Tuesday, June 23, 2020

ಪೀಠಿಕೆ

।ಶ್ರೀ ಗಣೇಶಾಯ ನಮಃ।
।ಶ್ರೀ ಗುರುಭ್ಯೋ ನಮಃ।

ಚಿಕ್ಕ ವಯಸ್ಸಿನಿಂದಲೂ ಶಿರಡಿ ಸಾಯಿಯ ಬಗ್ಗೆ ಕೇಳಿದ್ದರೂ, ಸಂಪೂರ್ಣವಾಗಿ 'ದೇವರು' ಅಥವ 'ಗುರು' ಎಂದು ಅಂದುಕೊಂಡಿರಲಿಲ್ಲ. ಕೆಲವುತಿಂಗಳುಗಳ ಹಿಂದೆ ನನಗೆ ಅವರ ಬಗ್ಗೆ ನಂಬಲು ಕಾರಣವಾದಾರರು ನನ್ನ ಪತ್ನಿ. ಅವರಿಗಾಗಿ ನಾನು ಅವರ ಜೊತೆ ಕೂತು 'ಮೇರೇ ಸಾಯಿ - ಶ್ರದ್ಧಾ ಔರ್ ಸಬೂರಿ' ಧಾರಾವಾಹಿ Sony Entertinement ವಾಹಿನಿಯಲ್ಲಿ ನೋಡತೊಡಗಿದೆ. ನನಗೆ ಎಷ್ಟೋ ತಿಳಿಯದ ವಿಷಯಗಳು ಅದರಿಂದ ತಿಳಿಯಿತು ಮತ್ತೂ ಸಾಯಿ ಬಾಬಾ ಬಗ್ಗೆ ಭಕ್ತಿ ಗೌರವಗಳು ತುಂಬಿ ಬಂದವು. ಕ್ರಮೇಣ ಪ್ರತಿದಿನ ನಾನೇ ಮಲಗುವ ಮುನ್ನ ಅಂದಿನ episod ಹಾಕಿ ನೋಡಿಸಿಯೇ ಮಲಗುವಂತಾಯಿತು.

ಸುಮಾರು ಹತ್ತು ವರ್ಷಗಳ ಹಿಂದೆ ಸ್ವಲ್ಪದಿನ ಅಮೆರಿಕದಲ್ಲಿದ್ದಾಗ, ನನ್ನ ಸಹೋದ್ಯೋಗಿಗಳು ಹಾಗೂ ಸ್ನೇಹಿತರಾದ ಪ್ರಸನ್ನ ಮತ್ತು ಪ್ರದೀಪ್ ಸ್ಯಾಕ್ರಮೆಂಟೊ ವಿನಾಯಕ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಮೊದಮೊದಲು ಅಲ್ಲಿ ಬರುವ ಅನೇಕರು ತರುತ್ತಿದ್ದ ಪ್ರಸಾದದ ಮೇಲಿನ ಆಸಕ್ತಿಯೇ ಹೆಚ್ಚಾಗಿತ್ತು. ಅಲ್ಲಿ ರಾತ್ರಿ ಎಲ್ಲ ದೇವರಿಗೆ ಪೂಜೆ ಮಾಡಿದ ನಂತರ, ಸಾಯಿ ಬಾಬಾರವರಿಗೆ ಆರತಿ ಮಾಡಲಾಗುತ್ತಿತ್ತು. ಎಲ್ಲರಿಗೂ ಮಾಡಲು ಅವಕಾಶವಿತ್ತು. ಜೋರಾಗಿ ಶೇಜ್ ಆರತಿಯನ್ನು ಕ್ಯಾಸೆಟ್ಟಿನಲ್ಲಿ ಹಾಕಲಾಗುತ್ತಿತ್ತು. ಆಗ ಪುಸ್ತಕ ಹಿಡಿದು ಓದುತ್ತಿದ್ದ ಆರತಿಯ ಕೆಲವು ಸಾಲುಗಳು ನನ್ನ ನೆನಪಿನಲ್ಲಿ ಉಳಿಯಿತು. ಆದರೆ ಮತ್ತೆ ಅದನ್ನ ಬೆಂಗಳೂರಿಗೆ ವಾಪಸ್ಸು ಬಂದ ನಂತರ ನಾನಾಗಿಯೇ ಮುಂದುವರೆಸಿ ಹೋಗಿರಲಿಲ್ಲ. ಆದರೆ ಆರತಿಯ ಆ ಕೆಲವು ಸಾಲುಗಳನ್ನು ಆಗಾಗ್ಯೆ ಗುನುಗುಸುವುದನ್ನು ಬಿಟ್ಟಿರಲಿಲ್ಲ.

ಕೆಲವು ತಿಂಗಳುಗಳ ಹಿಂದೆ ನನ್ನ ಪತ್ನಿಗೆ ಸಾಯಿ ಸತ್ಚರಿತ್ರೆ ಓದುವ ಮನಸಾಯಿತು. ಅದರ ಆಂಗ್ಲ ಅವತಾರಿಣಿಕೆ ಕೊಂಡು ಓದಲು ಪ್ರಾರಂಭಿಸಿದರು. ಅದರಿಂದ ಪ್ರೇರೇಪಿತನಾದ ನಾನು, ಕನ್ನಡ ಅವತಾರಿಣಿಕೆ ಹುಡುಕ ತೊಡಗಿದೆ (ನನ್ನ ಮೊದಲ ಆದ್ಯತೆ ಕನ್ನಡವೇ!). ಮೊದಲು ಒಂದು ಧ್ವನಿಮುದ್ರಿಕೆ ಸಿಕ್ಕಿತು. ಅದನ್ನು ಕೇಳಿ ಮುಗಿಸಿದೆ. ಅದರಿಂದ ಸಂಪೂರ್ಣ ತೃಪ್ತಿಯಾಗಲಿಲ್ಲ. ಮತ್ತೆ ಹುಡುಕಲಾರಂಭಿಸಿದೆ. ಸರಿಯಾದ ಪ್ರತಿ ಸಿಕ್ಕಿದಲ್ಲಿ ನಾನೂ ಕೂಡ ನನ್ನ ಧ್ವನಿಮುದ್ರಿಕೆ ಮಾಡುವ ಮನಸ್ಸಾಯಿತು. ಶಿರಡಿ ಸಾಯಿಯವರ website ನಲ್ಲಿಯೇ ಒಂದು ಕನ್ನಡ ಪ್ರತಿ download ಮಾಡಲು ಸಿಕ್ಕಿತು. ಅದನ್ನು ಓದಲಾರಂಭಿಸಿದೆ. ಆ ಪ್ರತಿಯಲ್ಲಿ ಹಲವು ಕಡೆ ಕೆಲವು ಪದಗಳು ಒಂದರಮೇಲೆ ಬಂದು ಸರಿಯಾಗಿ ಕಾಣುತ್ತಿರಲಿಲ್ಲ. ಆಗ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಒಂದು ಉಪಾಯ ಹೊಳೆಯಿತು. ಒಂದು ಬ್ಲಾಗನ್ನು ಶುರುಮಾಡಿ ಅದರಲ್ಲಿ ಸರಿಪಡಿಸಿ ಪ್ರಕಟಿಸುವ ಆಲೋಚನೆ. ಜೊತೆಗೆ ಇದು ಕನ್ನಡ ಪುಟವಾಗಿರುವುದರಿಂದ download ಮಾಡುವ ಅವಶ್ಯಕತೆ ಇಲ್ಲ, ಯಾವುದೇ browserನಲ್ಲಿ ಸುಲಭವಾಗಿ ಓದಬಹುದು. ಸಮಯ ಸಿಕ್ಕಿದಾಗಲೆಲ್ಲ ಡಿಜಿಟಲೀಕರಿಸಿ ಬೇಗ ಇದನ್ನು ಮುಗಿಸುವ ಆಶಯ ನನ್ನದು. ಅಷ್ಟಲ್ಲದೆ, ಎಲ್ಲೆಂದರಲ್ಲಿ ಮೊಬೈಲ್ನಲ್ಲಿ ಓದಬಹುದು. ಮೊಬೈಲ್ನಲ್ಲಿ ಉಳಿಸಿಕೊಂಡರೆ Internet ಇಲ್ಲದಿದ್ದಾಗಲೂ ಓದಬಹುದು.

ಸಾಯಿ ಸಂಸ್ಥಾನದಲ್ಲಿನ ಕನ್ನಡ ಅವತಾರಿಣಿಕೆ ಎಲ್ಲರಿಗೂ ಉಚಿತವಾಗಿ ಓದಲು ಲಭ್ಯವಿರುವುದರಿಂದ ಅದನ್ನು ಇಲ್ಲಿ ಪ್ರಕಟಿಸಲು ಯೋಚಿಸುತ್ತಿರುವೆನು. ಇದು ಯಾವುದೇ ಕೃತಿಸ್ವಾಮ್ಯ ಹಕ್ಕನ್ನು ಉಲ್ಲಂಘಿಸುತ್ತಿಲ್ಲ ಎಂದು ಭಾವಿಸಿದ್ದೇನೆ. ಒಂದುವೇಳೆ ಹಾಗಾದಲ್ಲಿ, ದಯವಿಟ್ಟು ತಿಳಿಸಿ. ಇದನ್ನು ಸಂಪೂರ್ಣವಾಗಿ ಅಳಿಸಿಬಿಡುತ್ತೇನೆ.

Translated in Kannada by: Dr. R. Seethalakshmi M.D.,
           (Retd. Director of Medical Education, Govt. of Karnataka,) Mysore Karnataka.

ಆಂಗ್ಲ ಭಾಷೆಯ ಪುಸ್ತಕವನ್ನು ಕನ್ನಡಕ್ಕೆ ಬಹಳ ಸುಂದರವಾಗಿ ಅನುವಾದಿಸಿದ Dr|| ಆರ್. ಸೀತಾಲಕ್ಷ್ಮಿ ಅವರಿಗೆ ಹೃತ್ಪೂರ್ವಕ ನಮನಗಳು.

When I could not find any Sai Satcharite/saccharite/saccharitre in kannada, I decided to make that available via my Blog. This is an attempt to make those who want to read it in Kannada. Since the blog can also be marked for offline on the mobile, one can read it wherever and whenever one wishes even when there is no Internet. Please do give your comments/feedback for any corrections.

Note: Since the Kannada version of the book translated by Dr. R Seethalakshmi is available free to download on the website of Shirdi Sai Sansthan, I'm trying to make the content available here for everyone to read via browser. Hoping I'm not violating any copyrights. If so, please do let me know, I shall disable this blog entirely and will not publish it.

No comments:

Post a Comment

08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....