ ಸಂತಸಗೊಂಡನು. ಅವನ ಉದ್ದೇಶ ಸಫಲವಾಯಿತು. ಸಾಯಿಯೂ ಬಹಳ ಆನಂದಪಟ್ಟರು. ಈ ರೀತಿ ಪ್ರತಿಯೊಬ್ಬರ ಆಶೆಗಳೂ ನೆರವೇರಿದವು. ॥115॥

ಅವರ ನಿರೀಕ್ಷೆಗಿಂತ ಅಧಿಕವಾಗಿಯೇ ಪೂರ್ಣಗೊಂಡಿದ್ದವು. ಅವನು150/- ರೂಪಾಯಿಗಳನ್ನು ಸ್ವೀಕರಿಸಲು ಅಪ್ಪಣೆಯಾಯಿತು. ಬುವಾನು ಅತೀವ ಆನಂದ ಪಟ್ಟನು. ॥116॥

ಬಾಳಾ ಬುವಾನಿಗೆ ಏಕೆ ಸಂತಸವಾಗಿಲ್ಲ? ಕವಾಟೆಯಲ್ಲಿನ 5 ವರ್ಷಗಳ ಕಾಲದ ಸಂಪಾದನೆಯಷ್ಟು ಒಂದೇ ಉತ್ಸವದಲ್ಲಿ ಬಾಬಾರವರು ನೀಡಿದ್ದರು. ಈ ರೀತಿ ಅವನು ಬಾಬಾರವರಿಗೆ ಋಣಿಯಾದನು. ॥117॥

ಮತ್ತೆ, ನಂತರ ದಾಸಗಣು ಶಿರಡಿಯಲ್ಲಿದ್ದಾಗ, ಬಾಬಾರವರನ್ನು ಪ್ರಾರ್ಥಿಸಿಕೊಂಡಾಗ ಅವರು ದಾಸಗಣುವಿಗೆ ಪ್ರತಿವರ್ಷ ಉತ್ಸವದಲ್ಲಿ ಕೀರ್ತನೆಯನ್ನು ಮಾಡುವ ಕಾರ್ಯವನ್ನು ಒಪ್ಪಿಸಿದರು. ॥118॥

ಅಲ್ಲಿಂದ ಇಲ್ಲಿಯವರೆಗೆ ಜನ್ಮೋತ್ಸವವನ್ನು ಬಹಳ ವೈಭವ, ಆಡಂಬರಗಳಿಂದ ಆಚರಿಸಲಾಗುತ್ತಿದೆ. ಮನಃಪೂರ್ತಿಯಾಗಿ ಅನ್ನವನ್ನು ಹಂಚಲಾಗುತ್ತಿದೆ. ಬಡವರು, ದೀನರು ಸಂತಸಪಡುತ್ತಾರೆ. ॥119॥

ಸಮಾಧಿಮಂದಿರದ ಮುಖ್ಯ ಪ್ರವೇಶದ್ವಾರದಲ್ಲಿ ಜಾನಪದ ಸಂಗೀತ, ವಾದ್ಯ ಸಂಗೀತದೊಡನೆ (ಚಂಗ್‌ ಬದ ಮತ್ತು ಶಹನಾಯಿ) ಬಾಬಾರವರ ನಾಮವು ಆಕಾಶದವರೆಗೆ ಪ್ರತಿಧ್ವನಿಸುತ್ತದೆ ಮತ್ತು ಇಡೀ ವಾತಾವರಣವು ಉಲ್ಲಾಸದಿಂದ ತುಂಬಿರುತ್ತದೆ. ॥120॥ 

ಯಾವ ರೀತಿಯಲ್ಲಿ ಅವರು ಉತ್ಸವ ಮತ್ತು ಉರುಸ್‌ನ್ನು ಯೋಚಿಸಿದ್ದರೋ ಅದೇ ರೀತಿ ಗೋಪಾಲಗುಂಡನು ಹಳೆಯ ಶಿಥಿಲವಾದ ಮಸೀದಿಗೆ ಹೊಸರೂಪ ಕೊಡಲು ಪ್ರೇರಿತನಾದನು. ॥121॥

ಭಕ್ತನಾದ ಗೋಪಾಲಗುಂಡನು ತನ್ನ ಕೈಯಿಂದಲೇ ಮಸೀದಿಯನ್ನು ಜೀರ್ಣೋದ್ಧಾರ ಮಾಡಲು ನಿಶ್ಚಯಿಸಿ ಬೇಕಾದ ಕಲ್ಲುಚಪ್ಪಡಿಗಳನ್ನು ಸಿದ್ಧಪಡಿಸಿದನು. ॥122॥

ಆದರೆ ಆ ಜೀರ್ಣೋದ್ಧಾರದ ಕೆಲಸವು ಗುಂಡನಿಗೆ ನಿಯಮಿತವಾಗಿರಲಿಲ್ಲ. ಈ ಮಂಗಳ ಕಾರ್ಯಕ್ಕೆ ಬೇಕಾದ ಸಂದರ್ಭ ಅನಂತರ ನಿಶ್ಚಿತ ರೂಪದಲ್ಲಿ ಕೂಡಿಬಂದಿತು. ॥123॥

ಬಾಬಾರವರು ಜೀರ್ಣೋದ್ಧಾರದ ಕೆಲಸವು ನಾನಾ(ಚಂದೋರಕರ್‌)ನಿಂದ ಆಗಬೇಕೆಂದು ಇಚ್ಛಿಸಿದರೆಂದು ತೋರುತ್ತದೆ. ಮತ್ತೆ ನೆಲಕ್ಕೆ ಕಲ್ಲು ಹಾಸುವ ಕೆಲಸ ಕಾಕಾ(ದೀಕ್ಷಿತ್‌)ನದಾಯಿತು. ॥124॥ ಅದೇ ರೀತಿ ಅದು ಅನ೦ತರ ನೆರವೇರಿತು. ಪ್ರಾರಂಭದಲ್ಲಿ ಅನುಮತಿಗಾಗಿ ಪ್ರಾರ್ಥಿಸಿ ದಣಿದಿದ್ದರೂ, ನಂತರ ಅವನು ಮ್ಹಾಳಸಾಪತಿಯ ಮಧ್ಯಸ್ತಿಕೆ ಮಾಡಿದಾಗ ಬಾಬಾರವರು ಅನುಮತಿ ನೀಡಿದರು. ॥125॥

ಅದುಹಾಗಿರಲಿ. ಮಸೀದಿಯಲ್ಲಿ ನೆಲಕ್ಕೆ ಕಲ್ಲುಹಾಸುವ ಕೆಲಸ ಒಂದು ರಾತ್ರಿಯಲ್ಲೇ ಷೂರ್ಣಗೊಂಡಿತು. ಅಲ್ಲಿ ಮಾರನೆಯ ದಿನವೇ ಬಾಬಾರವರು ಬಂದು 'ಗಾದಿ'ಯ ಮೇಲೆ ಕುಳಿತರು. ॥126॥

ಸನ್‌ 1911ನೆಯ ಇಸವಿಯಲ್ಲಿ ಸಭಾ ಮಂಟಪವನ್ನು ನಿರ್ಮಿಸಲಾಯಿತು. ಅದು ಅತ್ಯಂತಕಷ್ಟಸಾಹಸವಾದ ಕೆಲಸವಾಗಿತ್ತು. ಅದು ಅನೇಕ ಅಪಾಯಗಳನ್ನೊಳಗೊಂಡಿದ್ದು ಜನರು ಭಯಭೀತರಾಗಿ ನಡುಗಿಹೋದರು. ॥127॥

ಈ ಕೆಲಸವನ್ನೂ ಸಹ ಭಕ್ತರು ರಾತ್ರಿಯೆಲ್ಲ ಕೆಲಸಮಾಡಿ ಪೂರೈಸಿದರು. ಅದೇ ರೀತಿಯಲ್ಲಿ ಅದೇ ಸನ್ನಿವೇಶಗಳಲ್ಲಿ ಮಾಡಿದರು. ॥128॥

ರಾತ್ರಿ ವೇಳೆಯಲ್ಲಿ ಬಹಳ ಕಷ್ಟದಿಂದ ಕ೦ಭಗಳನ್ನು ನಿಲ್ಲಿಸುತ್ತಿದ್ದರು. ಹಗಲಲ್ಲಿ ಬಾಬಾರವರು ಬಂದು ಅವುಗಳನ್ನು ತೆಗೆಸುತ್ತಿದ್ದರು. ಮತ್ತೆ ಅವಕಾಶ ದೊರೆತಾಗಲೆಲ್ಲಾ ಅವುಗಳನ್ನು ಮತ್ತೆ ನಿಲ್ಲಿಸುತ್ತಿದ್ದರು. ಈ ರೀತಿ ಎಲ್ಲರೂ ದಣಿದುಹೋದರು. ॥129॥ 

ಪ್ರತಿಯೊಬ್ಬರೂ ಸೊಂಟಕ್ಕೆ ಪಟ್ಟ ಕಟ್ಟ ರಾತ್ರಿಯನ್ನು ಹಗಲನ್ನಾಗಿ ಮಾಡಿದರು. ಬಹಳ ಶತ್ರಮವಹಿಸಿಯಾದರೂ ತಮ್ಮ ಗುರಿಯನ್ನು ಸಾಧಿಸುವುದೇ ಉದ್ದೇಶವಾಗಿತ್ತು. ॥130॥

ದೀಕ್ಷಿತ್‌ನು ಆ ನಿವೇಶನವು ಸಭಾ ಮಂಟಪವನ್ನು ಕಟ್ಟಲು ತಕ್ಕುದಾದ, ಯೋಗ್ಯವಾದ ಸ್ಥಳವೆಂದು ಯೋಚಿಸಿದ್ದನು. ಅಲ್ಲಿ ಮೊದಲು ಒ೦ದು ಬಯಲು ಜಾಗವೂ ಒಂದು ಚಿಕ್ಕ ಆಟದ ಮೈದಾನವೂ ಇದ್ದುವು. ॥131॥

ಅದಕ್ಕೆ ಬೇಕಾದ ಹಣವನ್ನು ಹೂಡಿ ಕಬ್ಬಿಣದ ಸ್ತಂಭಗಳಿಗೆ ಮತ್ತು ಕೋನಸಹಿತ ಆಧಾರದಕಂಭ, ಇವುಗಳನ್ನು ಬಾಬಾರವರು ಚಾವಡಿಯಲ್ಲಿದ್ದ ಸಮಯ ನೋಡಿಕೊಂಡು ಮುಗಿಸಿದರು. ॥132॥

ಭಕ್ತರು ರಾತ್ರಿಯನ್ನು ಹಗಲಾಗಿ ಮಾಡಿ ಶ್ರಮವಹಿಸಿ ಕಂಭಗಳನ್ನು ನಿಲ್ಲಿಸುತ್ತಿದ್ದರು. ಆದರೆ, ಬಾಬಾರವರು ಚಾವಡಿಯಿಂದ ಹಿಂತಿರುಗಿದ ಕೂಡಲೇ ಅವುಗಳನ್ನು ತೆಗೆಸಿಹಾಕುತ್ತಿದ್ದರು. ॥133॥

ಒಂದು ಸನ್ನಿವೇಶದಲ್ಲಿ ಬಾಬಾರವರು ಅತಿಯಾಗಿ ಉದ್ರೇಕಗೊಂಡು ತಾತ್ಯಾನನ್ನು ಒಂದು ಕೈಯಿಂದ ಕುತ್ತಿಗೆ ಪಟ್ಟಿಹಿಡಿದು ಮತ್ತೊಂದು ಕೈಯಿಂದ ಕ೦ಭವನ್ನು ಅಲ್ಲಾಡಿಸಿ ಅದನ್ನು ತಲೆಕೆಳಗಾಗಿ ಮಾಡಲು ಹೊರಟರು. ॥134॥

ಅವರು ಅದನ್ನು ಅಲ್ಲಾಡಿಸಿ ಸಡಿಲಗೊಳಿಸಿದರು. ತಾತ್ಯಾನ ತಲೆಯ ರುಮಾಲನ್ನು ತೆಗೆದು ಒಂದು ಬೆಂಕಿಕಡ್ಡಿಯಿ೦ದ ಬೆಂಕಿ ಹಚ್ಚಿದರು ಮತ್ತು ಅದನ್ನು ಕೋಪದಿಂದ ಒಂದು ಹಳ್ಳಕ್ಕೆ ಎಸೆದರು.  ॥135॥



ಆ ಸಮಯದಲ್ಲಿ ಅವರ ಕಣ್ಣುಗಳು ಬೆಂಕಿಯ ಉಂಡೆಗಳಾಗಿದ್ದವು. ಅವುಗಳನ್ನು ನೇರವಾಗಿ ದೃಷ್ಟಿಸಲು ಯಾರಿಗೆ ತಾನೇ ಸಾಧ್ಯ? ಪ್ರತಿಯೊಬ್ಬರೂ ಧೈರ್ಯಗುಂದಿದರು. ॥136॥

ಕೂಡಲೇ ಅವರು ತಮ್ಮ ಜೇಬಿಗೆ ಕೈ ಹಾಕಿ ಒಂದು ರೂಪಾಯಿಯನ್ನು ತೆಗೆದು ಒಂದು ಶುಭಗಳಿಗೆಯ ಸಂಕೇತದಂತೆ ಅಲ್ಲಿ ಬಿಸಾಡಿದರು. ॥137॥

ತಾಪಗಳು ಮತ್ತು ಬೈಗಳು ಸುರಿದವು. ತಾತ್ಕಾನೂ ಸಹ ಮನದಲ್ಲೇ ಬಹಳ ಭಯಭೀತನಾಗಿದ್ದನು. ಅದೊಂದು ಕ್ಲಿಷ್ಟ ಸನ್ನಿವೇಶದಂತೆ ತೋರಿತು. ಇವೆಲ್ಲವೂ ಹೇಗೆ ನಡೆದವು? ॥138॥

ಅಲ್ಲಿದ್ದ ಪ್ರೇಕ್ಟಕರೆಲ್ಲರೂ ಬೆರಗಾಗಿ ನಿಶ್ಚೇತನರಾದರು. ಈ ಅಪಶಕುನ ಈ ದಿನ ಏಕೆ? ತಾತ್ಯಾನ ಮೇಲೆ ಬಂದಿರುವ ಈ ಕಷ್ಟದ ನಿವಾರಣೆ ಹೇಗೆ? ॥139॥

ಭಾಗೋಜಿ ಶಿಂಧೆಯು ಧೈರ್ಯಮಾಡಿ ಎಚ್ಚರಿಕೆಯಿಂದ ಮುಂದೆ ಹೆಜ್ಜೆಯಿಟ್ಟನು. ಅವನೂ ಸಹ ಸುಲಭವಾಗಿ ಬಲಿಪಶುವಾದನು ಮತ್ತು ಬಾಬಾರವರ ಘರ್ಜನೆಗೊಳಗಾದನು. ॥140॥

ಮಾಧವರಾವ್‌ನೂಸಹ ಅವರಿಂದ ಹಿಡಿಯಲ್ಪಟ್ಟನು ಮತ್ತು ಬಾಬಾರವರಿಂದ ಬೈಗಳ ಮಳೆ ಪಡೆದನು. ಧೈರ್ಯಮಾಡಿ ಮಧ್ಯಸ್ತಿಕೆ ಮಾಡಲು ಹೋದವರೆಲ್ಲರಿಗೂ ಇದೇ ರೀತಿ ಬಾಬಾರವರಿಂದ ಪ್ರಸಾದ ದೊರೆಯಿತು. ॥141॥

ಬಾಬಾರವರ ಮುಂದೆ ಹೋಗುವ ಸಾಹಸ ಯಾರು ಮಾಡುತ್ತಾರೆ? ತಾತ್ಯಾನನ್ನು ರಕ್ಷಿಸುವುದು ಹೇಗೆ? ಈ ರೀತಿ ಅವರೆಲ್ಲರೂ ಮಾತನಾಡುತ್ತಿರುವಾಗಲೇ ಬಾಬಾರವರ ಕೋಪ ಇಳಿದು ಅವರು ಶಾಂತರಾದರು. ॥142॥

ಕೂಡಲೇ ಒಬ್ಬ ವರ್ತಕನನ್ನು ಕರೆಸಲಾಯಿತು ಮತ್ತು ಒಂದು ಜರಿ ಅಂಚಿನ ರುಮಾಲಿಗಾಗಿ ಆಜ್ಞಾಪಿಸಲಾಯಿತು. ಅವರೇ ಸ್ಪತಃ ಅದನ್ನು ತಾತ್ಯಾನ ತಲೆಗೆ ಸುತ್ತಿದರು. ಅದು ಒಬ್ಬ ರಾಜನಿಗೆ ತೋರಿಸುವ ಗೌರವದಂತಿತ್ತು. ॥143॥

ಜನರು ಬೆರಗಾಗಿ ಆ ಕೋಪಕ್ಕೆ ಕಾರಣವಾಗಲೀ ತಾತ್ಯಾನ ಮೇಲಾದ ಆಘಾತವಾಗಲೀ ಬಾಬಾರವರು ಇಷ್ಟೊಂದು ಗುಲ್ಲೆಬ್ಬಿಸಲು ಕಾರಣವನ್ನು ಅರಿಯದಾದರು. ॥144॥

ಕೋಪಗೊಳ್ಳಲು ಕಾರಣವೇನು? ಮತ್ತೆ ಮುಂದಿನ ಕ್ಷಣಗಳಲ್ಲಿ ಅದನ್ನು ಸಂತಸದ ಭಾವಕ್ಕೆ ತಿರುಗಿಸಿದ್ದೇಕೆ? ಅದಕ್ಕೆ ಮೂಲಕಾರಣ ಯಾರಿಗೂ ಗೊತ್ತಿಲ್ಲ. ॥145॥

ಕೆಲವೊಮ್ಮೆ ಅವರು ಶಾ೦ತವಾಗಿರುವರು ಮತ್ತು ಪ್ರೀತಿಯಿಂದ ಮಾತನಾಡಿಸುವರು. ಮತ್ತೊಮ್ಮೆ ಯಾವುದೇ ಸಹಜ ಕಾರಣವಿಲ್ಲದೆ ಕಣ್ಣು ಮಿಟುಕಿಸುವಷ್ಟರಲ್ಲಿ ಅವರು ಅನಿರೀಕ್ಷಿತವಾಗಿ ಕ್ರೋಧಿತರಾಗುತ್ತಾರೆ. ॥146॥

ಅದು ಹಾಗಿರಲಿ. ಬಾಬಾರವರ ಚರಿತ್ರೆಗಳು ಈ ರೀತಿ ಇವೆ. ಒಂದನ್ನು ವಿವರಿಸಲು ಹೊರಟಾಗ ಮತ್ತೊಂದು ನೆನಪಿಗೆ ಬರುತ್ತದೆ. ಆಗ ಯಾವುದನ್ನು ಹೇಳಲಿ, ಯಾವುದನ್ನು ತಡೆಹಿಡಿಯಲಿ? ಮನಸ್ಸನ್ನು ಬೇರೆಡೆಗೆ ತಿರುಗಿಸುವ ಪ್ರವೃತ್ತಿ ಯೋಗ್ಯವಲ್ಲ. ॥147॥

ನನಗೆ ಯಾವುದೇ ಪಕ್ಷಪಾತವಿಲ್ಲ ಮತ್ತು ಯಾವುದನ್ನೂ ಆಯ್ಕೆಮಾಡುವುದಿಲ್ಲ. ಯಾವ ಚರಿತ್ರೆಯು ಆ ಸನ್ನಿವೇಶಕ್ಕೆ ತಕ್ಕುದೋ ಅದು ಶ್ರೋತೃಗಳ ಇಚ್ಛೆಗಳನ್ನು ಪೂರೈಸುತ್ತದೆ ಮತ್ತು ಅವರ ಹೃದಯಗಳಲ್ಲಿ ಆನಂದ ತುಂಬುತ್ತದೆ. ॥148॥

ಮುಂದಿನ ಅಧ್ಯಾಯದಲ್ಲಿ ಹಿರಿಯರಿಂದ ಸಂಗ್ರಹವಾದ ಕತೆಗಳನ್ನು ಆಲಿಸಿ ಬಾಬಾರವರು ಹಿಂದುವೋ ಮುಸ್ಲಿಮರೋ ನಾನು ಕೇಳಿದಷ್ಟು ಚೆನ್ನಾಗಿ ಅದನ್ನು ಪುನರ್‌ ನಿರೂಪಿಸುತ್ತೇನೆ. ॥149॥

ದಕ್ಷಿಣೆಯಾಗಿ ಸಂಗ್ರಹಿಸಿದ ಹಣವನ್ನು ಯಾವ ರೀತಿ ಹಳೆಯ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲು ಉಪಯೋಗಿಸುತ್ತಿದ್ದರು ಮತ್ತು ಅವರು ಹೇಗೆ ಧೋತಿ ಪೋಟಿ ಮತ್ತು ಖಂಡಯೋಗದ ಮೂಲಕ ತಮ್ಮ ದೇಹದಂಡನೆ ಮಾಡುತ್ತಿದ್ದರು. ॥150॥

ಅವರು ಇತರರ ಒಳಿತಿಗಾಗಿ ಎಷ್ಟು ಶ್ರವವಹಿಸುತ್ತಿದ್ದರು ಮತ್ತು ತಮ್ಮ ಭಕ್ತರ ಕಷ್ಟಗಳನ್ನು ಹೇಗೆ ಪರಿಹರಿಸುತ್ತಿದ್ದರು ಎಂಬುದನ್ನು ಮುಂದಿನ ಅಧ್ಯಾಯದಲ್ಲಿ ಸ್ಪಷ್ಟಪಡಿಸಲಾಗುತ್ತದೆ. ತ್ರೋತೃಗಳು ಅದರಿಂದ ಸಂತಸಹೊಂದುತ್ತಾರೆ.  ॥151॥


ಎಲ್ಲರಿಗೂ ಶುಭವಾಗಲಿ.


ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ರಾಮಜನ್ಮ ದಿನಾಚರಣೆಯ ನಿರೂಪಣೆ" ಎಂಬ ಆರನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.


ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.


।ಸನ್ಮಂಗಳವಾಗಲಿ।


 



08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....