Sunday, July 19, 2020

02 ನಾಮಕರಣ ಮಹೋತ್ಸವದ ಬಗ್ಗೆ ವಿವರಿಸುವ ಉದ್ದೇಶ / Conferring Significant and Prophetic Title of 'Hemadpant'

॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

 

"ನಾಮಕರಣ ಮಹೋತ್ಸವದ ಬಗ್ಗೆ ವಿವರಿಸುವ ಉದ್ದೇ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.


 

ಹಿಂದಿನ ಅಧ್ಯಾಯದಲ್ಲಿ ದೇವತೆಗಳಿಗೆಕುಟುಂಬದ ಹಿರಿಯರಿಗೆ ಮತ್ತು ಗುರುಗಳಿಗೆ ಪ್ರಾರ್ಥಿಸುತ್ತ ಮಂಗಳಾಚರಣೆಯನ್ನು ಮಾಡಿ ಆಯಿತು.

 

ಸಾಯಿಸಚ್ಚರಿತೆಯ ಬೀಜಗಳನ್ನು ಬಿತ್ತಿದಮೇಲೆ ಕೈಗೆತ್ತಿಕೊಂಡ ಯೋಜನೆಯ ಉದ್ದೇಶವನ್ನು ಪ್ರಾರಂಭಿಸೋಣ.  ||1||

ನಾನು ಈಗ ಲೇಖಕನ ಅರ್ಹತೆ ಮತ್ತು ಸಂಕಲ್ಪವನ್ನು ಸಂಕ್ಷಿಪ್ತವಾಗಿ ತಿಳಿಯಪಡಿಸುತ್ತೇನೆಅದರಿಂದ ಶ್ರೋತೃಗಳು ಅನಾಯಾಸವಾಗಿ ಗ್ರಂಥದ ಒಳನೋಟವನ್ನು ಪಡೆಯುವರು||2||

ಮೊದಲನೆಯ ಅಧ್ಯಾಯದಲ್ಲಿಗೋಧಿಯನ್ನು ಬೀಸಿ ಹಿಟ್ಟು ಮಾಡುವ ಮತ್ತು ಕಾಲರಾರೋಗವನ್ನು ತಡೆದ ಬಗ್ಗೆ ಹಳ್ಳಿಗರಿಗೆ ಆಶ್ಚರ್ಯ ಉಂಟುಮಾಡುವ ರೀತಿಯಲ್ಲಿ ತಿಳಿಸಲಾಯಿತು||3||

ಈ ರೀತಿ ಸಾಯಿಯ ಲೀಲೆಗಳು ಅವರ್ಣನೀಯವಾದುವುಅವುಗಳನ್ನು ಕೇಳಿದರೇನೇ ಮುದಗೊಳಿಸುತ್ತವೆಆ ಸಂತೋಷವು ಪ್ರೀತಿಯ ಸಾಗರದಿಂದ ಉಕ್ಕಿಬಂದಿದೆಕಾವ್ಯರೂಪವನ್ನು ಪಡೆದುಕೊಂಡಿದೆ. ||4||

ಆದುದರಿಂದ ಸಾಯಿಗೆ ನನ್ನ ಧನ್ಯವಾದಭಕ್ತರಿಗೆ ಬೋಧಪ್ರದವಾದ ಅನುಭವಗಳನ್ನು ನನ್ನ ಕೈಲಾದಮಟ್ಟಿಗೆ ನೆನಪಿಸಿಕೊಂಡು ಬರೆಯಲು ಯೋಚಿಸಿದೆಅವುಗಳು ಅವರ ಪಾಪಗಳನ್ನು ನಾಶಮಾಡುತ್ತವೆ||5||

ಉದ್ದೇಶದಿಂದಲೇ ಗೌರವಪೂರ್ವಕವಾಗಿ ಪವಿತ್ರತೆಯಿ೦ದ ಸಾಯಿಯ ಈ ಕಥಾಸಂಕಲನವನ್ನು ಬರೆದಿದ್ದೇನೆಇವು ಇಹದಲ್ಲೂ ಪರದಲ್ಲೂ ಆನಂದ ತರುವಂತಹವು||6||

ಸಂತರ ಜೀವನ ಧರ್ಮಮಾರ್ಗವನ್ನು ತೋರಿಸುತ್ತದೆಅದು ಯಾವುದೇ ತರ್ಕಬದ್ಧ ಶಾಸ್ತ್ರವೂ ಅಲ್ಲಕಾನೂನು ಸಹ ಅಲ್ಲಸಂತರ ಅನುಗ್ರಹ ಪಡೆಯುವ ಪುಣ್ಯಪಡೆದಲ್ಲಿ ಅವನಿಗೆ ಯಾವುದೂ ಅಪರೂಪದ ಅಚ್ಚರಿಯಲ್ಲ||7||

ಆದುದರಿಂದಈ ಆನಂದವನ್ನು ಹಂಚಿಕೊಳ್ಳುವಂತೆ ಶ್ರೋತೃಗಳನ್ನು ಪ್ರಾರ್ಥಿಸುತ್ತೇನೆಯಾರು ಸತ್ಸಂಗದಲ್ಲಿ ನಿರತರೋಯಾರು ಸಂತರ ಜೀವನದ ಕಥೆಗಳನ್ನು ಭಕ್ತಿಯಿಂದ ಓದುತ್ತಿರುವರೋ ಅವರು ಅತ್ಯಂತ ಅನುಗ್ರಹೀತ ಅದೃಷ್ಟವಂತ ವ್ಯಕ್ತಿಗಳು||8||

ನನ್ನ ಆತ್ಮೀಯ ಸ್ನೇಹಿತಯಾರ ಜೊತೆಯಲ್ಲಿ ಹಗಲು-ರಾತ್ರಿ ಸಹವಾಸದಲ್ಲಿರುವೆನೋ ಅಂತಹ ದೀರ್ಥಕಾಲದ ಸ್ನೇಹಿತನ

ಜೀವನಚರಿತ್ರೆಯನ್ನೇ ಬರೆಯಲು ಸಾಧ್ಯವಾಗುತ್ತಿಲ್ಲಮತ್ತೆ ಒಬ್ಬ ಸಂತರ ಜೀವನ ಚರಿತ್ರೆಯನ್ನು ಹೇಗೆ ಬರೆಯಲಿ||9||

ನನ್ನ ಸ್ವಭಾವವನ್ನೇ ಪೂರ್ಣವಾಗಿ ನಾನು ಅರಿತಿಲ್ಲಮತ್ತೆ ನಾನು ಒಬ್ಬ ಸ೦ತರ ಯೋಚನಾಲಹರಿಯನ್ನು ಚಾಚೂ ತಪ್ಪದೆ ಹೇಗೆ ವಿವರಿಸಲಿ||10||

ನಾಲ್ಕು ವೇದಗಳೇ ನಮ್ಮ ಅ೦ತರಾತ್ಮವನ್ನು ವರ್ಣಿಸಲಾಗದೆ ಮೌನವಾಗಿರುವಾಗ ನಾನು ನಿನ್ನ ಆತ್ಮದ ಸತ್ಯಸ್ವರೂಪವನ್ನು ಹೇಗೆ ಅರ್ಥಮಾಡಿಕೊಳ್ಳಲಿ||11||

ತಾನೇ ಸಂತನಾಗಬೇಕುಮತ್ತೆ ಸ೦ತರ ಸತ್ಯಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡಬೇಕುಆದುದರಿಂದ ಸಂತರ ವಿವರಣೆ ಮಾಡಲು ನನಗಿರುವ ಪರಿಮಿತಿಯನ್ನು ನಾನು ಆಗಲೇ ಅರಿತಿದ್ದೇನೆ||12||

ಸಪ್ತಸಾಗರಗಳ ನೀರನ್ನು ಅಳೆಯಬಹುದುಆಗಸವನ್ನು ಅಳತೆ ಮಾಡಬಹುದುಆದರೆ ಒಬ್ಬ ಸಂತನ ಜೀವನವನ್ನು ಬಿಂಬಿಸುವ ಕನ್ನಡಿಯು ಇಲ್ಲವೇ ಇಲ್ಲ||13||

ನಾನೊಬ್ಬ ಪರಿಗಣಿಸಲ್ಪಡದಿರುವ ವ್ಯಕ್ತಿ ಎಂದು ಅರಿತಿರುವೆಆದರೆ ಬಾಬಾರವರ ಅಸಾಧಾರಣ ಶಕ್ತಿಯನ್ನು ಅರಿತಮೇಲೆ ತಡೆಯಲಾರದ ಭಾವನಾತ್ಮಕ ಗೀತಾ ತರಂಗಗಳು ಉಕ್ಕಿ ಬಂದವು||14||

ಜಯಜಯಸಾಯಿರಾಯನೀನು ನಿರಾಶ್ರಿತರಿಗೆ, ಅನಾಥರಿಗೆ ಆಶ್ರಿತನುನಿನ್ನ ಪ್ರೀತಿ ಅನಂತ ಮತ್ತು ಅವರ್ಣನೀಯನನ್ನ ಮೇಲೆ ಕೃಪೆಮಾಡುನಾನು ನಿನ್ನ ದಾಸನು||15||

ರೀತಿ ಸೀಮಿತವಾದ ಬಲ ಸಧ್ಯತೆಗಳಿಂದ ನಾನು ಕೃತಿ ರಚಿಸುವ ಸಾಹಸಕ್ಕೆ ಕೈಹಾಕಿದ್ದೇನೆನನ್ನನ್ನು ಯಾರೂ ಮೂದಲಿಸದಂತೆ ಮಾಡು||16||

ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ ಯಾರು ಸಂತರ ಜೀವನ ಚರಿತ್ರೆಯನ್ನು ಬರೆಯುತ್ತಾರೋಅವರು ದೇವರಿಂದ ಅನುಗ್ರಹೀತರಾಗಿದ್ದಾರೆಹಾಗಿರುವಾಗ ನನಗೆ ಏಕೆ ಹೆದರಿಕೆ||17||

ಇದನ್ನು ಬರೆಯುವ ಸ್ಫೂರ್ತಿಯು ದೇವರಿಂದಲೇನಾನು ದಡ್ಡನೂಮೂರ್ಖನೂ ಆಗಿದ್ದೇನೆತನ್ನ ಕೆಲಸವನ್ನು ಹೇಗೆ ಪೂರ್ಣಗೊಳಿಸಬಹದೆಂದು ಅವನಿಗೇ ತಿಳಿದಿದೆ||18||

ಸಂತರಿಗೆ ಯಾವ ರೀತಿಯ ಸೇವೆ ಮಾಡಬೇಕೆಂದು ಭಕ್ತರು ಯೋಚಿಸುತ್ತಾರೋ ಅವುಗಳನ್ನು ಸಂತರು ತಾವೇ ಸ್ವೀಕರಿಸುತ್ತಾರೆಭಕ್ತರು ಕೇವಲ ಅವರ ಕೈಯ ಉಪಕರಣಗಳುನಿಜವಾದ ಸ್ಫೂರ್ತಿಗೆ ಸಂತರೇ ಕಾರಣಕರ್ತರು||19||

ನಿಜವಾಗಿ ಸಾಯಿಯು ತಾನೇ  ಮೂರ್ಖನಿಂದ ತನ್ನ ಜೀವನ ಚರಿತ್ರೆಯನ್ನು ಬರೆಸುತ್ತಿದ್ದಾನೆಅದರಲ್ಲಿಯೇ ಈ ಗ್ರಂಥದ ಮಹತ್ವವು ಅಡಗಿದೆಅದರಿಂದ ಗೌರವಆದರಗಳು ಹೊರಹೊಮ್ಮುತ್ತವೆ||20||
ತಪಸ್ಪಿಗಳುಸಂತರು ಅಥವಾ ದೇವರು ತಮ್ಮ ಕಥೆಯನ್ನು ಬರೆಯಲು ಯಾರನ್ನು ಬೇಕಾದರೂ ಆರಿಸಬಹುದುಅವರನ್ನು ಅನುಗ್ರಹಿಸಬಹುದು||21||

ಶಕೆ 1700ರಲ್ಲಿ ಸಂತರು ಮಹೀಪತಿ ಎಂಬ ವ್ಯಕ್ತಿಗೆ ತಮಗೆ ಸೇವೆಮಾಡಲು ಪ್ರೋತ್ಸಾಹಿಸಿ ತಮ್ಮ ಜೀವನ ಚರಿತ್ರೆಯನ್ನು ಅವನಿಂದ ಬರೆಸಿದರು||22||

ಅದೇರೀತಿಹದಿನೆಂಟುನೂರು ಶಕೆಯಲ್ಲಿ ಸಂತರು ದಾಸಗಣು ಎಂಬುವವರ ಸೇವೆಯನ್ನು ಸ್ವೀಕರಿಸಿ ಸಕಲರನ್ನೂ ಪಾವನಗೊಳಿಸುವ ಸಂತರ ಜೀವನ ಚರಿತ್ರೆಯನ್ನು ಬರೆಸಿದರು||23||

ಮಹೀಪತಿ ಯವರು ನಾಲ್ಕು ಗ್ರಂಥಗಳನ್ನುರಚಿಸಿದ್ದಾರೆ. 'ಭಕ್ತವಿಜಯ' 'ಸಂತವಿಜಯ', 'ಭಕ್ತಲೀಲಾಮೃತಮತ್ತು 'ಸಂತಲೀಲಾಮೃತ'. ಅದೇ ರೀತಿ ದಾಸಗಣುರವರು ಎರಡು ಅಂತಹ ಗ್ರಂಥಗಳನ್ನು ರಚಿಸಿದ್ದಾರೆ||24||

ಆ ಗ್ರಂಥಗಳಲ್ಲಿ ಒಂದು 'ಭಕ್ತಲೀಲಾಮೃತ'. ಮತ್ತೊಂದು 'ಸಂತ ಕಥಾಮೃತ'. ಈ ಎರಡು ಗ್ರಂಥಗಳಲ್ಲಿಯೂ ಆಧುನಿಕ ಕಾಲದ ಭಕ್ತರ ಮತ್ತು ಸಂತರ ಬಗ್ಗೆ ತಿಳಿದಿರುವಷ್ಟು ವಿಷಯಗಳನ್ನು ವಿವರಿಸಲಾಗಿದೆ||25||

ಶ್ರೀ ಸಾಯಿ ಕಥಾಮೃತವನ್ನು 'ಭಕ್ತಲೀಲಾಮೃತಗ್ರಂಥದಲ್ಲಿ ಮೂರು ಅಧ್ಯಾಯಗಳಲ್ಲಿ ವಿವರಿಸಿದ್ದಾರೆಓದುಗರು ಅದನ್ನು ಅಲ್ಲಿಂದ ಓದಬೇಕು||26||

ಅದೇರೀತಿಸ೦ತ ಕಥಾಮೃತಪುಸ್ತಕದಲ್ಲಿನ 57ನೆಯ ಅಧ್ಯಾಯದಲ್ಲಿ ಸಾಯಿಯವರು ಒಬ್ಬ ಭಕ್ತನಿಗೆ ಹೇಳಿದ ಬೋಧಪ್ರದವಾದ ಕತೆಯೂ ಇರುವುದುಅದನ್ನೂ ಸಹ ಓದುಗರು ಓದಬೇಕು||27||

ಅದಲ್ಲದೆಸಾಯಿಯ ಲೀಲೆಗಳು ರಘುನಾಥ ಮತ್ತು ಸಾವಿತ್ರಿರವರ ಸ್ವಾನುಭವದಿಂದ ಹೊರಬಂದ 'ಭಜನಮಾಲಾಎಂಬುದರಲ್ಲಿಯೂ ಕಾಣಸಿಗುತ್ತದೆನಿಶ್ಚಯವಾಗಿ ಅವುಗಳು 'ಅಭಂಗ'ಗಳು ಮತ್ತು 'ಪದ'ಗಳು ಹಾಡಲು ಪ್ರೇರೇಷಿಸುತ್ತವೆ||28||

'ಭಜನಮಾಲಾಗ್ರಂಥಕ್ಕೆ ಸಾಯಿಯವರ ಮಗುಹರಿಸೀತಾರಾಮ ದೀಕ್ಷಿತ್‌ರವರು ಪ್ರೀತಿಯಿಂದ ಬರೆದ ಮುನ್ನುಡಿಯಲ್ಲಿ ಸಾಯಿಯ ಜೀವನದ ಅಮೃತ ಕಥಾಧಾರೆಯನ್ನು ಹರಿಸಿದ್ದಾರೆಅದು ಬಾಯಾರಿದ ಚಕೋರಪಕ್ಷಿಗೆ ಜಲಧಾರೆ ಸುರಿದಂತಿದೆಶ್ರೋತೃಗಳು ಸಹ ಅವುಗಳನ್ನು ಗೌರವಪೂರ್ವಕವಾಗಿ ಸ್ಟೀಕರಿಸಬೇಕು||29||

ದಾಸಗಣುರವರು ರಚಿಸಿದ ವಿವಿಧ ಕವಿತೆಗಳು ಭಾವಪೂರ್ವಕವಾಗಿವೆಬಾಬಾರವರ ಲೀಲೆಗನ್ನು ಓದುತ್ತಿದ್ದರೆ ಶ್ರೋತೃಗಳ ಹೃದಯಕ್ಕೆ ಮಹದಾನಂದವನ್ನುಂಟುಮಾಡುತ್ತದೆ||30||

ಅದೇ ರೀತಿ ಗುಜರಾತಿ ಭಕ್ತರಿಗೆಅಮೀದಾಸ ಭವಾನೀದಾಸ ಮೆಹತ ಎಂಬ ಭಕ್ತನು ಬಹಳ ಪ್ರೇಮಪೂರ್ವಕವಾಗಿ ಅನೇಕ ಪವಾಡಗಳ ಕತೆಗಳನ್ನು ಬರೆದಿರುತ್ತಾನೆ||31||

ಅದಲ್ಲದೆಕೆಲವು ಅಸೀಮ ಭಕ್ತರು 'ಪುಣೆನಗರದಿಂದ 'ಸಾಯಿಪ್ರಭಎಂಬ ಹೆಸರಿನಿಂದ ಬಾಬಾರವರ ಅನೇಕ ಕತೆಗಳನ್ನು ಪ್ರಕಟಿಸಿರುತ್ತಾರೆ||32||

ಅ೦ತಹ ಕತೆಗಳು ಇರುವಾಗಈ ಗ್ರಂಥದ ಅವಶ್ಯಕತೆ ಎಲ್ಲಿತ್ತುಈ ರೀತಿಯ ಸಂಶಯ ಶ್ರೋತೃಗಳ ಮನಸ್ಸಿನಲ್ಲಿ ಉಂಟಾಗಬಹುದುಆದ್ದರಿಂದ ದಯಮಾಡಿ ಈ ವಿವರಣೆಯನ್ನು ಗಮನವಿಟ್ಟು ಕೇಳಿರಿ||33||

ಸಾಯಿಯ ಜೀವನ ಚರಿತ್ರೆಯು ಒಂದು ಮಹಾಸಾಗರವಾಗಿದೆಅದಕ್ಕೆ ಅಂತ್ಯವಿಲ್ಲಅದು ಅನರ್ಫ್ಯ ಮುತ್ತುಗಳಿಂದ ತುಂಬಿದೆನಾನೊಬ್ಬ ಕೇವಲ ಸಣ್ಣ ಹಕ್ಕಿಸಾಗರವನ್ನು ಕುಡಿದು ಹೇಗೆ ಖಾಲಿ ಮಾಡಲಿಅದು ಎಂದಿಗಾದರೂ ಸಾಧ್ಯವೇ||34||

ಅದೇ ರೀತಿ, ಸಾಯಿಯ ಜೀವನ ಅಗಾಧವಾಗಿದೆಅದನ್ನು ಪೂರ್ತಿಯಾಗಿ ವಿವರಿಸಲು ಸಾಧ್ಯವಿಲ್ಲಆದ್ದರಿಂದ ನಾನು ಎಷ್ಟು ಸಾಧ್ಯವೋ ಅಷ್ಟು ಮಾಡುವೆದಯಮಾಡಿ ಅದರಿಂದಲೇ ತೃಪ್ತಿಪಡುವುದು||35||

ಅಪರಿಮಿತವಾದಅಸಾಮಾನ್ಯವಾದ ಸಾಯಿಯ ಕತೆಗಳು ಈ ಭವಸಾಗರದಲ್ಲಿ ಮುಳುಗಿ ಹೋದವರಿಗೆ ಶಾಂತಿಯನ್ನು ನೀಡುತ್ತದೆಶ್ರೋತೃಗಳು ಅವುಗಳನ್ನು ಕೇಳಿ ಆನ೦ದಭರಿತರಾಗುತ್ತಾರೆ ಮತ್ತು ತನ್ನ ಭಕ್ತರ ಮನಸ್ಸಿಗೆ ಶಾಂತಿಯನ್ನುಂಟುಮಾಡುತ್ತದೆ||36||

ಬಾಬಾರವರು ಅನೇಕ ಕತೆಗಳನ್ನು ಹೇಳುತ್ತಿದ್ದರುಅವುಗಳಲ್ಲಿ ಜನಸಾಮಾನ್ಯರ ನಿತ್ಯ ಅನುಭವಗಳ ಬಗ್ಗೆ ಪ್ರಾಪಂಚಿಕ ಸಲಹೆ ಹಾಗೂ ಅವರವರ ಕರ್ಮಗಳ ರಹಸ್ಯಗಳನ್ನು ಒಳಗೊಂಡಿರುತ್ತಿದ್ದವು||37||

ದೈವಿಕ ಗ್ರಂಥಗಳಾದ ವೇದಗಳು ಎಲ್ಲರಿಗೂ ತಿಳಿದ ವಿಷಯಅವುಗಳಿಂದ ಅನೇಕ ಅಸಾಧಾರಣ ಸಾಹಿತ್ಯಗಳು ಹೊರಬಂದಿವೆಬಾಬಾರವರು ಇಂತಹ ಅನೇಕ ಅರ್ಥಗರ್ಭಿತವಾದಮಧುರವಾದಲೆಕ್ಕವಿಲ್ಲದಷ್ಟು ಕತೆಗಳನ್ನು ಹೇಳುತ್ತಿದ್ದರು||38||

ಅವುಗಳನ್ನು ಗಮನವಿಟ್ಟು ಆಲಿಸಿದಾಗ, ಇತರ ಸಂತೋಷಗಳು ತುಚ್ಛವಾಗುತ್ತವೆ. ಹಸಿವೆಬಾಯಾರಿಕೆಗಳು ಮಾಯವಾಗುತ್ತವೆಅಂತರಾಳದಿಂದ ಆಳವಾದ ತೃಪ್ತಿ ಉಂಟಾಗುತ್ತದೆ||39||

ಕೆಲವರು ಬ್ರಹ್ಮತ್ತದ ಸಾರದಲ್ಲಿ ಲೀನವಾಗುತ್ತಾರೆಕೆಲವರು ಅಷ್ಟಾಂಗ ಯೋಗದಲ್ಲಿ ಸಿದ್ಧರಾಗುತ್ತಾರೆಕೆಲವರು ಸಮಾಧಿಯ ಪೂರ್ಣತ್ವದಲ್ಲಿ ಒಂದಾಗುತ್ತಾರೆಈ ಅನುಭವಗಳು ಕತೆಗಳನ್ನು ಆಲಿಸಿದಾಗ ಉಂಟಾಗುತ್ತವೆ||40||

ಕರ್ಮಬಂಧನವೂ ಪೂರ್ಣವಾಗಿ ಕಳಚಿಕೊಳ್ಳುತ್ತದೆಮನಸ್ಸು ಪ್ರಕಾಶಮಾನವಾಗುತ್ತದೆ ಮತ್ತು

ಬ್ರಹ್ಮಾನಂದವನ್ನು ಎಲ್ಲಾ ಶ್ರೋತೃಗಳೂ ಅನುಭವಿಸಬಹುದು||41||

ಆದುದರಿಂದಈ ಅಮೂಲ್ಯವಾದ ಕತೆಗಳ ಮಾಲೆಯನ್ನು ಹೆಣೆಯಲು ಅತ್ಯಂತ ಉತ್ಪಾಹ ಹಾಗೂ ಮಹದಾಸೆ ಉಂಟಾಗಿದೆಇದನ್ನು ಅತ್ಯಂತ ಉತ್ತಮವಾದ ಉಪಾಸನೆ ಎಂದು ನಂಬಿದ್ದೇನೆ||42||

ಕಿವಿಗಳ ಮೇಲೆ ಕೆಲವೇ ಪದಗಳು ಬಿದ್ದಲ್ಲಿ ಆಜೀವಪರ್ಯಂತದ ದುರಾದ್ಯಷ್ಟಗಳು ಮಾಯವಾಗುತ್ತವೆಈ ಪೂರ್ಣ ಕತೆಯನ್ನು ಆದರದಿಂದ ಶ್ರದ್ಧಾಪೂರ್ವಕವಾಗಿ ಕೇಳಿದಲ್ಲಿ ಈ ಭವಸಾಗರವನ್ನು ದಾಟಬಹುದು||43||

ಅವನು ನನ್ನ ಕೈಯನ್ನು ಹಿಡಿದು ಲೇಖನಿಯನ್ನಾಗಿ ಮಾಡುತ್ತಾನೆಮತ್ತು ಬರೆಸುತ್ತಾನೆ. ನಾನು ಹೆಸರಿಗಷ್ಟೇ ಅದರ ಕತೃಅವನ ಬರವಣಿಗೆಗೆ ನಾನು ಕೇವಲ ನಿಮಿತ್ತಮಾತ್ರ||44||

ಬಾಬಾರವರ ಲೀಲೆಗಳನ್ನು ಅವಲೋಕಿಸುತ್ತವರ್ಷಗಳಮೇಲೆ ವರ್ಷಗಳು ಕಳೆದಂತೆ ಬಾಬಾರವರ ಕತೆಗಳನ್ನು ಅವರ ಪ್ರೀತಿಯ ಸರಳ ಭಕ್ತರಿಗಾಗಿ ಸಂಗ್ರಹಿಸುವುದೇ ಒಂದು ಕೆಲಸವಾಯಿತು||45||

ಬಾಬಾರವರ ದರ್ಶನದಿಂದ ಯಾರ ಕಣ್ಣುಗಳಿಗೆ ತೃಪ್ತಿ ಉಂಟಾಗುವುದಿಲ್ಲವೋಅವರಿಗೆ ಬಾಬಾರವರ ಕತೆಗಳ ಶ್ರವಣವು ಪುಣ್ಯಕರವೂಪರಿಶುದ್ಧತೆಯನ್ನು ನೀಡುವಂತಹದೂ ಆಗಿದೆ||46||

ಈ ಗ್ರಂಥವನ್ನು ಓದಲು ಇಚ್ಛಿಸುವ ಪುಣ್ಯವಂತರು ಸದಾ ಸಂತೋಷಆನಂದ ಮತ್ತು ತೃಪ್ತಿಯಿಂದ ಕೂಡಿರುತ್ತಾರೆ||47||

ಈ ಯೋಚನೆಗಳು ನನ್ನ ಮನದಲ್ಲಿ ಮೂಡಿದಾಗ ನಾನು ಮಾಧವ ರಾವ್‌ ಅವರಿಗೆ ಇದರ ಬಗ್ಗೆ ತಿಳಿಸಿದೆ. ಆದರೆ ಅವುಗಳನ್ನು ನಾನು ಹೇಗೆ ಸಾಧಿಸಬಲ್ಲೆ ಎಂಬುದರ ಬಗ್ಗೆ ಸಂಶಯ ಹುಟ್ಟಿತು||48||

ನನಗೆ 60 ವರ್ಷಗಳು ಕಳೆದಿವೆಬುದ್ಧಿಯು ಅರಳು-ಮರಳು ಆಗಿದೆ ಮತ್ತು ದೈಹಿಕ ಕುಂದಿನಿಂದಲೂ ನನ್ನ ಪ್ರಯತ್ನಗಳು ಮುದುಕನ ಪ್ರಯತ್ನಗಳಂತೆ ಅ೦ತ್ಯಗೊಳ್ಳಬಹುದು||49||

ಸಾಯಿಯ ಪ್ರೀತಿಗಾಗಿ ನನ್ನ ಪ್ರಯತ್ನಗಳೆಲ್ಲ ಇರಲಿನನಗೆ ಇದನ್ನು ಅನುಭವಿಸಲು ಸಾಧ್ಯವಾಗಬಹುದುಇಲ್ಲದಿದ್ದಲ್ಲಿ ಇವೆಲ್ಲ ಅಪ್ರಯೋಜಕಆದ್ದರಿಂದಲೇ ಈ ಪ್ರಯತ್ನ||50||

ಹಗಲು ಇರುಳು ದಿವ್ಯ ಅನುಭವಗಳನ್ನು ಅನುಭವಿಸಿದ ನಾನು ಇದರ ಬಗ್ಗೆ ಮಾಹಿತಿಯನ್ನು ಬರೆಯಲು ನಿರ್ಧರಿಸಿದೆ. ಅದರ ಅಧ್ಯಯನದಿಂದ ಮನಸ್ಸು ಶಾಂತಿ ಮತ್ತು ವಿಶ್ರಾಂತಿಯನ್ನು ಪಡೆಯುತ್ತದೆ||51||

ಸ್ವಯಂ ವೇದ್ಯವಾದ ಮತ್ತು ಸ್ವಸ್ವರೂಪ ಸ್ಥಿತಿಯ ಆಧಾರದ ಮೇಲೆ ಹೊರಬಂದ ಸಾಯಿಯ ವಚನಗಳನ್ನು ಯಾವುದೇ ಬದಲಾವಣೆಗಳಿಲ್ಲದೆ ಶ್ರೋತೃಗಳ ಮುಂದಿಡಲು ಯೋಚಿದೆನು||52||

ಬಾಬಾರವರು ಅನೇಕ ಉಪಮೆಗಳನ್ನು ತಿಳಿಸಿ ಭಕ್ತಿಮಾರ್ಗದಲ್ಲಿ ಅನೇಕರನ್ನು ಕರೆದೊಯ್ದಿದ್ದಾರೆಎಲ್ಲವನ್ನೂ ಸಂಗ್ರಹಿಸಿದಲ್ಲಿ ಅದು ಸಾಯಿ ಧರ್ಮದ ಕೃತಿಯಾಗುತ್ತದೆ||53||

ಯಾರು ಈ ಕತೆಗಳನ್ನು ಹೇಳುತ್ತಾರೋಯಾರು ಇವುಗಳನ್ನು ಗೌರವದಿಂದ ಕೇಳುತ್ತಾರೋ ಇಬ್ಬರೂ ಶಾಶ್ವತವಾದ ಸುಖ ಮತ್ತು ಶಾಂತಿಗಳನ್ನು ಪಡೆಯುತ್ತಾರೆ||54||

ಬಾಬಾರವರು ಹೇಳಿದ ಕತೆಗಳನ್ನು ಕೇಳುತ್ತಲೇ ತಮ್ಮ ದೇಹದ ವ್ಯಾಧಿಗಳನ್ನೆಲ್ಲ ಮರೆಯುತ್ತಾರೆಅವುಗಳನ್ನು ಶ್ರದ್ಧೆಯಿಂದ ಮನನ ಮಾಡಿದಲ್ಲಿ ಸ್ವಾಭಾವಿಕವಾಗಿಯೇ ಬಂಧನಗಳಿಂದ ಮುಕ್ತರಾಗುತ್ತಾರೆ||55||

ಸಾಯಿಯವರ ಬಾಯಿಯಿಂದಲೇ ಕೇಳಿದ ಕತೆಗಳು ಅಮೃತಕ್ಕಿಂತಲೂ ಮಧುರವಾಗಿವೆಅವುಗಳನ್ನು ಕೇಳಿ ಶ್ರೋತೃಗಳು ಪರಮಾನಂದದಿಂದ ಕುಣಿಯಲಿದ್ದಾರೆಅವುಗಳ ಮಾಧುರ್ಯವನ್ನು ಹೇಗೆ ವರ್ಣಿಸಲಿ||56||

ಆ ಕತೆಗಳನ್ನು ಯಾವುದೇ ಉದ್ದೇಶವಿಲ್ಲದೆಯೇ ಗುಣಗಾನಮಾಡುತ್ತಾರೋ, ಹಾಡುತ್ತಾರೋ ಅಂಥಹವರ ಚರಣಧೂಳಿಯಲ್ಲಿ ಹೊರಳಾಡಿದರೆ ಮೋಕ್ಷವನ್ನು ಪಡೆಯಲು ನನಗೆ ಸಾಧ್ಯವಾಗುತ್ತದೆ ಎಂಬುದು ನನ್ನ ಅನಿಸಿಕೆ||57||

ಕತೆಗಳ ವಿಶೇಷ ನಿರೂಪಣೆಯಲ್ಲಿ ನಿಶ್ಚಿತವಾದ ಪದಗಳ ಜೋಡಣೆಯು ಶ್ರೋತೃಗಳನ್ನು ಪೂರ್ಣವಾಗಿ ಅವನಲ್ಲಿ ಲೀನವಾಗಿಸಿ ಪೂರ್ಣಾನಂದದ ಅನುಭವನ್ನು ದಯಪಾಲಿಸುತ್ತದೆ||58||

ಆ ಕತೆಗಳನ್ನು ಆಲಿಸಲು ಕಿವಿಗಳು ಕಾತರಗೊಳ್ಳುವ ರೀತಿಯಲ್ಲಿ ಅಥವಾ ಕಣ್ಣುಗಳು ದರ್ಶನಕ್ಕಾಗಿ ಹಾತೊರೆಯುವ ರೀತಿಯಲ್ಲಿ ಮನಸ್ಸು ಸಹ ಏಕಾಗ್ರತೆಗಾಗಿ ಕಾತರಗೊಳ್ಳುತ್ತದೆ ಮತ್ತು ಸುಲಭವಾಗಿ ದಿವ್ಯಾನಂದದ ಸಾಗರದಲ್ಲಿ ಮುಳುಗುತ್ತದೆ||59||

ಗುರುಮಾತೆಯು ನನ್ನ ತಾಯಿಮತ್ತು ಆಕೆಯ ಬಗೆಗಿನ ಕತೆಗಳನ್ನು ಬಾಯಿಯಿಂದ ಬಾಯಿಗೆ ಕೇಳಿದಲ್ಲಿ ಅವುಗಳನ್ನು ಹೃದಯದಲ್ಲಿ ಆದರದಿಂದ ಪೋಷಿಸಬೇಕು||60||

ಅದೇ ಕತೆಯನ್ನು ಮತ್ತೆ ಮತ್ತೆ ಮರುಕಳಿಸಿ ನಮಗೆ ಸಾಧ್ಯವಾದಷ್ಟು ಅರಗಿಸಿಕೊಂಡು ಅವುಗಳನ್ನು ಪ್ರೀತಿಯೆಂಬ ಬಂಧನದಿಂದ ಬಂಧಿಸಿ ನಂತರ ನಮ್ಮನಮ್ಮಲ್ಲಿ ಹಂಚುತ್ತೇವೆ||61||

ಈ ಗ್ರಂಥದಲ್ಲಿ ನಾನು ಸ್ವಂತದ್ದಾಗಿ ಏನನ್ನೂ ಬರೆದಿಲ್ಲಇದೆಲ್ಲವೂ ಸಾಯಿನಾಥನಿಪ್ರೇರಣೆಯೇನಾನು ಏನನ್ನು ಹೇಳಬೇಕೆಂದು ಅವನು ಇಚ್ಛಿಸುತ್ತಾನೋಅದನ್ನೇ ನಾನು ತಿಳಿಸುವಂತೆ ಮಾಡುತ್ತಾನೆ||62||

'ನಾನು ಹೇಳುತ್ತೇನೆ' ಎಂಬುದನ್ನು ಮರೆತಿದ್ದೇನೆ. ಸಾಯಿ ತಾನೇ ಸರಪಳಿಗಳಿಂದ ನನ್ನನ್ನು ಆಡಿಸುತ್ತಿದ್ದಾನೆಅವನೇ ನನ್ನ ಮೂಲಕ ಮಾತನಾಡಿಸುತ್ತಿದ್ದಾನೆಇನ್ನು 'ನಾನು ಹೇಳುತ್ತಿದ್ದೇನೆ' ಎಂದು ಹೇಳಲು ನಾನು ಯಾರು||63||

ಯಾರು 'ಅಹಂ'ಭಾವವನ್ನು ಅವನ ಚರಣಗಳಲ್ಲಿ ಸಂಪೂರ್ಣವಾಗಿ ಅರ್ಪಿಸಿದ್ದಾರೋ ಅವರಿಗೆ ಪರಮಾನಂದವು ದೊರೆಯುತ್ತದೆ. 'ಅಹಂ'ಭಾವ ನಾಶವಾದಕೂಡಲೇ ಪ್ರಾಪಂಚಿಕ ಜೀವನವೆಲ್ಲವೂ ಆನಂದಮಯವಾಗುತ್ತದೆ||64||

ನನಗೆ ಯೋಚನೆಗಳು ಮೂಡಿಬಂದಾಗಬಾಬಾರವರನ್ನು ಕೇಳುವ ಅವಕಾಶವೂ ಇರಲಿಲ್ಲಕೇಳುವ ಧೈರ್ಯವೂ ಬರಲಿಲ್ಲಮಸೀದಿಯ ಮೆಟ್ಟಲು ಹತ್ತಿ ಬಂದ ಮಾಧವರಾವ್‌ ಹತ್ತಿರ ಅದನ್ನು ಹೇಳಿದೆ||65||

ಅದೇ ಸಮಯದಲ್ಲಿ ಸುತ್ತಮುತ್ತಲು ಯಾರೂ ಇಲ್ಲದ್ದನ್ನು ನೋಡಿಕೊಂಡು ಮಾಧವರಾವ್‌ ಬಾಬಾರವರನ್ನು ಕೇಳುವ ಅವಕಾಶ ಪಡೆದನು||66|| "ಬಾಬಾಅಣ್ಣಾ ಸಾಹೇಬನಿಗೆ ನಿಮ್ಮ ಜೀವನ ಚರಿತ್ರೆಯನ್ನು ಬರೆಯುವ ಮನಸ್ಸಾಗಿದೆನೀವು ಒಪ್ಪಿಗೆ ನೀಡಿದಲ್ಲಿ ತನಗೆ ಸಾಧ್ಯವಾದಷ್ಟು ಬರೆಯುವುದಾಗಿ ಹೇಳುತ್ತಿದ್ದಾನೆ"||67||

"ನಾನೊಬ್ಬ ಫಕೀರಬಾಗಿಲಿಂದ ಬಾಗಿಲಿಗೆ ಭಿಕ್ಷೆ ಬೇಡುತ್ತ ಅಲೆದಾಡುವವನುಭಾಕ್ರಿ(ರೊಟ್ಟಿ)ಯನ್ನು ತರಕಾರಿ ಇದ್ದೋ ಇಲ್ಲದೆಯೋ ತಿನ್ನುತ್ತ ದಿನಗಳೆಯುವವನುಹಾಗಿರುವ ನನ್ನ ಜೀವನಚರಿತ್ರೆ ಏಕೆ"||68||

"ಅದು ಅಸಂಬದ್ಧವಾಗುತ್ತದೆ". "ಈ ರೀತಿ ಈ ರತ್ನದ ಬಗ್ಗೆ ಹೇಳಬೇಡಿಅದನ್ನು ಅಸಾಮಾನ್ಯವಾದ ಆಭರಣವನ್ನಾಗಿ ಮಾಡಬೇಕು||69||

"ಅದು ಹೇಗಾದರೂ ಆಗಲಿನಿಮ್ಮ ಅನುಮತಿ ಮಾತ್ರ ಬಹಳ ಮುಖ್ಯವಾದುದುತಾವು ಸಹಕಾರ ನೀಡಿದಲ್ಲಿ ಅವನು ಬರೆಯುತ್ತಾನೆಅಥವಾ ನಿಮ್ಮ ಅನುಗ್ರಹವು ಅವನ ಮೂಲಕ ಬರೆಸುತ್ತದೆಮತ್ತು ಎಲ್ಲ ದುಷ್ಟಶಕ್ತಿಗಳನ್ನೂ ನಿವಾರಿಸುತ್ತದೆ"||70||

"ಸಂತರ ಆಶೀರ್ವಾದಗಳಿಂದ ಮಾತ್ರ ಗಂಥ ರಚನೆಯನ್ನು ಪ್ರಾರಂಭಿಸಬಹುದುನಿಮ್ಮ ಅನುಗ್ರಹವಿಲ್ಲದೆ ಬರವಣಿಗೆಯು ಸುಲಲಿತವಾಗಿ ಸಾಗುವುದಿಲ್ಲ"||71||

ನನ್ನ ಅಂತರಂಗದ ಅಭಿಲಾಷೆಯನ್ನು ಅರಿತು ಸಾಯಿಸಮರ್ಥರಲ್ಲಿ ಕರುಣೆ ಉಕ್ಕಿಬಂದಿತು ಮತ್ತು ಹೇಳಿದರು, “ಅವನ ಆಸೆ ನೆರವೇರುತ್ತದೆ"ನಾನು ನನ್ನ ಮಸ್ತಕವನ್ನು ಅವರ ಚರಣಗಳಲ್ಲಿ ಇಟ್ಟೆನು||72||

ಸಾಯಿಯು ಈ ಎಲ್ಲಾ ವಿಧಿಗಳ ಉಪಾಸನೆ ಹಾಗೂ ದೈವಶ್ರದ್ಧೆಗಳಲ್ಲಿ ಪರಿಣತರು ಮತ್ತು ಎಲ್ಲಾ ಭಕ್ತರ ರಕ್ಷಕರೂ ಹೌದುಅವರು ನನಗೆ 'ಉದಿಯ' ಪ್ರಸಾದವನ್ನು ಕೊಟ್ಟು ವರಪ್ರದಾಯಕ ಹಸ್ತವನ್ನು ನನ್ನ ತಲೆಯಮೇಲೆ ಇಟ್ಟರು||73||

ಮಾಧವರಾವ್‌ನ ಪ್ರಾರ್ಥನೆಯನ್ನು ಆಲಿಸಿದ ಮೇಲೆ ಸಾಯಿಯು ನನ್ನ ಮೇಲೆ ದಯೆತೋರಿ ನನ್ನ ಚಂಚಲವಾದ ಮನಸ್ಸನ್ನು ಪರಿಶುದ್ಧಗೊಳಿಸಿ ನನ್ನಲ್ಲಿ ಧೈರ್ಯವನ್ನು ತುಂಬಿದರು||74||

ನನ್ನ ಆಸೆಯನ್ನು ಅರಿತನ೦ತರ ನನಗೆ ಮುಂದುವರೆಯಲು ಅನುವತಿ ನೀಡುತ್ತ ಹೇಳಿದರು "ಒಳ್ಳೆಯ ಕತೆಗಳನ್ನುಘಟನೆಗಳನ್ನು ಮತ್ತು ಅನುಭವಗಳನ್ನು ಸಂಗ್ರಹಿಸು"||75||

"ಎಲ್ಲವನ್ನೂ ದಾಖಲಿಸಿದರೆ ಒಳ್ಳೆಯದುನನ್ನ ಮನಃಪೂರ್ವಕ ಪ್ರೋತ್ಸಾಹ ಇದೆಲೇಖಕ ಕೇವಲ ನಿಮಿತ್ತ ಮಾತ್ರ ನಾನೇ ಸ್ವತಃ ಬರೆಯುತ್ತೇನೆ"||76||

"ನನ್ನ ಕತೆಯನ್ನು ನಾನೇ ಸ್ವತಃ ಬರೆಯುವೆಭಕ್ತರ ಇಚ್ಛೆ ಗಳನ್ನು ಪೂರೈಸಬೇಕಾಗುತ್ತದೆಅದರಿಂದ ನಿನ್ನ 'ಅಹಂ'ಭಾವವನ್ನು ಅಳಿಸಿ ನನ್ನ ಚರಣಗಳಲ್ಲಿ ಹಾಕಿಕೊಳ್ಳುತ್ತೀನೆ"||77||

"ತನ್ನ ಜೀವನದಲ್ಲಿ ಈ ರೀತಿ ಜೀವಿಸುವವನಿಗೆ ಸಂಪೂರ್ಣ ಸಹಕಾರ ನೀಡುತ್ತೇನೆಅವನು ಜೀವನ ಚರಿತ್ರೆಯನ್ನು ರಚಿಸುವುದಷ್ಟಕ್ಕೇ ಅಲ್ಲ ಅವನ ಮನೆಯಲ್ಲಿ ವಾಸಮಾಡಿ ಅವನ ಸೇವೆ ಮಾಡುತ್ತೇನೆ"||78||

"'ಅಹಂ'ಭಾವವು ಕಡಿಮೆಯಾಗಿಕೊನೆಯಲ್ಲಿ ಪೂರ್ಣವಾಗಿ ನಾಶವಾದಾಗನಾನು ಅವನಲ್ಲಿ ನೆಲಸುತ್ತೇನೆ ಮತ್ತು ನಾನೇ ಸ್ಪತಃ ಕೈಗಳಿಂದ ಬರೆಯುತ್ತೇನೆ"||79||

ಈ ಪ್ರಮಾಣ ವಚನವು ಈ ದೃಢತೆಯಿಂದ ಪ್ರಾರಂಭವಾಯಿತುಯಾವುದೇ ಆಲೋಚನೆಯುಬರವಣಿಗೆಯುಅವನಿಂದಲೇ ರಚಿಸಲ್ಪಟ್ಟಿತುಲೇಖಕರು ಕೇವಲ ನಿಮಿತ್ತಮಾತ್ರ||80||

"ನೀನು ಮನೆಯಲ್ಲಿರು ಅಥವಾ ಹೊರಗಿರುದಾಖಲೆಗಳನ್ನು ಮಾತ್ರ ಖಂಡಿತವಾಗಿ ಇಟ್ಟುಕೊಆಗಾಗ್ಗೆ ಅವುಗಳನ್ನು ನೆನಪಿಸಿಕೊನಿನಗೆ ಶಾಂತಿ ದೊರೆಯುತ್ತದೆ"||81||

"ನೀನು ನನ್ನ ಕತೆಗಳನ್ನು ಕೇಳಿದಾಗ, ಹೇಳಿದಾಗ ಮತ್ತು ಅವುಗಳ ಬಗ್ಗೆ ಮನನ ಮಾಡಿದಾಗಲೂ ನನ್ನ ಬಗ್ಗೆ ಭಕ್ತಿ ಹುಟ್ಟಿ ಅಜ್ಞಾನವು ಪೂರ್ಣವಾಗಿ ನಾಶವಾಗುತ್ತದೆ"||82||

"ಭಕ್ತಿ ಇದ್ದಲ್ಲಿ ತ್ರದ್ಧೆ ಉಂಟಾಗುತ್ತದೆಆಗ ನಾನು ಸದಾ ಶಕ್ತಿವಂತನಾಗಿ ಇರುತ್ತೇನೆಅದರ ಬಗ್ಗೆ ಸಂಶಯ ಬೇಡನನ್ನನ್ನು ಪಡೆಯಲು ಅಸಾಧ್ಯವಾಗಿರುತ್ತದೆ"||83||

"ಈ ಕತೆಯನ್ನು ಮನಸ್ಸಿಟ್ಟು ಕೇಳಿದ ಶ್ರೋತೃಗಳಲ್ಲಿ ಅಸೀಮ ಶ್ರದ್ಧೆಯು ಜಾಗೃತವಾಗುತ್ತದೆಮತ್ತು ಅವರು ಅತಿ ಸುಲಭವಾಗಿ ಬ್ರಹ್ಮಾನಂದವನ್ನು ಅನುಭವಿಸುತ್ತಾರೆಮತ್ತು ಶಾಶ್ವತ ಆನಂದದ ಸ್ಥಿತಿಯನ್ನು ಪಡೆಯುತ್ತಾರೆ"||84||

"ಭಕ್ತರು ನಿಶ್ಚಯವಾಗಿ ಆತ್ಮಸಾಕ್ಷಾತ್ಯಾರವನ್ನು ಪಡೆಯುತ್ತಾರೆಆತ್ಮವು ಬ್ರಹ್ಮತ್ವದಲ್ಲಿ ಒಂದಾಗಿರುತ್ತದೆನಿರ್ಗುಣನಿರಾಕಾರ ಪರಬ್ರಹ್ಮನನ್ನು ಅರಿತು ಜೀವಾತ್ಮಬ್ರಹ್ಮತ್ತದಲ್ಲಿ ಐಕ್ಯವಾಗುತ್ತದೆ||85||

"ಇದೇ ನನ್ನ ಕತೆಗಳ ಉದ್ದೇಶಮತ್ತೇನನ್ನು ಅಚ್ಛಿಸಬಹುದುಇದು ವೇದಗಳ ಗುರಿಯೂ ಆಗಿದೆಇದರಿಂದಾಗಿ ಭಕ್ತರು ಜ್ಞಾನಸಂಪನ್ನರಾಗುತ್ತಾರೆ||86||

ವಾದ-ವಿವಾದಗಳ ಬುದ್ಧಿ ಇರುವಲ್ಲಿ ಅವಿದ್ಯೆ ಮತ್ತು ಮಾಯೆ ಸಮೃದ್ಧಿಯಾಗಿರುತ್ತದೆಸ್ವಹಿತದೃಷ್ಟಿ-ಸ್ಟಾರ್ಥ ಇರುತ್ತವೆಸದಾ ಕುತರ್ಕಿಗಳೂ ದುರ್ಬುದ್ಧಿಯುಳ್ಳವರೂ ಆಗಿರುತ್ತಾರೆ||87||

"ಅ೦ತಹ ವ್ಯಕ್ತಿಯು ಆತ್ಮಜ್ಞಾನಕ್ಕೆ ಅರ್ಹನಲ್ಲಅಜ್ಞಾನವು ಅವನನ್ನು ತನ್ನ ಹಿಡಿತದಲ್ಲಿಟ್ಟರುತ್ತದೆ. ಅವನಿಗೆ ಈ ಜಗತ್ತಿನಲ್ಲಾಗಲೀ ಇನ್ನು ಮುಂದಾಗಲೀ ಮತ್ತೇನೂ ಇರುವುದಿಲ್ಲಅವನಿಗೆ ಎಂದೆಂದಿಗೂಎಲ್ಲೆಲ್ಲೂ ದುಃಖವೇತುಂಬಿರುತ್ತದೆ||88||

"ಪ್ರತಿವ್ಯಕ್ಷಿಯೂ ಅವನದೇ ಆದ ಯೋಚನಾ ಲಹರಿಯನ್ನು ಪರಿಗಣಿಸಿದರೆ ಪ್ರಯೋಜನವಿಲ್ಲಮತ್ತೆ ಇನ್ನೊಬ್ಬರ ಆಲೋಚನೆಗಳನ್ನು ತಿರಸ್ಕರಿಸುವ ಕಾರಣವೂ ಇಲ್ಲಮತ್ತೊಬ್ಬರದು ತಪ್ಪೆಂದು ಚರ್ಚೆಮಾಡಿ ಸಾಧಿಸುವ ಕಾರಣವೂ ಇಲ್ಲಇವುಗಳೆಲ್ಲವೂ ಆಧಾರ ರಹಿತ ಪ್ರಯತ್ನಗಳು||89||

"ಮತ್ತೊಬ್ಬರ ಆಲೋಚನೆಗಳನ್ನು ತಿರಸ್ಕರಿಸುವ ಅವಶ್ಯಕತೆಯೂ ಇಲ್ಲ"ಈ ವಾಕ್ಯವು ನಾನು ಶ್ರೋತೃಗಳಿಗೆ ನೀಡಿದ ಪ್ರಮಾಣವಚನವನ್ನು ನೆನಪಿಸಿಕೊಡುತ್ತದೆ||90||

ಈ ಒಂದನೆಯ ಅಧ್ಯಾಯವನ್ನು ಮುಗಿಸುವ ಮೊದಲು ನಾನು ನನ್ನ ಹೆಸರು 'ಹೇಮಾದಎಂದು ಹೇಗಾಯಿತು ಎಂಬ ಚರಿತ್ರೆಯನ್ನು ತಿಳಿಸುತ್ತೇನೆಂದು ನಾನು ನನ್ನ ಶ್ರೋತೃಗಳಿಗೆ ವಚನ ನೀಡಿರುತ್ತೇನೆಮೊದಲು ಅದನ್ನು ನಾನು ಹೇಳುವೆನು||91||

ಇದು ಮುಖ್ಯ ಕತೆಯಿಂದ ವಿಷಯಾಂತರ ಆದರೂ ತಾವು ಅದನ್ನು ಕೇಳಿದಾಗ ಅದರ ಯುಕ್ತಾಯುಕ್ತತೆಯನ್ನು ಅರಿಯುತ್ತೀರಿನಿಮ್ಮ ಜಿಜ್ಞಾಸೆಯು ತೃಪ್ತಿಯಾಗುತ್ತದೆಇದೂ ಸಹ ಸಾಯಿ ಪ್ರೇರಣೆಯೇ ಆಗಿದೆ||92||

ಅನ೦ತರ ನಾನು ಸಾಯಿಯ ಜೀವನ ಚರಿತ್ರೆಯತ್ತ ಬರುತ್ತೇನೆಆದುದರಿಂದ ಶ್ರೋತೃಗಳು ಅತ್ಯಂತ ಗಮನವಿಟ್ಟು ಕೇಳಬೇಕು||93||

ಸಾಯಿಲೀಲೆಗಳ ಈ ಗ್ರಂಥದಲ್ಲಿಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಒಂದು ಸಾಲು ಇದೆ. "ಭಕ್ತನಾದ ಹೇಮಾದಪಂತನಿಂದ ರಚಿಸಲ್ಪಟ್ಟಿದೆ" ಎಂದುಈ ಪಂತ ಯಾರು ||94||

ಇದು ಶ್ರೋತೃಗಳ ಮನಸ್ಸಿನಲ್ಲಿ ಸ್ವಾಭಾವಿಕವಾಗಿ ಏಳುವ ಪ್ರಶ್ನೆಅವರ ಕುತೂಹಲವನ್ನು ತೃಪ್ತಿಪಡಿಸಲುನನಗೆ ಈ ಹೆಸರು ಹೇಗೆ ಬಂದಿತು ಎಂಬುದನ್ನು ವಿಶ್ವಾಸಪೂರ್ವಕವಾಗಿ ಆಲಿಸಬೇಕು||95||

ಹಿಂದೂ ಧರ್ಮಶಾಸ್ತ್ರಗಳ ಅನುಸಾರ ಹುಟ್ಟಿನಿಂದ ಸಾವಿನ ವರೆಗೆ ಹದಿನಾರು ಅತಿಮುಖ್ಯವಾದ ಕರ್ಮಗಳನ್ನು ಗೊತ್ತುಪಡಿಸಲಾಗಿದೆ. ಅದರಲ್ಲಿ ಒಂದು ನಾಮಕರಣ ಮತ್ತು ಇದು ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ||96||

ಸಂದರ್ಭದಲ್ಲಿ ಒಂದು ಸಣ್ಣ ಕತೆ ಹೇಳುತ್ತೇನೆ. - ಶ್ರೋತೃಗಳು ಗಮನವಿಟ್ಟು ಕೇಳಿರಿ. 'ಹೇಮಾದಪಂತಎಂದು ನಾಮಕರಣವಾದ ಸನ್ನಿವೇಶದ ಬಗ್ಗೆ ಹೇಳುತ್ತೇನೆ||97||

 ರಚನಕಾರನು ಯಾವಾಗಲೂ ತು೦ಟನಾಗಿಸೋಮಾರಿಯಾಗಿಅವಿದ್ಯಾವಂತನಾಗಿಯೂ ಇದ್ದನು||98||

ಈತನು ಸದ್ಗುರುವಿನ ಶಕ್ತಿಯನ್ನು ಅರಿಯದೆದುರ್ಗುಣವಂತನೂ, ಮೂರ್ಖಶಿಖಾಮಣಿಯೂತಾನು ಬುದ್ಧಿವ೦ತನೆಂಬ ಅಹಂಕಾರಿವಾಗ್ಯುದ್ಧಕ್ಕೆ ತಯಾರಾಗಿದ್ದವನು||99||

ಆದರೆ ವಿಧಿಬರಹದಂತೆ ಸಾಯಿಯ ಚರಣಕಮಲಗಳನ್ನು ಸೇರಲು ಸಾಧ್ಯವಾಯಿತುನನ್ನ ಭಾಗ್ಯ ಮಾತ್ರದಿಂದಲೇ ಸಾಯಿಚರಣಗಳ ದರ್ಶನ ಲಾಭವಾಯಿತುಸಂಶಯವಿಲ್ಲ||100||

ನನ್ನ ಪೂರ್ವ ಜನ್ಮದ ಪುಣ್ಯಫಲದಿಂದ ಕಾಕಾಸಾಹೇಬ್ ಮತ್ತು ನಾನಾಸಾಹೇಬ್‌ ಚಂದೋರಕರ್‌ರಂತಹ ಅಂತರಂಗದ ಭಕ್ತರ ಸಹವಾಸ ದೊರಕದಿದ್ದರೆ ನಾನು ಶಿರಡಿ ತಲುಪಲು ಹೇಗೆ ಸಾಧ್ಯವಾಗುತ್ತಿತ್ತು||101||

ಕಾಕಾಸಾಹೇಬ್‌ರವರ ಒತ್ತಡಕ್ಕೆ ಮಣಿದು ಶಿರಡಿಗೆ ಹೋಗಲು ನಿರ್ಧರಿಸಿದೆಆದರೆ ಹೊರಡುವ ದಿನವೇ ಅನಿರೀಕ್ಷಿತವಾಗಿ ನನ್ನ ಮನಸ್ಸು ಬದಲಾಯಿತು||102||

ನನ್ನ ಆಪ್ತಮಿತ್ರರಲ್ಲಿ ಒಬ್ಬನು ಗುರುವಿನ ಕೃಪೆಗೆ ಪಾತ್ರನಾಗಿ ಒಬ್ಬ ಪುತ್ರನನ್ನು ಪಡೆದವನುತನ್ನ ಪತ್ನಿಯೊಡನೆ ಲೋನಾವಳದಲ್ಲಿದ್ದನುಆಗ ಒಂದು ಅನಿರೀಕ್ಷಿತವಾದ ಘಟನೆ ನಡೆಯಿತು||103||

ಅಲ್ಲಿ ಉತ್ತಮ ಹವಾಮಾನ ಸಹ ಇತ್ತುಅವನ ಒಬ್ಬನೇ ಪುತ್ರ ಆರೋಗ್ಯವಂತ ಮತ್ತು ಗುಣವಂತನಾದವನು ವಿಪರೀತ ಜ್ವರದಿಂದ ಬಳಲಿದನು||104||

ಅವನು ಮನುಷ್ಯಪ್ರಯತ್ನಗಳನ್ನೆಲ್ಲ ಮಾಡಿದನುಅನೇಕ ಯಂತ್ರ-ತಂತ್ರ ವಿಧಿಗಳು ನಡೆದಿದ್ದವುಗುರುವನ್ನು ಹುಡುಗನ ಹತ್ತಿರ ಕರೆದುಕೊ೦ಡು ಬಂದರುಆದರೂ ಅವನ ಮಗ ದೈವಾಧೀನನಾದನು||105||

ರೀತಿ ಕ್ಲಿಷ್ಟಪರಿಸ್ಥಿತಿಯನ್ನು ತೀರ್ಮಾನಿಸಿ ಮಾರಣಾಂತಿಕ ಕಷ್ಟಗಳನ್ನು ದೂರಮಾಡಲು ಗುರುವನ್ನು ಮಗನ ಹತ್ತಿರ ಕರೆದುಕೊಂಡು ಬಂದಿದ್ದರುಎಲ್ಲ ವ್ಯರ್ಥವಾಯಿತು||106||

ಎಂತಹ ವಿಚಿತ್ರ ಈ ಜೀವನಒಬ್ಬನಿಗೆ ಮಗ ಮತ್ತು ಒಬ್ಬನಿಗೆ ತಾಯಿ ಎಲ್ಲವೂ ಪೂರ್ವಜನ್ಮದ ಕರ್ಮಗಳ ವಿಧಿ ನಿಯಮಎಲ್ಲಾ ಸ್ಥಳಗಳಲ್ಲಿಯೂಎಲ್ಲಾ ಕಾಲಗಳಲ್ಲಿಯೂ ವಿಧಿ ಬರಹ ಅನಿವಾರ್ಯ||107||

ಈ ಕೆಟ್ಟ ವಾರ್ತೆಯನ್ನು ಕೇಳಿದ ಕೂಡಲೇ ನನ್ನ ಮನಸ್ಸು ಕುಂದಿತು. "ಗುರುವಿನ ಉಪಯೋಗ ಇಷ್ಟೇನಾಅವನು ಒಬ್ಬನೇ ಮಗನನ್ನು ರಕ್ಷಿಸಲಾರದೇ ಹೋದನು"||108||

ವಿಧಿ ಬರಹದ ಒತ್ತಡ ಸಾಯಿ ದರ್ಶನ ಮಾಡುವ ಆಸೆಯನ್ನು ತಣ್ಣಗಾಗಿಸಿತುಇದು ನನ್ನ ಪ್ರಯಾಣಕ್ಕೆ ಅಡ್ಡಿ ಉಂಟುಮಾಡಿತು||109||

"ನಾನು ಶಿರಡಿಗೆ ಏಕೆ ಹೋಗಲಿನನ್ನ ಸ್ನೇಹಿತನ ಅವಸ್ಥೆ ಏನಾಯಿತುಗುರುವಿಗೆ ಅಂಟಿಕೊಂಡು ಆದ ಫಲ ಇದೇನುವಿಧಿ ಬರಹದ ಮುಂದೆ ಗುರು ಏನು ಮಾಡಲು ಸಾಧ್ಯ?” ||110||

ವಿಧಿ ಬರಹದ ರೀತಿ ನಡೆಯುವ ಹಾಗಿದ್ದರೆಗುರುವನ್ನು ಹೊಂದಿರುವ ಅವಶ್ಯಕತೆಯೇನುಆದುದರಿಂದ ಶಿರಡಿಯ ಪ್ರಯಾಣವನ್ನು ರದ್ದುಗೊಳಿಸಿದೆ||111||

ತನ್ನ ಸ್ವಗೃಹವನ್ನು ಯಾವ ಕಾರಣಕ್ಕಾಗಿ ತ್ಯಜಿಸಬೇಕುಗುರುವನ್ನು ಹುಡುಕಿಕೊಂಡು ಏಕೆ ಹೋಗಬೇಕುಕಷ್ಟವನ್ನು ಬರಮಾಡಿಕೊಂಡು ಗೃಹಸುಖವನ್ನು ಏಕೆ ಬಿಡಬೇಕುಇದರ ಬಗ್ಗೆ ಏನೂ ಅರ್ಥವಾಗುವುದಿಲ್ಲ||112||

ತಾನಾಗಿಯೇ ಏನಾಗುತ್ತದೋ ಅದು ನಡೆಯಲಿಕಷ್ಟವೋ ಸುಖವೋ ಏನಾದರೂ ಸರಿನಡೆಯುವುದೇ ನಡೆಯುವಾಗ ಗುರುವಿನ ಆವಶ್ಯಕತೆಯಾದರೂ ಏಕೆ||113||

ಆದರೆ ಇಚ್ಛೆಯು ಬೇರೆ ಆದಾಗ್ಯೂ ವಿಧಿಬರಹವೇ ನೆರವೇರುತ್ತದೆಅದರ ಮುಂದೆ ಬೇರೆ ಎಲ್ಲವೂ ಶಕ್ತಿ ಹೀನವಾಗುತ್ತವೆಹಾಗೆ ನನ್ನನ್ನು ಶಿರಡಿಗೆ ಎಳೆತಂದಿತು||114||

ಜಿಲ್ಲಾಧಿಕಾರಿಗಳಾಗಿದ್ದ ನಾನಾಸಾಹೇಬ್‌ರವರು ಬೇಸಿನ್‌ಗೆ ಯಾತ್ರೆಹೊರಟರುಅವರು ಥಾಣೆಯಿಂದ ದಾದರ್‌ಗೆ ಬಂದು ರೈಲುನಿಲ್ದಾಣದಲ್ಲಿ ಸ್ವಲ್ಪ ಕಾಲ ಕಾಯುತ್ತಿದ್ದರು||115||

ಬೇಸಿನ್‌ಗೆ ರೈಲು ಆಗಮಿಸಲು ಒಂದು ಗಂಟೆಯ ಕಾಲ ಇತ್ತುಈ ದೀರ್ಘ ಸಮಯವನ್ನು ಬೇರೆ ಏನಾದರೂ ಕಾರ್ಯಕ್ಕೆ ಉಪಯೋಗಿಸಬಹುದಿತ್ತೆಂದು ಅನಿಸಿತು||116||

ಈ ಯೋಚನೆ ಮನಸ್ಸಿಗೆ ಬಂದಕೂಡಲೇಬಾಂದ್ರಾಗೆ ಹೋಗುವ ರೈಲು ಬಂದಿತು ಮತ್ತು ಅವರು ಅದನ್ನು ಹತ್ತಿದರು||117||

ರೈಲು ನಿಲ್ದಾಣವನ್ನು ತಲಪುತ್ತಲೇನನಗೆ ಆ ಸಮಾಚಾರ ತಿಳಿಯಿತು ಮತ್ತು ಅವರನ್ನು ಭೇಟಿಯಾಗಲು ಕೂಡಲೇ ಹೊರಟೆನುಭೇಟಿಯಾದ ಕೂಡಲೇ ಶಿರಡಿಯ ಬಗ್ಗೆ ಮಾತುಕತೆ ಪ್ರಾರಂಭವಾಯಿತು||118||

"ನೀವು ಯಾವಾಗ ಸಾಯಿದರ್ಶನಕ್ಕೆ ಹೋಗುವಿರಿಶಿರಡಿಗೆ ಹೋಗಲು ಆಲಸ್ಯವೇಕೆಏಕೆ ವೃಥಾಕಾರಣ ನೀಡುತ್ತಿರುವಿರಿನಿಮ್ಮ ಮನಸ್ಸು ಏಕೆ ಶಾ೦ತವಾಗಿಲ್ಲ?" ||119||

ನಾನಾರವರ ಕಾತುರತೆಯನ್ನು ಕಂಡು ನನಗೆ ನಾಚಿಕೆಯಾಯಿತುನನ್ನ ಮನಸ್ಸಿನ ಚಂಚಲತೆಯನ್ನು ಸ್ಪಷ್ಟವಾಗಿ ಅವರಿಗೆ ತಿಳಿಸಿದೆನು||120||

ಆದ್ದರಿ೦ದನಾನಾರವರ ಶ್ರದ್ಧಾಯುಕ್ತವಾದಪ್ರೀತಿಯಪರಿಶುದ್ಧವಾದ ಉಪದೇಶ ನನ್ನಲ್ಲಿ ಶಿರಡಿಗೆ ಪ್ರಯಾಣಮಾಡುವ ಇಚ್ಛೆಯನ್ನು ಉತ್ಕಟಗೊಳಿಸಿತು||121||

ನಾನಾರವರುನನ್ನಿಂದ, "ನಾನು ಕೂಡಲೇ ಹೊರಡುತ್ತೇನೆ" ಎಂಬ ಪ್ರಮಾಣವಚನ ಸ್ವೀಕರಿಸಿದ ನಂತರವೇ ಅಲ್ಲಿಂದ ಹೊರಟರುನಾನು ಹಿಂತಿರುಗಿದೆನು ಮತ್ತು ಒ೦ದು ಶುಭಮುಹೂರ್ತದಲ್ಲಿ ಪ್ರಯಾಣ ಮಾಡಲು ನಿರ್ಧರಿಸಿದೆನು||122||

ನನ್ನ ಸಾಮಾನುಗಳನ್ನು ಜೋಡಿಸಿ ಮನೆಯ ಕಡೆ ಎಲ್ಲಾ ತಯಾರಿ ನಡೆಸಿದೆನುಅದೇ ದಿನಸಂಜೆ ಶಿರಡಿಯ ಕಡೆ ಪ್ರಯಾಣ ಬೆಳೆಸಿದೆನು||123||

ಸಂಜೆಯ ಮೇಲ್‌ ರೈಲು ದಾದರ್‌ನಲ್ಲಿ ನಿಲ್ಲುತ್ತದೆಂದು ನಾನು ಯೋಚಿಸಿದೆಆದ್ದರಿ೦ದ ಅದರ ಹಣವನ್ನು ಪಾವತಿಸಿ ದಾದರ್‌ ನಿಲ್ದಾಣಕ್ಕೆ ಟಿಕೆಟ್‌ ತೆಗೆದುಕೊಂಡೆ.? ||124||

ನಾನು ಕೂಡಲೇ ರೈಲು ಹತ್ತಿದೆನುರೈಲು ಇನ್ನೂ ಬಾಂದ್ರಾದಲ್ಲೇ ನಿಂತಿತ್ತುಆಗ ಒಬ್ಬ ವಯಸ್ಸಾದ ಮುಸ್ಲಿಮನು ಬೋಗಿಯೊಳಗೆ ಅವಸರದಿಂದ ಹತ್ತಿದಕೂಡಲೇ ರೈಲು ಚಲಿಸಲು ಪ್ರಾರಂಭಿಸಿತು||125||

ನಾನು ದಾದರ್‌ ನಿಲ್ದಾಣಕ್ಕೆ ಟಿಕೇಟು ತೆಗೆದುಕೊಂಡಿದ್ದು, ನನ್ನ ಯಾತ್ರೆಯ ಪ್ರಾರಂಭದಿಂದಲೇ ಮೇಣದ ನೊಣದಂತೆ ಒಂದು ಅಡಚಣೆಯಾಗಿತ್ತು||126||

ನನ್ನ ಪ್ರಯಾಣದ ಚೀಲ ಮತ್ತು ಸಾಮಾನುಗಳನ್ನು ನೋಡಿ ಆ ಮುಸಲ್ಮಾನನುಎಲ್ಲಿಗೆ ಹೋಗುತ್ತಿರುವೆನೆಂದು ಕೇಳಿದನುನಾನು ದಾದರಿಗೆ ಹೋಗಿ ಅಲ್ಲಿಂದ ಮೇಲ್‌ ಹಿಡಿದು ಮನಮಾಡ್‌ಗೆ ಹೋಗುತ್ತಿರುವೆನೆಂದು ತಿಳಿಸಿದೆನು||127||

ಆಗ ಅವನು ನನಗೆ ಸಮಯೋಚಿತವಾಗಿ, 'ದಾದರ್‌ನಲ್ಲಿ ಮೇಲ್‌ ನಿಲ್ಲದೆ ಇರುವುದರಿಂದ ವಿಕ್ಟೋರಿಯಾ ಟರ್ಮಿನಲ್‌ವರೆಗೆ ಪ್ರಯಾಣ ಮುಂದುವರಿಸಿ ಅಲ್ಲಿಂದ ಮೇಲ್‌ಗಾಡಿ ಹಿಡಿಯಿರಿ' ಎಂದು ತಿಳಿಸಿದನು||128||

ಈ ಸಮಯೋಚಿತವಾದ ಸಲಹೆ ನನಗೆ ದೊರರದಿದ್ದಲ್ಲಿ ನಾನು ದಾದರ್‌ನಲ್ಲಿ ಮೇಲ್‌ನ್ನು ಹಿಡಿಯುತ್ತಿರಲಿಲ್ಲಆಗ ನನ್ನ ಚಂಚಲ ಮನಸ್ಸು ಯಾವರೀತಿ ಪ್ರತಿಕ್ರಿಯಿಸುತ್ತಿತ್ತೋ ತಿಳಿಯದು||129||

ಆದರೆ ಆ ದಿನ ನನ್ನ ಯಾತ್ರೆ ನಿಗದಿಯಾಗಿತ್ತುಅದೃಷ್ಟವಶಾತ್‌ ಈ ಅನುಕೂಲಕರವಾದನಾನು ಹೇಳಲಿರುವ ಘಟನೆ ಅನಿರೀಕ್ಷಿತವಾಗಿ ನಡೆಯಿತು||130||

ಮಾರನೆ ದಿನ ಬೆಳಿಗ್ಗೆ ರಿಂದ 10 ಗಂಟೆ ಒಳಗೆ ನಾನು ಶಿರಡಿ ತಲಪಿದೆನುಅಲ್ಲಿ ಭಾವುಸಾಹೇಬ್‌ ದೀಕ್ಷಿತ್‌ರು ನನಗಾಗಿ ಕಾಯುತ್ತಿದ್ದರು||131||

ಇದು ಕ್ರಿ. 1910ರಲ್ಲಿ ನಡೆಯಿತುಆಗ ಅಲ್ಲಿ 'ಸಾಠೇವಾಡಾ'ದಲ್ಲಿ ಮಾತ್ರ ಯಾತ್ರಿಗಳಿಗೆ ತಂಗಲು ಅವಕಾಶ ಅತ್ತು||132||

ನಾನು ಟಾಂಗಾದಿ೦ದ ಇಳಿಯುತ್ತಿದ್ದಂತೆಯೇನನ್ನ ಮನಸ್ಸು ಸಾಯಿ ದರ್ಶನಕ್ಕಾಗಿ ಕಾತರಪಟ್ಟು ಉಸಿರುಕಟ್ಟಿದಂತಾಯಿತುನಾನು ಯಾವಾಗ ಅವರ (ಸಾಯಿಯಚರಣಗಳಲ್ಲಿ ನನ್ನ ಶಿರವನ್ನು ಇಟ್ಟೇನು ಎಂದೆನಿಸಿತುನಿರೀಕ್ಷೆಯಿಂದ ಸಂತಸದ ಅಲೆಗಳು ನನ್ನ ಹೃದಯದಲ್ಲಿ ಉಕ್ಕಿ ಬಂದವು||133||

ಆ ಕೂಡಲೇ ತಾತ್ಯಾ ಸಾಹೇಬ್‌ ನೂಲ್ಕರ್‌ಅತ್ಯಂತ ಹೆಸರಾಂತ ಮತ್ತು ಪ್ರಮುಖ ಸಾಯಿಭಕ್ತನು ಮಸೀದಿಯಿಂದ ಹಿಂತಿರುಗಿ ಬಂದು ಕೂಡಲೇ ದರ್ಶನಕ್ಕಾಗಿ ಹೋಗಲು ತಿಳಿಸಿದನು||134||

ಬಾಬಾರವರುತಮ್ಮ ಶಿಷ್ಯರೊಡನೆ ವಾಡಾದ ಒಂದು ಮೂಲೆಯಲ್ಲಿದ್ದಾರೆಬನ್ನಿಅವರ ಚರಣಗಳಿಗೆ ವಂದಿಸೋಣಅನ೦ತರ ಅವರು ಲೇಂಡಿಗೆ ಹೋಗುತ್ತಾರೆ||135||

"ಅನ೦ತರ ಸ್ನಾನಮಾಡಿಬಾಬಾರವರು ಹಿಂದಿರುಗಿದ ಮೇಲೆ ನೀವು ಮಸೀದಿಗೆ ಹೋಗಬಹುದುಮತ್ತು ಸಾಯಿಯ ದರ್ಶನವನ್ನು ಪುನಃ ಸಾವಕಾಶವಾಗಿ ಪಡೆಯಬಹುದು." ||136||

ಅದನ್ನು ಕೇಳಿದಕೂಡಲೇ ನಾನು ಆತುರವಾಗಿ ಬಾಬಾರವರು ಇದ್ದ ಜಾಗಕ್ಕೆ ಓಡಿಹೋದೆ ಮತ್ತು ಅವರ ಚರಣಧೂಳಿಯಲ್ಲಿ ಹೊರಳಾಡಿದೆನನ್ನ ಸಂತಸಕ್ಕೆ ಪಾರವಿಲ್ಲದಾಯಿತು||137||

ನಾನು ಪ್ರತ್ಯಕ್ಷಪಗಿ ಕಂಡಿದ್ದು ನಾನಾಸಾಹೇಬ್‌ರವರು ಹೇಳಿದ್ದಕ್ಕಿಂತಲೂ ಮಿಗಿಲಾಗಿತ್ತುನಾನು ಕೃತಾರ್ಥನಾದೆನೆಂದೂ ಅನುಗ್ರಹೀತನಾದೆನೆಂದೂ ಭಾವಿಸಿದೆನನ್ನ ಕಣ್ಣುಗಳು ತುಂಬಿಬಂದುವು||138||

ಅಂತಹ ವ್ಯಕ್ತಿಯನ್ನು ನಾನೆಂದೂ ನೋಡಿರಲಿಲ್ಲ ಮತ್ತು ಕೇಳಿಯೂ ಇರಲಿಲ್ಲಅಂತಹ ಗೌರವಾನ್ವಿತ ವ್ಯಕ್ತಿಯನ್ನು ನೋಡಿ ಕೃತಾರ್ಥನಾದೆ. ನನ್ನ ಹಸಿವು ಬಾಯಾರಿಕೆಗಳು ಮಾಯವಾದವುನನ್ನ ಇಂದ್ರಿಯಗಳು ಸ್ರಬ್ಧವಾದುವು||139||

ಸಾಯಿಯ ಚರಣ ಸ್ಪರ್ಶದಿಂದ ನಾನು ನನ್ನ ಜೀವನದ ಉನ್ನತ ಸ್ತರವನ್ನು ಗಳಿಸಿದೆಅಲ್ಲಿಂದ ನನ್ನ ಹೊಸ ಜೀವನದ ಶುಭಾರಂಭವಾಯಿತು||140||

ಯಾರ ಕಾರಣದಿಂದ ಸಂತರ ಸಂಗ ದೊರೆಯಿತೊ ಅವರಿಗೆ ನಾನು ಸಂಪೂರ್ಣವಾಗಿ ಕೃತಜ್ಞನಾಗಿದ್ದೇನೆಪ್ರತಿನಾಡಿಯಲ್ಲೂ ಸಂತಸ ಉಸಕ್ಕಿಬರುತ್ತಿದೆ||141||

ಅವರು ನನ್ನ ನಿಜವಾದ ಬಂಧು-ಬಾಂಧವರುಅವರಿಂದಲೇ ನಾನು ಪರಮಾನಂದವನ್ನು ಅನುಭವಿಸಲು ಸಾಧ್ಯವಾಯಿತುಅವರಿಗಿಂತ ಆತ್ಮೀಯ ಬಂಧುಗಳು ಇನ್ನು ಯಾರೂ ಇಲ್ಲನನ್ನ ಹೃದಯಾಂತರಾಳದಲ್ಲಿ ಇದನ್ನು ನಂಬಿದ್ದೇನೆ||142||

ಇದೆಂತಹ ಮಹತ್ತಾದ ಸಂಬಂಧನಾನು ಇದನ್ನು ತಾಳಲಾರದವನಾಗಿದ್ದೇನೆಆದುದರಿಂದ ನನ್ನ ಕರಗಳನ್ನು ಜೋಡಿಸಿ ವಂದಿಸುತ್ತನನ್ನ ಶಿರವನ್ನು ಅವರ ಚರಣಗಳಲ್ಲಿಡುತ್ತೇನೆ||143||

ನನಗೆ ಸಾಯಿಯ ದರ್ಶನ ಭಾಗ್ಯ ದೊರಕಿತುಮತ್ತು ನನ್ನ ಮನಸ್ಸಿನ ಸಂದೇಹಗಳೆಲ್ಲ ಮಾಯವಾದವುಅದಕ್ಕಿಂತ ಮಿಗಿಲಾಗಿ ನನಗೆ ಸಾಯಿಯ ಸಂಪರ್ಕ ದೊರಕಿತುಅದು ನಾನು ಅನುಭವಿಸಿದ ಆನಂದಕ್ಕಿಂತ ಮಿಗಿಲಾದುದು||144||

ಸಾಯಿದರ್ಶನವು ಒಂದು ಅಭೂತಪೂರ್ವ ಅನುಭವಅವರೊಂದಿಗೆ ಸ್ವಭಾವ ಸಂಪೂರ್ಣವಾಗಿ ಬದಲಾಗುತ್ತದೆಪೂರ್ವಕರ್ಮಗಳ ನೆನಪು ಮಾಯವಾಗುತ್ತದೆಮತ್ತು ಕ್ರಮೇಣ ಲೌಕಿಕ ಸುಖಗಳ ಬಗ್ಗೆ ಅನಾಸಕ್ತಿ ಉಂಟಾಗುತ್ತದೆ||145||

ಹಿಂದಿನ ಅನೇಕ ಜನ್ಮಗಳ ಸಂಚಿತ ಪಾಪಕರ್ಮಗಳು ಅವರ ಒಂದು ಕರುಣಾಪೂರಿತ ದೃಷ್ಟಿಯಿಂದಲೇ ನಾಶವಾಗುತ್ತವೆಸಾಯಿ ಚರಣಗಳಲ್ಲಿ ಭರವಸೆ ಮತ್ತು ಅಪರಿಮಿತವಾದ ಸಂತಸವು ದೊರಕುತ್ತದೆ ||146||

ಅದೃಷ್ಟವಶಾತ್‌ ನಾನು ಸಾಯಿ ಚರಣಗಳನ್ನು ಸೇರಿದೆಅವು ಮಾನಸ ಸರೋವರದಷ್ಟು ಪವಿತ್ರವಾಗಿವೆಅವು ನನ್ನಂತಹ ಕಾಗೆಯನ್ನೂ ಸಹ ಹಂಸವನ್ನಾಗಿ ಪರಿವರ್ತಿಸುತ್ತದೆ. ಸಾಯಿಯು ಒಬ್ಬ ಮಹಾತ್ಮ್, ಸಂತರಲ್ಲಿ ಅಗ್ರಗಣ್ಯಮಹಾತಪಸ್ವಿ ಮತ್ತು ಮಹಾಯೋಗಿ||147||

ಅವನು ಪಾಪನಾಶಕದುಃಖನಾಶಕ ಮತ್ತು ಕಷ್ಟಗಳನ್ನು ಪರಿಹರಿಸುವವನುಅಂತಹ ಸಾಯಿಯ ದರ್ಶನ ಪಡೆದು ನಾನು ಅತ್ಯಂತ ಪುನೀತನಾಗಿದ್ದೇನೆಅಂತಹವರ ಸಹವಾಸ ಪಡೆದು ಅನುಗ್ರಹೀತನಾಗಿದ್ದೇನೆ||148||

ಸಾಯಿನಾಥ ಮಹಾರಾಜರನ್ನು ಸಂಧಿಸಿದ್ದು ನನ್ನ ಪೂರ್ವ ಜನ್ಮಗಳ ಫಲವೇ ಆಗಿದೆ. ಕಣ್ಣುಗಳಲ್ಲಿ ಸಾಯಿರೂಪವನ್ನು ತುಂಬಿಕೊಂಡಲ್ಲಿ ಇಡೀ ಪ್ರಪಂಚವೇ ಸಾಯಿಮಯವಾಗುತ್ತದೆ||149||

ಶಿರಡಿಯಲ್ಲಿ ಕಾಲಿಟ್ಟ ಮೊದಲನೆಯ ದಿನ ಬಾಳಾಸಾಹೇಬ್‌ ಭಾಟಿ ಯವರೊಂದಿಗೆ ಗುರುವಿನ ಅವಶ್ಯಕತೆಯ ಬಗ್ಗೆ ವಾಗ್ವಾದ ಉಂಟಾಯಿತು||150||

"ಒಬ್ಬರ ಸ್ವಾತಂತ್ರ್ಯವನ್ನು ತ್ಯಜಿಸಿ ಮತ್ತೊಬ್ಬರ ಮೇಲೆ ಹೇಗೆ ನಂಬಿಕೆ ಇಡಬೇಕುತನ್ನ ಕರ್ತವ್ಯಗಳನ್ನು ತಾನೇ ಸ್ವತಃ ಮಾಡುವ ಸ್ವಸಾಮರ್ಥ್ಯ ಇರುವಾಗ ಗುರುವಿನ ಆವಶ್ಯಕತೆ ಏಕೆ||151||

ಪ್ರತಿಯೊಬ್ಬನೂ ತನ್ನ ಕರ್ತವ್ಯಗಳನ್ನು ತಾನೇ ನಿರ್ವಹಿಸಬೇಕುಯಾರು ತಮ್ಮ ಕರ್ತವ್ಯಗಳನ್ನು ಮಾಡುವುದಿಲ್ಲವೋ ಅವರಿಗೆ ಗುರುವು ತಾನೆ ಏನು ಮಾಡಲು ಸಾಧ್ಯಯಾರು ಐಷಾರಾಮಿಗಳೋವಿಲಾಸಿ ಮತ್ತು ಆಲಸಿಗಳೋ ಅವರಿಗೆ ಯಾರು ತಾನೆ ಏನನ್ನು ಕೊಡಬಲ್ಲರು?" ||152||

ಅದು ನನ್ನ ಸಾಧಾರಣವಾದ ಅಹವಾಲುಮತ್ತೊಂದೆಡೆ ಇದಕ್ಕೆ ವಿರುದ್ಧವಾದ ಅಭಿಪ್ರಾಯವಿತ್ತುವಾದ-ವಿವಾದಗಳು ಎರಡೂ ಕಡೆಯಲ್ಲಿ ಸಮನಾಗಿದ್ದವುಹಾಗಾಗಿ ವಿರೋಧಾಭಾಸ ಮುಂದುವರೆಯಿತು||153||

ಈ ವಿರೋಧಾಭಾಸಕ್ಕೆ ಕಾರಣ ನಮ್ಮಲ್ಲಿ ಆತ್ಮವಿಶ್ವಾಸ ಇಲ್ಲದಿರುವುದು. ಇದು 'ಅಹಂ'ಕಾರಕ್ಕೆ ಕುರುಹುಅದಿಲ್ಲದೆ ಈ ಜಗತ್ತಿನಲ್ಲಿ ಯಾವುದೇ ವಾದವಿವಾದಗಳು ಇರುವುದಿಲ್ಲ||154||

ವಿರೋಧಪಕ್ಷದವರ ವಾದವೇನೆಂದರೆಒಬ್ಬ ವ್ಯಕ್ತಿಯು ವಿದ್ಯಾವಂತನಾಗಿದ್ದರೂವೇದಪಾರಂಗತನಾಗಿದ್ದರೂ ಗುರುವಿನ ಕೃಪೆಯಿಲ್ಲದಿದ್ದಲ್ಲಿ ಅಂತಹ ವ್ಯಕ್ತಿ ಕೇವಲ ಬಂಧಿಯಾದ ಪಂಡಿತನಂತಿರುತ್ತಾನೆ||155||

ಒಬ್ಬನ ಸ್ವಪ್ರಯತ್ನಕ್ಕಿಂತ ವಿಧಿಬರಹ ಮುಖ್ಯವೇವೃಥಾವಾದವು ಉಲ್ಬಣಗೊಂಡಿತುಮತ್ತು ನಾನು ಹೇಳಿದೆ "ಕೇವಲ ವಿಧಿಬರಹದ ಮೇಲೆ ಪೂರ್ಣವಾಗಿ ಅವಲಂಬಿಸಿ ಏನು ಸಾಧಿಸುವೆ?" ||156||

ಆಗ ವಿರೋಧಪಕ್ಷದವರು ಹೇಳಿದರು - "ವಿಧಿಬರಹವನ್ನು ತಪ್ಪಿಸಲಾಗುವುದಿಲ್ಲಭವಿಷ್ಯವನ್ನು ಬದಲಾಯಿಸಲಾಗುವುದಿಲ್ಲಎಷ್ಟೇ ಸ್ವಾಭಿಮಾನಿಯಾದರೂ ಇದರ ಬಗ್ಗೆ ವಿವಶ ||157||

"ವಿಧಿಯನ್ನು ಎದುರಿಸಲು ಯಾರಿಗೆ ತಾನೇ ಸಾಧ್ಯನೀನು ಏನಾದರೂ ಮಾಡಲು ಪ್ರಯತ್ನಿಸಬಹುದುನಿನ್ನ ವಾಕ್‌ಚಾತುರ್ಯವನ್ನು ನಿನ್ನಲ್ಲೇ ಇಟ್ಟುಕೋನಿನ್ನ 'ಅಹಂ'ಕಾರವನ್ನು ಬಿಡಲೇಬೇಕು". ||158||

ನಾನು ಹೇಳಿದೆ - "ಹಾಗೆಂದು ನೀವು ಹೇಗೆ ಹೇಳುವಿರಿಪ್ರಯತ್ನಶೀಲ ವ್ಯಕ್ತಿಯು ಎಲ್ಲವನ್ನೂ ಪಡೆಯುತ್ತಾನೆವಿಧಿಯು ಆಲಸಿಗನಿಗೆ ಹೇಗೆ ಸಹಾಯಮಾಡುತ್ತದೆ"? ||159||

ಪ್ರತಿಯೊಬ್ಬ ವ್ಯಕ್ತಿಯೂ ಸ್ವಪ್ರಯತ್ನದಿಂದಲೇ ಮೇಲೆ ಬರಬೇಕು ಎಂದು ಸ್ಮತಿಗಳು ವಿವರಿಸುತ್ತವೆಅದನ್ನು ಕಡೆಗಣಿಸಿ ಮುಂದುವರೆಯಲು ಸಾಧ್ಯವಿಲ್ಲ||160||

ಏನನ್ನಾದರೂ ಮಾಡಬೇಕೆಂದಿದ್ದರೆ ತಾನೇ ಸ್ಪತಃ ಮಾಡಬೇಕುಗುರುವನ್ನು ಏಕೆ ಅನುಸರಿಸಬೇಕುಒಬ್ಬ ವ್ಯಕ್ತಿಯು ಎಚ್ಚರಿಕೆ ತಪ್ಪಿದರೆ ಗುರು ಒಬ್ಬ ಸಾಲದು||161||

ದುಷ್ಟ ಕೆಲಸ ಮಾಡುವವರಿಗೆ ಪಕ್ಷಪಾತಿಗಳಿಗೆ ಅಶುದ್ಧರಿಗೆ ಗುರುವು ಸಫಲತೆಯನ್ನು ಹೇಗೆ ತಾನೇ ಕೊಡಲು ಸಾಧ್ಯ||162||

ವಾದಕ್ಕೆ ಅಂತ್ಯವಿಲ್ಲಅದರಿಂದ ಫಲವಿಲ್ಲಅದರ ಒ೦ದೇ ಸಾಧನೆ ಎಂದರೆ ನನ್ನ ಮನತಶ್ಶಾಂತಿಯನ್ನು ಕಳೆದುಕೊಳ್ಳುವುದು||163||

ಈ ರೀತಿ ವಾದ ಪ್ರತಿವಾದಗಳು ಮುಂದುವರೆದವುಯಾರಿಗೂ ಕ್ಷಣವಾದರೂ ದಣಿವಾಗಲಿಲ್ಲಸುಮಾರು ಐವತ್ತು ನಿಮಿಷಗಳು ಕಳೆದವುಕೊನೆಗೆ ಅದು ನಿಂತಿತು||164||

ಕೆಲವು ಭಕ್ತರೊಡನೆ ಮಸೀದಿಗೆ ಬಂದ ಕೂಡಲೇಬಾಬಾರವರು ಕಾಕಾಸಾಹೇಬರನ್ನು ಏನು ಕೇಳಿದರೆಂದು ಆಲಿಸಿ||165||

"ವಾಡೆಯಲ್ಲಿ ಏನು ನಡೆಯಿತುವಿರೋಧಾಭಾಸವು ಏನದುಹೇಮಾದಪಂತ ಏನು ಹೇಳಿದ"ಸಾಯಿ ನನ್ನ ಕಡೆ ನೋಡುತ್ತ ಕೇಳಿದರು. ||166||

ವಾಡಾ ಮತ್ತು ಮಸೀದಿಗಳ ಮಧ್ಯೆ ಸಾಕಷ್ಟು ದೂರವಿತ್ತುಹಾಗಿದ್ದಲ್ಲಿ ಬಾಬಾರವರಿಗೆ ಹೇಗೆ ತಿಳಿಯಿತುನನ್ನಲ್ಲಿ ಅಚ್ಚರಿ ಮೂಡಿಸಿತು||167||

ಅದೇನಾದರಾಗಲಿಬಾಬಾರವರ ಪದಗಳು ನನ್ನನ್ನು ಬೆಚ್ಚಿಸಿದವು ಮತ್ತು ನನಗೆ ನಾಚಿಕೆಯಾಯಿತುನಾನು ಮೌನಿಯಾದೆಈ ರೀತಿಯ ನನ್ನ ಅಜ್ಞಾನವು ಮೊದಲನೆಯ ಭೇಟಿಯಲ್ಲೇ ಬಯಲಾಯಿತು||168||

ಬೆಳಗ್ಗೆ ನಡೆದ ಈ ವಾಗ್ಧಾದವೇ ಬಾಬಾರವರು ನನಗೆ "ಹೇಮಾದಪಂತ" ಎಂದು ನಾಮಕ ಮಾಡಲು ಕಾರಣವಾಯಿತು. ಅವರು ಅದರಿಂದಲೇ ಹೇಮಾದನನ್ನು ನೆನಪಿಸಿಕೊಂಡಿರಬೇಕು||169||

ದೇವಗಿರಿಯ ಯಾದವ ರಾಜರು ದೌಲತಾಬಾದ್‌ನ ಜಾಧವರೆಂದು ಕರೆಯಲ್ಪಟ್ಟಿದ್ದರು. 13ನೆಯ ಶತಮಾನದಲ್ಲಿ ಅವರ ರಾಜ್ಯದ ವೈಭವವು ಮಹಾರಾಷ್ಟದ ಹೆಮ್ಮೆಯನ್ನು ಹೆಚ್ಚಿಸಿತ್ತು||170||

ರಾಜಾ ಮಹಾದೇವನು ಅತ್ಯಂತ ಗೌರವಯುತ ವೈಭವೋಪೇತ ಚಕ್ರವರ್ತಿಯಾಗಿದ್ದನುಅವನ ಸೋದರಳಿಯನೂ ಸಹ ಅನೇಕ ಧರ್ಮಕಾರ್ಯಗಳಿಗಾಗಿ ಹೆಸರುವಾಸಿಯಾದನು||171||

ಅವನು 'ರಾಮರಾಜ'ನಾಗಿದ್ದನುಯಾದವರ ರಾಜ್ಯದ ಒಂದು ಮಾಸದ ವಜ್ರವಾಗಿದ್ದನುಹೇಮಾದ್ರಿಯು ಇಬ್ಬರಿಗೂ ಮಂತ್ರಿಯಾಗಿದ್ದನುತುಂಬಾ ಗುಣವಂತನೂಅನೇಕ ಸಾಧನೆಗಳನ್ನು ಮಾಡಿದವನೂ ಆಗಿದ್ದನು||172||

ಹೇಮಾದ್ರಿಯು ಧರ್ಮಶಾಸ್ತ್ರದ ಬಗ್ಗೆ ಒಂದು ಗ್ರಂಥವನ್ನು ರಚಿಸಿದ್ದನುಅವನು ಬ್ರಾಹ್ಮಣರನ್ನು ಕಂಡು ಬಹುವಾಗಿ ಗೌರವಿಸುತ್ತ ಧರ್ಮಶಾಸ್ತ್ರವನ್ನು ಪ್ರಥಮವಾಗಿ ರಚಿಸಿದವನು||173||

ಹೇಮಾದ್ರಿಯು "ಚತುರ್ವರ್ಗ ಚಿಂತಾಮಣಿ" ಎಂಬ ಗ್ರಂಥವನ್ನೂ ರಚಿಸಿದನುಅದು ಒಂದು ಧರ್ಮಮಾರ್ಗದ ಆಚರಣೆಗಳಪವಿತ್ರ ತೀರ್ಥಯಾತ್ರೆ ಮತ್ತು ಮುಕ್ತಿಮಾರ್ಗದ ಬಗ್ಗೆ ಇರುವ ವಿಷಯಗಳ ಗಣಿಯಾಗಿದೆ||174||

ಸಂಸ್ಕೃತದ ಹೆಸರಾದ 'ಹೇಮಾದ್ರಿಪಂತ' ಎನ್ನುವುದು ಪ್ರಾಕೃತಬಾಷೆಯಲ್ಲಿ 'ಹೇಮಾದಪಂತಎಂದಾಯಿತುಅಂದಿನ ಕಾಲದಲ್ಲಿ ಅವನು ಆಡಳಿತದಲ್ಲಿ ವಿಶಾರದನೂಪರಿಣತನೂ ಆಗಿದ್ದನು||175||

ಅವನದು 'ವತ್ಸ' ಎಂಬ ಋಷಿಗೋತ್ರ ಮತ್ತು ನನ್ನದು 'ಭರದ್ವಾಜ ಗೋತ್ರ'. ಅವನ ಗೋತ್ರದಲ್ಲಿ ಐದು ಪ್ರಮುಖ ವ್ಯಕ್ತಿಗಳುಆದರೆನನ್ನದರಲ್ಲಿ ಮೂರು ಜನಅವನು ಯಜುರ್ವೇದಿಯುನಾನು ಖುಗ್ದೇದಿಅವನು ಧರ್ಮಶಾಸ್ತ್ರ ವಿಶಾರದನುನಾನಾದರೋ ಅಜ್ಜಾನಿ||176||

ಅವನು ಮಾಧ್ಯಂದಿನನಾನಾದರೋ ಶಾಕಲಅವನು ಕಲಿತವನುನಾನು ಒಬ್ಬ ಮೂರ್ಖಅವನು ಪಂಡಿತನಾನು ಅಜ್ಞಾನಿಹಾಗಿರುವಾಗ ಈ ಅನ್ವರ್ಥನಾಮ ನನಗೇಕೆ||177||

ಅವನು ಕುಶಲ ರಾಜಕಾರಣಿ ಮತ್ತು ರಾಜ್ಯದ ವ್ಯಕ್ತಿ (ಸ್ಟೇಟ್ಸ್‌ ಮನ್‌ನಾನಾದರೋ ಬುದ್ಧಿಹೀನಅವನ ಸಂಸ್ಕೃತ ಗ್ರಂಥ 'ರಾಜ್ಯಪ್ರಶಸ್ತಿ'ಯು ಬಹಳ ಪ್ರಸಿದ್ಧವಾಗಿತ್ತುಆದರೆ ನಾನು ಕಾವ್ಯದ ಒ೦ದು ಸಾಲನ್ನೂ ರಚಿಸಲಾರದವನಾಗಿದ್ದೆನು||178||

ಅವನು ಲೇಖಕ ಮತ್ತು ಅಂದಿನ ದಿನಗಳಲ್ಲಿ ಕುಶಲ ಕಲೆಗಳಲ್ಲಿ ಪರಿಣಿತನುನಾನು ಅವಿದ್ಯಾವಂತ ಮತ್ತು ಅಜ್ಞಾನಿಅವನು ಬುದ್ಧಿವಂತ ಮತ್ತು ಧರ್ಮಶಾಸ್ತ್ರದಲ್ಲಿ ಪಂಡಿತೋತ್ತಮನಾನಾದರೋ ದಡ್ಡನು||179||

ಅವನ ಗ್ರಂಥ 'ಲೇಖನ ಕಲ್ಪತರು'. ಅನೇಕ ವಿಧವಾದ ಕಾವ್ಯಗಳ ಗಣಿಯೇ ಆಗಿದೆನಾನು ಬಾಬಾರವರ ಒಬ್ಬ ಮುಗ್ಧ ಮಗು. “ಓವಿಛಂದಸ್ಸಿನಲ್ಲಿ ಒಂದು ಸಾಲನ್ನೂ ರಚಿಸದವನು||180||

ಗೋರಚೋರಸಪ್ತಮಾಲಿನಿವೃತ್ತಿ, ಧ್ಯಾನೋಬಾನಾಮ ಮತ್ತಿತರರು ಭಾಗವತ ಧರ್ಮವನ್ನು ಪ್ರಾಮುಖ್ಯತೆಗೆ ತಂದು ಈ ಕಾಲದಲ್ಲಿ ಮೇಲೇರಿದರು. ||181||

ವಿದ್ಯಾವಂತರ ಸಂಗದಲ್ಲಿ ಹೇಮಾದ್ರಿಪಂತನು ಆಡಳಿತಾಧಿಕಾರಿಯಾಗಿದ್ದು ಪಂಡಿತ್‌ ಬೋಪೇಡಿಯೋ ವಿದ್ವಾಂಸರಲ್ಲಿ ವಜ್ರದಂತೆ ಹೊಳೆದವರುಅಂತಹವರಿಗೆ ಸಮನಾದ ಸ್ಥಾನವನ್ನು ಗಳಿಸಿದರು||182||

ಅಲ್ಲಿಂದ ಮುಂದೆ ಉತ್ತರಭಾರತದಿಂದ ಮುಸ್ಲಿಂ ಸೈನಿಕರು ಕೆಳಗೆ ಬಂದರು ಮತ್ತು ಮುಸ್ಲಿಮರ ರಾಜ್ಯಭಾರ ಎಲ್ಲೆಡೆ ಪ್ರಾರಂಭವಾಯಿತುದಕ್ಷಿಣದ ಆಡಳಿತ ಕೊನೆಗೊಂಡಿತು||183||

ನನ್ನ ಬುದ್ಧಿಶಕ್ತಿಗಾಗಿ ಈ ಬಿರುದನ್ನು ನನಗೆ ಕೊಟ್ಟಿಲ್ಲಆದರೆ ನನ್ನ ವಾಗ್ದಾದದ ವೈಖರಿಗಾಗಿ ನೀಡಿದ ಇದು ನನ್ನ 'ಅಹಂ'ಕಾರವನ್ನು ನಾಶಮಾಡಲು ಸಹಕಾರಿಯಾಯಿತು||184||

ನನಗೆ ಸಾಕಷ್ಟು ಜ್ಞಾನವಿರಲಿಲ್ಲ ಮತ್ತು ಆವಶ್ಯಕವಾದ ಯೋಗ್ಯತೆ ಇಲ್ಲದೆ ನಾನು ಮಾತನಾಡುತ್ತಿದ್ದೆ ಅವರು ಅಂಜನದಿಂದ ನನ್ನ ಕಣ್ಣುಗಳನ್ನು ತೆರೆಸಿ ನನ್ನ ತಪ್ಪುಗಳನ್ನು ಸಂದರ್ಭೋಚಿತವಾಗಿ ತಿದ್ದಿ ಅರಿವನ್ನುಂಟುಮಾಡಿದರು||185||

ಈ ರೀತಿಇದು ನನ್ನ ಅಸ್ಚಾಭಾವಿಕ ಹೆಸರುಸಾಯಿಯ ಬಾಯಿಯಿಂದ ಬಂದಂತಹ ವಿಷಯದ ಮೂಲದ ಹಿನ್ನೆಲೆಈ ರೀತಿಯ ಅತಿ ಪ್ರಾಮುಖ್ಯವಾದ ನಾಮಕರಣವು ಸಮಯೋಚಿತವಾಗಿ ಅವಕಾಶಕ್ಕನುಗುಣವಾಗಿ ಇತ್ತು. ಇದನ್ನು ನಾನು ಗೌರವ ಎಂದು ತೀರ್ಮಾನಿಸಿದ್ದೇನೆ||186||

ಇದರಿಂದಾಗಿ ನಾನು ಒ೦ದು ಪಾಠಕಲಿಯಬೇಕುಏನೆಂದರೆವ್ಯರ್ಥವಾದ ವಾಗ್ಯುದ್ಧಗಳು ಕೆಟ್ಟಸಂಕೇತಅದರಲ್ಲಿ ನಾನೆಂದೂ ನಿರತನಾಗದಿರಲಿಏಕೆಂದರೆ ಅವು ಅತ್ಯಂತ ಹಾನಿಕಾರಕ||187||

ನನ್ನ ಅಹಂಕಾರವನ್ನು ನೀಗಲೆಂದೇ  ಬಿರುದನ್ನು ನನಗೆ ಕೊಡಲಾಗಿದೆ ಮತ್ತು ಅದರಿಂದ ನಾನು ಸಾಯುವವರೆಗೂ ನಮ್ರನಾಗಿರಬೇಕೆಂಬುದನ್ನು ಮನಸ್ಸಿನಲ್ಲಿ ನೆನಪಿಡಬೇಕು||188||

ಶ್ರೀರಾಮನು ದಶರಥನ ಪುತ್ರಭಗವಂತನ ಅವತಾರಸರ್ವವ್ಯಾಪಿಜಗದ್ರಕ್ಷಕಎಲ್ಲ ಮುನಿಪುಂಗವರ ಮನಗಳಲ್ಲಿ ವಾಸವಾಗಿರುವವನು; ಅವನೂ ಗುರು ವಸಿಷ್ಠರ ಚರಣಗಳಿಗೆ ನಮಿಸುತ್ತಿದ್ದನು||189|| ಶ್ರೀಕೃಷ್ಣಪರಬ್ರಹ್ಮನ ಅವತಾರವಾಗಿದ್ದರೂ ಸಹ ಗುರುವನ್ನು ಆಶ್ರಯಿಸಬೇಕಾಯಿತುಸಾಂದೀಪನಿ ಗುರುಕುಲದಲ್ಲಿ ಕಟ್ಟಿಗೆ (ಸೌದೆಹೊತ್ತು ಕಷ್ಟಪಟ್ಟು ಗುರುಸೇವೆ ಮಾಡಿದನು||190||

ಅವರಿಗೆ ಹೋಲಿಸಿದರೆ ನಾನು ಎಷ್ಟರವನುನಾನೇಕೆ ವಾದಕ್ಕೆ ಇಳಿಯಲಿಗುರುವಿಲ್ಲದೆ ಜ್ಞಾನವೂ ಇಲ್ಲಸ್ಪರ್ಗೀಯ ಬ್ರಹ್ಮಾನಂದವೂ ಇಲ್ಲಇದೂ ಸಹ ಶಾಸ್ತ್ರಸಮ್ಮತವಾಗಿದೆ||191||

ನಿಷ್ಫಲವಾದ ವಾದಸರಣಿ ಒಳ್ಳೆಯದಲ್ಲಅದು ಸ್ಪರ್ಧಾತ್ಮಕವೂ ಆಗಿರಬಾರದುಶ್ರದ್ಧೆ ಮತ್ತು ತಾಳ್ಮೆ ಇಲ್ಲದೆ ಎಳ್ಳಷ್ಟೂ ಪರಮಾರ್ಥಸಾಧನೆ ಸಾಧ್ಯವಿಲ್ಲಮೋಕ್ಷವನ್ನೂ ಸಾಧಿಸಲು ಸಾಧ್ಯವಿಲ್ಲ||192||

ನನಗೆ ಅನುಭವವೂ ಆಗಿತ್ತುಅನಂತರ ಈ ರೀತಿ ನಾನು ವಿನಮ್ರವಾಗಿ ಈ ಬಿರುದನ್ನು ಸ್ಟೀಕರಿಸಿದೆಇದನ್ನು ಪ್ರೀತಿ ಮತ್ತು ಆಶೀರ್ವಾದ ಪೂರ್ವಕವಾಗಿ ನೀಡಲಾಗಿತ್ತು||193||

ಈಗ ಈ ಕತೆಯನ್ನು ಒಂದು ಹತಕ್ಕೆ ಅಂತ್ಯಗೊಳಿಸೋಣ. ವಾದಗಳು ಒಂದರ ಮೇಲೊಂದು ಹೆಚ್ಚಾಗಿ ಬಿಸಿ ಬಿಸಿ ಚರ್ಚೆ ಉಗಮವಾಗುತ್ತದೆಅದರಿಂದ ಒಂದನ್ನೊಂದು ಸಮಗೊಳಿಸುವುದು ಎಂಬ ಪಾಠವನ್ನು ಕಲಿಸುತ್ತದೆ||194||

ಇದು ಈ ಗ್ರಂಥದ ಆರಂಭರಚನಗಾರನ ಗುಣಗಳನ್ನು ಮತ್ತು ಸಾಯಿಯೊಡನೆ ಇರುವ ಬಾಂಧವ್ಯವನ್ನು ತೋರಿಸುತ್ತದೆಸಾಯಿಯು ಲೇಖಕನಿಗೆ ಮರುನಾಮಕರಣಮಾಡಿಇದನ್ನು ಉಲ್ಲೇಖಿಸಿ ತಾವುಗಳು ಆಲಿಸುವಂತೆ ಮಾಡಿರುವರು||195||

 ಅಧ್ಯಾಯವು ಈಗಾಗಲೇ ಉದ್ದವಾಗಿದ್ದು ಇದನ್ನು ಮುಗಿಸೋಣಹೇಮಾದ ಸಾಯಿ ಚರಣಗಲ್ಲಿ ಗೌರವಪೂರ್ವಕವಾಗಿ ನಮಿಸುತ್ತಾನೆ. ಮುಂದುವರೆದು ಕತೆಯನ್ನು ವಿವರವಾಗಿ ತಿಳಿಸಲಾಗುತ್ತದೆದಯಮಾಡಿ ಆಲಿಸಿ||196||

ಕೇವಲ ಸಾಯಿ ಮಾತ್ರ ನಮ್ಮ ಆನಂದ ಹಾಗೂ ಸೌಭಾಗ್ಯಕೇವಲ ಸಾಯಿ ಮಾತ್ರ ನಮ್ಮ ಪೂರ್ಣಜ್ಞಾನದಿಂದ ಲಭಿಸಿದವನುಕೇವಲ ಸಾಯಿ ಮಾತ್ರ ಶ್ರೇಷ್ಠ ತ್ಯಾಗಿನಮ್ಮ ಅಂತಿಮಗುರಿಯೂ ಸಾಯಿಯೇ||197||

ಸಾಯಿಯ ಅನುಗ್ರಹದಿಂದ ನಾವು ಸಾಯಿಯ ಜೀವನ ಚರಿತ್ರೆಯನ್ನು ಕೇಳೋಣಅದರಿಂದ ಭಯಂಕರವಾದಅತಿ ಕ್ಷಿಷ್ಣವಾದ ಸಂಸಾರದಿಂದ ಕಲಿಯುಗದ ಎಲ್ಲ ಕಷ್ಟಗಳನ್ನು ನಿರ್ಮೂಲನಮಾಡಿ ಪಾರಾಗಬಹುದು||198||

 

ಎಲ್ಲರಿಗೂ ಶುಭವಾಗಲಿ.

 

ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ನಾಮಕರಣದ ಉದ್ದೇಶ ಮತ್ತು ಅದರ ವಿವರಣೆ" ಎಂಬ ಎರಡನೆಯ ಅಧ್ಯಾಯವು ಅಲ್ಲಿಗೆ ಮುಗಿಯಿತು.

 

ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.

 


ಹೇಮಾದಪಂತರು ಬಾಳಾಸಾಹೇಬ್ ಜೊತೆ ವಾದಿಸುತ್ತಿರುವುದು


ಹೇಮಾದಪಂತರು ಸಾಯಿಬಾಬಾ ಅವರ ಚರಣಗಳಿಗೆ ನಮಸ್ಕರಿಸುತ್ತಿರುವುದು

No comments:

Post a Comment

08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....