Friday, July 3, 2020

01 ಒಂದು ಪ್ರಾರ್ಥನೆ / Obeisances

॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

 

"ಒಂದು ಪ್ರಾರ್ಥನೆ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.


ಬುದ್ಧಿವಂತರು ಯಾವುದೇ ಕಾರ್ಯವನ್ನು ಪ್ರಾರಂಭಿಸುವ ಮೊದಲು ತಮ್ಮ ಇಷ್ಟದೇವರನ್ನು ಸ್ತುತಿಮಾಡಿ, ತಮ್ಮ ಕಾರ್ಯ ನಿರ್ವಿಘ್ನವಾಗಿ ಪೂರ್ಣವಾಗಲೆಂದು ಅನುಗ್ರಹವನ್ನು ಬೇಡುತ್ತಾರೆ. ||1||
ಅವರು, ಎಲ್ಲ ವಿಘ್ನಗಳೂ ದೂರವಾಗಲೆಂದು ಮತ್ತು ತಮ್ಮ ಕೋರಿಕೆಗಳು ಈಡೇರಲಿ ಎ೦ದು ಪ್ರಾರ್ಥಿಸುತ್ತಾರೆ. ಎಲ್ಲರಿಗೂ ನನ್ನ ಸಾಷ್ಟಾಂಗ ಪ್ರಣಾಮ. ||2||
ಪ್ರಪ್ರಥಮವಾಗಿ ಗಣಪತಿಯನ್ನು ಪೂಜಿಸುವೆನು. ಹೇ ವಕ್ರತುಂಡ, ಹೇರಂಭ, ಹದಿನಾಲ್ಕು ಧರ್ಮಶಾಸ್ತ್ರಗಳ ಒಡೆಯ, ಮಂಗಳಕರ ಮೂರ್ತಿ ಗಜವದನ, ||3||

ಹದಿನಾಲ್ಕು ಲೋಕಗಳು ನಿನ್ನ ಉದರದಲ್ಲಿ ಅಡಗಿವೆ. ಆದ್ದರಿಂದ ನಿನ್ನನ್ನು ಲಂಬೋದರ ಎನ್ನುವರು. ಕೈಯಲ್ಲಿ ಹೊಳೆಯುತ್ತಿರುವ ಪಾಶಾಂಕುಶಗಳನ್ನು ಭಕ್ತರ ಕಷ್ಟಗಳನ್ನು ನಾಶಪಡಿಸುವುದಕ್ಕೋಸ್ಕರ ಧರಿಸಿರುವೆ. ||4||
ಹೇ ಗಣಗಳ ಒಡೆಯ, ಗಜಾನನ, ವಿಘ್ನಗಳನ್ನು ನಿವಾರಿಸುವವನೇ, ನೋವುಗಳನ್ನು ಪರಿಹರಿವವನೇ, ನನ್ನ ಪ್ರಣಾಮವಚನಗಳನ್ನು ಪೂರೈಸುವಂತೆ ಅನುಗ್ರಹಿಸು, ನಾನು ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ||5||
ನೀನು ಭಕ್ತರಿಗೆ ಸಹಾಯ ಮಾಡುವವನು. ಎಲ್ಲಾ ವಿಘ್ನಗಳು ನಿನ್ನ ಚರಣಗಳಲ್ಲಿ ಕರಗಿ ಹೋಗುತ್ತವೆ. ನೀನು ನೇರವಾಗಿ ದೃಷ್ಟಿಸಿದರೆ ಎಲ್ಲಾ ಲೋಪಗಳು ಮಾಯವಾಗುತ್ತವೆ. ||6||
ನೀನು, ಭವಸಾಗರವನ್ನು ದಾಟಿಸುವ ನೌಕೆಯಾಗಿರುವೆ. ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುವ ಜ್ಯೋತಿಯ ಪ್ರಕಾಶವಾಗಿರುವೆ. ನನಗೆ ಸುಖ, ಸಂತೋಷ, ಸಮೃದ್ಧಿಗಳನ್ನು ದಯಪಾಲಿಸು. ||7||
ಮೂಷಕ ವಾಹನನಿಗೆ ಜಯವಾಗಲಿ. ವಿಘ್ನಗಳೆಂಬ ಅಡವಿಯನ್ನು ನಾಶಮಾಡುವವನಿಗೆ ಜಯವಾಗಲಿ. ನೀನು ಗಿರಿಜೆಯ ಪುತ್ರ. ನೀನು ಮಂಗಳ ಸ್ಟರೂಪನು. ಅಂತಹ ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ||8||
ನಾನು ಕಾರ್ಯಗಳನ್ನು ಯಾವುದೇ ಕಷ್ಟಗಳಿಲ್ಲದೆ ಪೂರ್ಣಗೊಳಿಸುವಂತೆ ಆಗಲಿ. ಆದುದರಿಂದ ಎಲ್ಲಾ ಶುಭ-ಮಂಗಳಗಳು ಉಂಟಾಗಲಿ ಎಂದು ನನ್ನ ಇಷ್ಟ ದೇವತೆಯ ಅನುಗ್ರಹ ಬೇಡುತ್ತೇನೆ. ||9||
ಸಾಯಿಯೇ ಗಜಾನನ, ಗಣಪತಿ, ಸಾಯಿಯೇ ತನ್ನ ಕೈಯಲ್ಲಿ ಪಾಶಾಂಕುಶವನ್ನು ಹಿಡಿದಿದ್ದಾನೆ. ನನ್ನ ಕಷ್ಟಗಳೆಲ್ಲವನ್ನೂ ಸಂಪೂರ್ಣವಾಗಿ ಪರಿಹರಿಸು. ನಾನು ಈಗ ನನ್ನ ಪವಿತ್ರವಾದ ಕಾರ್ಯವನ್ನು ಪ್ರಾರಂಭಿಸುತ್ತೇನೆ. ||10||
ಸಾಯಿಯೇ ಬಾಲಚಂದ್ರ, ಸಾಯಿಯೇ ಗಜಾನನ, ಏಕದಂತ, ಗಜಕರ್ಣ, ವಕ್ರತುಂಡ, ಮಹಾಕಾಯ, ಕಷ್ಟಗಳ ಸಮೂಹವನ್ನೇ ನಾಶಮಾಡುವವನು. ||11||
ಹೇ! ಪಾವನ ಗಣಪತಿಯೇ, ದೇಹಾತೀತ ರೂಪನೇ, ನಿನಗೂ ಸಾಯಿಗೂ ಯಾವ ಅಂತರವೂ ಇಲ್ಲ. ದಯಮಾಡಿ ನನ್ನನ್ನು, ನೀನು ನೆಲೆಸಿರುವ ಸಂತೃಪ್ತ ನಿವಾಸಕ್ಕೆ ಕರೆದುಕೋ. ||12||
ಈಗ ನಾನು ಬ್ರಹ್ಮನ ಪುತ್ರಿ, ಬುದ್ಧಿಶಕ್ತಿಯನ್ನು ಪ್ರಚೋದಿಸುವ ಸರಸ್ಪತಿಗೆ ಶಿರಬಾಗಿ ನಮಿಸುತ್ತೇನೆ. ನನ್ನ ಬುದ್ಧಿಶಕ್ತಿಯನ್ನು ನಿನ್ನ ಹಂಸವನ್ನಾಗಿ ಮಾಡಿಕೋ ಮತ್ತು ನಿನ್ನ ಅಧೀನದಲ್ಲಿಟ್ಟುಕೊ. ||13||
ಅವಳು ತನ್ನ ಕೈಯಲ್ಲಿ ಬ್ರಹ್ಮನ ವೀಣೆಯನ್ನು ಹಿಡಿದಿದ್ದಾಳೆ. ಹಣೆಯಲ್ಲಿ ಕುಂಕುಮದ ತಿಲಕ ಶೋಭಿಸುತ್ತಿದೆ. ಶ್ವೇತವಸ್ತ್ರ ಧರಿಸಿದ್ದಾಳೆ. ವಾಹನ ಹಂಸವಾಗಿದೆ. ಅಮ್ಮ, ಆಶೀರ್ವಾದ ಮಾಡು. ||14||
ಅವಳು ವಾಗ್ದೇವಿ ಮತ್ತು ವಿಶ್ವಮಾತೆ. ಅವಳ ಅನುಗ್ರಹವಿಲ್ಲದೆ ಯಾವ ಸಾಹಿತ್ಯದ ಸೃಷ್ಟಿಯೂ ಸಾಧ್ಯವಿಲ್ಲ. ಅವಳ ಆಶೀರ್ವಾದವಿಲ್ಲದೆ ನಾನು ಪವಿತ್ರವಾದ ಕಾವ್ಯವನ್ನು ರಚಿಸಲು ಸಾಧ್ಯವಿಲ್ಲ. ||15||
ಜಗನ್ಮಾತೆಯು ವೇದಗಳಿಗೆ ಮೂಲ. ಅವಳು ಜ್ಞಾನದ ಪ್ರಕಾಶವಾಗಿದ್ದಾಳೆ ಮತ್ತು ಅಸೀಮ ಮನೋಶಕ್ತಿ ಉಳ್ಳವಳಾಗಿದ್ದಾಳೆ. ಸಾಯಿಸಮರ್ಥ ಚರಿತಾಮೃತವನ್ನು ಓದುಗರು ನನ್ನ ಮೂಲಕ ಪಾನಮಾಡುವಂತಾಗಲಿ. ||16||
ಸಾಯಿಯೇ ಸರಸ್ವತೀ ಮಾತೆ. ಓಂಕಾರ ಹೊರಹೊಮ್ಮುತ್ತಿರುವ ವೀಣೆಯನ್ನು ನುಡಿಸುತ್ತ ತನ್ನ ಜೀವನಗಾಥೆಯನ್ನು ಭಕ್ತರ ಬಂಧ ಮುಕ್ತಿಗಾಗಿ ತಾನೇ ಹಾಡುತ್ತಿದ್ದಾಳೆ. ||17||
ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಕಾರಣರಾದ ಹಾಗೂ ಸತ್ವ, ರಜ ಮತ್ತು ತಮೋ ಗುಣಗಳಿಗೆ ಅತೀತರಾದ ಬ್ರಹ್ಮ, ವಿಷ್ಣು, ಶಂಕರರಿಗೆ ಪ್ರಣಾಮಗಳು. ||18||
! ಸಾಯಿನಾಥ, ಜ್ಯೋತಿಸ್ವರೂಪದ ಅವತಾರನೇ, ನಮಗೆ ನೀನೇ ಗಣೇಶ, ಸವಿತ್ತಿನ ಒಡೆಯ, ರಮೇಶ ಮತ್ತು ಉಮೇಶ. ||19||
ನಮಗೆ ನೀನೇ ಸದ್ಗುರು. ಭವಸಾಗರವನ್ನು ದಾಟಿಸುವ ನಾವೆಯು ನೀನೇ. ನಾವು ನಿನ್ನ ಭಕ್ತರು, ಅದರಲ್ಲಿ ಪ್ರಯಾಣಿಕರು. ನಮ್ಮನ್ನು ಪಾರುಮಾಡು. ||20||
ಹಿ೦ದಿನ ಜನ್ಮದ ಪುಣ್ಯಫಲವಿಲ್ಲದೇ ಹೋಗಿದ್ದರೆ ನಿನ್ನ ಚರಣಗಳಲ್ಲಿ ಆಶ್ರಯ ಹೇಗೆ ದೊರಕುತ್ತಿತ್ತು? ||21||
ನನ್ನ ಕುಲದೇವರೂ, ಕ್ಷೀರಸಾಗರವಾಸಿಯೂ, ಸರ್ವದುಃಖನಿವಾರಕನೂ ಆದ ಆದಿನಾಥ ನಾರಾಯಣನಿಗೆ ಪ್ರಣಾಮಗಳು. ||22||
ಪರಶುರಾಮರು ಸಮುದ್ರವನ್ನೇ ಆಪೋಶನ ಮಾಡಿ ಹೊಸ ಭೂಮಿಯನ್ನು ಸೃಷ್ಟಿಸಿದರು. ಅದನ್ನು ಕೊಂಕಣ ಎನ್ನುತ್ತಾರೆ. ಅಲ್ಲಿ ನಾರಾಯಣನೇ ಪ್ರತ್ಯಕ್ಷವಾಗಿ ಕಾಣುತ್ತಾನೆ. ||23||
ಅಂತರ್ಯಾಮಿ ನಾರಾಯಣನನ್ನೇ ಪೂರ್ತಿ ಅವಲಂಬಿಸಿದ್ದೇನೆ. ಅವನು ಸರ್ವವ್ಯಾಪಿ. ಎಲ್ಲ ಜೀವಿಗಳನ್ನು ನಿಯಂತ್ರಿಸಿ ತನ್ನ ಕೃಪಾಕಟಾಕ್ಷದಿ೦ದ ಸ೦ರಕ್ಷಿಸುತ್ತಾನೆ. ಅವನೇ ನನಗೆ ಪ್ರೇರಕ. ||24||
ಅದೇ ರೀತಿ ನನ್ನ ಮೂಲಪುರುಪರಿಗೆ ಗೌಡ ರಾಜ್ಯದ ಶ್ರೇಷ್ಠ ಸಂನ್ಯಾಸಿ, ಭಾರ್ಗವರಿಂದ ಪೋಷಿಸಲ್ಪಟ್ಟವರು, ತನ್ನ ಯಜ್ಞವನ್ನು ಪೂರ್ಣಗೊಳಿಸಿದವರಿಗೆ ಅತ್ಯಂತ ಗೌರವಪೂರ್ವಕವಾಗಿ ವಂದಿಸುತ್ತೇನೆ. ||25||
ಈಗ ನಾನು ಖಷಿರಾಜರಾದ ಭರದ್ವಾಜರಿಗೆ ವಂದಿಸುತ್ತೇನೆ. ಅವರು ನನ್ನ ಗೋತ್ರವನ್ನು ಪ್ರಾರಂಭಿಸಿದವರು. ಯಗ್ವೇದ ಶಾಖೆಗೆ ಸೇರಿದವರು. ಶಕಲ್ನಮ್ಮ ಕುಲದ ಹಿರಿಯರ ಹೆಸರು. ಗೌಡಸಾರಸ್ವತಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರು. ||26||
ನಾನು ಬ್ರಹ್ಮನಿಗೆ ವಂದಿಸುತ್ತೇನೆ. ಪರಬ್ರಹ್ಮನ ಅವತಾರ ಅವರು. ನಂತರ ಯಾಜ್ಞವಲ್ಕ್ಯ, ಭೃಗು, ಪರಾಶರ ಮತ್ತು ನಾರದ ಇಂತಹ ಋಷಿಶ್ರೇಷ್ಠರಿಗೆ ವಂದನೆಗಳು. ||27||
ವೇದವ್ಯಾಸರಿಗೆ, ಪರಾಶರರಿಗೆ, ಸನಕ, ಸನಂದನ, ಸನತ್ಕುಮಾರ, ಶುಕ, ಶೌನಕರು ಸೂತ್ರಗಳ ರಚನಕಾರರು. ವಿಶ್ವಾಮಿತ್ರ ಮತ್ತು ವಸಿಷ್ಠ ಇವರಿಗೂ ನನ್ನ ವಂದನೆಗಳು. ||28||
ಮತ್ತೆ, ವಾಲ್ಮೀಕಿ, ವಾಮದೇವ, ಜೈಮಿನಿ, ವೈಷಂಪಾಯನ ಮತ್ತಿತರರಿಗೂ ನನ್ನ ವಂದನೆಗಳು. ಹಾಗೂ ಸಪ್ತಋಷಿಗಳಿಗೂ ಇತರ ಮುನಿಗಳಿಗೂ ವಂದಿಸುತ್ತೇನೆ. ||29||
ನಾನು ಈಗ ಸಂತರಿಗೂ, ಸದ್ಗುಣಿಗಳಾದ ನಿವೃತ್ತಿ, ಜ್ಞಾನೇಶ್ವರ, ಮುಕ್ತಾಬಾಯಿ, ಸೋಪಾನದೇವ, ಏಕನಾಥ ಮತ್ತು ಅವರ ಗುರು ಜನಾರ್ದನ, ತುಕಾರಾಮ, ಕಾನ್ಹ (ಪತ್ರ) ಮತ್ತು ನರಹರಿ ಇವರಿಗೂ ವಂದಿಸುತ್ತೇನೆ. ||30||
ಪ್ರತಿಯೊಬ್ಬ ಸ೦ತರನ್ನೂ ಹೆಸರಿಸುತ್ತ ಹೋದಲ್ಲಿ ಪುಸ್ತಕ ಸಾಲುವುದಿಲ್ಲ. ಆದುದರಿಂದ ಪ್ರತಿಯೊಬ್ಬರಿಗೂ ನಮಸ್ಕರಿಸುತ್ತ ಎಲ್ಲರ ಆಶೀರ್ವಾದವನ್ನು ಬೇಡುತ್ತೇನೆ. ||31||
ಈಗ ನಾನು ಅಸೀಮ ತೇಜಸ್ಸುಳ್ಳ ನನ್ನ ತಾತನವರನ್ನು, ಪ್ರಾಪಂಚಿಕ ಜೀವನ ನಶ್ಚರ ಎಂದು ಅರಿತು ಬದರಿ ಮತ್ತು ಕೇದಾರದಲ್ಲಿ ನೆಲೆಸಿರುವ ಸದಾಶಿವರವರಿಗೂ ವಂದಿಸುತ್ತೇನೆ. ||32||
ಹಾಗೆಯೇ, ನಾನು ನನ್ನ ತಂದೆಯವರಿಗೆ, ಯಾವಾಗಲೂ ರುದ್ರಾಕ್ಷಿ ಮಾಲೆಯನ್ನು ಕೊರಳಲ್ಲಿ ಧರಿಸಿ ಇಷ್ಟದೇವರಾದ ಸದಾಶಿವನನ್ನು ಪೂಜಿಸುತ್ತಿದ್ದ ಅವರಿಗೆ ವಂದಿಸುತ್ತೇನೆ. ||33||
ಈಗ ನಾನು, ಜನ್ಮ ಕೊಟ್ಟ ತಾಯಿ, ನನ್ನನ್ನು ಹಗಲು-ರಾತ್ರಿ ಕಷ್ಟಪಟ್ಟು ಜೋಪಾನವಾಗಿ ಸಾಕಿದವಳಿಗೆ ವಂದಿಸುತ್ತೇನೆ. ಅವಳ ಉಪಕಾರಗಳನ್ನು ನಾನೆಷ್ಟು ನೆನೆದರೂ ಸಾಲದು. ||34||
ನಾನು ಮಗುವಾಗಿದ್ದಾಗಲೆ ಅವಳು ನನ್ನನ್ನಗಲಿ ಹೋದಳು. ನನ್ನ ಚಿಕ್ಕಮ್ಮ ನನ್ನನ್ನು ಅತ್ಯಂತ ಅಕ್ಕರೆ, ಸಹನೆಗಳಿಂದ ಬೆಳೆಸಿದಳು. ಸದಾ ಹರಿಯನ್ನು ನೆನೆಯುತ್ತ ಅದರಲ್ಲಿಯೇ ತಲ್ಲೀನಳಾಗಿರುತ್ತಿದ್ದಳು. ಆಕೆಯ ಚರಣಗಳಿಗೆ ಹಣೆಯಿಟ್ಟು ನಮಿಸುತ್ತೇನೆ. ||35||
ಹೋಲಿಸಲಾರದಂತಹ ಸೋದರ ಪ್ರೀತಿಯನ್ನು ತೋರಿಸಿದ, ನನಗಾಗಿ ತನ್ನ ಜೀವನವನ್ನೇ ಒತ್ತೆ ಇಟ್ಟಂತಹ, ನನ್ನ ಹಿರಿಯ ಸೋದರನ ಚರಣಗಳಲ್ಲಿ ನನ್ನ ಮಸ್ತಕವನ್ನು ಇಡುತ್ತೇನೆ. ||36||
ಈಗ ನಾನು ಶ್ರೋತೃಗಳಿಗೆ ವಂದಿಸುತ್ತ, ಅವರ ತನ್ಮಯತೆಯನ್ನು ಕೋರುತ್ತೇನೆ. ಅವರು ಗಮನವಿಟ್ಟು ಕೇಳದಿದ್ದರೆ ನನಗೆ ಹೇಗೆ ತಾನೇ ತೃಪ್ತಿಯಾದೀತು? ||37||
ಶ್ರೋತೃಗಳು ಬುದ್ಧಿವಂತರಾಗಿ ಹೊಗಳುವಂತರಾದಲ್ಲಿ ಮತ್ತು ಮುಂದಿನ ಕತೆಯನ್ನು ಕೇಳುವುದರಲ್ಲಿ ಕುತೂಹಲಿಗಳಾದಲ್ಲಿ ಕಥನ ಹೆಚ್ಚು ಹೆಚ್ಚು ಉತ್ಪಾಹಭರಿತವಾಗುತ್ತದೆ. ||38||
ನೀವು ಗಮನ ನೀಡದಿದ್ದಲ್ಲಿ, ನಾನು ಕಥನ ಮಾಡುವುದರ ಉದ್ದೇಶ ಏನು? ಆದುದರಿಂದ ನಾನು ನಿಮ್ಮನ್ನು ಆನ೦ದಭರಿತರಾಗಿ ಕೇಳಿರೆಂದು ಶಿರಬಾಗಿ ಬೇಡುತ್ತೇನೆ. ||39||
ನನಗೆ ಯಾವುದೇ ಶಾಸ್ತ್ರಗಳ ಗಂಧವಿರುವುದಿಲ್ಲ. ಯಾವುದೇ ಶಾಸ್ತ್ರವನ್ನು ಅರಿತಿಲ್ಲ, ಪವಿತ್ರವಾದ ಕತೆಗಳನ್ನು ಕೇಳಿರುವುದಿಲ್ಲ. ನಿಮಗೂ ಇದು ಚೆನ್ನಾಗಿ ಗೊತ್ತು. ||40||
ನನಗೆ ನನ್ನ ಲೋಪದೋಷಗಳು ತಿಳಿದಿವೆ. ನನ್ನ ಅಲ್ಪತ್ವವೂ ತಿಳಿದಿದೆ. ಆದರೂ ಗುರುಗಳಿಗೆ ನೀಡಿರುವ ಪ್ರಮಾಣವಚನವನ್ನು ಪೂರೈಸಲು ನಾನು ಕಥನ ಪ್ರಯತ್ನವನ್ನು ಮಾಡುತ್ತಿದ್ದೇನೆ. ||41||
ನನ್ನ ಪ್ರಜ್ಞೆಯು ನನಗೆ ಹೇಳುತ್ತಿದೆ, ನಾನು ನಿಮ್ಮ ಮುಂದೆ ಒಂದು ಹುಲ್ಲುಕಡ್ಡಿ ಎಂದು. ಆದರೆ, ದಯೆತೋರಿ ನನ್ನನ್ನು ನಿಮ್ಮವನೆಂದು ಸ್ವೀಕರಿಸಿ. ||42||
ಈಗ ನಾನು ನನ್ನ ಸದ್ಗುರುವನ್ನು ನೆನೆಸಿಕೊಂಡು, ಅವನ ಚರಣಗಳಿಗೆ ಪ್ರೀತಿಯಿ೦ದ ಕಾಯಾ, ವಾಚಾ, ಮನಸಾ ಶರಣಾಗಿದ್ದೇನೆ. ನನಗೆ ಜ್ಞಾನವನ್ನು ಮತ್ತು ಪ್ರೋತ್ಸಾಹವನ್ನು ನೀಡುವಂತಹವನು ನನ್ನ ಗುರು. ||43||
ನಾವು ಭೋಜನಕ್ಕೆ ಕುಳಿತಾಗ, ಸಿಹಿಯನ್ನು ಊಟದ ಕೊನೆಯಲ್ಲಿ ಬಡಿಸುವ ರೀತಿಯಲ್ಲಿ, ನನ್ನ ನಮಸ್ಕಾರಗಳಿಗೆ ಸಿಹಿಯಾದ ಅಂತ್ಯವೆಂಬಂತೆ ನನ್ನ ಗುರುವಿಗೆ ನಮಿಸುತ್ತೇನೆ. ||44||
'
ಓಂ' ಸದ್ಗುರುರಾಯ! ನಿನಗೆ ಪ್ರಣಾಮಗಳು. ಚರ ಮತ್ತು ಅಚರ ಎರಡಕ್ಕೂ ನಿವಾಸನೇ ನೀನು. ನೀನು ಸಕಲ ಬ್ರಹ್ಮಾಂಡವನ್ನೇ ಧರಿಸಿರುವವನು ಮತ್ತು ಅತ್ಯಂತ ಕರುಣಾಮಯಿಯೂ ಆಗಿರುವೆ. ||45||
ಪೃಥ್ವಿ, ಏಳು ದ್ವೀಪಗಳು, ಒಂಭತ್ತು ದೇಶಗಳು, ಏಳು ಸ್ಪರ್ಗಲೋಕಗಳು ಮತ್ತು ಅಧೋಲೋಕಗಳು ಎಲ್ಲವೂ ಹಿರಣ್ಯಗರ್ಭದಿಂದ ಸೃಷ್ಠಿಯಾಗಿವೆ. ಅದೇ ಬೃಹತ್ಬ್ರಹ್ಮಾಂಡವಾಗಿದೆ. ||46||
ಸದ್ಗುರುವು ಮಾಯೆಯಿಂದಾಚೆಗೆ ನೆಲಸಿರುತ್ತಾನೆ. ಮಾಯೆಯನ್ನು ಬ್ರಹ್ಮಾಂಡವು ಸೃಷ್ಟಿಸಿದೆ ಮತ್ತು ಅದು ಅಗೋಚರವಾಗಿದ್ದು ಭ್ರಮೆಯನ್ನುಂಟುಮಾಡುವುದೂ ಆಗಿದೆ. ||47||
ವೇದಗಳಿಗೂ ಸದ್ಗರುವಿನ ಮಹತ್ತನ್ನು ವಿವರಿಸಲು ಅಸಾಧ್ಯವಾಗಿವೆ. ಆದುದರಿಂದಲೇ ಅವು ಮೌನವಾಗಿವೆ. ಅವನ್ನು ದೃಢೀಕರಿಸುವಂತಹ ಯಾವುದೇ ಊಪಕರಣಗಳಾಗಲೀ ಇಲ್ಲ. ||48||
ನಾನು ಯಾವಾಗಲಾದರೂ ನಿನ್ನನ್ನು ಹೋಲಿಸಲು ಯಾವುದಾದರೂ ಸದ್ಗುಣಗಳನ್ನು ಉಪಯೋಗಿಸಿದರೆ ನೀನು ಅವುಗಳನ್ನು ಹೊಂದಿರುವೆ. ನನ್ನ ದೃಷ್ಟಿಗೆ ಗೋಚರವಾಗುವುದೆಲ್ಲವೂ ನಿನ್ನ ಸೃಷ್ಟಿಯೇ, ||49||
ಶ್ರೀ ಸಾಯಿನಾಥನು ಅಂತಹ ದಯಾಳು ಮತ್ತು ಪರಮಶಕ್ತಿವಂತ ಸದ್ಗುರು. ಅಂತರಾತ್ಮನಲ್ಲೇ ಅರಿಯಬಲ್ಲವನು, ಸರ್ವವ್ಯಾಪಿ, ಶಾಶ್ಚತ ಸ್ವರೂಪನಾದ ನಿನಗೆ ವಂದಿಸುತ್ತೇನೆ. ||50||
ನಿನಗೆ ಸಾಷ್ಟಾಂಗ ಪ್ರಣಾಮಗಳು. ನೀನು ಸರ್ವೋತ್ತಮನು, ಸದಾನಂದ ಸ್ಪರೂಪನು, ಪೂರ್ಣಸಂತೃಪ್ತನು, ಸ್ವಯಂಪ್ರಕಾಶನು, ಮಂಗಳಕರನು, ಆತ್ಮಸ್ವರೂಪನು ಮತ್ತ ಸದ್ಗುರುವು. ||51||
ನಿನ್ನ ಸದ್ಗುಣಗಳನ್ನು ವಿವರಿಸಲು ವೇದಗಳು ಮತ್ತು ಶೃತಿಗಳಿಗೆ ಸಾಧ್ಯವಾಗಿಲ್ಲ. ಹಾಗಿರುವಾಗ ನಿನ್ನ ಗುಣಗಾನ ಮಾಡುವ ಪ್ರಯತ್ನ ಮತ್ತು ನಿನ್ನನ್ನು ಅರ್ಥಮಾಡಿಕೊಳ್ಳುವ ಬುದ್ಧಿಶಕ್ತಿ ನನ್ನಲ್ಲೆಲ್ಲಿದೆ? ||52||
ಹೇ! ಹೇ ಸದ್ಗುರು! ಕರುಣಾನಿಧಯೇ! ನಿನಗೆ ಜಯವಾಗಲಿ. ಗೋದಾವರಿ ನದಿಯ ತೀರದಲ್ಲಿ ವಾಸಿಸುವವನಿಗೆ ಜಯವಾಗಲಿ. ಬ್ರಹ್ಮ ಶಂಕರ ಮತ್ತು ವಿಷ್ಣು ಮತ್ತು ದತ್ತಾತ್ರೇಯ ಸ್ವರೂಪನೇ, ನಿನಗೆ ವಂದಿಸುತ್ತೇನೆ. ||53||
ಬ್ರಹ್ಮಾನ೦ದವು ಸದ್ಗುರುವಿಲ್ಲದೆ ದೊರೆಯುವುದಿಲ್ಲ. ನನ್ನ ಪಂಚಪ್ರಾಣಗಳನ್ನು ನಿನಗೆ ಅರ್ಪಿಸುತ್ತೇನೆ ಮತ್ತು ರಕ್ಷಣೆಗಾಗಿ ನಿನ್ನಲ್ಲಿ ಸಂಪೂರ್ಣ ಶರಣಾಗಿದ್ದೇನೆ. ||54||
ನಾನು ಶಿರಬಾಗಿ ಪ್ರಣಾಮ ಮಾಡುತ್ತೇನೆ. ನನ್ನ ಕೈಗಳಿಂದ ನಿನ್ನ ಚರಣಗಳನ್ನು ಸ್ಪರ್ಶಮಾಡುತ್ತೇನೆ. ನಿನ್ನ ಸುಂದರ ವದನದಲ್ಲಿ ದೃಷ್ಟಿಯಿಡುತ್ತೇನೆ ಮತ್ತು ನಿನ್ನ ಚರಣೋದಕವನ್ನು ಸೇವಿಸುತ್ತೇನೆ. ||55||
ಸಾಯಿಯ ಗುಣಗಾನವನ್ನು ಆಲಿಸುತ್ತೇನೆ. ಸಾಯಿ ಸ್ಪರೂಪವನ್ನು ನಿರಂತರ ಧ್ಯಾನ ಮಾಡುತ್ತೇನೆ. ಚಿತ್ತದಲ್ಲಿ ಅಖಂಡ ಸಾಯಿ ಚಿ೦ತನದಲ್ಲಿ ನಿರತನಾಗುತ್ತೇನೆ. ಸಂಸಾರ ಬಂಧನದಿಂದ ವಿಮುಕ್ತನಾಗುತ್ತೇನೆ. ||56||
ನನ್ನ ತನು, ಮನ, ಧನಗಳನ್ನು ಸಂಪೂರ್ಣವಾಗಿ ಸದ್ಗುರುವಿನ ಚರಣಗಳಲ್ಲಿ ಅರ್ಪಿಸುತ್ತೇನೆ. ಉಳಿದ ಜೀವನವೆಲ್ಲವನ್ನೂ ಗುರುಸೇವೆಯಲ್ಲಿ ಸವೆಸುತ್ತೇನೆ. ||57||
ಗುರುನಾಮ, ಗುರುಸಾನ್ನಿಧ್ಯ, ಗುರುವಿನ ಅನುಗ್ರಹ, ಗುರುಚರಣಾಮೃತ, ಗುರುದೀಕ್ಷೆ, ಗುರುಮಂತ್ರ, ಗುರುಗೃಹವಾಸ ಇವು ಮಹಾಪ್ರಯಾಸದಿಂದ ಲಭಿಸುತ್ತವೆ. ||58||
ಅವನಲ್ಲಿರುವ ಅಸೀಮ ಶಕ್ತಿಯಿ೦ದ, ಭಕ್ತರನ್ನು ಪರೀಕ್ಷೆಮಾಡಿ ಅವನ ಅರಿವಿಗೆ ಬಾರದ೦ತೆಯೇ ಮೋಕ್ಷಕ್ಕೆ ಕರೆದೊಯ್ಯುತ್ತಾನೆ. ||59||
ಗುರುವಿನ ಸಹವಾಸ ಪವಿತ್ರ ಗಂಗೆಯ ರೀತಿಯಲ್ಲಿ ಶುದ್ಧಿಗೊಳಿಸಿ ಪವಿತ್ರನನ್ನಾಗಿ ಮಾಡುತ್ತದೆ. ಅದರಿಂದ ಚಂಚಲ ಮನಸ್ಸು ಭಗವಂತನ ಮೇಲೆ ನಿಶ್ಚಲವಾಗಿ ನಿಲ್ಲುತ್ತದೆ. ||60||
ನಮ್ಮ ವೇದಗಳು, ಶಾಸ್ತ್ರಗಳು ಮತ್ತು ಪುರಾಣಗಳು ಗುರುಸೇವೆಗೆ ಪ್ರಮಾಣಗಳು. ನಮ್ಮ ಯಾಗ, ಯಜ್ಞ ತಪಸ್ಸು ನಮ್ಮನ್ನು ಗುರುವಿನ ಚರಣಗಳೆಡೆಗೆ ಕರೆದೊಯ್ಯುತ್ತವೆ ಮತ್ತು ಅವು ನಮಗೆ ಆಧಾರ. ||61||
ನಮ್ಮ ವೇದ ಶಾಸ್ತ್ರಗಳು ಶ್ರೀ ಸದ್ಗುರುವಿನ ಪವಿತ್ರ ನಾಮಗಳನ್ನೇ ಪ್ರಮಾಣಿಸುತ್ತವೆ. ನಮ್ಮ ಮಂತ್ರವೇ ಸಾಯಿಸಮರ್ಥ. ಅದೇ ನಮ್ಮ ಪವಿತ್ರ ಜೀವ, ಪವಿತ್ರ ಪೂಜೆ. ||62||
'ಬ್ರಹ್ಮ ಸತ್ಯ' ಎಂಬುದನ್ನು ಪ್ರತಿನಿತ್ಯ ಅನುಭವಿಸಬೇಕು. ಜಗತ್ಮಿಥ್ಯ ಎಂಬುದು ನಿತ್ಯದ ಅರಿವಾಗಬೇಕು. ಸಾಯಿಯು ತನ್ನ ಭಕ್ತರಿಗೆ ರೀತಿಯ ಪರಮಾನಂದದ ಸ್ಥಿತಿಯನ್ನು ದಯಪಾಲಿಸುತ್ತಾರೆ. ||63||
ಪರಮಾನಂದದ ಅನುಭವ, ಮೋಕ್ಷದ ಆನಂದ, ಬ್ರಹ್ಮಾನಂದದ ಅನುಭೂತಿ ಇವು ಮೂರೂ ಪರಸ್ಪರ ಅನುಬಂಧಿತವಾಗಿವೆ. ಶಾಶ್ಚತ ಆನಂದದ ಸ್ಥಿತಿಯ ಅವಶ್ಯಕತೆ ಇದೆ. ||64||
ರೀತಿಯ ಮನಸ್ಥಿತಿಯನ್ನೂ, ಅನುಭಾತಿಯನ್ನೂ ಪಡೆದವರು ಅದೇ ಆನಂದದ ಶಾಂತಿ ಹಾಗೂ ಸಂತೃಪ್ತಿಯ ಸ್ಥಿತಿಯಲ್ಲಿರುತ್ತಾರೆ. ಅದೇ ಆತ್ಮಸಾಕ್ಷಾತ್ಕಾರದ ಸ್ಥಿತಿ. ||65||
ಸಾಯಿಯು ಆನಂದದ ಗಣಿ, ಒಬ್ಬ ಅದೃಷ್ಟವಂತ ಭಕ್ತನಿಗೆ ಪರಮಾನಂದದ ಕೊರತೆ ಇರುವುದಿಲ್ಲ. ಅಂತಹ ಭಕ್ತನು ಸಾಗರದೋಪಾದಿಯಲ್ಲಿ ಶಾಂತವಾಗಿ ತೃಪ್ತಿಯಿಂದ ಇರುತ್ತಾನೆ. ||66||
ಶಿವ ಮತ್ತು ಶಕ್ತಿ, ಪುರುಷ ಮತ್ತು ಪ್ರಕೃತಿ, ಪ್ರಾಣವಾಯುಗಳು ಮತ್ತು ಅವುಗಳ ಚಲನ, ಜ್ಯೋತಿ ಮತ್ತು ಪ್ರಕಾಶ - ಇವುಗಳಲ್ಲಿ ದ್ವೈತವನ್ನು ಪರಿಗಣಿಸುವುದು ಶುದ್ಧ ಪರಬ್ರಹ್ಮನ ಸ್ವಭಾವವನ್ನು ವಿರೂಪಗೊಳಿಸುವುದು ಎರಡೂ ಒಂದೇ. ||67||
ವೇದಗಳು ಹೇಳುತ್ತವೆ, ಬ್ರಹ್ಮನು ಒಬ್ಬನೇ ಇರಲು ಇಚ್ಛಿಸುವುದಿಲ್ಲ ಮತ್ತು ಆಸೆಗಳು ಅನೇಕ. ಅದರಿಂದಲೇ ದ್ವೈತವು ಹುಟ್ಟಿತು ಮತ್ತು ಏಕತ್ವದಲ್ಲೇ ಲೀನವಾಯಿತು. ||68||
ಪೂರ್ಣ ಪರಿಶುದ್ಧ ಬ್ರಹ್ಮ ಸ್ಥಿತಿಯಲ್ಲಿ ಪರಮಾತ್ಮನೂ ಇಲ್ಲ, ಪ್ರಕೃತಿಯೂ ಇಲ್ಲ. ಎಲ್ಲಿ ಸೂರ್ಯನು ನೆಲೆಸಿಲ್ಲವೋ ಅಲ್ಲಿ ಹಗಲು, ರಾತ್ರಿಗಳು ಇರಲು ಹೇಗೆ ಸಾಧ್ಯ? ||69||
ನಿಜವಾದ ಅಸ್ತಿತ್ವವು ಯಾವುದೇ ಗುಣಗಳಿಗೆ ಅತೀತವಾಗಿವೆ. ಆದರೆ ತನ್ನ ಭಕ್ತರಿಗಾಗಿ ಅವನು ರೂಪ ಧರಿಸುತ್ತಾನೆಂದೇ ಸಾಯಿ, ಪರಿಶುದ್ಧಸ್ಪರೂಪಿ. ನಾನು ಅವನಿಗೆ ಸಂಪೂರ್ಣ ಶರಣಾಗಿದ್ದೇನೆ. ||70||
ಸಾಯಿ ಸಮರ್ಥರಲ್ಲಿ ಶರಣಾದವರನ್ನು ಸಾಯಿಯು ಅನೇಕ ಅವಘಡಗಳಿಂದ ರಕ್ಷಿಸಿದ್ದಾರೆ. ಆದುದರಿಂದ ನನ್ನ ಸ್ಪಾರ್ಥಸುಖಕ್ಕಾಗಿ ನಾನು ಅವರ ಚರಣಗಳಿಗೆ ವಂದಿಸುತ್ತೇನೆ. ||71||
ಸತ್ಯವಾದ ಸ್ಥಿತಿಗನುಗುಣವಾಗಿ ಅವನು ಪೂರ್ಣವಾಗಿ ಬೇರೆಯಾಗಿದ್ದಾನೆ. ಭಕ್ತಿಯ ಸಂತೋಷವನ್ನು ಅನುಭವಿಸಲೆಂದು ಅವನು ಅನೇಕ ರೂಪಗಳನ್ನು ಧರಿಸುತ್ತಾನೆ ಮತ್ತು ಭಕ್ತರಿಗಾಗಿ ಅನೇಕ ಲೀಲೆಗಳನ್ನು ಪ್ರದರ್ಶಿಸುತ್ತಾನೆ. ಅಂತಹ ಪ್ರೀತಿಪಾತ್ರನಿಗೆ ನಾನು ವಂದಿಸುತ್ತೇನೆ. ||72||
ಯಾರು ಸಕಲ ಜೀವಿಗಳಲ್ಲೂ ಪರಮಾತ್ಮಸ್ವರೂಪನಾಗಿರುವನೋ, ಯಾರು ಆತ್ಮಜ್ಞಾನದ ನೆಲೆಯಾಗಿರುವನೋ, ಯಾರು ಸೂಕ್ಷ್ಮಜ್ಞಾನ ರೂಪವಾಗಿರುವನೋ ಅಂತಹ ಪ್ರೀತಿಪಾತ್ರನಿಗೆ ನಾನು ವಂದಿಸುತ್ತೇನೆ. ||73||
ನೀನೇ ನನ್ನ ಅಂತಿಮ ಗುರಿ. ನೀನೇ ನನಗೆ ಆಶ್ರಯದಾತ, ನಿನ್ನ ಭಕ್ತರ ಭಕ್ತಿಯನ್ನು ನೆರವೇರಿಸುವವನೇ, ಗುರುರಾಯ, ನೀನೆ ಪರಮಾನಂದದ ಅವತಾರ. ||74||
ಈಗ ಸಕಲ ಜೀವಜಂತುಗಳಿಗೂ ವಂದಿಸುತ್ತೇನೆ. ದೇವರು ಸಕಲ ಜೀವರಾಶಿಗಳಲ್ಲೂ ಇದ್ದಾನೆ. ನನಗೆ ನಿನ್ನ ಆಶ್ರಯ ನೀಡು. ||75||
ಸಕಲ ಜೀವಜಂತುಗಳಿಗೂ ಪ್ರಣಾಮ ಸಲ್ಲಿಸುತ್ತೇನೆ. ಅದರಿಂದ ವಿಶ್ವಾತ್ಮನು ಸ೦ತಸಗೊಳ್ಳಲಿ. ದೇವರು ಸರ್ವವ್ಯಾಪಿ, ಎಲ್ಲೆಲ್ಲೂ ಹಾಸುಹೊಕ್ಕಾಗಿರುವವನು ಮತ್ತು ನಿಷ್ಪಕ್ಷಪಾತಿಯು. ||76||
ನಾನು ಪ್ರಾರಂಭಿಸುವುದನ್ನು ಪೂರ್ಣಗೊಳಿಸಲು ನಮಸ್ಕಾರಗಳು. ಇದು ಗ್ರಂಥದ ಮಂಗಳಾಚರಣೆ. ಮುಂದೆ ಗ್ರಂಥದ ಪ್ರಯೋಜನವನ್ನು ನಿವೇದಿಸುತ್ತೇನೆ. ||77||
ಸಾಯಿಯು ನನ್ನನ್ನು ಅನುಗ್ರಹಿಸಿ ಸಹಾಯ ಮಾಡಿದ ಸಮಯದಿಂದ ನಾನು ಅವನನ್ನೇ ಹಗಲು-ರಾತ್ರಿ ನೆನೆಯುತ್ತೇನೆ. ಅವನು ನನ್ನ ಪ್ರಾಪಂಚಿಕ ಭಯವನ್ನು ನಾಶಮಾಡಿದ್ದಾನೆ ಮತ್ತು ಜನನ-ಮರಣಗಳೆಂಬ ಸಂಸಾರ ಚಕ್ರದ ಭಯವನ್ನು ದೂರವಾಡಿದ್ದಾನೆ. ||78||
ನನಗಾಗಿ ಅಲ್ಲ, ಕೇವಲ ಯಾವುದೇ ಪ್ರಾರ್ಥನೆಗಾಗಿ ಅಲ್ಲ, ಇನ್ನು ಯಾವುದೇ ತಪಸ್ಸಿಗಾಗಿ ಅಲ್ಲ, ನಾನು ಕೇವಲ ಒಂದೇ ಒಂದು ರೂಪವನ್ನು ಮನಸ್ಸಿನಲ್ಲಿ ಹಿಡಿದಿಟ್ಟುಕೊಂಡಿದ್ದೇನೆ. ಅದೇ ಪರಿಶುದ್ಧವಾದ ಸಾಯಿಯ ಸ್ವರೂಪ. ||79||
ಸಾಯಿಯ ಮುಖವನ್ನು ದೃಷ್ಟಿಸಿದೊಡನೆ, ಹಸಿವು-ಬಾಯಾರಿಕೆಗಳು ಮರೆತು ಹೋಗುತ್ತವೆ. ಇತರ ಸುಖಗಳ ಬೆಲೆ ಏನು? ಪ್ರಾಪಂಚಿಕ ದುಃಖಗಳೆಲ್ಲವೂ ಮರೆತು ಹೋಗುತ್ತವೆ. ||80||
ಭಕ್ತನು ಬಾಬಾರವರ ಕಣ್ಣುಗಳನ್ನು ದೃಷ್ಟಿಸಿದೊಡನೆ, ತನ್ನನ್ನು ತಾನೇ ಮರೆಯುತ್ತಾನೆ. ಪ್ರೀತಿಯ ಅಲೆಗಳು ಅಂತರಂಗದಿಂದ ಉಕ್ಕಿಬಂದು ಆಡೀ ವಿಶ್ವವನ್ನೇ ಭಕ್ತಿಯ ಸಾಗರದಲ್ಲಿ ಮುಳುಗಿಸುತ್ತವೆ. ||81||
ಕರ್ಮ, ಧರ್ಮ, ಮತ, ಗ್ರಂಥಗಳು, ಪುರಾಣಗಳು, ಯೋಗ, ಯಜ್ಞಗಳು, ವಿಧಿವತ್ತಾದ ಕರ್ಮಗಳು, ತೀರ್ಥಯಾತ್ರೆ, ತಪಶ್ಚರ್ಯೆ- ಎಲ್ಲವೂ ಸಾಯಿಯ ಚರಣಗಳಲ್ಲೇ ಇವೆ. ||82||
ಗುರುವಿನ ಬೋಧನೆಗಳನ್ನು ಪೂರ್ಣವಾಗಿ ಚಾಚೂ ತಪ್ಪದೆ ಪರಿಪಾಲಿಸುವುದರಿಂದ ನಿಶ್ಚಲವಾದ ಶ್ರದ್ಧೆ ಮತ್ತು ಸ್ಥಿರತೆ ಉಂಟಾಗುತ್ತವೆ. ||83||
ನನ್ನ ಹಿ೦ದಿನ ಜನ್ಮದ ಪುಣ್ಯಕರ್ಮಗಳ ಫಲದಿಂದಲೇ ಸಾಯಿ ಚರಣಗಳಲ್ಲಿ ಆಸಕ್ತಿ ಹೆಚ್ಚಾಗಿದೆ ಮತ್ತು ಅವನ ಅಸೀಮಿತ ಶಕ್ತಿಯನ್ನು ಅನುಭವಿಸಲು ಪ್ರಾರಂಭಿಸಿದ್ದೇನೆ. ಅದನ್ನು ಪೂರ್ಣವಾಗಿ ಹೇಗೆ ವರ್ಣಿಸಲಿ? ||84||
ಸಾಯಿ ಚರಣಗಳಲ್ಲಿ ಆಸಕ್ತಿ ಮತ್ತು ಭಕ್ತಿಯನ್ನು ಸೃಷ್ಟಿಸುವ ಶಕ್ತಿಯು, ನಾನು ಪ್ರಾಪಂಚಿಕ ಕಾರ್ಯದಲ್ಲಿ ತೊಡಗಿದ್ದರೂ ವಿಶೇಷವಾಗಿ ನಿರ್ಮೋಹತ್ವವನ್ನು ಉಂಟುಮಾಡಿ ಪರಮಾನಂದವನ್ನು ನೀಡುತ್ತದೆ. ||85||
ಅನೇಕ ಜನರು ವಿವಿಧ ಭಕ್ತಿಮಾರ್ಗಗಳನ್ನು ವಿವರಿಸಿದ್ದಾರೆ. ನಾನು ನನಗೆ ತಿಳಿದಂತೆ ಅವುಗಳ ಗುಣಗಳನ್ನು ಸಂಕ್ಷಿಪ್ತವಾಗಿ ತಿಳಿಸುತ್ತೇನೆ. ||86||
ಅ೦ತರಾತ್ಮದ ಜೊತೆ ಸಾಮರಸ್ಯ ಸಂಬಂಧವನ್ನು ರೂಪಿಸುವುದು ಅತ್ಯಂತ ಪ್ರಧಾನವಾದ ಭಕ್ತಿ ಮಾರ್ಗವಾಗಿದೆ. ವೇದಶಾಸ್ತ್ರಗಳ ಪಾರಂಗತರು ಮತ್ತು ಜ್ಞಾನಿಗಳಾದ ಅಧ್ಯಾತ್ಮ ಗುರುಗಳು ರೀತಿ ತಿಳಿಸಿದ್ದಾರೆ. ||87||
ಪೂಜೆ ಮತ್ತು ಅರ್ಚನೆಗಳು ನಾವು ಭಗವಂತನಿಗೆ ತೋರಿಸುವ ಪ್ರೀತಿಯ ಸಂಕೇತಗಳೆಂದು ಪರಾಶರರು ಮತ್ತು ವ್ಯಾಸರು ಬೋಧಿಸಿದ್ದಾರೆ. ||88||
ಗುರುವಿಗಾಗಿ ಪಾರಿಜಾತ ಮತ್ತಿತರ ಹೂವುಗಳನ್ನು ತೋಟದಿಂದ ತೆಗೆದುಕೊಂಡು ಬಂದು ಗುರುವಿನ ನಿವಾಸದ ಅ೦ಗಳವನ್ನು ಗುಡಿಸಿ, ನೀರು ಚಿಮುಕಿಸಿ, ಗೋಮಯದಿಂದ ಚೊಕ್ಕಟಮಾಡಬೇಕು. ||89||
ಮೊಟ್ಟಮೊದಲಿಗೆ ಸ್ನಾನಮಾಡಿ, ಸುಪ್ರಭಾತವನ್ನು ಹೇಳಿ, ಸುಗಂಧವನ್ನು ಸಿದ್ಧಪಡಿಸಿ, ಗುರುದೇವರಿಗೆ ಗಂಧವನ್ನು ಲೇಪಿಸಿ ಗುರುವಿಗೆ ಪಂಚಾಮೃತ ಅಭಿಷೇಕಮಾಡಿ (ಹಾಲು, ಜೇನು, ತುಪ್ಪ, ಮೊಸರು ಮತ್ತು ಸಕ್ಕರೆ), ಅಗರ ಬತ್ತಿಯನ್ನು ಹಚ್ಚಿ ದೀಪವನ್ನು ಬೆಳಗಬೇಕು. ||90||
ಅನ೦ತರ ನೈವೇದ್ಯವನ್ನು ಸಮರ್ಪಿಸಿ, ಕರ್ಪೂರ ದೀಪ ಮತ್ತು ಧೂಪಗಳಿಂದ ಆರತಿಮಾಡಬೇಕು. ರೀತಿ ಎಲ್ಲಾ ಸೇವೆಗಳನ್ನು ಪ್ರೀತಿಯಿಂದ ಮಾಡುವುದೇ ಅರ್ಚನೆ (ಉಪಾಸನೆ). ||91||
ಮೊದಲು ಮನೋಬುದ್ಧಿಗಳನ್ನು ನಿಷ್ಕಳಂಕಗೊಳಿಸಿ, ಶುದ್ಧ, ಬುದ್ಧ ದಿವ್ಯ ಮೂರ್ತಿಯನ್ನು ಆಮಂತ್ರಿಸಿ, ಅರ್ಚನೆಯಲ್ಲಿ ನಿರತರಾಗಿ. ||92||
ಅನಂತರ ದೈವಭಾವವನ್ನು ತುಂಬಿಕೊಂಡು ಅರ್ಚನೆಯನ್ನು ಪೂರೈಸಿ. ನಿಮ್ಮ ಹೃದಯದಲ್ಲಿ ಹಿಂದಿನ ದೈವತ್ವದ ಸ್ಥಿತಿಯನ್ನು ಪೂರ್ಣವಾಗಿ ಸ್ಥಿರಗೊಳಿಸಿರಿ. ||93||
ಗರ್ಗಾಚಾರ್ಯರ ಅಭಿಪ್ರಾಯದಲ್ಲಿ ಇನ್ನೂ ಅನೇಕ ರೀತಿಯ ಭಕ್ತಿಗಳು ಇವೆ. ಭಗವಂತನನ್ನು ಕುರಿತು ಭಜನೆ ಹಾಡುವಾಗ ಮನಸ್ಸು ಸಂಪೂರ್ಣವಾಗಿ ತಲ್ಲೀನವಾಗಿರಬೇಕು. ||94||
ತನ್ನ ಸ್ಪಸ್ಟರೂಪದಲ್ಲೇ ಸದಾ ಸ್ಥಿರವಾಗಿರುವವನು, ಧಾರ್ಮಿಕ ಕತೆ ಮತ್ತು ಹಾಡುಗಳನ್ನು ಹಾಡುತ್ತ, ಶಿಸ್ತಿನ ವರ್ತನೆಯನ್ನು ಅನುವು ಮಾಡಿಕೊಂಡಿರುವುದು ಮತ್ತೊಂದು ರೀತಿಯ ಭಕ್ತಿಮಾರ್ಗ ಎಂದು ಶಾಂಡಿಲ್ಯರು ವಿವರಿಸಿದ್ದಾರೆ. ||95||
ತಮಗೆ ಒಳ್ಳೆಯದು ಯಾವುದೆಂದು ಅರಿತಿರುವವರು, ವೇದಗಳಲ್ಲಿ ತಿಳಿಸಿರುವ ಮಾರ್ಗದಲ್ಲಿ ನಡೆಯುವವರು, ದುರ್ಮಾರ್ಗದಿಂದ ದೂರ ಇರುವವರು, ತಮ್ಮ ಎಲ್ಲ ವಿಘ್ನಗಳನ್ನು ದೂರಮಾಡಿರುತ್ತಾರೆ. ||96||
ನಾನು ಯಾವುದೇ ಕರ್ಮವನ್ನು ಮಾಡಿವವನಲ್ಲ ಹಾಗೂ ಕರ್ಮಫಲಗಳನ್ನು ಅನುಭವಿಸುವವನೂ ಅಲ್ಲ ಎಂದು ಮಾಡುವ ಕರ್ಮದಲ್ಲಿ ಅಹಂಕಾರ ಇರುವುದಿಲ್ಲ ಮತ್ತು ಪರಮಾತ್ಮನಲ್ಲಿ ಒಂದಾಗುವ ಶರಣಾಗತ ಭಾವ ಇರುತ್ತದೆ. ||97||
ನಿನ್ನ ಎಲ್ಲ ಕರ್ಮಗಳನ್ನು ಇದೇ ಭಾವನೆಯಲ್ಲಿ ಮಾಡು ಅಂದರೆ, ನೀನು ಕರ್ಮವನ್ನು ಮಡದೇ ಇರುವ ಸ್ಥಿತಿಯನ್ನು ತಲಪುವೆ. ಕರ್ಮಗಳನ್ನು ತ್ಯಾಗಮಾಡಲು ಸಾಧ್ಯವಾಗದಿದ್ದರೂ ಕರ್ಮಫಲಗಳನ್ನು ಮಾತ್ರ ತ್ಯಾಗಮಾಡಲು ಸಾಧ್ಯವಾಗುತ್ತದೆ. ||98||
ಒಂದು ಮುಳ್ಳನ್ನು ಮತ್ತೊಂದು ಮುಳ್ಳಿನಿಂದ ತೆಗೆಯಬಹುದು. ಕರ್ಮಗಳನ್ನು ಮಾಡದಿರುವಾಗ ಕರ್ಮಗಳಿಗಾಗಿ ಕರ್ಮಮಾಡಬೇಕು. ಆತ್ಮಸಾಕ್ಷಾತ್ಕಾರವಾದಾಗ ಮಾತ್ರ ಕರ್ಮಗಳ ಅಂತ್ಯವಾಗುತ್ತದೆ. ||99||
ಆಸೆಗಳನ್ನು ಪೂರ್ಣವಾಗಿ ದೂರಮಾಡಬೇಕಾದರೆ ಕರ್ಮಫಲವನ್ನು, ಆಸೆಯನ್ನು ಪೂರ್ಣವಾಗಿ ತ್ಯಾಗಮಾಡಬೇಕಾಗುತ್ತದೆ. ನಿನ್ನ ನಿತ್ಯ ಕರ್ಮಗಳನ್ನು ಮುಖ್ಯವಾಗಿ ಕರ್ತವ್ಯಗಳನ್ನು ಮಾಡು. ಇದನ್ನೇ ಕರ್ಮನಿಯಮ ಎನ್ನುತ್ತಾರೆ. ||100||
ಎಲ್ಲಾ ಕರ್ಮಗಳನ್ನು ಭಗವಂತನಿಗೆ ಸಮರ್ಪಿಸು. ಒಂದುಕ್ಷಣ ಭಗವಂತನ ನೆನಪು ದೂರವಾದರೂ ಕ್ಷಮೆಯಾಚಿಸು. ಇದನ್ನು 'ನಾರದೀಯ ಭಕ್ತಿ' ಎನ್ನುತ್ತಾರೆ. ಅದು ಇತರ ಭಕ್ತಿ ಮಾರ್ಗಗಳಿಗಿಂತ ಭಿನ್ನವಾಗಿದೆ. ||101||
ಇದೇ ರೀತಿ ಇನ್ನೂ ಅನೇಕ ರೀತಿಯ ಭಕ್ತಿಮಾರ್ಗಗಳು ಇವೆ. ಅವುಗಳು ಒಂದಕ್ಕಿಂತ ಮತ್ತೊಂದು ವಿಶಿಷ್ಟವಾದುದು. ಗುರುವಚನದ ಅನುಕರಣೆಯಿಂದ ಸಂಸಾರಸಾಗರವನ್ನು ನೀರುಸೋಕದೆಯೇ ದಾಟಬಹುದು. ||102||
ಗುರುವಿನ ಚರಿತ್ರೆಗಳನ್ನು ಕೇಳುವ ಒ೦ದು ಮಹದಾಸೆಯನ್ನು ಬೆಳೆಸಿಕೊಂಡೆ ಮತ್ತು ಅವುಗಳಿಂದ ಮೋಹಿತನಾದೆ. ಆಗ ನನಗೆ ನಾನೂ ಅವನ ಬಗ್ಗೆ ನನ್ನ ಅನುಭವಗಳನ್ನು ಬರೆಯಬೇಕೆನಿಸಿತು. ||103||
ಅನ೦ತರ, ಒಮ್ಮೆ ನಾನು ಶಿರಡಿಯಲ್ಲಿದ್ದಾಗ, ಅವನ (ಸಾಯಿಯ) ದರುಶನಕ್ಕೆ ಮಸೀದಿಗೆ ಹೋಗಿದ್ದೆ. ಬಾಬಾ ಗೋಧಿಯನ್ನು ಬೀಸುತ್ತಿದ್ದುದನ್ನು ನೋಡಿ ಬಹಳ ಅಚ್ಚರಿ ಉಂಟಾಯಿತು. ||104||
ಮೊದಲು ಕತೆಯನ್ನು ಹೇಳುತ್ತೇನೆ. ನಿಶ್ಚಲವಾದ ಮನಸ್ಸಿನಿಂದ ಕೇಳಿ, ಘಟನೆಯಿಂದಲೇ ಸಚ್ಚರಿತೆಯ ಯೋಚನೆ ಹುಟ್ಟಿತು. ||105||
ಭಗವಂತನನ್ನು ಹೊಗಳುವಂತಹ ಶ್ಲೋಕಗಳು ಅತ್ಯುತ್ತಮವಾದವುಗಳು. ಸಾಯಿಯ ಸತ್ಕಾರ್ಯಗಳನ್ನು ವಿವರಿಸುವುದು, ಸಾಯಿಯ ಪ್ರೀತಿಯಬಗ್ಗೆ ಸಂಭಾಷಣೆಯಲ್ಲಿ ನಿರತರಾಗುವುದುಮನಸ್ಸನ್ನು ಶುದ್ಧಮಾಡಿ ಬುದ್ಧಿಶಕ್ತಿಯನ್ನು ಪವಿತ್ರಗೊಳಿಸುತ್ತದೆ||106||

ಅವನ ಲೀಲೆಗಳನ್ನುಚರಿತ್ರೆಗಳನ್ನು ಕೇಳುವುದರಿಂದ ತಾಪತ್ರಯಗಳೂ ದೂರವಾಗುವುವು ಮತ್ತು ಸಂತೃಪ್ತಿ ಉಂಟಾಗುವುದು||107||
ತಾಪತ್ರಯಗಳಿಂದ ಭಾದಿತರಾದವರು ಮತ್ತು ಮುಕ್ತಿಮಾರ್ಗವನ್ನು ಬಯಸುವವರು ಅವನ ಚರಣಗಳಲ್ಲಿ ರಕ್ಷಣೆ ಪಡೆದು ಆನಂದ ಹೊಂದುವರು ಮತ್ತು ತಮ್ಮ ಅಧ್ಯಾತ್ಮ ಅನುಭವಗಳಿಂದ ತುಂಬಿಕೊಳ್ಳುವರು||108||
ಈಗ ನನ್ನ ಕಡೆ ನಿಮ್ಮ ಗಮನ ಹರಿಸಿಸುಮಧುರ ವಿಷಯಗಳನ್ನು ಕೇಳಿದಲ್ಲಿ ನೀವು ಬಾಬಾರವರ ದಯಾಳುತನಕ್ಕೆ ಅಚ್ಚರಿಪಡುವಿರಿ||109||
ಒಂದು ದಿನ ಬೆಳಗ್ಗೆ ಬಾಬಾರವರು ಹಲ್ಲುಜ್ಜಿಕೊಂಡು ಮುಖತೊಳೆದುಹಿಟ್ಟನ್ನು ಬೀಸಲು ಪ್ರಾರಂಭಿಸಿದರು||110||
ಅವರು ಕೈಯಲ್ಲಿ ಬುಟ್ಟಿಯನ್ನು ಹಿಡಿದು ಗೋಧಿಶೇಖರಿಸಿದ್ದ ಮೂಟೆಯಬಳಿ ಹೋಗಿ ಹಿಡಿಹಿಡಿ ಗೋಧಿಯನ್ನು ಬುಟ್ಟಿಯಲ್ಲಿ ತುಂಬಿದರು. ||111||
ಅವರು ನ೦ತರ ಒ೦ದು ಗೋಣಿಚೀಲದ ಮೇಲೆ ಬೀಸುವ ಕಲ್ಪನ್ನಿಟ್ಟು ಹಿಡಿಯನ್ನು ಜೋರಾಗಿ ಕಿತ್ತುಬರದ ಹಾಗೆ ಸುತ್ತಿಗೆಯಿಂದ ಹೊಡೆದರು. ||112||
ನಿಲುವಂಗಿಯ ತೋಳುಗಳನ್ನು ಮೇಲೇರಿಸಿಕಫನಿಯ ಸಡಿಲವಾದ ಬಟ್ಟೆಯನ್ನು ಸೇರಿಸಿ ಹಿಡಿದುಕೊಂಡು ಬೀಸುವ ಕಲ್ಲಿನ ಹತ್ತಿರಕೆಳಗೆಕಾಲುಗಳನ್ನು ಉದ್ದಕೆ ಚಾಚಿಕೊಂಡು ಕುಳಿತುಕೊಂಡರು. ||113||
ನನಗೆ ಬಹಳ ಅಚ್ಚರಿ ಉಂಟಾಯಿತುಯಾವುದೇ ಆಸ್ತಿಯಾರ ಸಂಬಂಧವೂ ಇಲ್ಲದವರು ಈ ರೀತಿ ಹಿಟ್ಟನ್ನು ಬೀಸುವುದರ ಉದ್ದೇಶವಾದರೂ ಏನುಎಂದು ನಾನು ಪ್ರಶ್ನಿಸಿದೆಅವರು ಇದನ್ನು ಏಕೆ ಯೋಚಿಸಬೇಕು? ||114||
ಅದೇನಾದರೂ ಆಗಲಿ. ಕೈಯಲ್ಲಿ ಹಿಡಿಯನ್ನು ಹಿಡಿದುಕೊಂಡುತಲೆ ತಗ್ಗಿಸಿಕೊಂಡು ಬಾಬಾ ತಮ್ಮ ಕೈಗಳಿಂದಲೇ ಬೀಸುವ ಕಲ್ಲಿನಲ್ಲಿ ಬೀಸಲು ಪ್ರಾರಂಭಿಸಿದರು. ನಿಸ್ಸಂಕೋಚವಾಗಿ ಹಿಟ್ಟನ್ನು ತೆಗೆಯುತ್ತಿದ್ದರುದುಷ್ಟಶಕ್ತಿಗಳನ್ನು ಪುಡಿಮಾಡುವ ರೀತಿಯಲ್ಲಿ ಕಂಡರು. ||118||
ನಾನು ಅನೇಕ ಸ೦ತರನ್ನು ನೋಡಿದ್ದರೂ ಯಾರ ಹತ್ತಿರವೂ ಬೀಸುವ ಕಲ್ಲು ಇರಲಿಲ್ಲಇವರೊಬ್ಬರಿಗೇ ಗೋಧಿ ಬೀಸುವ ಸಂತೋಷಉದ್ದೇಶದ ಅರಿವು ಇತ್ತು. ||116||
ಅಲ್ಲಿದ್ದ ಪ್ರೇಕ್ಷಕರೆಲ್ಲರಿಗೂ ಅಚ್ಚರಿಯಾಯಿತುಅವರು ಮಾಡುತ್ತಿರುವ ಬಗ್ಗೆ ಯಾರಿಗೂ ಪ್ರಶ್ನಿಸಲು ಧೈರ್ಯವಿರಲಿಲ್ಲಹಳ್ಳಿಯಲ್ಲಿ ಈ ಸುದ್ದಿ ಹರಡುತ್ತಲೇ ಅಲ್ಲಿಯ ಸ್ತ್ರೀಯರು ಮತ್ತು ಪುರುಷರು ಓಡೋಡಿ ಬಂದರು. ||117||
ಅಲ್ಲಿಗೆ ಓಡಿ ಬಂದ ಮಹಿಳೆಯರೆಲ್ಲರೂ ದಣಿದಿದ್ದರುನಾಲ್ವರು ಮಹಿಳೆಯರು ಮಸೀದಿಯ ಮೆಟ್ಟಲುಗಳನ್ನು ಅವಸರದಿಂದ ಹತ್ತಿಬಂದು ಬಾಬಾರವರ ಕೈಗಳಿಂದ ಬೀಸುವ ಕಲ್ಲಿನ ಹಿಡಿಯನ್ನು ಬಲವಂತವಾಗಿ ತೆಗೆದುಕೊಂಡರು||118||
ಬಾಬಾರವರು ಕೋಪೋದ್ರಿಕ್ತರಾದರುಆದರೂ ಅವರು ಒಮ್ಮೆಲೆ ಗೋಧಿಯನ್ನು ಬೀಸಲು ಪ್ರಾರಂಭಿಸಿದರುಬೀಸುವಾಗ ಸಾಯಿಯನ್ನು ಹೊಗಳುತ್ತಾ ಅವರ ಲೀಲೆಗಳನ್ನು ಹಾಡಲು ಪ್ರಾರಂಭಿಸಿದರು. ||119||
ಆ ಮಹಿಳೆಯರ ಪ್ರೀತಿಯನ್ನು ನೋಡಿತನ್ನ ಕೋಪ ತಣ್ಣಗಾದಂತೆ ತೋರಿಸಿಕೊಂಡರುಕೋಪವು ಪ್ರೀತಿಗೆ ತಿರುಗಿ ಬಾಬಾರವರು ಮುಗುಳ್ನಗೆ ತೋರಲು ಪ್ರಾರಂಭಿಸಿದರು||120||
ನಾಲ್ಕು ಸೇರುಗಳಷ್ಟು ಗೋಧಿಯನ್ನು ಹಿಟ್ಟು ಮಾಡಿದ್ದರುಬುಟ್ಟಿ ಖಾಲಿಯಾಗಿತ್ತುಅನಂತರ ಆ ಮಹಿಳೆಯರು ಉನ್ಮತ್ತರಾಗಿ ನೃತ್ಯ ಮಾಡಲು ಪ್ರಾರಂಭಿಸಿದರು. ||121||
ಬಾಬಾರವರು ಚಪಾತಿ ಮಾಡುವುದಿಲ್ಲಅವರು ಭಿಕ್ಷೆಬೇಡುವವರಂತೆ ತಿರುಗುತ್ತಾರೆಅವರು ಈ ಗೋಧಿ ಹಿಟ್ಟಿನಿಂದ ಏನು ಮಾಡುತ್ತಾರೆ?” ಎಂದು ಮಹಿಳೆಯರು ಚರ್ಚಿಸಿದರು||122||
ಬಾಬಾರವರಿಗೆ ಹೆಂಡತಿ ಮಕ್ಕಳು ಯಾರೂ ಇಲ್ಲಬಾಬಾ ಒಬ್ಬಂಟಿಗರುಅವರಿಗೆ ಯಾವುದೇ ಸಂಸಾರಮನೆ ಇರುವುದಿಲ್ಲಅವರಿಗೇಕೆ ಇಷ್ಟು ಹಿಟ್ಟು?” ||123||
ಅವರಲ್ಲೊಬ್ಬರು ಹೇಳಿದರು – “ಬಾಬಾ ಅತ್ಯಂತ ಕರುಣಾಮಯಿಈ ಲೀಲೆಯೂ ನಮ್ಮ ಮೇಲಿನ ಪ್ರೀತಿಗಾಗಿಈಗಲೇ ಅವರು ಈ ಹಿಟ್ಟೆಲ್ಲವನ್ನು ನಮ್ಮವರಿಗೆ ಹಂಚುತ್ತಾರೆ.” ||124||
ಈಗ ಅವರು ಅದನ್ನು ನಾಲ್ಕು ಭಾಗಗಳಾಗಿ

ವಿಂಗಡಿಸುತ್ತಾರೆ ನಮ್ಮೆಲ್ಲರಿಗೂ ಒಂದೊಂದು ಭಾಗ.” ಈ ರೀತಿ ಎಲ್ಲರೂ ಯೋಚಿಸುತ್ತ ಗಾಳಿಯಲ್ಲೇ ಅರಮನೆ ಕಟ್ಟಲಾರಂಭಿಸಿದರು. ||125||
ಬಾಬಾರವರ ಆಟ ಅವರೊಬ್ಬರಿಗೇ ಗೊತ್ತುಯಾರೂ ಅವರ ಆಳವನ್ನು ಅರಿಯಲಾರರುಆದರೆ ಬಾಬಾರವರನ್ನು ಲೂಟಿಮಾಡುವ ಆಸೆ ಮಹಿಳೆಯರಲ್ಲಿ ಮೂಡಿತು||126||
ಗೋಧಿಯೆಲ್ಲವನ್ನೂ ಉಪಯೋಗಿಸಿ ಹಿಟ್ಟನ್ನು ಹರಡಿದರುಬೀಸುವ ಕಲ್ಲನ್ನು ತೆಗೆದು ಗೋಡೆಗೆ ಒರಗಿಸಿ ಇಟ್ಟರುಮಹಿಳೆಯರು ತಮ್ಮ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಲು ಮೊರಗಳಲ್ಲಿ ಹಿಟ್ಟನ್ನು ತುಂಬಿಕೊ೦ಡರು. ||127||
ಅಷ್ಟರವರೆಗೆ ಬಾಬಾರವರು ಒಂದು ಮಾತನ್ನೂ ಆಡಲಿಲ್ಲನಾಲ್ವರು ಮಹಿಳೆಯರು ಹಿಟ್ಟನ್ನು ನಾಲ್ಕು ಭಾಗಗಳನ್ನಾಗಿ ಮಾಡಿದಾಗ ಬಾಬಾರವರು ಏನು ಹೇಳಿದರುಕೇಳಿ ಶ್ರೋತ್ಕಗಳೇ; ||128||
"ನೀವುಗಳು ಆಸೆಯಿಂದ ಹುಚ್ಚರಾಗಿದ್ದೀರಿಇದನ್ನು ಎಲ್ಲಿಗೆ ಏತಕ್ಕೆ ತೆಗೆದುಕೊ೦ಡು ಹೋಗುತ್ತಿರುವಿರಿ? ಇದು ನಿಮ್ಮಪ್ಪನಿಗೇನಾದರೂ ಸೇರಿದೆಯಾಈಗ ನೀವು ಈ ಹಳ್ಳಿಯ ಸರಹದ್ದಿಗೆ ಹೋಗಿ ಅಲ್ಲಿ ಈ ಹಿಟ್ಟನ್ನು ಹರಡಿ. ||129||
ನೀವು ನಿಷ್ಪ್ರಯೋಜಕರುನನ್ನನ್ನು ಕೊಳ್ಳೆ ಹೊಡೆಯಲು ಓಡಿ ಬಂದವರುನೀವೇನಾದರೂ ನನಗೆ ಹಿಟ್ಟನ್ನು ಸಾಲ ಕೊಟ್ಟಿದ್ದಿರಾ ಈಗ ತೆಗೆದುಕೊಂಡುಹೋಗಲು?” ||130||
ಆ ಮಹಿಳೆಯರು ಮನಸ್ಸಿನಲ್ಲಿಯೇ ಗೊಣಗಲು ಪ್ರಾರಂಭಿಸಿದರುಅವರ ಆಸೆಯಿಂದಾಗಿ ಅವಮಾನ ಹೊ೦ದಿದವರಾದರುತಮ್ಮಲ್ಲಿಯೇ ಪಿಸುಗುಟ್ಟುತ್ತ ತಕ್ಷಣವೇ ಹಳ್ಳಿಯ ಸರಹದ್ದಿನ ಕಡೆಗೆ ಬೇಗನೆ ನಡೆದರು ||131||ಬಾಬಾರವರ ಉದ್ದೇಶಗಳನ್ನು ಯಾರೂ ಊಹಿಸಲು ಸಾಧ್ಯವಿಲ್ಲಏಕೆಂದರೆ ಪ್ರಾರಂಭದಲ್ಲಿ ಯಾರಿಗೂ ಏನು ಮಾಡಬೇಕೆಂಬುದೇ ತಿಳಿದಿಲ್ಲಆದರೆ ತಾಳ್ಮೆಯಿಂದ ಇದ್ದಲ್ಲಿ ಪರಿಣಾಮದ ಅರಿವಾಗುತ್ತದೆಬಾಬಾರವರ ಕಾರ್ಯವೈಖರಿಗಳು ಅನೇಕ||132||
ಅನ೦ತರ ನಾನು ಅಲ್ಲಿಯ ಜನರನ್ನು ಪ್ರಶ್ನಿಸಿದೆ ಬಾಬಾ ಏಕೆ ಆ ರೀತಿ ವರ್ತಿಸಿದರುಅದಕ್ಕೆ ಅವರು ಉತ್ತರಿಸಿದ್ದು ಬಾಬಾರವರು ಇದೇ ರೀತಿಯಲ್ಲಿ ಹಳ್ಳಿಯಲ್ಲಿ ರೋಗ ಹರಡದಂತೆ ತಡೆದಿದ್ದರು ಎಂದು||133||

ಬಾಬಾರವರು ಬೀಸುವ ಕಲ್ಲಿನಲ್ಲಿ ಹಿಟ್ಟುಮಾಡಿದ್ದು ಗೋಧಿಯನ್ನಲ್ಲಕಾಲರಾದ ಕ್ರಿಮಿಗಳನ್ನುಅನಂತರ ಅದನ್ನು ಹಳ್ಳಿಯ ಸರಹದ್ದಿನಲ್ಲಿ ಕೈಯಾರೆ ಹರಡಿದ್ದರು. ||134||
ಹಿಟ್ಟನ್ನು ಕೆರೆಯ (ಕಾಲುವೆಯದಡಗಳಲ್ಲಿ ಹರಡಿಸಿದ್ದರುಆ ಸಮಯದಿಂದ ರೋಗ ಹಿನ್ನಡೆಯಿತುಪ್ರಾಮಾಣಿಕವಾಗಿ ಕೆಟ್ಟ ಸಮಯ ಕಳೆಯಿತುಇದೇ ಬಾಬಾರವರ ನೈಪುಣ್ಯತೆ||135||
ಆ ಹಳ್ಳಿಯಲ್ಲಿ ಕಾಲರಾ ಸೋಂಕಿನ ಭೀತಿ ಹರಡಿತ್ತುಅದಕ್ಕಾಗಿ ಸಾಯಿನಾಥರು ಪರಿಹಾರವನ್ನು ಗುರುತಿಸಿದ್ದರುಹಳ್ಳಿಯಿಂದ ಸಂಪೂರ್ಣವಾಗಿ ರೋಗವು ನಿರ್ಮೂಲವಾಯಿತು ಮತ್ತು ಶಾಂತಿ ಸ್ಥಾಪಿತವಾಯಿತು. ||136||
 ಒ೦ದು ಹಿಟ್ಟನ್ನು ಮಾಡುವುದನ್ನು ನೋಡಿದ ನನಗೆ ಅಚ್ಚರಿಯುಂಟಾಯಿತುಕಾರ್ಯ-ಕಾರಣಗಳನ್ನು ಯಾವರೀತಿ ಸಂಬಂಧ ಕಲ್ಪಿಸಬಹುದು? ಅದಕ್ಕೆ ಪುರಾವೆ ಹೇಗೆ ತಿಳಿಯುತ್ತದೆ||137||
ಗೋಧಿಗೂ ರೋಗಕ್ಕೂ ಯಾವ ರೀತಿಯ ಸಂಬಂಧ ಕಲ್ಪಿಸಬಹುದುಈ ರೀತಿ ನಂಬಲಾಗದಂತಹ ಘಟನೆಯನ್ನು ನೋಡಿದ ನಾನು ಈ ಪುಸ್ತಕವನ್ನು ಬರೆಯುವ ಯೋಜಚನೆಮಾಡಿದೆ. ||138||
ಸಮುದ್ರದ ಅಲೆಗಳ ರೀತಿಯಲ್ಲಿ ಪ್ರೀತಿಯು ನನ್ನಲ್ಲಿ ಉಕ್ಕಿಹರಿಯಿತುಮತ್ತು ಬಾಬಾರವರ ಸಿಹಿಯಾದ ಕತೆಯನ್ನು ಹೃದಯಪೂರ್ವಕವಾಗಿ ಹಾಡಬೇಕೆನ್ನಿಸಿತು. ||139||
ಹೇಮಾದನುಸಾಯಿನಾಥರಿಗೆ ಶರಣಾಗಿದ್ದಾನೆಮಂಗಳಕರ ಪ್ರಾರ್ಥನೆಯು ಇಲ್ಲಿಗೆ ಮುಗಿಯುತ್ತದೆಬಂಧುಗಳಿಗೆಮಿತ್ರರಿಗೆಸಂತರಿಗೆ ಪ್ರಣಾಮಗಳುಮತ್ತೆ ಎಂದೆಂದಿಗೂ ನನ್ನ ಸದ್ಗುರುವಿಗೆ ಪ್ರಣಾಮಗಳು. ||140||
ಮುಂದಿನ ಅಧ್ಯಾಯದಲ್ಲಿ ನಾನು ಈ ಪುಸ್ತಕದ ಉದ್ದೇಶದ ಬಗ್ಗೆ ತಿಳಿಸುತ್ತೇನೆಮತ್ತು ಇದರ ಶಕ್ತಿ ಮತ್ತು ಅದರ ಬಗ್ಗೆ ನನ್ನ ಕೈಲಾದಷ್ಟು ಅಂತರ್ದೃಷ್ಟಿ ಕೊಡುತ್ತೇನೆಶ್ರೋತೃಗಳು ಗಮನವಿಟ್ಟು ಕೇಳಬೇಕು. ||141||
ಈ ರೀತಿ ಶ್ರೋತೃಗಳು ಮತ್ತು ಲೇಖಕ ಇಬ್ಬರೂ ಈ ಶ್ರೀ ಸಾಯಿಸಚ್ಚರಿತೆಯಿ೦ದ ಲಾಭಪಡೆಯಬಹುದುಇದರ ಬರಹಗಾರ ಹೇಮಾದಪಂತ ಯಾರು ಎಂಬುದು ಮತ್ತೆ ಸ್ಪಷ್ಟವಾಗುತ್ತದೆ. ||142||

 

ಎಲ್ಲರಿಗೂ ಶುಭವಾಗಲಿ.


ಸ೦ತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯಒಂದು ಪ್ರಾರ್ಥನೆಎಂಬ ಮೊದಲನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.

 

ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.


ಸನ್ಮಂಗಳವಾಗಲಿ।

 

ಸಾಯಿಯು ಗೋಧಿ ಬೀಸುತ್ತಿರುವುದು
(Sai grinding the wheat)

ಹೆಂಗಸರು ಗೋಧಿ ಹಿಟ್ಟನ್ನು ಸರಹದ್ದಿನಲ್ಲಿ ಹರಡುತ್ತಿರುವುದು
(Women spreading the wheat flour)

[This marks the end of Chapter one "The wondrous Saint grinding wheat – Obeisances – The story of grinding wheat and its philosophical significance"of Sri Sai satcharite in Kannada. Peace be to all]

No comments:

Post a Comment

08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....